- – ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ ದಂಡ
ಮಂಡ್ಯ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.1.30 ಲಕ್ಷ ದಂಡ ವಿಧಿಸಿ ಮಂಡ್ಯದ ಹೆಚ್ಚುವರಿ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆ ವಿವರ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಂದೀಪುರ ಗ್ರಾಮದ ಬಸವರಾಜು ಅವರ ಪುತ್ರ ಅಪ್ಪು ಬಿ.ಎನ್ ಅಲಿಯಾಸ್ ಅಪ್ಪುಗೌಡ (23) ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ.
ಆರೋಪಿ ಅಪ್ಪು, ತನ್ನ ಗ್ರಾಮದ ಅಪ್ರಾಪ್ತ ಬಾಲಕಿಯೊಂದಿಗೆ ಕಾಲೇಜಿಗೆ ಹೋಗುವಾಗ ಹಾಗೂ ಬರುವ ವೇಳೆ ಪರಿಚಯ ಹೊಂದಿದ್ದ. ಬಳಿಕ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಪ್ರಕರಣವು 2022ರ ಜನವರಿ 27 ರಂದು ಬೆಳಕಿಗೆ ಬಂದಿತ್ತು. ಬಾಲಕಿ ಕಾಣೆಯಾಗಿದ್ದ ಬಗ್ಗೆ ಬಾಲಕಿಯ ತಂದೆ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ದೀಪಕ್ ಎಂ.ಕೆ ಅವರು, ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಮಂಡ್ಯದ ಹೆಚ್ಚುವರಿ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಬಿ. ದಿಲೀಪ್ ಕುಮಾರ್ ಅವರು, ಸಾಕ್ಷ್ಯಾಧಾರಗಳ ಪರಿಶೀಲನೆ ಬಳಿಕ ಆರೋಪಿಗೆ ವಿವಿಧ ಸೆಕ್ಷನ್‌ಗಳಡಿ ಈ ಕೆಳಗಿನ ಶಿಕ್ಷೆ ವಿಧಿಸಿದ್ದಾರೆ:
- ಪಾಕ್ಸೋ ಕಾಯ್ದೆಯ ಸೆಕ್ಷನ್ 12 ಅಡಿ → 2 ವರ್ಷ ಸಾದಾ ಜೈಲು ಹಾಗೂ ರೂ.10,000 ದಂಡ
- ಐಪಿಸಿ ಸೆಕ್ಷನ್ 366 ಅಡಿ → 4 ವರ್ಷ ಸಾದಾ ಜೈಲು ಹಾಗೂ ರೂ.20,000 ದಂಡ
- ಐಪಿಸಿ ಸೆಕ್ಷನ್ 376(2)(ಎನ್) ಹಾಗೂ ಪಾಕ್ಸೋ ಕಾಯ್ದೆ ಸೆಕ್ಷನ್ 6 ಅಡಿ → 20 ವರ್ಷಗಳ ಕಠಿಣ ಜೈಲು ಹಾಗೂ ರೂ.1,00,000 ದಂಡ
ದಂಡ ಪಾವತಿಸಲು ವಿಫಲರಾದರೆ ಪ್ರತ್ಯೇಕ ಜೈಲುಶಿಕ್ಷೆ ವಿಧಿಸಲಾಗುತ್ತದೆ.
- ಪಹಲ್ಗಾಮ್ ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ಪರಾರಿ?
- ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
- ಯೂನಿಯನ್ ಬ್ಯಾಂಕ್ನಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗೋವಾ ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
- ಮೈಸೂರು ನಗರದ ವಿವಿಧೆಡೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಬೆದರಿಕೆ