# Varthaman > A forecast of the future ## Posts - [ಖ್ಯಾತ ನಿರ್ದೇಶಕ ಪ್ರೇಮ್‌ಗೆ ಎಮ್ಮೆ ಕೊಡಿಸುವ ನೆಪದಲ್ಲಿ ₹4.5 ಲಕ್ಷ ವಂಚನೆ](https://varthaman.in/famous-director-prem-cheated-of-4-5-lakh-on-the-pretext-of-giving-a-buffalo/): – ಆರೋಪಿ ವಿರುದ್ಧ ಪ್ರಕರಣ ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪ್ರೇಮ್ ಅವರನ್ನು ಎಮ್ಮೆ ಕೊಡಿಸುವ ನೆಪದಲ್ಲಿ ₹4.5 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿಯ ಪ್ರಕಾರ, ಹೈನುಗಾರಿಕೆ ಉದ್ದೇಶದಿಂದ ಎರಡು ಎಮ್ಮೆಗಳನ್ನು ಖರೀದಿಸಲು ಪ್ರೇಮ್ ಮುಂದಾಗಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಮೂಲದ ವನರಾಜ್ ಬಾಯ್ ಎಂಬಾತನೊಂದಿಗೆ ಸಂಪರ್ಕಿಸಿ, ಮೊದಲು ಮುಂಗಡವಾಗಿ ₹25,000 ನೀಡಿದ್ದರು. ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿ ನಂಬಿಕೆ ಮೂಡಿಸಿದ್ದ. ನಂತರ, ಎಮ್ಮೆ ತರುವ ನೆಪದಲ್ಲಿ ಪ್ರೇಮ್ ಅವರಿಂದ ₹4.5 ಲಕ್ಷವನ್ನು ಆನ್‌ಲೈನ್ ಮೂಲಕ ಪಡೆದಿದ್ದಾನೆ. ಆದರೆ ಹಣ ಪಡೆದ ಬಳಿಕ, ಒಂದು ವಾರದಲ್ಲಿ ಎಮ್ಮೆ ಕೊಡುತ್ತೇನೆ ಎಂದು ಹೇಳಿ ಆರೋಪಿ ಪರಾರಿಯಾಗಿದ್ದಾನೆ.ಇದನ್ನು ಓದಿ –ಚಾಲನಾ ಪರವಾನಗಿ (DL) ಮತ್ತು ವಾಹನ RCಗೆ ‘ಆಧಾರ್ ಕಡ್ಡಾಯ’ ಈ ಹಿನ್ನೆಲೆಯಲ್ಲಿ, ನಿರ್ದೇಶಕ ಪ್ರೇಮ್ ಅವರ ಮ್ಯಾನೇಜರ್ ಚಂದ್ರು ಅವರು ಪೊಲೀಸ್ ಠಾಣೆಗೆ […] - [ಚಾಲನಾ ಪರವಾನಗಿ (DL) ಮತ್ತು ವಾಹನ RCಗೆ ‘ಆಧಾರ್ ಕಡ್ಡಾಯ’](https://varthaman.in/aadhaar-mandatory-for-driving-license-dl-and-vehicle-rc/): ನವದೆಹಲಿ: ಚಾಲನಾ ಪರವಾನಗಿ (DL) ಹೊಂದಿರುವವರು ಮತ್ತು ವಾಹನ ಮಾಲೀಕರು (RC) ತಮ್ಮ ದಾಖಲೆಗಳನ್ನು ಆಧಾರ್ ದೃಢೀಕರಣ ಮೂಲಕ ನವೀಕರಿಸಬೇಕಾಗಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ. ಯಾವುದೇ ಸಾರಿಗೆ ಸೇವೆಗಳು ಅಥವಾ ಚಾಲನಾ ಪರವಾನಗಿಗೆ ಸಂಬಂಧಿಸಿದ ಸೇವೆಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಾರಿಗೆ ಸಚಿವಾಲಯದ ಪ್ರಕಾರ, ಜನರು ‘ವಾಹನ್’ (VAHAN) ಮತ್ತು ‘ಸಾರಥಿ’ (SARATHI) ಪೋರ್ಟಲ್‌ಗಳ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು DL ಮತ್ತು RCಗೆ ಸೇರಿಸಬಹುದು ಅಥವಾ ನವೀಕರಿಸಬಹುದು. ಇದರಿಂದ ವಿವರಗಳು ನಿಖರ, ಸಂಪೂರ್ಣ ಮತ್ತು ನವೀಕರಿತವಾಗಿರುತ್ತವೆ. ಪೋರ್ಟಲ್‌ನಲ್ಲಿ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್‌ಲೈನ್ ಸೌಲಭ್ಯ ಒದಗಿಸಲಾಗಿದೆ. ರಾಜ್ಯ ಸಾರಿಗೆ ಇಲಾಖೆಗಳ ಕಟ್ಟುಪಾಡು ರಾಜ್ಯ ಸಾರಿಗೆ ಇಲಾಖೆಗಳು ವಾಹನ ಮಾಲೀಕರಿಗೆ ಸಂದೇಶ ಕಳುಹಿಸಿ, ತಮ್ಮ ವಿವರಗಳನ್ನು ಶೀಘ್ರದಲ್ಲೇ ನವೀಕರಿಸಿಕೊಳ್ಳುವಂತೆ ಸೂಚನೆ ನೀಡುತ್ತಿವೆ. ಸಚಿವಾಲಯದ ಪ್ರಕಾರ, ಅನೇಕ ವಾಹನ ಮಾಲೀಕರು ಮತ್ತು ಚಾಲಕರು ದಂಡ ಪಾವತಿಸುವುದನ್ನು ತಪ್ಪಿಸಲು ತಮ್ಮ ಮೊಬೈಲ್ ಸಂಖ್ಯೆ ಅಥವಾ ವಿಳಾಸವನ್ನು ಬದಲಾಯಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆಗಳು ಕ್ರಮ ಕೈಗೊಂಡಿವೆ.ಇದನ್ನು ಓದಿ –ಆನ್‌ಲೈನ್ ಗೇಮಿಂಗ್ ಮಸೂದೆ: ನಿಯಮ ಉಲ್ಲಂಘನೆಗೆ 3 […] - [ಆನ್‌ಲೈನ್ ಗೇಮಿಂಗ್ ಮಸೂದೆ: ನಿಯಮ ಉಲ್ಲಂಘನೆಗೆ 3 ವರ್ಷ ಜೈಲು, 1 ಕೋಟಿ ರೂ. ದಂಡ](https://varthaman.in/online-gaming-3-years-in-prison-rs-1-crore-fine/): ನವದೆಹಲಿ: “ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ – 2025” ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂದು ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಈ ಮಸೂದೆ ಅಂಗೀಕೃತವಾದರೆ, ಅನಧಿಕೃತ ಆನ್‌ಲೈನ್ ಗೇಮ್‌ಗಳನ್ನು ಆಡಿದರೆ ಅಥವಾ ಪ್ರಚಾರ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ 1 ಕೋಟಿಯವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಕರಡು ಮಸೂದೆಗೆ ಅನುಮೋದನೆ ನೀಡಿದ್ದು, ವಿಶೇಷವಾಗಿ ಅನಧಿಕೃತ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ಗಳ ಪ್ರಚಾರವನ್ನು ಸಂಪೂರ್ಣ ನಿಷೇಧಿಸಿ, ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಮಸೂದೆಯ ಉದ್ದೇಶ ಈ ಕಾನೂನಿನ ಮುಖ್ಯ ಉದ್ದೇಶ ಆನ್‌ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ನಿಯಮ ಹಾಗೂ ನಿಬಂಧನೆಗಳನ್ನು ಜಾರಿಗೆ ತಂದು, ಗ್ರಾಹಕರಿಗೆ ಸುರಕ್ಷಿತ ವಾತಾವರಣ ಒದಗಿಸುವುದು. ಪ್ರಸ್ತುತ ಗೇಮಿಂಗ್ ಕಂಪನಿಗಳ ಮೇಲೆ ಸ್ಪಷ್ಟ ನಿಯಂತ್ರಣಗಳ ಕೊರತೆಯಿಂದಾಗಿ ಬಳಕೆದಾರರು ಶೋಷಣೆ ಹಾಗೂ ವಂಚನೆಗೆ ಗುರಿಯಾಗುತ್ತಿದ್ದಾರೆ. ಹೊಸ ಕಾನೂನಿನ ಜಾರಿಗೆ ಬಂದ ನಂತರ, ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಭಾರತದ ಆನ್‌ಲೈನ್ ಗೇಮಿಂಗ್ ಉದ್ಯಮ […] - [ಭಾರತ-ಚೀನಾ ಸಂಬಂಧಗಳಲ್ಲಿ ಸ್ಥಿರ ಪ್ರಗತಿ](https://varthaman.in/steady-progress-in-india-china-relations/): ನವದೆಹಲಿ: ಕಳೆದ 10 ತಿಂಗಳ ಅವಧಿಯಲ್ಲಿ ಭಾರತ-ಚೀನಾ ಸಂಬಂಧಗಳು ಸ್ಥಿರ ಪ್ರಗತಿಯನ್ನು ಸಾಧಿಸಿವೆ, ಕಾರಣ ಪರಸ್ಪರರ ಹಿತಾಸಕ್ತಿಗಳು ಹಾಗೂ ಸೂಕ್ಷ್ಮತೆಗಳನ್ನು ಗೌರವಿಸುವ ನಿಲುವು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ನಂತರ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಷ್ಯಾದ ಕಜಾನ್ ನಗರದಲ್ಲಿ ನಡೆದ ಬಹುಪಕ್ಷೀಯ ಕಾರ್ಯಕ್ರಮದ ವೇಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಮಾತುಕತೆಗಳನ್ನು ಮೋದಿ ಇಲ್ಲಿ ಸ್ಮರಿಸಿದರು. “ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದದ್ದು ಸಂತೋಷ ತಂದಿತು. ಕಳೆದ ವರ್ಷ ಕಜಾನ್‌ನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿ ಮಾಡಿದ ನಂತರ ಭಾರತ-ಚೀನಾ ಸಂಬಂಧಗಳು ಸ್ಥಿರವಾಗಿ ಮುಂದೆ ಸಾಗುತ್ತಿವೆ” ಎಂದು ಮೋದಿ ಅಭಿಪ್ರಾಯಪಟ್ಟರು.ಇದನ್ನು ಓದಿ –ಲೋ ಬಿಪಿಯಿಂದ 6 ವರ್ಷದ ಬಾಲಕ ದುರ್ಮರಣ ಮುಂದಿನ ದಿನಗಳಲ್ಲಿ ಚೀನಾದ ಟಿಯಾಂಜಿನ್ನಲ್ಲಿ ನಡೆಯಲಿರುವ ಸಭೆಗೆ ತಾವು ನಿರೀಕ್ಷೆಯಲ್ಲಿರುವುದಾಗಿ ಅವರು ತಿಳಿಸಿದರು. “ಭಾರತ ಮತ್ತು ಚೀನಾ ನಡುವಿನ ಸ್ಥಿರ, ಊಹಿಸಬಹುದಾದ ಹಾಗೂ […] - [ಲೋ ಬಿಪಿಯಿಂದ 6 ವರ್ಷದ ಬಾಲಕ ದುರ್ಮರಣ](https://varthaman.in/6-year-old-boy-dies-of-low-bp/): ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ 6 ವರ್ಷದ ಬಾಲಕನೊಬ್ಬ ಲೋ ಬಿಪಿ (ಕಡಿಮೆ ರಕ್ತದೊತ್ತಡ)ದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಹೇಶ್ ಮತ್ತು ಸುಮಾ ದಂಪತಿಯ ಪುತ್ರ ಆರ್ಯ ಮೃತಪಟ್ಟ ಬಾಲಕ. ಬನ್ನಿತಾಳಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ ತರಗತಿಯಲ್ಲಿ ಓದುತ್ತಿದ್ದ ಆರ್ಯ, ಶಾಲೆಯಿಂದ ಮನೆಗೆ ಬಂದ ಬಳಿಕ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಪೋಷಕರು ಆರ್ಯನನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು “ಬಿಪಿ ಕಡಿಮೆಯಾಗುತ್ತಿದೆ, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ” ಎಂದು ಸಲಹೆ ನೀಡಿದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದರೂ ಬಾಲಕ ಪ್ರಾಣಾಪಾಯದಿಂದ ಪಾರಾಗಲಿಲ್ಲ. - [KRS ಡ್ಯಾಂನಿಂದ ನೀರು ಬಿಡುಗಡೆ – ತಗ್ಗು ಪ್ರದೇಶದ ಜನರಿಗೆ ಪ್ರವಾಹ ಎಚ್ಚರಿಕೆ](https://varthaman.in/water-released-from-krs-dam-flood-warning-for-people-in-low-lying-areas/): ಮಂಡ್ಯ: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಪರಿಣಾಮ, ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರ ಪರಿಣಾಮವಾಗಿ ಜಲಾಶಯದಿಂದ ದಿನಕ್ಕೆ ಸುಮಾರು 80,000 ರಿಂದ 1,20,000 ಕ್ಯೂಸೆಕ್ ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಸಮಯದಲ್ಲಿ ನೀರಿನ ಬಿಡುಗಡೆ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ, ಕಾವೇರಿ ನದಿಯ ತಗ್ಗು ಪ್ರದೇಶ ಹಾಗೂ ನದಿಯ ಎರಡೂ ದಡಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಲು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ. ಪ್ರವಾಹ ಎಚ್ಚರಿಕೆ ಸಂದೇಶದಲ್ಲಿ, ಕೆ.ಆರ್.ಎಸ್ ಜಲಾಶಯದಲ್ಲಿ ನೀರಿನ ಮಟ್ಟವು ಪೂರ್ಣ ಸಂಗ್ರಹ ಮಟ್ಟ ತಲುಪುತ್ತಿರುವುದರಿಂದ, ಯಾವುದೇ ಕ್ಷಣದಲ್ಲೂ 50,000 ರಿಂದ 80,000 ಕ್ಯೂಸೆಕ್ ಗಿಂತ ಹೆಚ್ಚು ನೀರು ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.ಇದನ್ನು […] - [ಮಹೇಶ್ ತಿಮರೋಡಿ ವಿರುದ್ಧ FIR – ಸಂಜೆಯೊಳಗೆ ಬಂಧನೆಗೆ ಗೃಹ ಸಚಿವರ ಸೂಚನೆ](https://varthaman.in/fir-against-mahesh-timarodi-home-minister-orders-arrest-by-evening/): ಬೆಂಗಳೂರು:ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ “ಕೊಲೆಗಾರ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಕಾನೂನು ಕ್ರಮ ಜರುಗಿದೆ. ಈ ಪ್ರಕರಣದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸರಿಗೆ ಇಂದು ಸಂಜೆಯೊಳಗೆ ಅವರನ್ನು ಬಂಧಿಸಲು ಸೂಚನೆ ನೀಡಿದ್ದಾರೆ. ಮಹೇಶ್ ತಿಮರೋಡಿ ನೀಡಿದ ಹೇಳಿಕೆ ವಿಧಾನಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ತಕ್ಷಣದ ಕ್ರಮಕ್ಕೆ ಆದೇಶಿಸಿದ್ದು, ಈಗಾಗಲೇ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದನ್ನು ಓದಿ –ಬೆಂಗಳೂರು ಅಗ್ನಿ ದುರಂತ – 5 ಸಾವು: ಕಟ್ಟಡ ಮಾಲೀಕ ಸೇರಿ 2 ಬಂಧನ ಅದರ ಜೊತೆಗೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿದ್ದರೂ ಸಿದ್ಧರಾಮಯ್ಯ ಕೊಲೆಗಾರ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. - [ಬೆಂಗಳೂರು ಅಗ್ನಿ ದುರಂತ - 5 ಸಾವು: ಕಟ್ಟಡ ಮಾಲೀಕ ಸೇರಿ 2 ಬಂಧನ](https://varthaman.in/bengaluru-fire-tragedy-5-dead-2-arrested-including-building-owner/): ಬೆಂಗಳೂರು: ನಗರ್ತಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಐವರು ಸಜೀವ ದಹನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಾಲಕೃಷ್ಣ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮೃತನ ಸಹೋದರ ಗೋಪಾಲ್ ಸಿಂಗ್ ನೀಡಿದ ದೂರಿನ ಮೇರೆಗೆ, ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಓದಿ –ಮುಂಗಾರು ಆರ್ಭಟ :ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಕಟ್ಟಡದಲ್ಲಿ ಅಗ್ನಿ ತಡೆಗಟ್ಟುವ ಸಾಮಾನ್ಯ ಸುರಕ್ಷತಾ ವ್ಯವಸ್ಥೆಯೂ ಇರದ ಕಾರಣ, ನಿರ್ಲಕ್ಷ್ಯದಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಧಾರದ ಮೇಲೆ ಇಬ್ಬರು ಕಟ್ಟಡ ಮಾಲೀಕರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಕಾಯ್ ತಿಳಿಸಿದ್ದಾರೆ. - [ಮುಂಗಾರು ಆರ್ಭಟ :ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ](https://varthaman.in/monsoon-water-levels-in-major-dams/): ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಿಗೂ ನಿರಂತರವಾಗಿ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಕೆಆರ್‌ಎಸ್‌, ಕಬಿನಿ ಸೇರಿ ಹಲವು ಜಲಾಶಯಗಳು ಗರಿಷ್ಠ ಮಟ್ಟ ತಲುಪಿವೆ. ಆಗಸ್ಟ್‌ 18ರ ವೇಳೆಗೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ: ಇದನ್ನು ಓದಿ –ಮೈಸೂರು : ಕುಡಿತಕ್ಕೆ ಹಣ ನೀಡದ ಪತಿಯನ್ನೇ ಕೊಂದ ಪತಿ - [ಮೈಸೂರು : ಕುಡಿತಕ್ಕೆ ಹಣ ನೀಡದ ಪತಿಯನ್ನೇ ಕೊಂದ ಪತಿ](https://varthaman.in/mysore-husband-kills-wife-for-not-paying-for-liquor/): ಮೈಸೂರು:ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಪತಿ ಕ್ರೂರಿಯಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೆ ಬಲಿಯಾದವರು ಗಾಯತ್ರಿ. ಆರೋಪಿ ಪತಿ ಪಾಪಣ್ಣ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನಾಗಿದ್ದು, ಅಪಾರ ಸಾಲದ ಒತ್ತಡ ಹಾಗೂ ಕುಡಿತದ ದುಷ್ಚಟದಿಂದ ಬಳಲುತ್ತಿದ್ದ. ಪಾಪಣ್ಣನು ಪತ್ನಿ ಮತ್ತು ಮಕ್ಕಳಿಗೆ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಪತ್ನಿಯ ಮೇಲೆ ಒತ್ತಡ ಹೇರಿದ್ದನು. ಮನೆಯಲ್ಲಿದ್ದವರು ಹೊರಗೆ ಹೋದ ಸಂದರ್ಭದಲ್ಲಿ, ಪಾಪಣ್ಣ ಮಚ್ಚಿನಿಂದ ಪತ್ನಿ ಗಾಯತ್ರಿಯ ಮೇಲೆ ದಾಳಿ ನಡೆಸಿ ಕೊಲೆಮಾಡಿ ಪರಾರಿಯಾಗಲು ಪ್ರಯತ್ನಿಸಿದ. ಆದರೆ, ಈ ಘಟನೆಯ ವೇಳೆ ಮಗನ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಮಗ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಪಾಪಣ್ಣನನ್ನು ಬಂಧಿಸಿದ್ದಾರೆ. - [ಮತಗಳ್ಳತನ ಆರೋಪಕ್ಕೆ : ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ](https://varthaman.in/election-commission-to-hold-press-conference-tomorrow-at-3-pm-on-allegations-of-vote-rigging/): ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ದಾಖಲಾತಿ ಸಹಿತವಾಗಿ ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನಾಳೆ (ಆಗಸ್ಟ್ 17) ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತರು ಸ್ವತಃ ಸುದ್ದಿಗೋಷ್ಠಿಯನ್ನು ನಡೆಸಲಿದ್ದು, ರಾಹುಲ್ ಗಾಂಧಿ ಹೊರ ಹಾಕಿದ ಆರೋಪಗಳಿಗೆ ದಾಖಲೆ ಆಧಾರಿತ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಮನೆ ಸಂಖ್ಯೆ ಇಲ್ಲದ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿವೆ, ಜೊತೆಗೆ ಒಬ್ಬರ ಹೆಸರು ಎರಡು ಕಡೆ ಸೇರಿರುವಂತಹ ದಾಖಲೆಗಳನ್ನೂ ಅವರು ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ನಾಳೆಯ ಸುದ್ದಿಗೋಷ್ಠಿಯ ಮೂಲಕ ಎಲ್ಲಾ ಆರೋಪಗಳಿಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲಿದೆ. - [ನಾಲಿಗೆಯೆಂಬ ಅಪಾಯಕಾರಿ ಆಯುಧ….!!](https://varthaman.in/the-tongue-is-a-dangerous-weapon/): ವಿಧಿಬರಹ ಎಲ್ಲಿದೆಯೋ ಹೇಗಿದೆಯೋ ನನಗಂತೂ ಗೊತ್ತಿಲ್ಲಾ, ಅಸಲಿಗೆ ಅದನ್ನು‌ ನೋಡಿಯೂ ಇಲ್ಲ‌. ಆದರೆ ಈ ನಮ್ಮ ನಾಲಿಗೆ ಇದೆಯಲ್ಲಾ…..ಅದು ನಾವು ನೋಡದೇ ಇರುವ ವಿಧಿಬರಹಕ್ಕಿಂತಲೂ ಸಿಕ್ಕಾಪಟ್ಟೆ ಪವರ್ ಫ಼ುಲ್ ಅಷ್ಟೇ ಅಲ್ಲ…ಡೇಂಜರಸ್ ಕೂಡಾ.! ಅದನ್ನು ನಾವು ಹೇಗೆ ಉಪಯೋಗಿಸಿ ಕೊಳ್ಳುತ್ತೇವೆಂಬುದರ ಮೇಲೆ ನಮ್ಮ ವ್ಯಕ್ತಿತ್ವ, ವರ್ತನೆ‌, ಇಮೇಜು ಹಾಗೂ ಒಟ್ಟಾರೆ ಬದುಕಿನ ಹಣೆಬರಹ ಎಲ್ಲವೂ ನಿರ್ಧಾರ ಆಗುತ್ತೆ. ಮೊದಲೇ ಮನುಷ್ಯನ ನಾಲಿಗೆಗೆ ಮೂಳೆ ಇಲ್ಲ. ಹೀಗಾಗಿಯೇ ಹೇಗೆಂದರೆ ಹಾಗೆ ಸಲೀಸಾಗಿ ಹೊರಳಿ ಏನನ್ನು‌ ಬೇಕಾದರೂ ಮಾತನಾಡಿಸಿಬಿಡುತ್ತೆ‌. ಅಂತಹ ನಾಲಿಗೆಯ ಜೊತೆ ಒಂದಷ್ಟು ನಮ್ಮ‌ ಮನಸಿನ ನಕಾರಾತ್ಮಕ ಯೋಚನೆಗಳು, ಅಹಂ ಬ್ರಹ್ಮಾಸ್ಮಿತನದ ಅಹಂಕಾರ ಮತ್ತದರ ಜೊತೆಗೆ ಅರೆಪಾವಿನಷ್ಟು Ego ಸಾಥ್ ಕೊಟ್ಟಾರೆ ಅಲ್ಲಿಗೆ ಮುಗೀತು ನೋಡಿ. ತನ್ನ ಮಾತುಗಳಿಂದ ತಾನೇ ಗೋರಿ ತೋಡಿಕೊಳ್ಳುವಂತೆ ಮಾಡಿಬಿಡುವ ಖತರ್ನಾಕ್ ಶಾರ್ಪ್ ನೆಸ್ಸು ನಾಲಿಗೆಯೆಂಬ ಆಯುಧಕ್ಕಿದೆ. ಈ ನಾಲಿಗೆಯನ್ನು ಸಮಯ-ಸಂಧರ್ಭಕ್ಕನುಸಾರವಾಗಿ ನಿಯಂತ್ರಣದಲ್ಲಿಟ್ಟು ಕೊಳ್ಳುವ ಜಾಣರು ಜೀವನದಲ್ಲಿ ಗೆದ್ದರೆ, ತಮ್ಮ ನಾಲಿಗೆಯನ್ನು ಅತಿಯಾಗಿ ಪ್ರೀತಿಸುವ, ಹಾಗೆ ಪ್ರೀತಿಸಿ, ಹೇಗೆಂದರೆ […] - [ಕೃಷ್ಣಾವತಾರ ಪ್ರೇರಣೆ.](https://varthaman.in/inspiration-of-krishna-avatar/): ಕೃಷ್ಣ ಎಂಬ ಹೆಸರು ಕೇಳಿದೊಡನೆ ಮೊದಲು ಮನದಲ್ಲಿ ಮೂಡುವುದುಮುದ್ದು ಬಾಲಕೃಷ್ಣನ ಸುಂದರ ಚಿತ್ರ.ನೀಲವರ್ಣ, ಅರಳಿದ ಕಂಗಳ,ಬೆಣ್ಣೆ ಮೆತ್ತಿದ ಬಾಯಿಯ,ನವಿಲುಗರಿ,ಮುತ್ತಿನಸರದ,ಸರುಳಿಗೂದಲ ತುಂಟಾಟವಾಡುವ ಮನೋಹರ ಮೂರ್ತಿಯ ಸುಂದರ ಚಿತ್ರ.ಮನೆಯಲ್ಲಿ ಮಕ್ಕಳಿಗೆ ಮುದ್ದು ಕೃಷ್ಣನ ವೇಷಹಾಕಿ ನಲಿಯುತ್ತೇವೆ.ಮಕ್ಕಳ ತುಂಟಾಟ ಮಾತುಗಳಲ್ಲಿ ಕೃಷ್ಣನನ್ನೇ ಕಾಣುತ್ತೇವೆ. ಕೃಷ್ಣ ನರನಂತೆ ದೇವಕೀ ವಸುದೇವರ ಮಗನಾಗಿ ಜನಿಸಿ,ಜಗದೋದ್ಧಾರ ಮಾಡಿದವ.ಮಾವ ಕಂಸನ ದೌರ್ಜನ್ಯಕೆ ತಕ್ಕ ಉತ್ತರ ನೀಡಿದ ನ್ಯಾಯವಾದಿ. ಬಾಲ್ಯವನು ನಂದಗೋಪ ಯಶೋಧೆಯರ ನಂದಗೋಕುಲದಲ್ಲಿ ಕಳೆದು,ದುರುಳ ರಕ್ಕಸರ ಸದೆಬಡಿದು ಗೊಲ್ಲರ ಸಮುದಾಯಕ್ಕೆ ನೆಮ್ಮದಿ ತಂದವ.ರಾಧೆಯೊಡನೆ ನಿರ್ಮಲ ಪ್ರೇಮದಲಿ ಬೆರೆತವ.ಮುರಳೀಗಾನದಿಂದ ರಸಮಯ ಮಾತುಗಳಿಂದ,ಸ್ನೇಹ ಬಳಗವನ್ನು ಕಟ್ಟಿದವ.ಕೃಷ್ಣ ಆಪದ್ಭಾಂಧವ ಕಷ್ಟದಲ್ಲಿ ಕೈಬಿಡದೆ ತನ್ನ ನೆಚ್ಚಿದವರನ್ನು ಸಲಹಿದವ.ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಿಸಿದ ಮಹಾ ನಾಯಕ.ಚಾಣಾಕ್ಷತನದಿಂದ,ಜಾಣತನದಿಂದ ಮೋಡಿಮಾಡಿ ಸಮಸ್ಯೆಗಳನ್ನು ಪರಿಹರಿಸಿದ ಲೀಲಾವಿನೋದ ಗಾರುಡಿಗ. ಕೃಷ್ಣನ ಕಥೆಗಳನ್ನು ಕೇಳಿದವರ ಮನದಲ್ಲಿ ಕೃಷ್ಣನ ಬಗ್ಗೆ ಅವನನ್ನು ದೇವರಾಗಿಯೂ,ಆಪ್ತಗೆಳೆಯನಂತೆಯೂ,ಅಬಲೆಯ ಕಾಪಾಡುವ ಆಪ್ತಬಂಧುವಂತೆಯೂ,ಅನ್ಯಾಯಕ್ಕೆ ತಕ್ಕ ಶಾಸ್ತಿಮಾಡುವ ನ್ಯಾಯಾಧೀಶನಂತೆಯೂ ಬಿಂಬಿಸಿವೆ. ಸಭೆಯಲಿ ದ್ರೌಪದಿಯ ಮಾನರಕ್ಷಿಸಿದ ಕೃಷ್ಣ ಸೋದರನಂತೆ ತೋರುವ. ಕೃಷ್ಣ ರೂಪಗುಣ ಸಂಪನ್ನ.ಸ್ತ್ರೀಯರು […] - [ಧರ್ಮಸ್ಥಳ ಪ್ರಕರಣ : ಸಾಕ್ಷಿ ಸಿಗದೆ ದಿಕ್ಕು ಬದಲಿಸಿದ SIT](https://varthaman.in/dharmasthala-case-sit-changes-direction-after-finding-no-evidence/): ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂಬ ಅನಾಮಿಕ ದೂರು ಆಧರಿಸಿ 20 ದಿನಗಳಿಂದ ನಡೆದ ಸೊಶೋಧನೆ ಕಾರ್ಯ ಇದೀಗ ಅಂತ್ಯದ ಹಂತಕ್ಕೆ ಬಂದಿದೆ. ದೂರುದಾರನ ಹೇಳಿಕೆಯನ್ನು ನಂಬಿ ಎಸ್‌ಐಟಿ (SIT) ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಗುಂಡಿ ತೋಡಿದರೂ, ಒಂದೇ ಒಂದು ಸಾಕ್ಷಿಯೂ ಸಿಕ್ಕಿಲ್ಲ. ಆರಂಭದಲ್ಲಿ ದೂರುದಾರ ತಂದುಕೊಟ್ಟ ಬುರುಡೆ ಆಧಾರವಾಗಿ ತನಿಖೆ ನಡೆಸಲಾಗಿದ್ದರೂ, ಅದೇ ಬುರುಡೆ ಇದೀಗ ಅವನಿಗೆ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ, ಮಣ್ಣು ಅಗೆದರು ಯಾವುದೂ ಪತ್ತೆಯಾಗದ ಕಾರಣ ಎಸ್‌ಐಟಿ ಅಧಿಕಾರಿಗಳು ಮೋಸಹೋದಂತಾಗಿದೆ. ಜಿಪಿಆರ್ ಉಪಕರಣ ಬಳಸಿ ನೆಲ ಪರಿಶೀಲನೆ ನಡೆಸಿದರೂ ಕೂಡ ಯಾವುದೇ ಕಳೇಬರದ ತುಂಡು ಸಿಕ್ಕಿಲ್ಲ. ಹೀಗಾಗಿ, ಮತ್ತಷ್ಟು ನೆಲ ಅಗೆದರೂ ಪ್ರಯೋಜನವಿಲ್ಲವೆಂದು ನಿರ್ಧರಿಸಿರುವ ಎಸ್‌ಐಟಿ, ಇನ್ನು ಉತ್ಖನನ ಮುಂದುವರಿಸದೇ ತನಿಖೆಯ ಹಾದಿ ಬದಲಿಸಲು ತೀರ್ಮಾನಿಸಿದೆ. ಇನ್ನಷ್ಟು ಮಹಜರು ಪ್ರಕ್ರಿಯೆ ಕೈಗೊಂಡಿರುವ ಅಧಿಕಾರಿಗಳು, 20 ವರ್ಷಗಳ ಹಿಂದೆ ದೂರುದಾರ ವಾಸವಿದ್ದ ಸ್ಥಳಗಳ ತನಿಖೆ ನಡೆಸುತ್ತಿದ್ದಾರೆ. ಆದರೆ ಸಾಕ್ಷಿ ಸಿಗದ ಹಿನ್ನೆಲೆ […] - [ಮುಂದಿನ ಮೂರು ದಿನ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ](https://varthaman.in/heavy-rains-forecast-in-many-parts-of-the-state-for-the-next-three-days/): ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಚಟುವಟಿಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ರಾಯಚೂರು, ಬೀದರ್ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದೇ ವೇಳೆ, ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ನಾಗರಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.ಇದನ್ನು ಓದಿ –ಭೀಕರ ಅಗ್ನಿ ಅವಘಡ – ಓರ್ವ ಸಾವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಧಾರವಾಡ, ಬಳ್ಳಾರಿ, ಗದಗ, ಕೊಪ್ಪಳ, ಯಾದಗಿರಿ, ಕಲಬುರಗಿ, ವಿಜಯಪುರ, ವಿಜಯನಗರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಮಳೆಯಾಗುವ ನಿರೀಕ್ಷೆಯಿದೆ. - [ಭೀಕರ ಅಗ್ನಿ ಅವಘಡ – ಓರ್ವ ಸಾವು](https://varthaman.in/terrible-fire-accident-one-death/): ಬೆಂಗಳೂರು: ಕೆ.ಆರ್.ಮಾರ್ಕೆಟ್ ಸಮೀಪದ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ರಾಜಸ್ಥಾನ ಮೂಲದ ಮದನ್‌ಸಿಂಗ್‌ ಸುಟ್ಟು ಕರಕಲಾಗಿದ್ದು, ಮೃತಪಟ್ಟಿರುವುದು ದೃಢಪಟ್ಟಿದೆ. ಮೂರನೇ ಮಹಡಿಯಲ್ಲಿ ಇರುವ ಮನೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಆ ಸಂದರ್ಭದಲ್ಲಿ ಮಳಿಗೆಯೊಳಗೇ ಇದ್ದ ಮದನ್‌ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಅದೇ ಮನೆಯಲ್ಲಿ ವಾಸಿಸುತ್ತಿದ್ದ ಪತಿ, ಪತ್ನಿ ಹಾಗೂ 8 ಮತ್ತು 5 ವರ್ಷದ ಇಬ್ಬರು ಮಕ್ಕಳ ಪ್ರಾಣಾಪಾಯದ ಶಂಕೆ ವ್ಯಕ್ತವಾಗಿದೆ. ಇನ್ನೂ ಮೂವರು ಮೃತಪಟ್ಟಿರಬಹುದೆಂಬ ಆತಂಕ ಹೆಚ್ಚಾಗಿದೆ. ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ದಟ್ಟ ಹೊಗೆ ಆವರಿಸಿರುವುದರಿಂದ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಮೂರು ಅಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಇನ್ನೂ ಕಟ್ಟಡದೊಳಗೆ ತಾಯಿ ಮತ್ತು ಮಗು ಸಿಲುಕಿರುವ ಸಾಧ್ಯತೆ ವ್ಯಕ್ತವಾಗಿದ್ದು, ಅವರನ್ನು ಪಾರುಮಾಡಲು ಹರಸಾಹಸ ನಡೆಯುತ್ತಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. - [ಸ್ನಾಯು ನೋವಿನಿಂದ ಒತ್ತಡ ನಿಯಂತ್ರಣದವರೆಗೆ ಬಳಸಿ ಎಪ್ಸಮ್ ಲವಣ](https://varthaman.in/use-epsom-salt-for-everything-from-muscle-pain-to-stress-management/): ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅನೇಕ ಮನೆಮದ್ದುಗಳು ಮತ್ತು ಅಡುಗೆ ಪದಾರ್ಥಗಳು ದೇಹದಲ್ಲಿರುವ ವಿಷದ ಅಂಶಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತವೆ ಇವುಗಳಲ್ಲಿ ಎಪ್ಸಮ್ ಸಾಲ್ಟ್ ಕೂಡ ಒಂದು. ಅನೇಕ ಶತಮಾನಗಳಿಂದ ಬಳಕೆಯಲ್ಲಿರುವ ಎಪ್ಸಮ್ ಸಾಲ್ಟ್’ನಿಂದ ಅನೇಕ ಪರಿಹಾರಗಳು ಹಾಗೂ ಉಪಯೋಗಗಳಿದ್ದು ಇದು ಸುಲಭವಾಗಿ ಕೈಗೆಟಕುವುದರಿಂದಲೂ ಹೆಚ್ಚು ಜನಪ್ರಿಯತೆ ಗಳಿಸಿದೆ. ಏನಿದು ಎಪ್ಸಮ್ ಸಾಲ್ಟ್? ಎಪ್ಸಮ್ ಉಪ್ಪು ವಾಸ್ತವವಾಗಿ ಉಪ್ಪಲ್ಲ, ಬದಲಾಗಿ ಮೆಗ್ನೀಸಿಯಮ್ ಮತ್ತು ಸಲ್ಫೇಟ್ ನಿಂದ ಕೂಡಿದ ನೈಸರ್ಗಿಕವಾಗಿ ರೂಪುಗೊಳ್ಳುವ ಶುದ್ಧ ಖನಿಜ ಸಂಯುಕ್ತವಾಗಿದೆ. ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವೆಂದು ಪ್ರಶಂಸಿಸಲ್ಪಟ್ಟ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಎಪ್ಸಮ್ ಉಪ್ಪನ್ನು 17 ನೇ ಶತಮಾನದಿಂದಲೂ ಬಳಸಲಾಗುತ್ತಿದ್ದು, ಇದನ್ನು ಮೊದಲು ಕಂಡುಹಿಡಿದದ್ದು ಇಂಗ್ಲೆಂಡ್‌ನ ಎಪ್ಸಮ್ ಎಂಬ ಸಣ್ಣ ಪಟ್ಟಣದಿಂದ ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ. ಎಪ್ಸಮ್ ಪಟ್ಟಣದ ಬುಗ್ಗೆಗಳು ನೈಸರ್ಗಿಕವಾಗಿ ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ಬುಗ್ಗೆಗಳಿಂದ ನೀರು ಆವಿಯಾದಾಗ, ಅದು ಸಣ್ಣ ಸ್ಫಟಿಕದಂತಹ ನಿಕ್ಷೇಪಗಳನ್ನು […] - [ಶೀಘ್ರದಲ್ಲೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ – ಪ್ರಿಯಾಂಕ್ ಖರ್ಗೆ](https://varthaman.in/district-and-taluk-panchayat-elections-soon-priyank-kharge/): ಬೆಂಗಳೂರು, ಆಗಸ್ಟ್ 14: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸಿನಂತೆ ಶಿವಮೊಗ್ಗ ಮತ್ತು ಕೊಡಗು ಸೇರಿ ರಾಜ್ಯದ ಎಲ್ಲಾ ಕ್ಷೇತ್ರಗಳ ಸೀಮಾ ಗಡಿಗಳನ್ನು ಗುರುತಿಸಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು. ಕ್ಷೇತ್ರಗಳ ಗಡಿ ಗುರುತಿಸುವ ಅಧಿಸೂಚನೆ ಹೊರಬಿದ್ದಿದ್ದು, ಮೀಸಲು ನಿಗದಿ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ವಿಧಾನಸಭೆಯಲ್ಲಿ 9 ವಿಧೇಯಕಗಳ ಮಂಡನೆವಿಧಾನಸಭಾ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ. ಪಾಟೀಲ್ ಅವರು 2025ನೇ ಸಾಲಿನ […] - [ಅರ್ಜುನ್ ತೆಂಡೂಲ್ಕರ್–ಸಾನಿಯಾ ಚಂದೋಕ್ ನಿಶ್ಚಿತಾರ್ಥ](https://varthaman.in/arjun-tendulkar-sania-chandok-engagement/): ಮುಂಬೈ: ಕ್ರಿಕೆಟ್ ಲೋಕದಲ್ಲಿ ‘ಕ್ರಿಕೆಟ್ ದೇವರು’ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಮುಂಬೈನ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥವು ಮುಂಬೈನಲ್ಲಿರುವ ಖಾಸಗಿ ಸ್ಥಳದಲ್ಲಿ, ಇರುವುದು ಕುಟುಂಬದ ಆಪ್ತರು ಮತ್ತು ಆಪ್ತ ಸ್ನೇಹಿತರು ಮಾತ್ರ ಹಾಜರಾಗಿದ್ದ ಸಮಾರಂಭದಲ್ಲಿ ನೆರವೇರಿತು. ಆದರೆ ತೆಂಡೂಲ್ಕರ್ ಕುಟುಂಬ ಅಥವಾ ಘಾಯ್ ಕುಟುಂಬದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಕ್ರಿಕೆಟ್ ಪಯಣದಲ್ಲಿ ಅರ್ಜುನ್ ಸ್ಥಿತಿ25 ವರ್ಷದ ಅರ್ಜುನ್ ತೆಂಡೂಲ್ಕರ್ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಮುಂಬೈ ತಂಡದ ಭಾಗವಾಗಿದ್ದರು. ರಣಜಿ ತಂಡದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದರೂ, ಇನ್ನೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅರ್ಜುನ್ 2024 ಸೀಸನ್‌ನಲ್ಲಿ ಕೆಲವೇ ಅವಕಾಶಗಳನ್ನು ಪಡೆದಿದ್ದರು. ಆದರೆ ಮೆಗಾ ಹರಾಜಿಗೂ ಮುನ್ನ […] - [ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರ ಜಾಮೀನು ರದ್ದು](https://varthaman.in/renukaswamy-murder-case-bail-cancelled-of-actors-darshan-pavithra-gowda/): ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ ಧಕ್ಕೆಯಾಗಿದೆ. ಶಿರೋಮಣಿಯ ನ್ಯಾಯಾಲಯವು ಹೈಕೋರ್ಟ್‌ನ ತೀರ್ಪನ್ನು ತಿರಸ್ಕರಿಸಿ, ಎಲ್ಲರಿಗೂ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಗಳು ಇದೀಗ ಮತ್ತೆ ಜೈಲು ಸೇರಿದಂತಾಗಿದೆ. ಸುಪ್ರೀಂ ಕೋರ್ಟ್‌ನ ಈ ನಿರ್ಧಾರದಿಂದ ಪ್ರಕರಣ ಹೊಸ ತಿರುವು ಪಡೆದಿದ್ದು, ಮುಂದಿನ ವಿಚಾರಣೆಗಳು ಮತ್ತಷ್ಟು ಗಂಭೀರ ಹಂತಕ್ಕೆ ಪ್ರವೇಶಿಸಿವೆ.ಇದನ್ನು ಓದಿ –ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ. ರೇಣುಕಾಸ್ವಾಮಿ ಕೊಲೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದರೂ, ಹೈಕೋರ್ಟ್ ನೀಡಿದ ಜಾಮೀನು ಬಳಿಕ ಆರೋಪಿಗಳು ಹೊರಗೆ ಇದ್ದರು. ಆದರೆ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದಿಂದಾಗಿ ಅವರು ಮತ್ತೆ ಬಂಧನಕ್ಕೆ ಒಳಗಾಗಲಿದ್ದಾರೆ. - [ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ.](https://varthaman.in/as-i-see-it-a-change-in-lifestyle/): ಕುಟುಂಬ ವ್ಯವಸ್ಥೆ ನಾವು ನಮ್ಮ ಹಿರಿಯರೊಟ್ಟಿಗೆ ಯಾವಾಗ ಮಾತಾಡಿದರೂ ಬರುವ ಒಂದು ಮಾತು ‘ನಮ್ ಕಾಲ್ದಲ್ಲಿ ಹೀಗಿರ್ಲಿಲ್ಲಪ್ಪ….’ ಅಂತ. ನಿಜ ಅಲ್ವಾ ಜನರ ಜೀವನ ಶೈಲಿ, ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಲೇ ಬೇಕಲ್ವಾ? ನಮ್ಮ ನಾಲ್ಕು ತಲೆಮಾರು ಅಂದರೆ ನಮ್ಮ ಅಜ್ಜ~ಅಜ್ಜಿ, ಅಪ್ಪ~ಅಮ್ಮ, ನಮ್ಮ ಕಾಲ ಮತ್ತು ನಮ್ಮ ಮಕ್ಕಳ ಕಾಲದಲ್ಲಾದ ಅನೇಕ ರೀತಿಯ ಚಿಕ್ಕ~ದೊಡ್ಡ ಬದಲಾವಣೆಗಳನ್ನು ಒಂದೊಂದಾಗಿ ಈ “ಚಿಂತನ ಮಂಥನ” ದಲ್ಲಿ ಮಥಿಸೋಣ. ಜೀವನ ಶೈಲಿಯಲ್ಲಿ ಎಷ್ಟೆಲ್ಲ ಬದಲಾವಣೆಗಳಾದ್ರೂ ಮನುಷ್ಯನ ಮನಸ್ಥಿತಿಯಲ್ಲಿ ಮಾತ್ರ ಅಷ್ಟೇನೂ ಬದಲಾವಣೆಯಿಲ್ಲ ಅನಿಸುತ್ತೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಆ ಅರಿಷಡ್ವರ್ಗಗಳೇ ಹಿಂದೆಯೂ ಮನುಷ್ಯನನ್ನು ಆಳುತ್ತಿದ್ದದ್ದು, ಇಂದಿಗೂ, ಮುಂದಿಗೂ, ಎಂದೆಂದಿಗೂ ಮಾನವನ ಮೇಲೆ ಸಾರ್ವಭೌಮತ್ವವನ್ನು ಸಾಧಿಸುವಲ್ಲಿ ಯಶಸ್ಸು ಸಾಧಿಸುತ್ತಲೇ ಹೋಗುತ್ತವೇನೋ. ಇರಲಿ ಈಗ ಮೊದಲು ಹಿಂದಿನ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಾದ ಬದಲಾವಣೆಯನ್ನು ನೋಡುವ. ಮೊದಲಿನ, ಒಂದೇ ಮನೆಯಲ್ಲಿ ಸಾಧಾರಣವಾಗಿ ೨೦~೩೦ ಜನರಿರುವ ಅವಿಭಕ್ತ ಕುಟುಂಬದಿಂದ, ವಿಭಕ್ತ […] - [ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ, ಬಿಲ್ ಕಲೆಕ್ಟರ್](https://varthaman.in/pdo-bill-collector-fall-into-lokayukta-trap/): ಕೆ.ಆರ್ ಪೇಟೆ: ತಾಲ್ಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಯ್ಯದ್ ಮುಜಾಕೀರ್ ಹಾಗೂ ಬಿಲ್ ಕಲೆಕ್ಟರ್ ನಾಗೇಶ ಅವರು ೨೦ ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಅವರು ಗ್ರಾಮಸ್ಥರೊಬ್ಬರಿಗೆ ಮನೆಯ ಇ ಸ್ವತ್ತು ಮಾಡಿಕೊಡಲು ೫೦ ಸಾವಿರ ಲಂಚ ಕೇಳಿದ್ದರು. ಇದರಲ್ಲಿ ೨೦ ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿ ಬ್ಯಾಟರಾಯಗೌಡ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. - [ಗಣಿ ಉದ್ಯಮಿಗಳಿಗೆ ED ಶಾಕ್](https://varthaman.in/ed-shocks-mining-entrepreneurs/): ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಇಬ್ಬರು ಗಣಿ ಉದ್ಯಮಿಗಳ ಮನೆ, ಕಚೇರಿ ಹಾಗೂ ಸ್ಟೀಲ್ ಅಂಗಡಿಗಳ ಮೇಲೆ ಬೆಳ್ಳಂಬೆಳಗ್ಗೆ ಜಾರಿಯ ತನಿಖಾ ಸಂಸ್ಥೆ ಇಡಿ (ED) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಗೆ ಗುರಿಯಾದವರು – ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶ್. ಸ್ವಸ್ತಿಕ್ ನಾಗರಾಜ್‌ಗೆ ಸೇರಿದ ಎಂಜೆ ನಗರದ ಮನೆ, ಎಪಿಎಂಸಿ ಬಳಿ ಇರುವ ಸ್ಟೀಲ್ ಅಂಗಡಿ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದೇ ವೇಳೆ, 20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯರಾಗಿರುವ ಕಾರದಪುಡಿ ಮಹೇಶ್ ಅವರ ಮನೆಯಲ್ಲಿಯೂ ದಾಳಿ ನಡೆದಿದೆ. ಬೆಲೆಕೇರಿ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಇಬ್ಬರೂ ಉದ್ಯಮಿಗಳು ಭಾಗಿಯಾಗಿರುವ ಆರೋಪ ಇರುವುದರಿಂದ, ಇಡಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.ಇದನ್ನು ಓದಿ – SIT ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಕಾಪಾಡಬೇಕು – ಸ್ಪೀಕರ್ ಯು.ಟಿ. ಖಾದರ್ ಈ ದಾಳಿ ಕಾರ್ಯಾಚರಣೆ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಚೆಗೆ […] - [SIT ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಕಾಪಾಡಬೇಕು – ಸ್ಪೀಕರ್ ಯು.ಟಿ. ಖಾದರ್](https://varthaman.in/sanctity-of-religious-place-should-be-maintained-till-sit-investigation-is-over-speaker-u-t-khader/): ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ (Dharmasthala Mass Burials) ಎಸ್‌ಐಟಿ (SIT) ತನಿಖೆ ನಡೆಯುತ್ತಿರುವುದರಿಂದ, ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲರೂ ಧಾರ್ಮಿಕ ಸ್ಥಳದ ಪಾವಿತ್ರತೆಯನ್ನು ಕಾಪಾಡಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಧರ್ಮಸ್ಥಳ ಕೇಸ್ ಕುರಿತು ನಾನು ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ. ಮಂಗಳವಾರ ವಿರೋಧ ಪಕ್ಷಗಳು ಚರ್ಚೆಗೆ ಅವಕಾಶ ಕೇಳಿದಾಗ ಶೂನ್ಯವೇಳೆಯಲ್ಲಿ ಅವಕಾಶ ನೀಡಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ನೀಡಿತ್ತು. ಇನ್ನಷ್ಟು ಚರ್ಚೆಗೆ ಅವಕಾಶ ಬೇಕೆಂದು ಕೇಳಿದ್ದರಿಂದ, ನಾನು ಅದಕ್ಕೂ ಅವಕಾಶ ನೀಡಲು ಸಮ್ಮತಿಸಿದ್ದೇನೆ” ಎಂದರು. “ಈ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗಲೇ ತೀರ್ಪು ನೀಡುವುದು ಸರಿಯಲ್ಲ. ಧಾರ್ಮಿಕ ಸ್ಥಳದ ಪಾವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ.ಇದನ್ನು ಓದಿ –ಮಂಡ್ಯ: ಎಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ದುರ್ಮರಣ ತನಿಖೆ ಮುಗಿಯುವವರೆಗೂ ಯಾರೂ ಸ್ವಯಂ ಅಭಿಪ್ರಾಯ ನೀಡಬಾರದು. ನಾವು ಸಮಾನತೆ ಮತ್ತು ಸೋದರಭಾವದಲ್ಲಿ ಇರುವ ಸಮಾಜ. ಹೀಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ಸಮಾಧಾನದಿಂದ ಇರಬೇಕು” […] - [ಮಂಡ್ಯ: ಎಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ದುರ್ಮರಣ](https://varthaman.in/mandya-engineering-student-dies-of-heart-attack/): ಮಂಡ್ಯ: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕರೋಟಿ ಗ್ರಾಮದ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ನವೀನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನವೀನ್ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ರಜೆ ಸಂದರ್ಭದಲ್ಲಿ ಊರಿಗೆ ಬಂದಿದ್ದರು. ಮನೆಯಲ್ಲಿ ಇದ್ದಾಗ ಎದೆನೋವಿನಿಂದ ಅಕಸ್ಮಿಕವಾಗಿ ಕುಸಿದುಬಿದ್ದ ಅವರು, ತಕ್ಷಣವೇ ಪೋಷಕರು ಕಿಕ್ಕೇರಿ ಆಸ್ಪತ್ರೆಗೆ ಕರೆದೊಯ್ದರು. ಇದನ್ನು ಓದಿ –ರಾಜ್ಯಾದ್ಯಂತ ಭಾರೀ ಮಳೆ: ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅಲ್ಲಿ ವೈದ್ಯರು ಚನ್ನರಾಯಪಟ್ಟಣಕ್ಕೆ ಕರೆದೊಯ್ಯಲು ಸಲಹೆ ನೀಡಿದರು. ಆದರೆ, ಚನ್ನರಾಯಪಟ್ಟಣಕ್ಕೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲೇ ನವೀನ್ ಸಾವನ್ನಪ್ಪಿದರು. - [ರಾಜ್ಯಾದ್ಯಂತ ಭಾರೀ ಮಳೆ: ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್](https://varthaman.in/heavy-rains-across-the-state-yellow-alert-in-all-districts/): ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು (ಆ.13) ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ. ಆದರೆ ನಾಳೆಯಿಂದ (ಆ.14) ಕರಾವಳಿ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಎಚ್ಚರಿಕೆ ನೀಡಲಾಗುವುದು. ರಾಜ್ಯಾದ್ಯಂತ ಗುಡುಗು–ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ಜೋರಾಗುವ ಸಾಧ್ಯತೆಯೂ ಇದೆ. ಬೆಂಗಳೂರಿನಲ್ಲಿಯೂ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ. - [ರಾಜ್ಯದ ಕೆರೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಷೇಧ](https://varthaman.in/ban-on-immersion-of-pop-ganesh-idols-in-state-lakes/): ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬದ ಸಂದರ್ಭದಲ್ಲಿ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿತ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಚೇರಿಯ ಪರಿಸರ ಅಧಿಕಾರಿಗಳು ಪ್ರಕಟಿಸಿದ್ದಾರೆ. ಪ್ರತಿ ವರ್ಷ ಹಬ್ಬದ ಬಳಿಕ ಮೂರ್ತಿಗಳನ್ನು ಕೆರೆ, ಬಾವಿ ಹಾಗೂ ಇತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇದರ ಪರಿಣಾಮವಾಗಿ ಜಲದ ಭೌತಿಕ ಹಾಗೂ ರಾಸಾಯನಿಕ ಗುಣಗಳು ಹಾನಿಗೊಳಗಾಗಿ, ಪ್ರಾಣಿ, ಪಕ್ಷಿ ಮತ್ತು ಜಲಚರ ಜೀವಿಗಳ ಬದುಕಿಗೆ ಅಪಾಯ ಉಂಟಾಗುತ್ತದೆ. ಸಾರ್ವಜನಿಕ ಆರೋಗ್ಯಕ್ಕೂ ಹಾನಿ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ, 2016ರ ಜುಲೈ 20ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಜ್ಯದ ಯಾವುದೇ ಜಲಮೂಲಗಳಲ್ಲಿ ಪಿಒಪಿ ಹಾಗೂ ಬಣ್ಣ ಲೇಪಿತ ಮೂರ್ತಿಗಳ ವಿಸರ್ಜನೆ ಸಂಪೂರ್ಣ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ, 1974ರ ಜಲಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ 1860ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಸೂಚನೆಗಳು: ಪರಿಸರ ಸ್ನೇಹಿ […] - [ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ](https://varthaman.in/sri-raghavendra-mahime-2025/): ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ಮಂತ್ರಾಲಯದಲ್ಲಿ ಮತ್ತು ದೇಶದಾದ್ಯಂತ ಇರುವ ರಾಘವೇಂದ್ರ ಮಠಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಉತ್ಸವವಾಗಿದೆ. ಇದು ರಾಘವೇಂದ್ರ ಸ್ವಾಮಿಗಳು ಜೀವ ಸಮಾಧಿಯಾದ ದಿನದ ಸ್ಮರಣೆಯಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೩೫೪ ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ ೮ ರಿಂದ ೧೪ ರವರೆಗೆ ಆಚರಿಸಲಾಗುತ್ತಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ೨೫-೦೨-೧೫೯೫ ರಂದು ಭುವನಗಿರಿಯಲ್ಲಿ,(ತಮಿಳುನಾಡು)ಜನಿಸಿದರು.ಅವರು ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂತರಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ೧೬ ನೇ ಶತಮಾನದ ಪೂಜ್ಯ ಸಂತ ಮತ್ತು ಆಧ್ಯಾತ್ಮಿಕ ಗುರು ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಸಂಪ್ರದಾಯವನ್ನು ಸಕ್ರಿಯವಾಗಿ ಪ್ರಚಾರ ಮಾಡಿದರು ಮತ್ತು ಮಧ್ವಾಚಾರ್ಯರ ದ್ವೈತ ತತ್ವಶಾಸ್ತ್ರವನ್ನು ಹರಡುವಲ್ಲಿ ಮಹತ್ವದ ಪಾತ್ರ ವಹಿಸಿದರು ಶ್ರೀ ಪ್ರಹ್ಲಾದ ರಾಯರ ನಾಲ್ಕನೇ ಅವತಾರ ಶ್ರೀ ಗುರು ರಾಘವೇಂದ್ರರು. ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.ಶ್ರದ್ಧೆ, ಭಕ್ತಿಯಿಂದ ನೆನೆದು […] - [“ತುಂಗಾ ತೀರದಲಿ ನಿಂತ ಯತಿವರ್ಯ "](https://varthaman.in/yativarya-standing-on-the-banks-of-the-tunga/): ಕಲಿಯುಗದ ಕಾಮಧೇನು ಕಲಿಯುಗದ ಕಲ್ಪತರು, ಎಂದು ಭಕ್ತಸಮೂಹದಿಂದ ಕರೆಸಿಕೊಳ್ಳುವ ಮಂತ್ರಾಲಯದ ಗುರುವರ್ಯರು ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ಶತಮಾನಗಳಿಂದ ಭಕ್ತರ ದೃಷ್ಟಿ ಪಥಕ್ಕೆ ಅಗೋಚರವಾಗಿ ಬೃಂದಾವನದಲ್ಲಿ ನಿಂತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಧರ್ಮತೀತವಾಗಿ ಭವ ಭಯವನ್ನು ನೀಗಿಸುತ್ತಿದ್ದಾರೆ. ಧಾರ್ಮಿಕ ಆಚರಣೆ, ನಂಬಿಕೆ, ಶ್ರದ್ಧೆ, ಭಕ್ತಿ, ಪವಾಡಗಳನ್ನು ಅಚಲವಾಗಿ ನಂಬುವ ಅಥವಾ ನಂಬದೇ ಇರುವ ವಾಡಿಕೆ ಬಹು ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿದೆ. ಕೆಲವರು ವೈಚಾರಿಕತೆಯ ನಿಲುವನ್ನು ಹೊಂದಿದ ನಾಸ್ತಿಕರು ಹಾಗೂ ಕೆಲವರು ಧಾರ್ಮಿಕತೆಯ ತಾತ್ತ್ವಿಕ ಸಿದ್ಧಾಂತವನ್ನು ನಂಬುವ ಆಸ್ತಿಕರೂ ಇದ್ದಾರೆ. ಇವರಲ್ಲಿ ಯಾರಿಗೆ ಯಾವುದರಿಂದ ಸಂತೃಪ್ತಿ ಸಿಗುತ್ತೋ ಆ ಮಾರ್ಗವನ್ನು ಅನುಸರಿಸುತ್ತಾರೆ. ತಮ್ಮೂಲಕ ಜನರ ಮನೋಗತದಲ್ಲಿ ಸಂಚಲನ ಮೂಡಿಸುತ್ತಾ ಬದುಕಿನ ಮೌಲ್ಯಗಳನ್ನು ಬಿತ್ತುತ್ತಾರೆ. ಮನುಷ್ಯನ ಮಾನಸಿಕತೆ ದಿನದಿಂದ ದಿನಕ್ಕೆ ದೌರ್ಬಲ್ಯವನ್ನು ಹೊಂದುತ್ತಿದೆ. ಅನೇಕ ಸಮಸ್ಯೆಗಳನ್ನು ಹೊತ್ತು ಜೀವನವನ್ನು ನಡೆಸುತ್ತಾನೆ. ಆ ಸಮಸ್ಯೆಯ ಹೊರೆಯನ್ನು ಇಳಿಸಿಕೊಳ್ಳಲು ದೇವರ, ಗುರುಗಳ ಸಾನ್ನಿಧ್ಯಕ್ಕೆ ಶರಣಾಗುತ್ತಾನೆ. […] - [ಕಾಡಾನೆ ಮುಂದೆ ಸೆಲ್ಫಿ ಸಾಹಸ: ವ್ಯಕ್ತಿಗೆ ₹25,000 ದಂಡ](https://varthaman.in/selfie-stunt-in-front-of-wild-elephant-man-fined-25000/): ಬೆಂಗಳೂರು, ಆಗಸ್ಟ್ 12: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆ ಮುಂದೆ ಸೆಲ್ಫಿ ತೆಗೆಯಲು ಹೋಗಿ ದಾಳಿಗೆ ಸಿಕ್ಕಿದ್ದ ನಂಜನಗೂಡಿನ ವ್ಯಕ್ತಿಗೆ, ಅರಣ್ಯ ಇಲಾಖೆಯು ₹25,000 ದಂಡ ವಿಧಿಸಿದೆ. ಅರಣ್ಯ ಪ್ರದೇಶ ನಿಯಮ ಉಲ್ಲಂಘಿಸಿ ಅಪಾಯಕಾರಿ ಸಾಹಸ ನಡೆಸಿದ್ದಕ್ಕಾಗಿ, ಆತನಿಂದಲೇ ಜಾಗೃತಿ ವಿಡಿಯೋ ಕೂಡ ಮಾಡಿಸಲಾಗಿದೆ. ಇತ್ತೀಚೆಗೆ ಬಂಡೀಪುರ ರಸ್ತೆಯಲ್ಲಿ ಕಾಡಾನೆ ಎದುರಾದಾಗ, ವಾಹನಗಳು ದೂರದಲ್ಲಿ ನಿಂತಿದ್ದವು. ಆದರೆ, ಆ ವ್ಯಕ್ತಿ ಆನೆಯ ಹತ್ತಿರ ಹೋಗಿ ಸೆಲ್ಫಿ ತೆಗೆಯಲು ಮುಂದಾದರು. ಇದರಿಂದ ರೊಚ್ಚಿಗೆದ್ದ ಆನೆ ಅಟ್ಟಿಸಿಕೊಂಡು ಬಂದು ದಾಳಿ ಮಾಡಿತು. ಅದೃಷ್ಟವಶಾತ್, ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿ ಪ್ರಾಣಾಪಾಯ ತಪ್ಪಿತು. ಈ ಘಟನೆಯ ವಿಡಿಯೋ ಅಲ್ಲಿದ್ದ ಹಲವರು ಹಾಗೂ ಕಾರಿನೊಳಗಿದ್ದವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.ವಿಡಿಯೋ ವೈರಲ್ ಆದ ನಂತರ, ಅರಣ್ಯ ಇಲಾಖೆ ಆತನನ್ನು ಪತ್ತೆಹಚ್ಚಿ, ₹25,000 ದಂಡ ವಿಧಿಸಿತು. ಜೊತೆಗೆ, “ಅರಣ್ಯ ಪ್ರದೇಶದಲ್ಲಿ ಇಂತಹ ದುಸ್ಸಾಹಸಗಳನ್ನು ಯಾರೂ ಮಾಡಬಾರದು” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಆತನಿಂದಲೇ ಜಾಗೃತಿ ವಿಡಿಯೋ ಚಿತ್ರೀಕರಿಸಲಾಯಿತು.ಇದನ್ನು ಓದಿ […] - [ಮೈಸೂರು ಡ್ರಗ್ಸ್ ಫ್ಯಾಕ್ಟರಿ ಪ್ರಕರಣ: NDPS ಕಾಯ್ದೆಯಡಿ 6 ಪ್ರಕರಣ ದಾಖಲೆ](https://varthaman.in/mysore-drugs-factory-case-6-cases-registered-under-ndps-act/): ಮೈಸೂರು: ಮೈಸೂರು ನಗರದಲ್ಲಿ ಪತ್ತೆಯಾದ ‘ಡ್ರಗ್ಸ್ ಫ್ಯಾಕ್ಟರಿ’ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮತ್ತೆ NDPS ಕಾಯ್ದೆಯಡಿ 6 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ, ಒಟ್ಟು 71 ಮಂದಿಯ ಮೇಲೆ ಅನುಮಾನ ವ್ಯಕ್ತವಾಗಿದ್ದು, ಅವರ ಮೇಲೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮೈಸೂರಿನ ಸುನ್ನಿ ಚೌಕ್, ಮಟನ್ ಸ್ಟಾಲ್ ರೋಡ್, ಕೆಸರೆ, ಹುಡ್ಕೋ ಬಡಾವಣೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಅಲ್ಲದೆ, ನಗರದ ಕೆಲವೆಡೆ ಡ್ರಗ್ಸ್ ದುರುಪಯೋಗ ತಡೆಗಟ್ಟಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಕೂಡ ಕೈಗೊಳ್ಳಲಾಗಿದೆ. - [ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 976 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ](https://varthaman.in/recruitment-for-976-junior-executive-posts-in-airport-authority/): ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) 976 ಜೂನಿಯರ್ ಎಕ್ಸಿಕ್ಯೂಟಿವ್ (JE) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಅಧಿಕೃತ ಮಾಹಿತಿಯನ್ನು AAI ವೆಬ್‌ಸೈಟ್ www.aai.aero ನಲ್ಲಿ ಪ್ರಕಟಿಸಲಾಗಿದೆ. ಈ ನೇಮಕಾತಿ ಅಭಿಯಾನದಲ್ಲಿ ಭರ್ತಿ ಮಾಡಲಾಗುವ ಹುದ್ದೆಗಳ ವಿವರ: ಪ್ರಮುಖ ದಿನಾಂಕಗಳು ಅರ್ಹತೆಅಭ್ಯರ್ಥಿಗಳು B.Arch, B.Tech/B.E ಅಥವಾ MCA ಪದವಿ ಹೊಂದಿರಬೇಕು. ವಯೋಮಿತಿಗರಿಷ್ಠ ವಯಸ್ಸು: 27 ವರ್ಷಗಳು (ನಿಯಮಾನುಸಾರ ಸಡಿಲಿಕೆ ಅನ್ವಯ). ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ವೇತನ ಶ್ರೇಣಿಜೂನಿಯರ್ ಎಕ್ಸಿಕ್ಯೂಟಿವ್ – ₹40,000–3%–₹1,40,000 (ಗುಂಪು-ಬಿ: ಇ-1 ಮಟ್ಟ). ಅರ್ಜಿ ಸಲ್ಲಿಸುವ ವಿಧಾನಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು AAI ಅಧಿಕೃತ ವೆಬ್‌ಸೈಟ್ www.aai.aero ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. - [ಆಗಸ್ಟ್ 15 ರಿಂದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಲಭ್ಯ](https://varthaman.in/fastag-annual-pass-available-from-august-15/): ನವದೆಹಲಿ: ಆಗಸ್ಟ್ 15ರಿಂದ, ದೇಶದಾದ್ಯಂತ ಯಾವುದೇ ರಾಷ್ಟ್ರೀಯ ಹೆದ್ದಾರಿ (NH) ಹಾಗೂ ರಾಷ್ಟ್ರೀಯ ಮೋಟಾರುಮಾರ್ಗ (NE)ಗಳಲ್ಲಿ ಒಂದು ವರ್ಷ ಅಥವಾ 200 ಪ್ರಯಾಣಗಳಿಗೆ ಅನುಮತಿಸುವ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಲಭ್ಯವಾಗಲಿದೆ. ಇದರಿಗಾಗಿ ವಾಹನ ಮಾಲೀಕರು 3,000 ರೂ. ಪಾವತಿಸಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜೂನ್ ತಿಂಗಳಲ್ಲಿ ಈ ಹೊಸ ಪಾಸ್ ಯೋಜನೆಯನ್ನು ಘೋಷಿಸಿತ್ತು. ಖಾಸಗಿ ಕಾರುಗಳು, ಜೀಪ್‌ಗಳು ಹಾಗೂ ವ್ಯಾನ್‌ಗಳಿಗೆ ಅನ್ವಯವಾಗುವ ಈ ಪಾಸ್‌ಗಳ ವಿತರಣೆಯನ್ನು ಆಗಸ್ಟ್ 15ರಿಂದ ಪ್ರಾರಂಭಿಸಲಾಗುತ್ತಿದೆ. ಈ ಪಾಸ್ ಹೊಂದಿರುವವರು ನಿರ್ದಿಷ್ಟ NH ಮತ್ತು NE ಟೋಲ್ ಪ್ಲಾಜಾಗಳಲ್ಲಿ ಒಂದು ವರ್ಷ ಅಥವಾ ಗರಿಷ್ಠ 200 ಪ್ರಯಾಣಗಳವರೆಗೆ ಟೋಲ್ ಶುಲ್ಕದಿಂದ ವಿನಾಯಿತಿ ಪಡೆಯುತ್ತಾರೆ. ವಾರ್ಷಿಕ ಪಾಸ್ ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ, ದಟ್ಟಣೆ ಹಾಗೂ ಸಂಘರ್ಷಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. ಇದರಿಂದ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಹಾಗೂ ಸಮಯ ಉಳಿತಾಯದ ಪ್ರಯಾಣ ಅನುಭವ ದೊರೆಯಲಿದೆ. ಬಳಕೆದಾರರು ತಮ್ಮ ಇತ್ತೀಚಿನ […] - [ಬೆಂಗಳೂರಿನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು](https://varthaman.in/suspicious-death-of-housewife-in-bengaluru/): : ಪತಿ, ಅತ್ತೆ ವಿರುದ್ಧ ಕೊಲೆ ಆರೋಪ ಬೆಂಗಳೂರು: ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಗೃಹಿಣಿ ಒಬ್ಬರ ಅನುಮಾನಾಸ್ಪದ ಸಾವು ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ದೀಪಾ (30) ಮೃತಪಟ್ಟಿದ್ದು, ಪತಿ ಉದಯ್ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ದೀಪಾ ಪೋಷಕರು ಮತ್ತು ಬಂಧುಗಳು, “ನಮ್ಮ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ದೀಪಾ-ಉದಯ್ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಜಮೀನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಇತ್ತೀಚೆಗೆ ಉದಯ್, ಬ್ಯೂಟಿ ಪಾರ್ಲರ್ ಮಾಲಕಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ದಂಪತಿಗಳ ನಡುವೆ ವೈಮನಸ್ಯ ಉಂಟಾಯಿತು. ಅಕ್ರಮ ಸಂಬಂಧದ ವಿಚಾರ ಹಿರಿಯರ ಮಧ್ಯಸ್ಥಿಕೆಯಿಂದ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಮಾತುಕತೆ ನಡೆದಿತ್ತು. ಆಗಸ್ಟ್ 6 ರಂದು […] - [ರಾಜ್ಯದಲ್ಲಿ ಮುಂದಿನ ಆರು ದಿನ ಭಾರೀ ಮಳೆಯ ಮುನ್ಸೂಚನೆ](https://varthaman.in/heavy-rain-forecast-in-the-state-for-the-next-six-days/): ಬೆಂಗಳೂರು: ರಾಜ್ಯದಾದ್ಯಂತ ಮಳೆಯ ತೀವ್ರತೆ ಮುಂದುವರೆದಿದ್ದು, ಹವಾಮಾನ ಇಲಾಖೆ ಇಂದಿನಿಂದ ಮುಂದಿನ ಆರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಭಾನುವಾರ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯಲಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯು ತಿಳಿಸಿದೆ. - [ಮೈಸೂರಿನ ಕೆ ಎಚ್ ಬಿ ಕಾಲೋನಿಯ ಗಾಯತ್ರಿ ವಿಪ್ರಸಂಘದಿಂಸ ಉಪಾಕರ್ಮ](https://varthaman.in/gayatri-viprasangha-upakarma-of-khb-colony-mysore/): ಮೈಸೂರು :ಮೈಸೂರಿನ ಹೂಟಗಳ್ಳಿ ಕೆ.