- ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿ ಪ್ರದಾನ
ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಾನಾ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪ್ರಧಾನಿ ಮೋದಿ ಐದು ದೇಶಗಳ ಭೇಟಿಯಲ್ಲಿರುವ ಸಂದರ್ಭದಲ್ಲೇ, ಅವರು ಮೊದಲಿಗೆ ಘಾನಾ ದೇಶಕ್ಕೆ ಭೇಟಿ ನೀಡಿದರು. ಇದು ಕಳೆದ 30 ವರ್ಷಗಳಲ್ಲಿ ಯಾವುದೇ ಭಾರತೀಯ ಪ್ರಧಾನಿ ನೀಡಿದ ಮೊದಲ ಅಧಿಕೃತ ಭೇಟಿ ಆಗಿದೆ.
ಈ ಸಂದರ್ಭದಲ್ಲಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಣಿ ಮಹಾಮಾ ಅವರು ಮೋದಿಯನ್ನು ಪ್ರಭಾವಶಾಲಿ ಜಾಗತಿಕ ನಾಯಕ ಎಂದು ಪ್ರಶಂಸಿಸಿ, ಅವರಿಗೆ ರಾಷ್ಟ್ರದ ಗೌರವದ ಪ್ರಶಸ್ತಿಯನ್ನು ಸಲ್ಲಿಸಿದರು.
ಪ್ರಶಸ್ತಿ ಸ್ವೀಕರಿಸಿ ಮೋದಿ ಮಾತನಾಡುತ್ತಾ, “ಈ ಗೌರವ ಕೇವಲ ನನ್ನ ವೈಯಕ್ತಿಕ ಶ್ರಮಕ್ಕೆ ಅಲ್ಲ. ಇದು 140 ಕೋಟಿ ಭಾರತೀಯರ ಸಾಮೂಹಿಕ ಸಾಧನೆಯ ಪ್ರತೀಕ. ಈ ಪ್ರಶಸ್ತಿಯನ್ನು ದೇಶದ ಯುವಜನತೆಗೆ ಅರ್ಪಿಸುತ್ತೇನೆ. ಇದು ಭಾರತದ ಶ್ರೀಮಂತ ಪರಂಪರೆಯ ಗೌರವವಾಗಿದ್ದು, ನಾನು ಇದನ್ನು ಹೆಮ್ಮೆಪೂರ್ವಕವಾಗಿ ಸ್ವೀಕರಿಸುತ್ತೇನೆ,” ಎಂದು ಹೇಳಿದರು.
ಮೋದಿ ತಮ್ಮ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು, ಘಾನಾ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.ಇದನ್ನು ಓದಿ – ಮಂಡ್ಯ: ಜೀವನದಲ್ಲಿ ಜಿಗುಪ್ಸೆ – ತಾಯಿ-ಮಗಳು ಆತ್ಮಹತ್ಯೆ
ಇದೇ ವೇಳೆ ಅವರು ಈ ಗೌರವವು ಭಾರತ ಮತ್ತು ಘಾನಾ ನಡುವಿನ ದೀರ್ಘಕಾಲೀನ ಸ್ನೇಹ ಬಲಪಡಿಸುವುದಾಗಿ, ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.