ಅಹಂ ಬ್ರಹ್ಮಾಸ್ಮಿ ,ನಾನು ಬ್ರಹ್ಮ ,ನೀನೂ ಬ್ರಹ್ಮ ಈ ಜಗತ್ತಿನ ಸರ್ವಸೃಷ್ಟಿಯೂ ಬ್ರಹ್ಮನದೇ ನಾನು ಬೇರೆಯಲ್ಲ ನೀನು ಬೇರೆಯಲ್ಲಾ ಈ ವಿಶ್ವಸೃಷ್ಟಿ ಬೇರೆಯಲ್ಲ .. ಇಲ್ಲಿ ಬಣ್ಣ, ಜಾತಿ ,ಮತ ,ಪಂಥಗಳು, ಇವೆಲ್ಲ ನಮ್ಮ ಭ್ರಮೆಯೇ ಒರೆತು ಇವ್ಯಾವೂ ನಿಜವಲ್ಲ ಜಗತ್ತಿನ ಪ್ರತಿಸೃಷ್ಟಿಯನ್ನು ಬ್ರಹ್ಮಚೈತನ್ಯವೇ ತುಂಬಿರುವಾಗ ಅವನು ಬೇರೆ ನಾನು ಬೇರೆ ಹೇಗಾಗುವುದಕ್ಕೆ ಸಾಧ್ಯ ಇಂಥದ್ದೊಂದು ಪ್ರಶ್ನೆಯ ಮೂಲಕ ಜಗತ್ತಿಗೆ ಅತ್ಯದ್ಭುತವಾದ ಏಕತ್ವವನ್ನು ಜಾತಿ ಪಂಥಗಳನ್ನು ಮೀರಿದ ಸಮಾನತೆಯ ತತ್ತ್ವವನ್ನು ಬೋಧಿಸಿದರು ಆದಿಶಂಕರಾಚಾರ್ಯರು.
ಕೇವಲ ಮೂವತ್ತೆರಡು ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ದೇಶದಾದ್ಯಂತ ಪರ್ಯಟನೆ ಮಾಡಿ ಹಲವಾರು ಕ್ಷೇತ್ರಗಳನ್ನು ಸ್ಥಾಪಿಸಿದ , ಅವತ್ತು ದೇಶವನ್ನು ಆವರಿಸಿಕೊಂಡಿದ್ದ ಇಲ್ಲಿನ ಮನಸ್ಸುಗಳನ್ನು ಆಳ್ತಾಇದ್ದ ಮೌಢ್ಯಗಳ ವಿರುದ್ಧ ಜಾಗೃತಿಯನ್ನ ಮೂಡಿಸುವ ಶಂಕರರ ಬಗ್ಗೆ ಸಣ್ಣ ಲೇಖನದಲ್ಲಿ ಒಂದಷ್ಟು ಮಾತುಗಳಲ್ಲಿ ಹೇಳಿಬಿಡೋದು ತುಂಬಾನೇ ಕಷ್ಟ ಇವತ್ತು ಶಂಕರನ್ನ ಅವರ ತತ್ವಗಳನ್ನು ಅರ್ಥಮಾಡಿಕೊಂಡಿರಿರುವರಿಗಿಂತಲೂ ಹೆಚ್ಚು ಅಪಾರ್ಥಮಾಡಿಕೊಂಡವರೇ ಹೆಚ್ಚು… ಯಾವ ಆದಿಶಂಕರರು ಮೌಡ್ಯದ ವಿರುದ್ದ, ಜಾತಿ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ತಮ್ಮಿಡೀ ಜೀವನವನ್ನು ಮುಡಿಪಾಗಿಟ್ಟರೋ ಅದೇ ಶಂಕರರನ್ನ ನಿಂದನೆ ಮಾಡುವುದು ಮತ್ತು ಅವರ ಸಾಧನೆಗಳ ಮೇಲೆ ತೆರೆ ಎಳೆಯೋ ಪ್ರಯತ್ನ ನಡೆದದ್ದು ಇನ್ನೂ ದುರಂತ..
ಶಂಕರರ ತತ್ವಗಳು ಅವರ ಸಾಧನೆಗಳು ನಮಗೆ ಸ್ವಲ್ಪವಾದರೂ ಅರ್ಥ ಆಗಬೇಕು ಅಂದ್ರೆ ಅವರ ಕಾಲಘಟ್ಟದ ಇತಿಹಾಸವನ್ನು ಕೂಡ ನಾವು ಗಮನಿಸಬೇಕಾಗುತ್ತೆ. ಅದು ನಮ್ಮ ನಾಗರಿಕತೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತಿದ್ದ ಕಾಲ.. ಒಂದ್ಕಡೆ ದೇಶ ಪರಕೀಯರ ದಾಳಿಗಳನ್ನ ಎದುರಿಸುತ್ತಾ ಕಾಲ ಮತ್ತೊಂದ್ಕಡೆ ಒಳಗೊಳಗೇ ಅಂತಃಕಲಹಗಳು ಶುರುವಾಗಿದ್ದವು ಅಕ್ಕಪಕ್ಕದ ನಾಗರಿಕತೆಗಳು ಭಾರತದ ಮೇಲೆ ದಾಳಿ ಮಾಡುವುದಕ್ಕೆ ಹೊಂಚಿ ಕುಳಿತಿದ್ದವು ಮತ್ತೊಂದೆಡೆ ದೇಶದ ಒಳಗೆ ಜಾತಿ ಮತ ಪಂಥಗಳ ಹೆಸರಿನಲ್ಲಿ ಜನರು ಬೇರೆಯಾಗ ತೊಡಗಿದರು ಸನಾತನ ಧರ್ಮ ಸಂಸ್ಕೃತಿಗಳು ತಮ್ಮ ಪ್ರಭೆಯನ್ನ ಕಳೆದುಕೊಳ್ಳುತ್ತಿತ್ತು ತಾಂತ್ರಿಕ ಸಿದ್ಧಿಗಾಗಿ ನರಬಲಿಯಂಥ ಆಚರಣೆಗಳು ಆರಂಭವಾಗಿತ್ತು. ಒಂದುಕಡೆ ಅಸ್ಪೃಶ್ಯತೆಯ ಮೌಢ್ಯ ಇನ್ನೊಂದು ಕಡೆ ಜಾತಿಗಳ ಹುಚ್ಚು ಆಧ್ಯಾತ್ಮ ಜ್ಞಾನದಿಂದ ವಂಚಿತರಾದವರು ತಾಂತ್ರಿಕ ಆಚರಣೆಗಳು, ಸ್ಮಶಾನ ಪೂಜೆಗಳು ನರಬಲಿಯಂತಹ ಮೌಢ್ಯಗಳಲ್ಲಿ ಸಿಲುಕಿಕೊಳ್ಳುತ್ತಿದ್ದ ಕಾಲಘಟ್ಟ ಅದು. ಇನ್ನೊಂದು ಕಡೆ ಇದೆಲ್ಲವನ್ನೂ ತಡಿಬೇಕು ಅನ್ನೋ ಮನಸ್ಸಿದ್ದರೂ ಕೂಡ ನಮ್ಮ ಕೆಲಸ ಅಲ್ಲಾ ಧರ್ಮ ವನ್ನ ಕಾಪಾಡುವಿಕೆ ನಾನು ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ.ಅಂತಾ ಶ್ರೀಕೃಷ್ಣ ಹೇಳ್ಬಿಟ್ಟಿದಾನೆ ಬೇಕಾದ್ರೆ ಅವನು ಹುಟ್ಟಿಬಂದು ಕಾಪಾಡ್ತುಕೊಳ್ಳಿ ಅನ್ನೋ ಮನಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತು ಭ್ರಮೆಯಿಂದ ಕೈಕಟ್ಟಿ ಕುಳಿತಿದ್ದ ಸಮಾಜ.
