- – ಮನೆ, ಕಚೇರಿ, ಸ್ಟೀಲ್ ಅಂಗಡಿ ಮೇಲೆ ಏಕಕಾಲದ ದಾಳಿ
ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಇಬ್ಬರು ಗಣಿ ಉದ್ಯಮಿಗಳ ಮನೆ, ಕಚೇರಿ ಹಾಗೂ ಸ್ಟೀಲ್ ಅಂಗಡಿಗಳ ಮೇಲೆ ಬೆಳ್ಳಂಬೆಳಗ್ಗೆ ಜಾರಿಯ ತನಿಖಾ ಸಂಸ್ಥೆ ಇಡಿ (ED) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾಳಿಗೆ ಗುರಿಯಾದವರು – ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶ್. ಸ್ವಸ್ತಿಕ್ ನಾಗರಾಜ್‌ಗೆ ಸೇರಿದ ಎಂಜೆ ನಗರದ ಮನೆ, ಎಪಿಎಂಸಿ ಬಳಿ ಇರುವ ಸ್ಟೀಲ್ ಅಂಗಡಿ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇದೇ ವೇಳೆ, 20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯರಾಗಿರುವ ಕಾರದಪುಡಿ ಮಹೇಶ್ ಅವರ ಮನೆಯಲ್ಲಿಯೂ ದಾಳಿ ನಡೆದಿದೆ.
ಬೆಲೆಕೇರಿ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಇಬ್ಬರೂ ಉದ್ಯಮಿಗಳು ಭಾಗಿಯಾಗಿರುವ ಆರೋಪ ಇರುವುದರಿಂದ, ಇಡಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.ಇದನ್ನು ಓದಿ – SIT ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಕಾಪಾಡಬೇಕು – ಸ್ಪೀಕರ್ ಯು.ಟಿ. ಖಾದರ್
ಈ ದಾಳಿ ಕಾರ್ಯಾಚರಣೆ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.