- ಹಕ್ಕುಪತ್ರ ನೋಂದಣಿಗೆ ಸೌಲಭ್ಯ
ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಭೂಸುಧಾರಣಾ ಯೋಜನೆಯಡಿ ಹಕ್ಕುಪತ್ರ (ಪಟ್ಟಾ) ವಿತರಣೆ ಕಾರ್ಯವನ್ನು ತ್ವರಿತಗೊಳಿಸಲು, ರಾಜ್ಯದ ಎಲ್ಲಾ ಸಬ್‌ರಿಜಿಸ್ಟ್ರಾರ್ ಕಚೇರಿಗಳು ರಜಾದಿನಗಳಲ್ಲಿಯೂ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ.
ಬಸವಜಯಂತಿ (ಏಪ್ರಿಲ್ 30), ಕಾರ್ಮಿಕ ದಿನ (ಮೇ 1) ಹಾಗೂ ಭಾನುವಾರ (ಮೇ 4) ರಂತಹ ರಜಾದಿನಗಳಲ್ಲೂ ಕಚೇರಿಗಳು ತೆರೆಯಲ್ಪಡಲಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ದಯಾನಂದ್ ಅವರು ಈ ಕುರಿತು ಎಲ್ಲಾ ಜಿಲ್ಲಾ ಮತ್ತು ಉಪ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದಿನನಿತ್ಯದ ಕಾರ್ಯಗಳಿಗೆ ಅಡಚಣೆ ಉಂಟಾಗದೆ ಜನತೆಗೆ ಸುಲಭವಾಗಿ ಸೇವೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಕ್ಕುಪತ್ರ ನೋಂದಣಿಗೆ ಹೆಚ್ಚುವರಿ ಸಮಯ ಅಗತ್ಯವಿದ್ದರೆ ಸಂಬಂಧಿತ ಅಧಿಕಾರಿಗಳ ಕೋರಿಕೆಗೆ ಅನುಗುಣವಾಗಿ ಅವಕಾಶ ನೀಡಬೇಕು ಎಂಬುದಾಗಿ ಸೂಚಿಸಲಾಗಿದೆ.ಇದನ್ನು ಓದಿ –ದೇವಾಲಯದ ಗೋಡೆ ಕುಸಿತ: 8 ಭಕ್ತಾದಿಗಳ ದುರ್ಮರಣ
ಹಕ್ಕುಪತ್ರ ನೋಂದಣಿ ಮಹತ್ವದ ಹಂತವಾಗಿದ್ದು, ಫಲಾನುಭವಿಗಳಿಗೆ ಭೂಮಿಯ ಮೇಲೆ ಕಾನೂನುಬದ್ಧ ಹಕ್ಕು ನೀಡುವ ಮೂಲಕ ಸರ್ಕಾರ ಭದ್ರತೆಯ ಭರವಸೆ ನೀಡುತ್ತಿದೆ. ಈ ಕೆಲಸ ವಿಳಂಬವಾಗದಂತೆ ಮಾಡಲು ರಜಾದಿನಗಳಲ್ಲಿಯೂ ಕಚೇರಿಗಳನ್ನು ಕಾರ್ಯನಿರತವಾಗಿಡಲಾಗುತ್ತಿದೆ.