ಇಂಥಾ ಕಗ್ಗತ್ತಲ ಸಮಯದಲ್ಲಿ ಶಂಕರರ ಉದಯವಾಯ್ತು. ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ ಶಂಕರರು ದೇಶ ಪರ್ಯಟನೆಗೆ ಮುಂದಾಗಿ ಸನಾತನ ಧರ್ಮ ಮೇಲೆ ಆವರಿಸಿಕೊಂಡಿದ್ದ ಮೌಢ್ಯದ ಮುಸುಕನ್ನು ತೆಗೆದು ಹಾಕುವುದಕ್ಕೆ ಪ್ರಯತ್ನಿಸಿದರು ಜಾತಿಯನ್ನು ಮೀರಿ ಸಮಾಜದ ಪ್ರತಿಯೊಬ್ಬರೂ ಬ್ರಹ್ಮ ಸ್ವರೂಪವೇ ಅನ್ನುವುದನ್ನು ಜಗತ್ತಿಗೆ ತಿಳಿಸುವುದಕ್ಕೆ ಅವರು ಕಾಶಿಯ ಸ್ಮಶಾನಘಟ್ಟದ ಕಾವಲುಗಾರನ ಕಾಲಿಗೆ ನಮಸ್ಕರಿಸಿದ ಘಟನೆಗಿಂತ ಮತ್ತಿನ್ಯಾವ ಉದಾಹರಣೆ ಬೇಕು.. ಜ್ಞಾನದ ಮದ ತಲೆಗೇರಿಸಿಕೊಂಡ ಪಂಡಿತೋತ್ತಮರ ಎದುರು ಯುವ ಸನ್ಯಾಸಿ ಸ್ಮಶಾನದ ಕಾವಲುಗಾರ ಕಾಲಿಗೆ ನಮಸ್ಕರಿಸಿ ಅವರನ್ನು ಶಿವ ಅಂತ ಗೌರವಿಸಿದ್ದು ಅಲ್ಲಿನ ಸಾಕಷ್ಟು ಜನರ ಕಣ್ಣುತೆರೆಸಿತ್ತಾ.. ಅವರಲ್ಲಿನ ಅಜ್ಞಾನ , ಜಾತಿಯ ಕೊಳಕನ್ನು ತೊಳೆದು ಹಾಕುವುದರಲ್ಲಿ ಸ್ವಲ್ಪಮಟ್ಟಿಗಾದರೂ ಅದು ಯಶಸ್ವಿಯಾಯಿತು ಇನ್ನು ಶಂಕರರ ಬಗ್ಗೆ ಹೇಳುವ ಮತ್ತೊಂದು ಅತ್ಯದ್ಭುತ ಮತ್ತು ಸ್ವಾರಸ್ಯಕರ ವಿಷಯವೆಂದರೆ ಅವರು ದೇವತೆಗಳ ಉಗ್ರಸ್ವರೂಪವನ್ನು ಕಡಿಮೆ ಮಾಡಿದರು ಮತ್ತು ಶ್ರೀ ಚಕ್ರಗಳನ್ನು ದೇವಿ ಮಂದಿರಗಳಲ್ಲಿ ಸ್ಥಾಪಿಸಿದರು.
ಹೀಗೆ ಮೌಢ್ಯಗಳ ವಿರುದ್ಧ ಹೋರಾಡುತ್ತಲೇ ಶಂಕರರು ಅಹ0 ಬ್ರಹ್ಮಾಸ್ಮಿ ಯನ್ನು ಅತ್ಯದ್ಭುತವಾದ ಮತ್ತು ಸರ್ವಕಾಲಿಕ ಸತ್ಯವನ್ನು ಜಗತ್ತಿಗೆ ಹೇಳುವ ಮೂಲಕ ಒಗ್ಗಟ್ಟಿನ ಮಂತ್ರವನ್ನು ಭೋದಿಸಿದರು.
