ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ರೆಸ್ಟೋರೆಂಟ್, ಹೋಟೆಲ್‌ಗಳು ಮತ್ತು ವ್ಯಾಪಾರ ವಲಯಗಳಿಗೆ ಇದು ಗುಡ್ ನ್ಯೂಸ್ ಆಗಿದೆ. ಇಂದಿನಿಂದ ಈ ಹೊಸ ದರಗಳು ಜಾರಿಗೆ ಬಂದಿವೆ.
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹58.50ರಷ್ಟು ಕಡಿತಗೊಳಿಸಿವೆ. ಇದರೊಂದಿಗೆ ದೆಹಲಿಯಲ್ಲಿ ಹೊಸ ಚಿಲ್ಲರೆ ಬೆಲೆ ₹1,665 ಆಗಿದ್ದು, ಇತರೆ ನಗರಗಳಲ್ಲಿಯೂ ಸಂಬಂಧಿತ ಪ್ರಮಾಣದಲ್ಲಿ ಕಡಿತವಾಗಿದೆ.
ಈ ಇಳಿಕೆಯು ಇನ್‌ಪುಟ್ ವೆಚ್ಚಗಳ ಜತೆಗೆ ಹೋರಾಡುತ್ತಿದ್ದ ಆಹಾರ ಮತ್ತು ಆತಿಥ್ಯ ವಲಯಗಳಿಗೆ (Hotels & Restaurants) ಅಲ್ಪ ನಿಟ್ಟುಸಿರು ನೀಡಲಿದೆ.
ಇದೇ ವೇಳೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.ಇದನ್ನು ಓದಿ –ಕ್ಯಾಂಟರ್ ಡಿಕ್ಕಿ : ಒಂದೇ ಕುಟುಂಬದ ನಾಲ್ವರ ಧಾರುಣ ಸಾವು
ಇತ್ತೀಚಿನ ಇಳಿಕೆಗಳ ಪಟ್ಟಿ:
- ಏಪ್ರಿಲ್: ₹41 ಇಳಿಕೆ
- ಮೇ ತಿಂಗಳು: ₹14.50 ಇಳಿಕೆ
- ಜೂನ್: ₹24 ಇಳಿಕೆ
- ಜುಲೈ 1: ₹58.50 ಇಳಿಕೆ