ಎಚ್.ಬಿ.ಕಾಲೋನಿ ಗಾಯತ್ರಿ ವಿಪ್ರ ಸಂಘದ ಆಶ್ರಯದಲ್ಲಿ ಅನಂತೇಶ್ವರ ಭವನದಲ್ಲಿ ಋಗ್ವೇದ ಹಾಗೂ ಯಜುರ್ವೇದ ಸಾಮೂಹಿಕ ಉಪಾಕರ್ಮ ಶನಿವಾರ ನೆರವೇರಿತು. ವೇದ ವಿದ್ವಾಂಸ ನಾರಾಯಣ ಭಟ್ ಹಾಗೂ ಮಂಜುನಾಥ ಭಟ್‌ ಅವರ ಪೌರೋಹಿತ್ಯದಲ್ಲಿ ಶಾಸ್ತ್ರಬದ್ಧವಾಗಿ ವಿಪ್ರರಿಗೆ ಉಪಾಕರ್ಮ ನೆರವೇರಿತು. ಹೂಟಗಳ್ಳಿ ಗಾಯತ್ರಿ ವಿಪ್ರ ಸಂಘದ ಅಧ್ಯಕ್ಷ ನಾರಾಯಣ ಭಟ್‌, ಉಪಾಧ್ಯಕ್ಷ ಜಗದೀಶ ಪ್ರಸಾದ್, ಮಹೇಶ್‌, ರಘು, ಮಂಜುನಾಥ ಜೋಯಿಸ್‌, ಚಂದ್ರಮೌಳಿ, ಎಸ್.ಆರ್.ಭಟ್‌ ಅವರು ಇದ್ದರು. - [ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿಯ ವಂಚನೆ ಆರೋಪ – FIR ದಾಖಲು](https://varthaman.in/fir-filed-against-actor-dhruva-sarja-for-fraud-of-rs-3-15-crore/): ಬೆಂಗಳೂರು – ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ವಿರುದ್ಧ ಮುಂಬೈನ ಅಂಬೋಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸಿನಿಮಾ ನಿರ್ದೇಶಕ ರಾಘವೇಂದ್ರ ಅವರಿಂದ 3.15 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಹೊಸ ಸಿನಿಮಾದ ಶೂಟಿಂಗ್‌ಗೆ ಬರುವುದಾಗಿ ಹೇಳಿ ಧ್ರುವ ಸರ್ಜಾ 3.15 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದರೂ, ಶೂಟಿಂಗ್‌ಗೆ ಹಾಜರಾಗಲಿಲ್ಲ ಎಂಬುದು ಆರೋಪ.ಇದನ್ನು ಓದಿ –ಸೋಮವಾರದಿಂದ ವಿಧಾನಮಂಡಲ ಮಳೆಗಾಲ ಅಧಿವೇಶನ ಆರಂಭ ಈ ಸಂಬಂಧ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ. - [ಸೋಮವಾರದಿಂದ ವಿಧಾನಮಂಡಲ ಮಳೆಗಾಲ ಅಧಿವೇಶನ ಆರಂಭ](https://varthaman.in/legislative-assembly-monsoon-session-begins-from-monday/): ಬೆಂಗಳೂರು, ಆ.9 – ರಾಜ್ಯ ವಿಧಾನಮಂಡಲದ ಮಳೆಗಾಲ ಅಧಿವೇಶನ ಸೋಮವಾರ (ಆ.11) ಆರಂಭವಾಗುತ್ತಿದ್ದು, ಕಾಲ್ತುಳಿತ, ಒಳ ಮೀಸಲಾತಿ, ರಸಗೊಬ್ಬರದ ಕೊರತೆ, ಅತಿವೃಷ್ಟಿ–ಅನಾವೃಷ್ಟಿ, ಪ್ರವಾಹ, ಮತಗಳ್ಳತನದ ಆರೋಪ ಸೇರಿದಂತೆ ಹಲವಾರು ಪ್ರಮುಖ ವಿಷಯಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ. ಆ.11ರಿಂದ 22ರವರೆಗೆ ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸದನ ಸೇರುವುದರೊಂದಿಗೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಅಮಾನತುಗೊಂಡಿದ್ದ ಬಿಜೆಪಿಯ 18 ಶಾಸಕರ ಮೇಲಿನ ತೀರ್ಮಾನವನ್ನು ಹಿಂಪಡೆಯುವ ಪ್ರಸ್ತಾವವೂ ಮೊದಲ ದಿನವೇ ಮಂಡನೆಯಾಗಲಿದೆ. ಅಧಿವೇಶನದಲ್ಲಿ ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಗಳು, ಕಾಗದ ಪತ್ರ ಮಂಡನೆ ಹಾಗೂ 18ಕ್ಕೂ ಹೆಚ್ಚು ಪ್ರಮುಖ ವಿಧೇಯಕಗಳ ಪ್ರಸ್ತಾಪ ನಡೆಯಲಿದೆ. ಇದರಲ್ಲಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ, ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ ಪ್ರಮುಖವಾಗಿವೆ. ರಾಜ್ಯದ ಹಲವೆಡೆ ಮುಂಗಾರು ಮಳೆಯಿಂದ ಅತಿವೃಷ್ಟಿ […] - [ಜನಿವಾರ ಧಾರಣೆಯ ಮಹತ್ವ](https://varthaman.in/janivara-dharaneya-mahatma/): ಬ್ರಾಹ್ಮಣನೆಂದೆನಿಸಿ ವೇದಾಧ್ಯಯನಗಳನ್ನು ಮಾಡುವ ಯೋಗ್ಯನಿಗೆ ಉತ್ಸರ್ಜನ ಉಪಾಕರ್ಮಗಳು ಇವು ತುಂಬ ಮಹತ್ವದ್ದು. ವೇದಾಧ್ಯಯನವನ್ನು ಗುರುಗಳಿಗೆ ಅರ್ಪಿಸುವದು ಉತ್ಸರ್ಜನ ಎಂದಾದರೆ, ವೇದಗ್ರಹಣ ಮಾಡುವ ಕರ್ಮ ಉಪಾಕರ್ಮ ಎಂದು ಪ್ರಸಿದ್ಧ. ವೇದಗ್ರಹಣ ಮಾಡಿದ ನಂತರ ನಿರಂತರ ಒಂದೂ ದಿನ ತಪ್ಪದೆ ಆರು ತಿಂಗಳ ವರೆಗೆ ಪಾಠ ಹೇಳಿಸಿಕೊಳ್ಳುತ್ತಾ ಅಧ್ಯಯನ ಮಾಡುವದು. ಆರು ತಿಂಗಳ ನಂತರ ಉತ್ಸರ್ಜನವನ್ನು ಮಾಡಿ, ನಂತರ ಕಲಿತ ಪಾಠದ ಚಿಂತನೆ. (ಇಂದು ಉತ್ಸರ್ಜನ ಹಾಗೂ ಉಪಾಕರ್ಮ ಎರಡೂ ಒಂದೇ ದಿನ ಮಾಡಿಕೊಳ್ಳುತ್ತೇವೆ.) ವೇದಾಧ್ಯಯನಕ್ಕೆ ಅಧಿಕಾರ ಸಿಗುವದೇ ಉಪನಯನದ ನಂತರ. ಉಪನಯನ ಪ್ರಸಂಗದಲ್ಲಿ ಜನಿವಾರ ಧಾರಣೆ. ಅಂದೇ ವೇದ ಶಾಸ್ತ್ರ ಅಧ್ಯಯನಗಳಿಗೆ ಹಾಗೂ ಗಾಯತ್ರೀ ಮೊದಲಾದ ಮಂತ್ರಗಳ ಜಪಕ್ಕೆ ಅಧಿಕಾರ. ಉಪದಿಷ್ಟ ಮಂತ್ರಗಳ ಜಪ, ವೇದಗಳ ಅಧ್ಯಯನ ಮೂರು ದಿನ ತಪ್ಪಿಸಿದರೆ ಯಾತಯಾಮ ಎಂದಾಗುವದು. ಯಾತಯಾಮ ಅಂರೆ ತಂಗಳು. ಒಂದು ಬಾರಿ ಯಾತಯಾಮವಾದರೆ ಪುನಃ ಉಪದೇಶವನ್ನು ಪಡೆಯಲೇ ಬೇಕು. ಪಾರಾಯಣ ಜಪ ಮಾಡಿದ್ದು (ಎಣಿಸಿದ್ದಕ್ಕೆ ಲೆಕ್ಖಕ್ಕೆ ಮಾತ್ರ) ಅತ್ಯಲ್ಪ ಫಲ. ಸಿದ್ದಿಯಂತೂ ಆಗದು. […] - [ಬಾಂಧವ್ಯದ ಸಂಕೇತ ರಕ್ಷಾ ಬಂಧನ](https://varthaman.in/raksha-bandhan-a-symbol-of-bond/): ಹುಟ್ಟು… ದೇವರ ಸೃಷ್ಟಿಯ ಅದ್ಭುತದಲ್ಲೊಂದು. ಯಾರು ಎಲ್ಲಿ? ಯಾರ ಮಡಿಲಲ್ಲಿ ಜೊತೆಯಾಗಿ ಹುಟ್ಟಬೇಕೆಂಬುದು ಭಗವಂತನ ನಿರ್ಣಯ. ಋಣಾನುಬಂಧ ರೂಪೇಣ ಪಶುಪತಿಸುತಾಲಯ…. ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾವುದೇ ಒಂದು ವ್ಯಕ್ತಿಗಳೊಂದಿಗೆ ಸಂಬಂಧದ ಬೆಸುಗೆ ಆಗಬೇಕಾದರೆ ನಮಗರಿವಿಲ್ಲದ ಕಾರಣವೊಂದನ್ನು ಖಂಡಿತ ಆ ದೇವರು ಸೃಷ್ಟಿಸಿರುತ್ತಾನೆ. ನನ್ನ ಅನಿಸಿಕೆಯನ್ವಯ ‘ಸಹೋದರ’ ನೆಂದರೆ, ಸದಾಕಾಲ ಹೊಣೆಹೊತ್ತು ಧೈರ್ಯ ತುಂಬುತ ರಂಜಿಸುವವ…. ಎನ್ನಬಹುದೇನೋ. ಏನೇ ಕಷ್ಟ ಬಂದರೂ.. ಸದಾಕಾಲ ಸಹೋದರಿಯರ ರಕ್ಷಣೆ ಮಾಡುವ ಹೊಣೆ ಹೊತ್ತು ಅವರ ಖುಷಿಗಾಗಿ ಶ್ರಮಿಸುತ್ತಾ, ಜೊತೆಯಾಗಿದ್ದುಕೊಂಡು ಧೈರ್ಯ ತುಂಬುತ್ತಾ ಸೋದರಿಯರರನ್ನು ಖುಷಿಯಾಗಿಡುವಲ್ಲಿ ರಂಜಿಸುತ್ತ ಬದುಕು ನಡೆಸುವ ಜೀವವೇ ಸಹೋದರ. ಹೌದು… ಸಹೋದರರೆಂದರೆ ಒಂತರ ವಿಶೇಷ ಗೌರವ. ಹೆಣ್ಣು ಮಕ್ಕಳಿಗೆ ಅಣ್ಣ ಅಥವಾ ತಮ್ಮನೆಂದರೆ ಪ್ರೀತಿ ಅಕ್ಕರೆ. ಸಹೋದರರು ಕೂಡ ತನ್ನ ಒಡಹುಟ್ಟಿದವರನ್ನು ವಿಶೇಷ ಕಾಳಜಿ ಪ್ರೀತಿಯಿಂದ ಕಾಪಾಡುತ್ತಾರೆ.ಒಡಹುಟ್ಟಿದವರ ಬಾಂಧವ್ಯ ತಾಯಿಯಿಂದಾದರೆ, ದೇವರ ಬೆಸುಗೆಯ ಸಹೋದರತ್ವ ಸಂಬಂಧ ಬಹಳ ಮಹತ್ವವೆನಿಸಿಕೊಳ್ಳುತ್ತದೆ. ಎಲ್ಲೋ ಹುಟ್ಟಿ ಎಲ್ಲೂ ಬೆಳೆದು ಕಾರಣಗಳಿಲ್ಲದೆ ಪರಿಚಯವಾಗಿ ಒಡಹುಟ್ಟಿದವರಂತೆ ಪ್ರೀತಿ […] - [ಕಾರು ಚಾಲಕನ ಆತ್ಮಹತ್ಯೆ: ಡಾ. ಕೆ. ಸುಧಾಕರ್ ಸೇರಿದಂತೆ ಮೂವರ ವಿರುದ್ಧ FIR](https://varthaman.in/car-driver-commits-suicide-fir-against-three-including-dr-k-sudhakar/): ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕರಾದ ಬಾಬು ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ, ತಮ್ಮ ಸಾವಿಗೆ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಕಾರಣ ಎಂದು ಬಾಬು ಉಲ್ಲೇಖಿಸಿದ್ದಾರೆ. ಬಾಬು ಅವರ ಪತ್ನಿ ಶಿಲ್ಪಾ ನೀಡಿದ ದೂರಿನ ಆಧಾರದ ಮೇಲೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಎ1 ಆರೋಪಿಯಾಗಿ ಸಂಸದ ಡಾ. ಕೆ. ಸುಧಾಕರ್, ಎ2 ನಾಗೇಶ್, ಮತ್ತು ಎ3 ಮಂಜುನಾಥ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 108, 352, 351(2) ಹಾಗೂ ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಷನ್ 3(2)(v) ಅಡಿ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ: ಆರೋಪಿಗಳು ಸರ್ಕಾರಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಬಾಬು ಅವರಿಂದ ₹25 ಲಕ್ಷ ಹಣ ವಸೂಲಿ ಮಾಡಿ, ಕೆಲಸ ಮಾಡಿಕೊಡದೆ ಮೋಸ ಮಾಡಿದ್ದಾರೆ. ಕೆಲಸ ವಿಚಾರಿಸಿದಾಗ ನಿಂದನೆ ಮಾಡಿ, ಬೆದರಿಕೆ ಹಾಕಿ, […] - [ಹಳೆ ಪಿಂಚಣಿ ಯೋಜನೆ ಜಾರಿಗೆ ಸಾದ್ಯತೆ – ಆಗಸ್ಟ್ 12ರಂದು ಮಹತ್ವದ ಸಭೆ](https://varthaman.in/possibility-of-implementing-the-old-pension-scheme-important-meeting-on-aug-12/): ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (Old Pension Scheme – OPS) ಜಾರಿಗೊಳಿಸುವ ವಿಷಯದಲ್ಲಿ ನಿರ್ಧಾಯಕ ಬೆಳವಣಿಗೆ ಕಂಡುಬಂದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಜಾರಿಗೊಳಿಸುವುದಾಗಿ ಘೋಷಿಸಿದ್ದು, ಆಗಸ್ಟ್ 12ರಂದು ಮಹತ್ವದ ಚರ್ಚಾಸಭೆ ನಡೆಯಲಿದೆ. ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 306ರಲ್ಲಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ಬದಲಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದ ಸಾಧ್ಯತೆಗಳನ್ನು ಚರ್ಚಿಸಲಾಗುವುದು. ಈ ಸಭೆಯ ಹಿನ್ನೆಲೆಯಾಗಿ, ಸರ್ಕಾರದ ಕಾರ್ಯದರ್ಶಿ ರಮಣ್‌ ದೀಪ್ ಚೌಧರಿ (ಭಾ.ಆ.ಸೇ) ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದ ವರದಿ ಸಲ್ಲಿಸಿದ್ದಾರೆ. ಹಾಗೆಯೇ, ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ (ಭಾ.ಆ.ಸೇ) ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ ವರದಿ ನೀಡಿದ್ದಾರೆ.ಇದನ್ನು ಓದಿ –ಇಂದು ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 354ನೇ […] - [ಇಂದು ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ](https://varthaman.in/the-354th-aradhana-mahotsav-of-guru-raghavendra-swamiji-begins-today-at-mantralaya/): ರಾಯಚೂರು: ಮಂತ್ರಾಲಯ ಸೇರಿದಂತೆ ದೇಶ-ವಿದೇಶಗಳ ರಾಯರ ಮಠಗಳಲ್ಲಿ ಗುರುರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಇಂದು (ಆ.8) ವಿಜೃಂಭಣೆಯಿಂದ ಚಾಲನೆ ದೊರೆಯಲಿದೆ. ಆ.8ರಿಂದ 14ರವರೆಗೆ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ಜರುಗಲಿದೆ. ಇಂದು ಸಂಜೆ ಧ್ವಜಾರೋಹಣದೊಂದಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಪೌರೋಹಿತ್ಯದ ಆರಂಭವಾಗಲಿದೆ. ಆ.10ರಂದು ಪೂರ್ವಾರಾಧನೆ, ಆ.11ರಂದು ಮಧ್ಯಾರಾಧನೆ, ಮತ್ತು ಆ.12ರಂದು ಉತ್ತರಾರಾಧನೆ ನಡೆಯಲಿದ್ದು, ಆ ದಿನವೇ ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಆ.9ರಂದು ಮಠದ ಆವರಣದಲ್ಲಿ ನಿರ್ಮಿತ ಪುಷ್ಕರಣಿಯ ಲೋಕಾರ್ಪಣೆ ನಡೆಯಲಿದೆ. ತಿರುಮಲ ತಿರುಪತಿ ದೇವಸ್ಥಾನದಿಂದ ತರಲಿರುವ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಇಂದು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಲಾಗುವುದು. ಆ.10ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಬಾರಿ ವಿಶೇಷವಾಗಿ ರಾಯರ ಮೂಲಬೃಂದಾವನಕ್ಕೆ ನವರತ್ನ ಕವಚ ಸಮರ್ಪಿಸಲಾಗುತ್ತಿದೆ.