ನೀವು ಇವತ್ತು ಜಗತ್ತಿನ ಪರಿಸ್ಥಿತಿಯನ್ನು ಒಂದುಸಾರಿ ನೋಡಿ ಜಾತಿಯ ಹೆಸರಲ್ಲಿ ಪಂಥಗಳ ಹೆಸರಿನಲ್ಲಿ ಭಾಷೆ ದೇಶಗಳ ಹೆಸರಿನಲ್ಲಿ ಇಡೀ ಜಗತ್ತು ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುವುದಕ್ಕೆ ಕಾತರಿಸಿ ಕುಳಿತಿದೆ.ಭಾರತವೊಂದೇ ಅಲ್ಲ ಜಗತ್ತಿನ ನಾನಾ ಮೂಲೆಗಳಲ್ಲಿ ಸಂಕಷ್ಟದ ಪರಿಸ್ಥಿತಿ ಇನ್ನೂ ನಮ್ಮಲ್ಲಂತೂ ಸಾಂಕ್ರಾಮಿಕದ ರೋಗದ ವಿರುದ್ಧ ಒಂದಾಗಿ ಹೋರಾಡಬೇಕಾದ ಸಮಯದಲ್ಲಿ ಕೂಡ ವೈಮನಸ್ಯಗಳು ಕಿತ್ತಾಟಗಳು ಇವುಗಳ ಮೂಲ ಏನು ಮೂರು ದಿನಗಳ ಬದುಕಿಗಾಗಿ ಮನುಷ್ಯ ಮನುಷ್ಯನ ನಡುವೆ ಯಾಕೆ ಇಷ್ಟೊಂದು ಅಹಂಕಾರದ ಗೋಡೆ ಈ ಪರಿಸ್ಥಿತಿ ಇವತ್ತು ಮಾತ್ರ ಅಲ್ಲ ಅವತ್ತೂ ಇತ್ತು ಇದಕ್ಕೆ ಕಾರಣ ಅವಿದ್ಯೆ ಅಂತ ಹೇಳ್ತಾರೆ ಆದಿಶಂಕರರು.
ವಿದ್ಯೆ ಅಂದರೆ ನಾವು ಶಾಲಾ ಕಾಲೇಜುಗಳಲ್ಲಿ ಕಲಿತಯುವುದಲ್ಲ ಅದಲ್ಲಾ ವಿಧ್ಯೆ ಅಂದ್ರೆ ಮನುಷ್ಯ ಬದುಕನ್ನು ಅರ್ಥ ಮಾಡ್ಕೊಳೋದು ಮನುಷ್ಯ ಆಧ್ಯಾತ್ಮಿಕ ಅನುಭವಗಳನ್ನು ಪಡ್ಕೊಳೋದು ಮನುಷ್ಯ ಆತ್ಮಜ್ಞಾನವನ್ನು ಸಂಪಾದಿಸೋದು ಯಾರಿಗೆ ಆತ್ಮಜ್ಞಾನ ಸಿದ್ದಿಯಾಗುತ್ತೋ ನಾನು ಯಾರು ಅನ್ನೋದು ಯಾರಿಗೆ ಅರ್ಥವಾಗುತ್ತೋ ಅಂತವನು ಎಲ್ಲ ರಾಗದ್ವೇಷಗಳನ್ನು ಮೀರಿ ಮಹಾ ಮಾನವತಾವಾದಿಯಾಗಿ ಎಲ್ಲರನ್ನು ಸಮಾನವಾಗಿ ಪ್ರೀತಿಸುವ ಶಕ್ತಿ ಯನ್ನು ಪಡ್ಕೊತಾನೆ ಅಂಥ ಆತ್ಮಜ್ಞಾನದ ವಿದ್ಯೆಯಿಲ್ಲದೆ ಇರುದೋ ಅವಿಧ್ಯೇ ಈ ಅವಿದ್ಯೆ ನಾನು ಬೇರೆ ನೀನು ಬೇರೆ ಎಂಬ ಮನಸ್ಥಿತಿಗೆ ಕಾರಣವಾಗುತ್ತದೆ.
