- ಬೆಂಗಳೂರಿನ ಭವೇಶ್ ಜಯಂತಿ ರಾಜ್ಯದ ಟಾಪರ್
ಬೆಂಗಳೂರು: ಕರ್ನಾಟಕ ಯುಜಿಸಿಇಟಿ (KCET) 2025ರ ಫಲಿತಾಂಶವನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಶನಿವಾರ ಬೆಳಿಗ್ಗೆ 11:30ಕ್ಕೆ ಕೆಇಎ ಕಚೇರಿಯಲ್ಲಿ ಪ್ರಕಟಿಸಿದರು.
ಈ ಫಲಿತಾಂಶದಲ್ಲಿ ಬೆಂಗಳೂರಿನ ಮಾರತಹಳ್ಳಿಯ ಚೈತನ್ಯ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಭವೇಶ್ ಜಯಂತಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ (98.67%) ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇದೇ ವಿಭಾಗದಲ್ಲಿ ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ಶಾಖೆಯ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ (99.33%) ಎರಡನೇ ಸ್ಥಾನ ಮತ್ತು ದಿನೇಶ್ ಗೋಮತಿ ಶಂಕರ್ ಅರುಣಾಚಲಂ (99%) ಮೂರನೇ ಸ್ಥಾನ ಪಡೆದಿದ್ದಾರೆ.
ಸಿಇಟಿ ಪರೀಕ್ಷೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗಿತ್ತು. ಫಲಿತಾಂಶದ ಲಿಂಕ್‌ಗಳನ್ನು ಮಧ್ಯಾಹ್ನ 2 ಗಂಟೆಯ ನಂತರ https://cetonline.karnataka.gov.in/ugcetrank2025/rank2025/checkresult.aspx ಮತ್ತು https://karresults.nic.in ವೆಬ್‌ಸೈಟ್‌ಗಳಲ್ಲಿ ಲಭ್ಯ ಮಾಡಲಾಗಿದೆ.
ಇದನ್ನು ಓದಿ –ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಬಂಧನ
ಫಲಿತಾಂಶ ವೀಕ್ಷಿಸುವ ವಿಧಾನ:
- ಅಧಿಕೃತ ಜಾಲತಾಣ cetonline.karnataka.gov.in ಗೆ ಭೇಟಿ ನೀಡಬೇಕು
- “KCET ಫಲಿತಾಂಶ 2025” ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ನೋಂದಣಿ ಸಂಖ್ಯೆ ಮತ್ತು ಬೇಡಿಕೆಯ ಇತರೆ ಮಾಹಿತಿಯನ್ನು ನಮೂದಿಸಬೇಕು
- “Submit” ಬಟನ್ ಕ್ಲಿಕ್ ಮಾಡಿದ ನಂತರ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿರುತ್ತದೆ
ವಿದ್ಯಾರ್ಥಿಗಳಿಗೆ ಯಶಸ್ಸು ಸಂದೇಶ ನೀಡಿದ ಸಚಿವರು, ಮುಂದಿನ ಪ್ರವೇಶಾತಿ ಪ್ರಕ್ರಿಯೆಗೆ ಸಿದ್ಧರಾಗುವಂತೆ ಕರೆ ನೀಡಿದ್ದಾರೆ.