ಇದನ್ನು ಓದಿ –ಕೆ. ಸುಧಾಕರ್ ಹೆಸರು […] - [ಕೆ. ಸುಧಾಕರ್ ಹೆಸರು ಉಲ್ಲೇಖಿಸಿ ಕಾರು ಚಾಲಕ ಆತ್ಮಹತ್ಯೆ](https://varthaman.in/car-driver-commits-suicide-citing-k-sudhakars-name/): ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಕಾರು ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆಯಿದ್ದು, ಈ ಘಟನೆಗೆ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಬಾಪೂಜಿನಗರದ ನಿವಾಸಿ ಬಾಬು (32) ಎಂಬವರು ಮೃತ ವ್ಯಕ್ತಿಯಾಗಿದ್ದು, ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಸಭಾಂಗಣದ ಹಿಂಭಾಗದಲ್ಲಿನ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಬಾಬು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಸಿಇಒಗೆ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಾಬು ಬರೆದ ಡೆತ್‌ನೋಟ್‌ನಲ್ಲಿ, “ನನ್ನ ಸಾವಿಗೆ ಸಂಸದ ಡಾ. ಕೆ. ಸುಧಾಕರ್ ಕಾರಣ. ಚಿಕ್ಕಕಾಡಿಗಾನಹಳ್ಳಿಯ ನಾಗೇಶ್ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ” ಎಂಬಲ್ಲಿ ಗಂಭೀರ ಆರೋಪವಿದೆ. ಜೊತೆಗೆ, ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ಧವೂ ಹಲವಾರು ಆರೋಪಗಳನ್ನು ಅವರು ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಆತ್ಮಹತ್ಯೆ […] - [ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಸೇವಿಸಿ ಮೂವರ ದುರ್ಮರಣ](https://varthaman.in/three-die-after-consuming-fake-alcohol-reducing-medicine/): ಕಲಬುರಗಿ: ಕುಡಿತದ ಚಟದಿಂದ ದೂರ ಇಡುವುದಾಗಿ ಹೇಳಿ ನೀಡಿದ ನಾಟಿ ಔಷಧಿಯ ಸೇವನೆಯಿಂದ ಮೂವರು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ಗಣೇಶ್ ರಾಠೋಡ್ (30), ಹಾಗೂ ಮದಕಲ್ ಗ್ರಾಮದ ನಾಗೇಶ್ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ. ಇದೇ ಔಷಧಿ ಸೇವಿಸಿದ್ದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪನರಸಿಂಹಲು ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಯಪ್ಪ ಮುತ್ಯಾ ಎಂಬ ವ್ಯಕ್ತಿ, “ಕುಡಿತದ ಚಟ ಬಿಡಿಸುತ್ತೇನೆ” ಎಂದು ಹೇಳಿ ಮದ್ಯ ವ್ಯಸನಿಗಳ ಮೂಗಿನಲ್ಲಿ ನಾಟಿ ಔಷಧಿ ಹಾಕಿದ್ದನು. ಈ ಔಷಧಿ ಸೇವನೆಯ ಬಳಿಕ ಲಕ್ಷ್ಮೀ ನರಸಿಂಹಲು ಹಾಗೂ ಗಣೇಶ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ನಾಗೇಶ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಇದನ್ನು ಓದಿ –ಶಾಲೆಗೆ ಮನೋವೈದ್ಯ ಮನೆಗೆ ಅಜ್ಜಿ-ತಾತ ಬೇಕು ಈ ಕುರಿತು ಸೇಡಂ ಪೊಲೀಸ್ […] - [ಶಾಲೆಗೆ ಮನೋವೈದ್ಯ ಮನೆಗೆ ಅಜ್ಜಿ-ತಾತ ಬೇಕು](https://varthaman.in/the-school-needs-grandparents-for-the-psychiatric-hospital/): ಬೆಂಗಳೂರು : ಈಗ ಎಲ್ಲ ಕಡೆ ಮಕ್ಕಳ ಆತ್ಮಹತ್ಯೆ ಅಧಿಕಗೊಳ್ಳುತ್ತಿದೆ. ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದು ಸಣ್ಣ ವಿಷಯಗಳಿಗೆ ಮನನೊಂದು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಿದೆ. ಪ್ರತಿ ಶಾಲೆಯಲ್ಲಿ ಒಬ್ಬರು ಮನೋವೈದ್ಯರನ್ನು ನೇಮಿಸಿಕೊಳ್ಳುವುದು ಅಗತ್ಯ ಎಂದು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ನಿಮ್ಹಾನ್ಸ್ ನಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ೧ ಲಕ್ಷ ಜನ ಇದರ ನೆರವು ಪಡೆದುಕೊಂಡಿದ್ದಾರೆ. ಕೊರೊನಾ ಕಳೆದ ಮೇಲೆ ಯುವ ಪೀಳಿಗೆಯಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶೇ.೧೫ ಪ್ರಕರಣಗಳಲ್ಲಿ ಇದು ಆತ್ಮಹತ್ಯೆಯ ಹಂತ ತಲುಪಿವೆ. ಸಹಾಯವಾಣಿಗೆ ರಾತ್ರಿ ವೇಳೆ ಹೆಚ್ಚಿನ ಕರೆಗಳು ಬರುತ್ತಿವೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ರೈಲ್ವೆಹಳಿಯವರೆಗೆ ಹೋಗಿ ಸಹಾಯವಾಣಿಗೆ ಫೋನ್ ಮಾಡಿ ಮನೆಗೆ ಹಿಂತಿರುಗಿದ ಘಟನೆ ನಡೆದಿವೆ. ಐಎಎಸ್, ಐಪಿಎಸ್ ಸೇರಿದಂತೆ ಹಲವು ತರಬೇತಿ ಸಂಸ್ಥೆಗಳು, ಐಐಟಿಗಳಲ್ಲಿ ಶೈಕ್ಷಣಿಕ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಅದಕ್ಕಾಗಿ ಈಗ […] - [SBI ಬ್ಯಾಂಕ್‌ನಲ್ಲಿ 6589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ](https://varthaman.in/sbi-bank-recruitment-for-6589-clerk-posts/): ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್), SBI ಕ್ಲರ್ಕ್, ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 6589 ಹುದ್ದೆಗಳಿವೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26, 2025ರೊಳಗಾಗಿ sbi.co.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡಗಳು: ಪರೀಕ್ಷಾ ವಿಧಾನ: ಅರ್ಜಿ ಶುಲ್ಕ: - [ಇಂದಿನ ಚಿನ್ನದ ಬೆಲೆ ತಿಳಿಯಿರಿ | Gold Price in India](https://varthaman.in/gold-price-in-india-today/): ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವುದು ಮುಂದುವರಿದಿದ್ದು, ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದ ಬದಲಾವಣೆ, ಕಚ್ಚಾ ತೈಲದ ದರ ಏರಿಳಿತ ಹಾಗೂ ಹೂಡಿಕೆದಾರರ ಭದ್ರ ಹೂಡಿಕೆ ನಿಲುವುಗಳು ಇದರ ಪ್ರಮುಖ ಕಾರಣಗಳಾಗಿವೆ. ಮದುವೆ, ಉತ್ಸವಗಳ ಸೀಸನ್ ಮತ್ತು ಆಭರಣಗಳ ಬೇಡಿಕೆಯು ಕೂಡ ದರ ಏರಿಕೆಗೆ ಕಾರಣವಾಗಿದೆ. 24 ಕ್ಯಾರೆಟ್ ಚಿನ್ನದ ಇಂದಿನ ದರ (ಅಗಸ್ಟ್ 6, 2025): 22 ಕ್ಯಾರೆಟ್ ಚಿನ್ನದ ದರ: 18 ಕ್ಯಾರೆಟ್ ಚಿನ್ನದ ದರ: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (24K / 22K / 18K): ಇಂದಿನ ಬೆಳ್ಳಿ ದರ: ಸ್ಪಾಟ್ ಗೋಲ್ಡ್ ದರ (ಆಗಸ್ಟ್ 6, 2025 – 03:12am GMT): - [19 ನವಿಲುಗಳ ನಿಗೂಢ ಸಾವು](https://varthaman.in/mysterious-death-of-19-peacocks/): ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದಲ್ಲಿ 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಉಂಟುಮಾಡಿದ್ದು, ಇದೀಗ ಅರಣ್ಯ ಇಲಾಖೆ ಈ ಸಂಬಂಧ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಈ ದುಃಖದ ಘಟನೆಯು ನಿನ್ನೆ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಸ್ಥಳೀಯ ರೈತರು ತಮ್ಮ ಜಮೀನಿಗೆ ತೆರಳಿದಾಗ ನವಿಲುಗಳ ಮೃತದೇಹಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಮೃತ ನವಿಲುಗಳಲ್ಲಿ 14 ಹೆಣ್ಣು ನವಿಲುಗಳು ಸೇರಿವೆ. ನವಿಲುಗಳ ನಿಖರ ಮರಣಕಾರಣ ಸ್ಪಷ್ಟವಾಗಿಲ್ಲದಿದ್ದರೂ, ಕೆಲವೊಂದು ಬೆಳೆಗಳ ಮೇಲೆ ಕ್ರಿಮಿನಾಶಕವನ್ನು ಸಿಂಪಡಿಸಿದ್ದರಿಂದ ಅವುಗಳನ್ನು ನವಿಲುಗಳು ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಆಧರಿಸಿ ಅರಣ್ಯ ಇಲಾಖೆ ಅಪರಾಧದ ಕೋನದಿಂದ ತನಿಖೆ ಪ್ರಾರಂಭಿಸಿದೆ.ಇದನ್ನು ಓದಿ –ಇಂದು ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಘಟನಾಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದು, ಪೋಷಕಾಂಶ ವಿಶ್ಲೇಷಣೆ ಮೂಲಕ ನಿಖರ ಸತ್ಯ ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿದೆ. - [ಇಂದು ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ](https://varthaman.in/orange-alert-declared-for-5-districts-of-the-state-today/): ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ಹವಾಮಾನ ಇಲಾಖೆ ಇಂದು 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ತೀವ್ರ ಮಳೆಯ ಎಚ್ಚರಿಕೆ ನೀಡಲಾಗಿದೆ. ಯೆಲ್ಲೋ ಅಲರ್ಟ್ ಉಳಿದ ಜಿಲ್ಲೆಗಳೆಲ್ಲಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದು ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕೊಡಗಿನಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಕೊಡಗು ಜಿಲ್ಲೆಯಾದ್ಯಂತ ತೀವ್ರ ಮಳೆಯ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಜಿಲ್ಲಾಧಿಕಾರಿ ವೆಂಕಟರಾಜ್ ಅವರು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ.ಇದನ್ನು ಓದಿ –ಭಾರತದ ಆಮದುಗಳ ಮೇಲೆ 24 ಗಂಟೆಗಳಲ್ಲಿ ಭಾರೀ ಸುಂಕ ಹೆಚ್ಚಳ: ಟ್ರಂಪ್ ವಿಜಯಪುರದಲ್ಲಿ ಭಾರೀ ಮಳೆ ಇತ್ತ ವಿಜಯಪುರ ಜಿಲ್ಲೆಯಲ್ಲೂ ಭಾರೀ […] - [ಭಾರತದ ಆಮದುಗಳ ಮೇಲೆ 24 ಗಂಟೆಗಳಲ್ಲಿ ಭಾರೀ ಸುಂಕ ಹೆಚ್ಚಳ: ಟ್ರಂಪ್](https://varthaman.in/huge-tariff-hike-on-indian-imports-in-24-hours-trump/): ವಾಷಿಂಗ್ಟನ್: ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ಆಧರಿಸಿ, ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಬಿಕ್ಕಟ್ಟು ಮತ್ತಷ್ಟು ಗಂಭೀರಗೊಂಡಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳ ಮೇಲೂ ಗಣನೀಯ ಮಟ್ಟದ ಸುಂಕ (Tariff) ಹೆಚ್ಚಳ ಮಾಡುವುದಾಗಿ ಅವರು ತಿಳಿಸಿದ್ದಾರೆ. ಭಾರತ ಉತ್ತಮ ಪಾಲುದಾರವಲ್ಲ: ಟ್ರಂಪ್ ಆರೋಪ ಟ್ರಂಪ್ ಹೇಳುವಂತೆ, “ಭಾರತವು ಉತ್ತಮ ವ್ಯಾಪಾರ ಪಾಲುದಾರವಲ್ಲ. ಅವರು ನಮ್ಮಿಂದ ಹೆಚ್ಚು ಖರೀದಿಸದೇ ಇರುವ ನಡುವೆಯೂ, ನಾವು ಅವರಿಗೆ ಹೆಚ್ಚು ಮಾರುತ್ತೇವೆ. ಇದರಿಂದಾಗಿ ಈ ವ್ಯವಹಾರ ಅನ್ಯಾಯವಾಗಿದೆ. ಭಾರತ ನಮ್ಮ ಎಚ್ಚರಿಕೆಯನ್ನು ಲೆಕ್ಕಿಸದೆ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸುತ್ತಿದ್ದು, ಈ ಮೂಲಕ ಯುದ್ಧ ಯಂತ್ರಕ್ಕೆ ಇಂಧನ ತುಂಬುತ್ತಿದ್ದಾರೆ.” ಭಾರತ ಲಾಭದತ್ತ ಹರಿದಾಡುತ್ತಿದೆ ಇದಕ್ಕೂ ಮುನ್ನದ ದಿನವೇ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿಸಿ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದರು. “ಭಾರತ […] - [ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ](https://varthaman.in/massive-cloudburst-in-uttarkashi/): ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿ ಜಲಪ್ರಳಯ ಉಂಟಾಗಿದೆ. ಈ ಘಟನೆಯಲ್ಲಿ ಧರಾಲಿ ಎಂಬ ಊರಿನ ಪ್ರಾಯಶಃ ಸಂಪೂರ್ಣ ನೆಲಸಮವಾಗಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಖೀರ್ ಗಂಗಾ ಭಾಗದಲ್ಲಿ ಸುರಿದ ಭಾರೀ ಮಳೆಯು ರೌದ್ರಾವತಾರ ತಾಳಿದ್ದು, ಬೆಟ್ಟದ ಮೇಲಿಂದ ಏಕಾಏಕಿ ಹೊಳೆದಂತೆ ಬಂದ ನೀರು ಪೂರ್ಣಗಾತ್ರದ ನದಿಯಂತೆ ಹರಿದು ಇಡೀ ಗ್ರಾಮವನ್ನು ತನ್ನ ಹೊಟ್ಟೆಯಲ್ಲಿ ಉಳುಮೆಯಂತಾಗಿದೆ. ಅನೇಕ ಮನೆಗಳು, ಅಂಗಡಿಗಳು, ವಾಹನಗಳು ಈ ಭೀಕರ ಪ್ರವಾಹದಲ್ಲಿ ನಾಶಗೊಂಡಿವೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ತಕ್ಷಣ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರೆದಿದೆ. ಪ್ರವಾಹದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಗರ್ಜನೆ, ಕಿರುಚಾಟ, ಭೀತಿಯ ಸಂದರ್ಭಗಳನ್ನೊಳಗೊಂಡ ವೀಡಿಯೋಗಳು ವೈರಲ್ ಆಗಿವೆ.