ಈ ಬೇರೆ ಅನ್ನೋ ಭೇದ ಇದೆಯಲ್ಲಾ, ಇದು ಅಸೂಯೆ ದ್ವೇಷ ಗಳಿಗೆ ಶ್ರೇಷ್ಠತೆಯ ರೋಗಗಳಿಗೆ ಕಾರಣವಾಗುತ್ತದೆ.. ಇನ್ನೂ ಈ ಅವಿದ್ಯೆಯಾಕುಂಟಾಗುತ್ತೆ ನಮ್ಮ ಉಪನಿಷತ್ತುಗಳು ವೇದಗಳು ಇವೆಲ್ಲಾ ಜ್ಞಾನದ ಬಗ್ಗೆ ಇಷ್ಟೇಲ್ಲಾ ಹೇಳಿರುವಾಗಲೂ ಅದನ್ನ ಅಭ್ಯಾಸ ಮಾಡಿದವರಲ್ಲಿ ಕೂಡ ಈ ಭೇದಭಾವ ಅಥವಾ ಅವಿದ್ಯೆ ಯಾಕೆ ಇದಕ್ಕೆ ಕಾರಣ ನಾವು ಯಾವುದನ್ನ ಅರ್ಥ ಮಾಡ್ಕೋಬೇಕು ಅದನ್ನ ಸರಿಯಾಗಿ ಅರ್ಥಮಾಡಿಕೊಳ್ಳದೇ ಇರೋದು ನಮ್ಮಲ್ಲಿನ ಗೊಂದಲಗಳಿಗೆ ಉತ್ತರವನ್ನ ಹುಡುಕದೇ ಇರುವುದು ನಮ್ಮ ಮನಸ್ಸಲ್ಲಿನ ಸಂಶಯಗಳು ಹೆಚ್ಚಾಗುವುದು ಹಾಗೂ ನಾವು ವಿಷಯಗಳನ್ನು ಅಪಾರ್ಥ ಮಾಡ್ಕೊಳೋದು ಈ ಜಗತ್ತಲ್ಲಿ ನಾನು ಬೇರೆಯಲ್ಲ ಈ ಜಗತ್ತಿನ ಸೃಷ್ಟಿ ಬೇರೆಯಲ್ಲಾ.. ನನ್ನಲ್ಲಿರೋದೇ ಇಡೀ ಜಗತ್ತಿನ ಪ್ರತಿಯೊಂದು ಜಡ ಚೇತನದಲ್ಲೂ ಇದೇ ಅನ್ನೋ ಭಾವ ಇದೆಯಲ್ಲಾ ಅದೇ ಅದ್ವೈತ…
.
ನಾನು ಮತ್ತು ಈ ಜಗತ್ತು ಒಂದೇ ಧಾತುವಿನಿಂದ ಸೃಷ್ಟಿಯಾದ ಮೇಲೆ ನಾನು ಬೇರೆ ಜಗತ್ತು ಬೇರೆ ಹೇಗಾಗೋದಕ್ಕೆ ಸಾಧ್ಯ ನಮ್ಮಲ್ಲಿನ ಜೀವ ನಿನ್ನಲ್ಲಿನ ಜೀವ ಎರಡೂ ಒಂದೇ ಆದಾಗ ನಾನು ಬೇರೆ ನೀನು ಬೇರೆ ಹೇಗೆ.. ನಾವಿಬ್ಬರೂ ಒಂದೇ ಅಂದಮೇಲೆ ಜಗಳ ಭಿನ್ನಾಭಿಪ್ರಾಯಗಳು, ಮೇಲು ಕೀಳು ಅನ್ನೋ ಭೇದಗಳು ಅಹಂಕಾರಗಳು ,ಇವೆಲ್ಲ ಇರೋದಿಕ್ಕೆ ಸಾಧ್ಯವೇ ಇಲ್ಲ..ಇದನ್ನೇ ಗೀತೆಯಲ್ಲಿ ಕೃಷ್ಣ ಕೂಡ ಹೇಳ್ತಾರೆ.. ( “ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಛತಿ”.) ಅಂದರೆ “ಹೇಗೆ ಆಕಾಶದಿಂದ ಬೀಳುವ ಪ್ರತಿಯೊಂದು ಮಳೆ ಹನಿಯು ನದಿಗಳ ಮೂಲಕ ಸಮುದ್ರವನ್ನು ಸೇರುತ್ತದೆಯೋ, ಅದೇ ರೀತಿ ನಾವು ಯಾವ ದೇವರಿಗೆ ನಮಸ್ಕಾರ ಮಾಡಿದರು ಅದು ಕೇಶವನ (ಸರ್ವಶಕ್ತನಾದ ಭಗವಾಂತ) ಕಡೆಗೆ ಹೋಗುತ್ತದೆ.”
