ಹೊಸಪೇಟೆ (ವಿಜಯನಗರ ಜಿಲ್ಲೆ): ಬಿಸಿಲಿನ ತೀವ್ರತೆಗೆ ಬುಧವಾರ ಸಂಜೆ ತುಂಗಭದ್ರಾ ಡ್ಯಾಂ ಸಮೀಪದ ಗುಡ್ಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ರಾಹೆ 50ರ ಪಕ್ಕದಲ್ಲಿ ಇರುವ ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಈ ಅಗ್ನಿ ಪ್ರಕರಣ ಸಂಭವಿಸಿದ್ದು, ಬೆಂಕಿಯು ಹರಡಿದ ಪರಿಣಾಮವಾಗಿ ಗುಡ್ಡ ಸಂಪೂರ್ಣವಾಗಿ ಧಗಧಗನೆ ಉರಿಯಿತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸ್ಥಳದಲ್ಲಿ ಸಿಗರೇಟು ಕಿಡಿ ಅಥವಾ ಬಿಡಿ ಸುಟ್ಟು ಬಿದ್ದು ಬೆಂಕಿ ಹತ್ತಿರಬಹುದೆಂಬ ಸಾಧ್ಯತೆಯನ್ನೂ ಅವರು ಉಲ್ಲೇಖಿಸಿದ್ದಾರೆ.ಇದನ್ನು ಓದಿ –ಆಯಾಸವನ್ನು ನಿವಾರಿಸುವ ಪಾನೀಯಗಳು
ಈ ಘಟನೆ ಸಂಬಂಧಿಸಿ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.