ನವದೆಹಲಿ: ಭಾರತೀಯ ಸೇನೆಯ ಶಕ್ತಿಯನ್ನು ಹೆಚ್ಚಿಸಲು ಮತ್ತು ಅದನ್ನು ಸಜ್ಜುಗೊಳಿಸಲು, ಮೋದಿ ಸರ್ಕಾರವು ದೇಶೀಯ ಶಸ್ತ್ರಾಸ್ತ್ರಗಳ ಖರೀದಿಗೆ ಮಹತ್ವದ ಹೆಜ್ಜೆ ಇಟ್ಟಿದೆ.
ಸೇನೆಯ ಫಿರಂಗಿ ರೆಜಿಮೆಂಟ್‌ಗಳನ್ನು ಬಲಪಡಿಸಲು ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ATAGS) ಖರೀದಿಗೆ ₹7,000 ಕೋಟಿ ವೆಚ್ಚದ ಒಪ್ಪಂದಕ್ಕೆ ಭದ್ರತಾ ಕ್ಯಾಬಿನೆಟ್ ಸಮಿತಿ (CCS) ಅನುಮೋದನೆ ನೀಡಿದೆ.
ATAGS ಗನ್‌ಗಳ ವಿಶೇಷತೆ ಮತ್ತು ಸೇನೆಯ ಬಲವರ್ಧನೆ ಈ ಒಪ್ಪಂದದಡಿ, 307 ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೊವಿಟ್ಜರ್ ಗನ್‌ಗಳು ಸೇನೆಗೆ ಲಭ್ಯವಾಗಲಿವೆ. ಈ ಗನ್‌ಗಳು ವಿಶ್ವದ ಅತ್ಯಂತ ಉದ್ದದ ವ್ಯಾಪ್ತಿ ಹೊಂದಿರುವ ಶಸ್ತ್ರಾಸ್ತ್ರಗಳಾಗಿದ್ದು, ಸೇನೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಸೇನೆಯ 15 ಫಿರಂಗಿ ರೆಜಿಮೆಂಟ್‌ಗಳನ್ನು ಸಜ್ಜುಗೊಳಿಸಲು 327 ಗನ್-ಟೋಯಿಂಗ್ ವಾಹನಗಳು ಕೂಡ ಖರೀದಿಸಲಾಗುವುದು.
ಈ ಬಂದೂಕುಗಳು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದವು.
ಒಪ್ಪಂದಕ್ಕೆ ಮುಂದಿನ ವಾರ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ. ಮೋದಿ ಸರ್ಕಾರದ ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಗೆ ಉತ್ತೇಜನೆ ಭಾರತದ ರಕ್ಷಣಾ ಸ್ವಾಯತ್ತತೆಯನ್ನು ಹೆಚ್ಚಿಸಲು ಮತ್ತು ಸೇನೆಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸಲು ಈ ATAGS ಗನ್‌ಗಳ ಖರೀದಿ ಮಹತ್ವದ ಹೆಜ್ಜೆಯಾಗಲಿದೆ. ಈ ಯೋಜನೆಯ ಮೂಲಕ ‘ಆತ್ಮನಿರ್ಭರ್ ಭಾರತ’ (ಸ್ವಾಯತ್ತ ಭಾರತ) ಅಭಿಯಾನಕ್ಕೆ ಮತ್ತಷ್ಟು ಬಲ ಸಿಗಲಿದೆ.