ನಮ್ಮ ಉಪನಿಷತ್ತುಗಳು ಹೇಳೋದು ಕೂಡ ಜಗತ್ತಿನ ಪ್ರತಿಯೊಂದು ಜೀವಜಂತುಗಳಲ್ಲಿನ ಬ್ರಹ್ಮ ಒಬ್ಬನೇ ಅಂತ… ಇದು ನಮಗೆ ಅರ್ಥವಾಗಿ ಬಿಟ್ಟರೆ ನಮ್ಮಲ್ಲಿನ ಅಹಂಕಾರಕ್ಕೆ ಈರ್ಷೆಗೆ ಅವಕಾಶ ಇರುವುದಿಲ್ಲವೆಂದು ಹೇಳುವರು ಆದಿಶಂಕರಾಚಾರ್ಯರು ಇನ್ನು ಧರ್ಮದ ಸಂರಕ್ಷಣೆ ಅಂತ ಬಂದಾಗ ಯಾರೋ ಬಂದು ನಮ್ಮನ್ನ ಕಾಪಾಡಬೇಕಾದ ಅಗತ್ಯ ಇಲ್ಲ ನಾನೇ ಬ್ರಹ್ಮ ಆಗಿದ್ದಾಗ ನಮ್ಮ ಸುತ್ತಲಿನ ಪರಿಸರವನ್ನು ಜಗತ್ತನ್ನ ಮನುಷ್ಯತ್ವವನ್ನು ಸಮಾಜವನ್ನು ಕಾಪಾಡಬೇಕಾದ ಜವಾಬ್ದಾರಿ ಬ್ರಹ್ಮನಾದ ನನ್ನದೇ ಹೊರತು ಅದಕ್ಕಾಗಿ ಬೇರ್ಯಾರೋ ಹುಟ್ಟಿಬರಬೇಕಿಲ್ಲಾ ಅಂತ ಹೇಳೋ ಮೂಲಕ ನಮ್ಮಲ್ಲಿ ಸಾಮಾಜಿಕ ಜವಾಬ್ದಾರಿಗೆ ಕೂಡ ಕಾರಣರಾಗ್ತಾರೆ ಆದಿಶಂಕರಾಚಾರ್ಯರು.
ಶಂಕರರು ದಿವ್ಯಜ್ಞಾನದ ಸಾಕಾರ ಮೂರ್ತಿ ಆದರೆ ಕಾಲಕ್ರಮೇಣ ಶಂಕರರು ಹೇಳಿದ ಅವಿದ್ಯೆ ಅನ್ನೋದು ಶಂಕರರನ್ನು ಅರ್ಥಮಾಡಿಕೊಳ್ಳದ ವಿಷಯದಲ್ಲಿ ಕೂಡ ಆಯ್ತು ಅನ್ನೋದು ಅತ್ಯಂತ ದುಃಖದ ಸಂಗತಿ.ವೈಶಾಖ ಶುದ್ಧ ಪಂಚಮಿಯಂದು “ಶ್ರೀ ಶಂಕರ ಜಯಂತಿ” ಈ ದಿನವನ್ನು ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ
ಬರಹ : ಹರಿ ಓಂ