ಇದನ್ನು ಓದಿ –ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ : 48 ಐಪಿ ವಿಳಾಸ ಪತ್ತೆ ಹಚ್ಚಿದ ಸಿಸಿಬಿ ಈ ಸಂಬಂಧ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ […] - [ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ : 48 ಐಪಿ ವಿಳಾಸ ಪತ್ತೆ ಹಚ್ಚಿದ ಸಿಸಿಬಿ](https://varthaman.in/pornographic-messages-to-actress-ramya-ccb-detects-48-ip-addresses/): ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿರುವ ಪ್ರಕರಣದಲ್ಲಿ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದಾರೆ. ಈ ತನಿಖೆಯ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಒಟ್ಟು 48 ಕಿಡಿಗೇಡಿಗಳ ಐಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ. ಈಗಾಗಲೇ 15 ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ ಆರೋಪಿಗಳನ್ನು ಕಂಡುಹಿಡಿಯಲು ಸಿಸಿಬಿ ತೀವ್ರ ಪರಿಶ್ರಮವಹಿಸಿದೆ. ತೀವ್ರವಾಗಿ ಕಮೆಂಟ್ ಮಾಡಿದವರಲ್ಲಿ ಚಿಕ್ಕಮಂಗಳೂರು, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳವರು ಹೆಚ್ಚಿನವರು ಎನ್ನಲಾಗಿದೆ. ಕೆಲ ಆರೋಪಿಗಳಿಗೆ ಪೊಲೀಸರು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಕೆಲವರು ತಮ್ಮ ಐಪಿ ವಿಳಾಸಗಳನ್ನು ಬ್ಲಾಕ್ ಮಾಡಿಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಪ್ಪು ಅರಿತ ನಂತರ ಕ್ಷಮೆ ಯಾಚಿಸಿದ್ದಾರೆ. ಅನೇಕರು ತಿಳಿವಳಿಕೆ ಇಲ್ಲದೆ ಮಾಡಿರುವ ಈ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ –ಧರ್ಮಸ್ಥಳ ಪ್ರಕರಣ: ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭಿಸಿದ […] - [ಧರ್ಮಸ್ಥಳ ಪ್ರಕರಣ: ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭಿಸಿದ ಎಸ್‌ಐಟಿ](https://varthaman.in/dharmasthala-case-sit-begins-excavation-at-11th-point-today/): ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಕೇಳಿಬಂದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು 1ರಿಂದ 10ನೇ ಪಾಯಿಂಟ್‌ಗಳ ಜೊತೆಗೆ 12 ಮತ್ತು 13ನೇ ಪಾಯಿಂಟ್‌ಗಳಲ್ಲಿ ಉತ್ಖನನ ಕಾರ್ಯವನ್ನು ನಡೆಸಿದ್ದು, ಕೆಲವು ತಾಣಗಳಲ್ಲಿ ಶಂಕಿತ ಪತ್ತೆಗಳು ನಡೆದಿವೆ. ವಿಶೇಷವಾಗಿ ದೂರುದಾರರು ತೋರಿಸಿರುವ 6ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಕೆಲವು ಮೂಳೆಗಳು ಪತ್ತೆಯಾಗಿದ್ದು, ಅವುಗಳನ್ನು ಹೆಚ್ಚಿನ ತಪಾಸಣೆಗೆ ಎಫ್‌ಎಸ್‌ಎಲ್ (ಫಾರೆನ್ಸಿಕ್ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಲಾಗಿದೆ. ಆದರೆ, ಎಫ್‌ಎಸ್‌ಎಲ್ ಅಧಿಕಾರಿಗಳ ಪ್ರಕಾರ, ಈ ಮೂಳೆಗಳ ಡಿಎನ್‌ಎ ಪರೀಕ್ಷೆ ನಡೆಸುವುದು ಬಹಳ ಕಷ್ಟಸಾಧ್ಯವಾಗಿದೆ. ಕಾರಣವೇನೆಂದರೆ, ಈ ಮೂಳೆಗಳು ಸುಮಾರು 15 ವರ್ಷಗಳ ಹಿಂದೆಯೇ ನೆಲದಲ್ಲಿ ಹೂತಿರುವ ಸಾಧ್ಯತೆ ಇರುವುದರಿಂದ, ಮಣ್ಣಿನಲ್ಲಿರುವ ಲವಣಾಂಶಗಳಿಂದ ಅವುಗಳ ಡಿಎನ್‌ಎ ನಾಶವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಇದನ್ನು ಓದಿ –ಸಾರಿಗೆ ನೌಕರರ ಮುಷ್ಕರ: KSRTC ಬಸ್‌ಗೆ ಕಲ್ಲು ತೂರಾಟ ಪ್ರಕರಣದ ಗಂಭೀರತೆಯನ್ನು ಮನಗಂಡ ಎಸ್‌ಐಟಿ […] - [ಸಾರಿಗೆ ನೌಕರರ ಮುಷ್ಕರ: KSRTC ಬಸ್‌ಗೆ ಕಲ್ಲು ತೂರಾಟ](https://varthaman.in/transport-employees-strike-stones-pelted-at-ksrtc-bus/): ಕೊಪ್ಪಳ: ಇಂದಿನಿಂದ ರಾಜ್ಯದಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದು, ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ, ಮುಷ್ಕರದ ಮಧ್ಯೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಯಲಬುರ್ಗಾದಿಂದ ಬೆಂಗಳೂರಿಗೆ ತಡರಾತ್ರಿ ಹೊರಟಿದ್ದ ಬಸ್‌ ಮಸಬಹಂಚಿನಾಳ ಹತ್ತಿರ ತಲುಪಿದಾಗ ಈ ಹಲ್ಲೆ ನಡೆದಿದೆ. ಪರಿಣಾಮವಾಗಿ ಬಸ್‌ನ ಗಾಜುಗಳು ಒಡೆದು ಪುಡಿಪುಡಿಯಾಗಿವೆ. ಘಟನೆಯ ನಂತರ ಬಸ್‌ ಚಾಲಕರು ವಾಹನವನ್ನು ಸುರಕ್ಷಿತವಾಗಿ ಡಿಪೋಗೆ ವಾಪಸ್ ಕೊಂಡೊಯ್ದರು. ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಮಧ್ಯರಾತ್ರಿ ರಸ್ತೆಯಲ್ಲಿ ಪರದಾಡಬೇಕಾದ ಸ್ಥಿತಿಗೆ ಸಿಲುಕಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ್ಮ ಊರುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. - [ನಾಳೆ ಬೆಳಗ್ಗೆ 6ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ](https://varthaman.in/bus-services-across-the-state-to-be-suspended-from-6-am-tomorrow/): ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, ನಾಳೆ ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ನಾಳೆ ಬೆಳಗ್ಗೆ 6ರಿಂದ ಯಾವುದೇ ಬಸ್‌ಗಳನ್ನು ಡಿಪೋಗಳಿಂದ ಹೊರತೆಗೆದು ಸಂಚಾರಕ್ಕೆ ಬಿಡುವುದಿಲ್ಲ. ನೌಕರರು ಬಸ್ ಓಡಿಸುವುದಿಲ್ಲ. ಸರ್ಕಾರದ ಬೆದರಿಕೆಗೆ ಹೆದರದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ” ಎಂದು ನೌಕರರಿಗೆ ಕರೆ ನೀಡಿದರು. ಈ ಮುಷ್ಕರದ ಕುರಿತು ಈಗಾಗಲೇ 22 ದಿನಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವಾಗಿ ಸಭೆ ಕರೆದಿದ್ದು, ಅದು ತಡವಾಗಿ ನಡೆದಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಂಘಟನೆಗಳು 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರೂ, ಕನಿಷ್ಠ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಬಹುದಾಗಿತ್ತು ಎಂದ ಅವರು, ವೇತನ ಶೇಕಡಾ 15ರಷ್ಟು ಹೆಚ್ಚಳ ಹಾಗೂ ಬಾಕಿ ಇರುವ ಹಣವನ್ನು ಆದಷ್ಟು ಬೇಗ, ಕನಿಷ್ಠ ಕಂತು ರೂಪದಲ್ಲಾದರೂ […] - [ದಸರಾ-2025 ಗಜಪಯಣಕ್ಕೆ ಚಾಲನೆ](https://varthaman.in/dasara-2025-gajapayana-kicks-off/): ಮೈಸೂರು ಆ.4: ಸಫಾರಿಯಲ್ಲಿ ವನ್ಯಜೀವಿಗಳನ್ನು, ದಸರಾ ಜಂಬೂಸವಾರಿಯಲ್ಲಿ ಅಲಂಕೃತ ಆನೆಗಳನ್ನು ನೋಡಿ ಆನಂದಿಸುವ ನಾವು ಅವುಗಳ ಸಂರಕ್ಷಣೆಗೂ ಮುಂದಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ ಪೈಕಿ 9 ಆನೆಗಳ ಮೊದಲ ತಂಡಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ, ಕಬ್ಬು, ಅಕ್ಕಿ, ಬೆಲ್ಲ ತಿನ್ನಿಸಿ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ಪರಿಸರದ ಸಮತೋಲನಕ್ಕೆ ವನ್ಯಜೀವಿಗಳು ಅತ್ಯವಶ್ಯಕವಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದರು. ತಂತಿ ಬೇಲಿಗಳಿಗೆ ಅಕ್ರಮವಾಗಿ ಪ್ರವಹಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿದ್ದರೆ, ಉರುಳಿಗೆ ಚಿರತೆಗಳು ಸಿಲುಕಿ ನರಳಾಡಿ ಸಾಯುತ್ತಿವೆ. ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ವಿಷ ಪ್ರಾಶನದಿಂದ ಮೃತಪಟ್ಟಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ವನ್ಯಜೀವಿಗಳ ಜಾಗವನ್ನು ಆಕ್ರಮಿಸಿರುವ ನಾವು ಅವುಗಳನ್ನು ನಿರ್ದಯವಾಗಿ ಕೊಲ್ಲದೆ, ಅವುಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು. […] - [ಭಾರತಕ್ಕೆ 6 ರನ್‌ಗಳ ರೋಚಕ ಗೆಲುವು](https://varthaman.in/india-win-by-6-runs/): ಲಂಡನ್: ನಾಟಕೀಯ ತಿರುವುಗಳ ನಡುವೆ ನಡೆದ ಟೆಸ್ಟ್‌ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ ಕೇವಲ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಜಯದೊಂದಿಗೆ ಟೆಸ್ಟ್‌ ಸರಣಿ 2-2 ಸಮಬಲಗೊಂಡಿದೆ. ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೊನೆಯ ದಿನ 85.1 ಓವರ್‌ಗಳಲ್ಲಿ 367 ರನ್‌ಗೆ ಆಲೌಟ್‌ ಆಗಿ ಸೋಲು ಅನುಭವಿಸಿತು. ಇಂಗ್ಲೆಂಡ್‌ಗೆ ಗೆಲ್ಲಲು ಕೊನೆಯ ದಿನ 4 ವಿಕೆಟ್‌ ಕೈಯಲ್ಲಿದ್ದು, 35 ರನ್‌ ಬೇಕಿತ್ತು. ಆದರೆ ಸ್ಮಿತ್ ಕೇವಲ 2 ರನ್‌ ಸೇರಿಸಿದ ಕೂಡಲೇ ಸಿರಾಜ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ಆಗಿ ಔಟಾದರು. ಓವರ್‌ಟನ್ 8 ರನ್‌ ಗಳಿಸಿ ಸಿರಾಜ್‌ಗೆ ಎಲ್‌ಬಿ ಆಗಿ ಪೆವಿಲಿಯನ್ ಸೇರಿದರು. ಜೋಶ್ ಟಂಗ್ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಕ್ಲೀನ್‌ ಬೋಲ್ಡ್ ಆದರು. ಕೊನೆಯ ಬ್ಯಾಟ್ಸ್ಮನ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ ವೋಕ್ಸ್ ಮೈದಾನಕ್ಕೆ ಇಳಿದರು. ಗಸ್ ಅಟ್ಕಿನ್ಸನ್ ಕ್ರಿಸ್ […] - [ಡೆತ್ ನೋಟ್ ಬರೆದಿಟ್ಟು 13ರ ಬಾಲಕ ಆತ್ಮಹತ್ಯೆಗೆ ಶರಣು](https://varthaman.in/13-year-old-boy-commits-suicide-by-writing-a-death-note/): ಬೆಂಗಳೂರು: “ನನ್ನನ್ನು ಕ್ಷಮಿಸಿ” ಎಂಬ ಡೆತ್ ನೋಟ್‌ ಒಂದನ್ನು ಬರೆದ , ಕೇವಲ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಗಂಧಾರ್ (13) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬಾಲಕ ರಾತ್ರಿ ಸಹಜವಾಗಿ ಊಟ ಮಾಡುತ್ತಿದ್ದಾನೆ ಮತ್ತು ಮಲಗಲು ತನ್ನ ಕೋಣೆಗೆ ಹೋಗಿದ್ದ. ಆದರೆ ಬೆಳಗ್ಗೆ ತಂದೆ ರೂಮ್ ಬಾಗಿಲು ತೆರೆದಾಗ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಾಣಿಸಿಕೊಂಡಿದೆ. ಘಟನೆ ಸ್ಥಳದಲ್ಲಿ “Forgive Me” (ನನ್ನನ್ನು ಕ್ಷಮಿಸಿ) ಎಂಬ ವಾಕ್ಯವಿರುವ ಡೆತ್ ನೋಟು ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕನ ತಂದೆ ಗಣೇಶ್ ಪ್ರಸಾದ್ ಅವರು ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದನ್ನು ಓದಿ –ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. - [ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್](https://varthaman.in/yellow-alert-for-all-districts-of-the-state-orange-alert-for-the-coast/): ಬೆಂಗಳೂರು: ಕೆಲವೊಂದು ದಿನಗಳ ವಿರಾಮದ ನಂತರ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದುಕೊಂಡಿದ್ದು, ಮುಂದಿನ ವಾರವಿಡಿ ಭಾರೀ ಮಳೆಯ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಆಗಸ್ಟ್ 4) ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ (ಆಗಸ್ಟ್ 5) ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಭಾರೀ ಮಳೆಯ ಎಚ್ಚರಿಕೆಯಿಂದ ಆರೆಂಜ್ ಅಲರ್ಟ್ ಜಾರಿಗೊಳ್ಳಲಿದೆ. ಉಳಿದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಬಿರುಸಿನ ಮಳೆಯಾಗುವ ಸಂಭವವಿದ್ದು, ಆ.7ರವರೆಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ ಸೇರಿದಂತೆ ಇತರ ಭಾಗಗಳಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಸುರಕ್ಷಿತವಾಗಿ ಇರಲು ಅಗತ್ಯ ಮುಂಜಾಗ್ರತೆ ವಹಿಸಲು, ನೀರು ನಿಲ್ಲುವ ಪ್ರದೇಶಗಳನ್ನು ತ್ವರಿತವಾಗಿ ಖಾಲಿ ಮಾಡಿಸಲು, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುತ್ತಂತೆ ಹವಾಮಾನ ಇಲಾಖೆ ಮನವಿ ಮಾಡಿಕೊಂಡಿದೆ. - [ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ](https://varthaman.in/a-change-in-lifestyle-as-i-see-it/): ಶಿಕ್ಷಣ (ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕವಾಗಿ) “ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ” ಎಂಬೊಂದು ಗಾದೆ ಮಾತಿದೆಯಲ್ಲ. ಮಾನವನ ಜೀವನಕ್ಕೆ ಅತಿ ಮುಖ್ಯ ವಿದ್ಯೆ, ಶಿಕ್ಷಣ. ಶಿಕ್ಷಣ ಕ್ಷೇತ್ರದಲ್ಲೂ ಹಿಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಾಗಿದೆ.ಪೂರ್ವ ಕಾಲದಲ್ಲಿ ಗುರುಕುಲದಲ್ಲಿ, ರಾಜ, ಜನ ಸಾಮಾನ್ಯರೆಂಬ ಬೇಧ ಭಾವವಿಲ್ಲದೇ ಗುರುವಿನ ಸಾನಿಧ್ಯದಲ್ಲಿ, ಅವರ ಮನೆ ಮಕ್ಕಳಂತೆ ಇದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಶಿಕ್ಷಣ ಕಾಲಕ್ರಮದಲ್ಲಿ ಅನೇಕ ಬದಲಾವಣೆಯ ನಂತರ ಶಾಲೆಗಳಲ್ಲಿ ದೊರೆಯಲು ಆರಂಭವಾಯಿತು. ನಮ್ಮ ಅಜ್ಜ~ಅಜ್ಜಿಯರ ಕಾಲದಲ್ಲಿ ಪ್ರತಿಯೊಬ್ಬರು ಶಾಲೆಗೆ ಹೋಗುವುದು ಎಂಬ ಪರಿಪಾಠ ಇರಲಿಲ್ಲ. ಆಗೆಲ್ಲ ಗೊತ್ತುಮಾಡಿದ ಶಿಕ್ಷಕರೇ ಮನೆಗೆ ಬಂದು ಪಾಠ ಹೇಳಿ ಕೊಡುತ್ತಿದ್ದರಂತೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯೆ ಯಾಕೆ? ಹೇಗಿದ್ದರೂ ಮುಂದೆ ಮದುವೆಯಾಗಿ ಬೇರೆಯವರ ಮನೆಯಲ್ಲಿ ಅಡುಗೆ~ಮುಸುರೆ ಮಾಡುವ ಕೆಲಸಕ್ಕೆ ಹೋಗುವರೆಂಬ ಉದಾಸೀನ ಭಾವ. ಎಷ್ಟೋ ಮನೆಯ ಹೆಣ್ಣು ಮಕ್ಕಳು ಮನೆಯವರಿಗೆ ತಿಳಿಯದಂತೆ, ತಮ್ಮ ಅಣ್ಣ~ತಮ್ಮಂದಿರಿಗೆ ಪಾಠ ಹೇಳಿ ಕೊಡುವಾಗ ಕದ್ದುಮುಚ್ಚಿ ಅಕ್ಷರ ಕಲಿತದ್ದೂ ಉಂಟಂತೆ. ವಿದ್ಯಾಧಿದೇವತೆ ಶಾರದೆ ಸ್ತ್ರೀಯಾದರೂ, ಹೆಣ್ಣು ಮಕ್ಕಳು […] - [ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ ₹5 ಲಕ್ಷ ದಂಡ](https://varthaman.in/former-mp-prajwal-revanna-sentenced-to-life-imprisonment-and-fined-5-lakh/): ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಿ ಎಂಬುದಾಗಿ ಗುರುತಿಸಲಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ. ಈ ತೀರ್ಪು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರ ನೇತೃತ್ವದಲ್ಲಿ ಮಂಗಳವಾರ ಪ್ರಕಟವಾಯಿತು. ಮೈಸೂರಿನ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಮನೆ ಕೆಲಸದ ಮಹಿಳೆಯ ಮೇಲೆ ಪಟ್ಟುಪಾಳು ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನ್ಯಾಯಾಲಯ ಕಳೆದ ದಿನ ದೋಷಿಯಾಗಿದ್ದಾರೆ ಎಂದು ಘೋಷಿಸಿತ್ತು. ಪ್ರಾಸಿಕ್ಯೂಷನ್ ವಾದ: ಬಿ.ಎನ್. ಜಗದೀಶ್ ಮತ್ತು ವಕೀಲ ಅಶೋಕ್ ನಾಯಕ್ ಅವರು ಆರೋಪಿಗೆ ಗರಿಷ್ಠ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಜೋರಾಗಿ ವಾದಿಸಿದರು. ಅವರು ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ ನಡೆಸಿದ್ದು, ಆಕೆಯ ಮಾನಸಿಕ ಸ್ಥಿತಿಗೆ ಅಪಾರ ಹಾನಿ ಮಾಡಿದೆ. ₹10 ಸಾವಿರ ಸಂಬಳಕ್ಕೆ ಕೆಲಸಮಾಡುತ್ತಿದ್ದ ಬಡ ಕೂಲಿ ಮಹಿಳೆ, ತನಗೆ ಆಗುತ್ತಿರುವ ಹೀನ ಕಾರ್ಯದಿಂದ ಬೇಸತ್ತು ಮನೆ […] - [ಖರ್ಗೆ ಕುಟುಂಬದ ವಿರುದ್ಧ ಭೂ ಮಂಜೂರಾತಿ ಅಕ್ರಮ ಆರೋಪ](https://varthaman.in/kharge-family-accused-of-illegal-land-allocation/): ಬೆಂಗಳೂರು (ಆ.2): ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನುಬಾಹಿರವಾಗಿ 5 ಎಕರೆ ಜಮೀನು ಮಂಜೂರಾದ ಪ್ರಕರಣಕ್ಕೆ ಸಂಬಂಧಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಬೇಕೆಂದು ಖಾಸಗಿ ದೂರು ದಾಖಲಾಗಿದೆ. ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಅವರು ಈ ಖಾಸಗಿ ದೂರು ದಾಖಲಿಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದನ್ನು ಸ್ವೀಕರಿಸಿದೆ. ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ದೂರುದಾರರ ಪರವಾಗಿ ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿದೆ. ಏನಿದು ಪ್ರಕರಣ? ಆರೋಪಿಗಳ ಪಟ್ಟಿ: ಇದನ್ನು ಓದಿ –ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು ಮತ್ತೊಂದು ಖಾಸಗಿ ದೂರು: - [ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು](https://varthaman.in/uses-of-traditional-fruit-wood-apple/): ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗರ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಸಾಂಪ್ರದಾಯಿಕ ಔಷಧದಲ್ಲಿ ಅನೇಕ ಉಪಯೋಗಗಳನ್ನು ಹೊಂದಿರುವ ಈ ಪ್ರಮುಖ ಔಷಧೀಯ ಸಸ್ಯದ ಹಣ್ಣು ಮಾತ್ರವಲ್ಲ ಬೇರು, ಎಲೆ, ಕಾಂಡ, ಹಣ್ಣು ಮತ್ತು ಬೀಜದ ಬೀಜಗಳು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತದೆ. ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ರೂಟೇಸಿ ಕುಟುಂಬಕ್ಕೆ ಸೇರಿದ ಬೇಲದ ವೈಜ್ಞಾನಿಕ ಹೆಸರು ಫೆರೋನಿಯ. ಇದಕ್ಕೆ ಕಪಿತ್ಥ , ದಂತಶಠ ಅಂತಲೂ ಕರೆಯುತ್ತಾರೆ. ಮಹಾಗಣಪತಿಗೆ ಪ್ರಿಯವಾದ ಹಣ್ಣು. ರಾಮನಿಗೆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕಪಿಗಳು ಈ ಹಣ್ಣನ್ನು ಕೊಟ್ಟವು ಎಂಬ ಪ್ರತೀತಿ ಕೂಡ ಇದೆ. ಇದಕ್ಕೆ ಕರಭ ವಲ್ಲಭ ಎಂದೂ ಕರೆಯುತ್ತಾರೆ. ಅಂದರೆ ಆನೆಗಳಿಗೆ ಇಷ್ಟ ಎಂದರ್ಥ. ಹಾಗಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಇದಕ್ಕೆ ಎಲಿಫೆಂಟ್ ಆಪಲ್ ಎಂದು ಕರೆಯುತ್ತಾರೆ. ವುಡ್ ಆಪಲ್ ಎಂಬುದು ಸಾಮಾನ್ಯವಾಗಿ […] - [ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ](https://varthaman.in/avoid-eye-makeup-and-protect-your-eyes/): ಮೇಕಪ್ ಅಂದರೆ ಸಾಕು, ಮೇಕಪ್ ಮಾಡಿಸಿಕೊಳ್ಳಲು ಯುವತಿಯರು ಒಬ್ಬರಿಗಿಂತ ಒಬ್ಬರು ವಿಭಿನ್ನ ಶೈಲಿಯಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ,  ಹಲವು ಮಹಿಳೆಯರು ಮೇಕಪ್ ಮಾಡುತ್ತಾರೆ. ಇಲ್ಲದೆ ಮನೆ ಹೊರಗಡೆ ಕಾಲಿರಿಸುವುದಿಲ್ಲ , ಇನ್ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ .ಅಡಿಯಿಂದ ಮುಡಿಯೊರೆಗೆ ಮೇಕಪ್ ಮಾಡದೇ ಇದ್ದರೆ ಸಮಾಧಾನಗೊಳ್ಳದ ಮಹಿಳೆಯರು ನಮ್ಮ ನಡುವೆ ಇರುತ್ತಾರೆ. ಆದರೆ ಮೇಕಪ್ ನಿಂದ ಆ ದಿನ ಮಾತ್ರವೇ ಸುಂದರವಾಗಿ ಕಾಣಬಹುದು.  ಮೇಕಪ್ ಗೆ ಉಪಯೋಗಿಸುವ ವಸ್ತುಗಳು ನಿಧಾನವಾಗಿ ನಮ್ಮ ಚರ್ಮದ ಅಂದವನ್ನು ಹಾಳು‌ ಮಾಡುತ್ತವೆ. ಕೆಲವೊಮ್ಮೆ ಅಲರ್ಜಿ ಉಂಟಾಗಬಹುದು. ಅದರಲ್ಲೂ ಮುಖ್ಯವಾಗಿ ಕಣ್ಣಿಗೆ ಮೇಕಪ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಕಣ್ಣಿಗೆ ಹಚ್ಚುವ ಐ ಶ್ಯಾಡೋ , ಐ ಲೈನರ್ ನಿಂದ ನಿಧಾನವಾಗಿ ಕಣ್ಣು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.ಹಾಗಾಗಿ ಇವುಗಳನ್ನು ಬಳಸುವ ಮೊದಲೇ ಎಚ್ಚರಿಕೆಯಿಂದ ಬಳಸುವುದು ಉತ್ತಮ. ಕಣ್ಣಿಗೆ ಮೇಕಪ್ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯ. ಮೇಕಪ್ ಮಾಡಿಕೊಳ್ಳುವ ಮೊದಲು ನಮ್ಮ ಕೈಯನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು. ನಾವೆಲ್ಲ ಹಾಸ್ಟೆಲ್ ನಲ್ಲೋ , ಪಿಜಿಯಲ್ಲೋ ಅಥವಾ ನೆಂಟರಿಷ್ಟರ ಮನೆಯಲ್ಲಿ ಇದ್ದರೆ ಸಾಮಾನ್ಯವಾಗಿ ಸ್ನೇಹಿತರೊಂದಿಗೆ , ನೆಂಟರಿಷ್ಟರೊಂದಿಗೆ  ವಸ್ತುಗಳನ್ನು ಹಂಚಿಕೊಳ್ಳುತ್ತೇವೆ.ಆದರೆ ಕಣ್ಣಿನ ಮೇಕಪ್ ಗೆ […] - [ದೇಶಾದ್ಯಂತ ವ್ಯಸನ ಮುಕ್ತ ಜಾಗೃತಿ ಮೂಡಿಸಿದ ಶ್ರೀಗಳು | ಆಗಸ್ಟ್ 01 ವ್ಯಸನ ಮುಕ್ತ ದಿನ](https://varthaman.in/the-saints-who-spread-addiction-free-awareness-across-the-country/): “ವ್ಯಸನ ಮುಕ್ತಕ್ಕಾಗಿ ಡಾ. ಮಹಾಂತ ಶಿವಯೋಗಿ ಅಜ್ಜನವರ ಜೋಳಿಗೆ ಅಭಿಯಾನ” ವಿಶೇಷ ಲೇಖನ:- ಸಮಾಜದಲ್ಲಿ ಯಾವೊಬ್ಬ ವ್ಯಕ್ತಿಯೂ ವ್ಯಸನಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಪ್ರತಿಯೊಬ್ಬರು ಉತ್ತಮ ಆರೋಗ್ಯ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕೆನ್ನುವ ಆರೋಗ್ಯಕರ ಸಮಾಜದ ಪರಿಕಲ್ಪನೆ ಇಟ್ಟುಕೊಂಡು ವ್ಯಸನ ಮುಕ್ತ ಸಮಾಜಕ್ಕಾಗಿ ‘ದೇಶಾದ್ಯಂತ ಜೋಳಿಗೆ ಕಾರ್ಯಕ್ರಮ’ ಮೂಲಕ ಸಂಚರಿಸಿ, ವ್ಯಸನ ಹಾಗೂ ದುಷ್ಟಟಗಳ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ಮನಃ ಪರಿವರ್ತಿಸಿದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 01 ಅಗಸ್ಟ್ 1930 ರಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು. ತಮ್ಮ 10 ನೇ ವಯಸ್ಸಿನಲ್ಲೇ ಸನ್ಯಾಸಿ ಜೀವನವನ್ನು ಸ್ವೀಕರಿಸಿ, ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮಿಜಿಗಳಾದರು. ಇವರು ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ, ಆಧ್ಯಾತ್ಮಿಕ ಪ್ರವಚನ ಹೀಗೆ ನಾನಾ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದಿದ್ದರು. ವ್ಯಸನ ಮುಕ್ತ ಸಮಾಜಕ್ಕೆ ಶ್ರೀಗಳ ಕೊಡುಗೆ: 1970 ರಲ್ಲಿ […] - ['ಧರ್ಮಸ್ಥಳ ಪ್ರಕರಣ'ಕ್ಕೆ ತಿರುವು – 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ](https://varthaman.in/turnabout-in-the-dharmasthala-case-skeletal-remains-found-at-the-6th-point/): ಧರ್ಮಸ್ಥಳ: ಬಹುಚರ್ಚಿತ ‘ಧರ್ಮಸ್ಥಳ ಪ್ರಕರಣ’ಕ್ಕೆ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಗುರುತಿಸಿದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ನಡೆದ ತೀವ್ರ ಶೋಧ ಕಾರ್ಯದ ವೇಳೆ 2 ಎಲುಬುಗಳ ಅವಶೇಷಗಳು ಪತ್ತೆಯಾಗಿದ್ದು, ನ್ಯಾಯ ವಿಜ್ಞಾನ ತಜ್ಞರ ತಂಡವು ಹೆಚ್ಚಿನ ಪರೀಕ್ಷೆಗಾಗಿ ಅವುಗಳನ್ನು ವಶಕ್ಕೆ ಪಡೆದಿದೆ. ಎಸ್‌ಐಟಿ (SIT) ಅಧಿಕಾರಿಗಳು ಈ ಕುರಿತು ಸ್ಪಷ್ಟತೆ ನೀಡಿದ್ದು, ದೇಹದ ಪೂರ್ಣ ಅವಶೇಷಗಳು ಲಭ್ಯವಾಗಿಲ್ಲದಿದ್ದರೂ, ಕೇವಲ ಕೆಲವು ಭಾಗಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಅವಶೇಷಗಳು ಪತ್ತೆಯಾದ ಗರ್ಭದಲ್ಲಿ ಇನ್ನಷ್ಟು ಆಳಕ್ಕೆ ಅಗೆಯುವ ಕಾರ್ಯಕ್ಕೆ ಎಸ್‌ಐಟಿ ಮುಂದಾಗಿದೆ. ಜೊತೆಗೆ, ಅಕ್ಕಪಕ್ಕದ ಜಾಗಗಳಲ್ಲೂ ಶೋಧ ಕಾರ್ಯ ಜೋರಾಗಿದೆ. ಇದು ತನಿಖೆಯಲ್ಲಿ ಮಹತ್ವದ ಸಾಧನೆ ಎನಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ವಿಧಿವಿಜ್ಞಾನ ತಂಡವು ಸಿಕ್ಕಿರುವ ಎಲುಬುಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿರುವುದು ತನಿಖೆಯ ಮುಂದಿನ ಹಂತಕ್ಕೆ ದಾರಿ ತೆರೆದಿದೆ.ಇದನ್ನು ಓದಿ –ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ […] - [ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ ಏರಿಕೆ](https://varthaman.in/bengaluru-auto-fares-to-increase-from-august-1/): ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಆಗಸ್ಟ್ 1ರಿಂದ ಆಟೋ ಪ್ರಯಾಣ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು (ಡಿಸಿ) ಹೊಸ ದರ ಜಾರಿಗೆ ಆದೇಶ ಹೊರಡಿಸಿದ್ದಾರೆ. ಆಟೋ ಚಾಲಕರ ಮನವಿಯಂತೆ ದರ ಪರಿಷ್ಕರಣೆ ಮಾಡಲಾಗಿದೆ. ಹೊಸ ದರ ವಿವರಗಳು ಹೀಗಿವೆ: ಡಿಸಿ ಅಧಿಕಾರಿಗಳ ಎಚ್ಚರಿಕೆ:ಹೆಚ್ಚುವರಿ ದರ ವಿಧಿಸುವಂತಿಲ್ಲ. ಯಾವುದೆ ಪ್ರಯಾಣಿಕರಿಂದ ಅಧಿಕ ಹಣ ವಸೂಲಿ ಮಾಡಿದರೆ, ಸಂಬಂಧಿತ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.ಇದನ್ನು ಓದಿ –ಮೈಸೂರಿನಲ್ಲಿ ಡ್ರಗ್ಸ್ ದಂಧೆ – CBI ತನಿಖೆಗೆ ಯದುವೀರ್ ಒತ್ತಾಯ ಈ ಕ್ರಮದಿಂದ ಆಟೋ ಪ್ರಯಾಣದ ದರ ಸ್ವಲ್ಪ ಹೆಚ್ಚಾಗಿದ್ದರೂ ನಿಯಮಾನುಸಾರ, ಪಾರದರ್ಶಕ ಸೇವೆ ನೀಡುವತ್ತ ಇಳಿಯುವ ನಿರೀಕ್ಷೆಯಿದೆ. - [ಮೈಸೂರಿನಲ್ಲಿ ಡ್ರಗ್ಸ್ ದಂಧೆ – CBI ತನಿಖೆಗೆ ಯದುವೀರ್ ಒತ್ತಾಯ](https://varthaman.in/drug-racket-in-mysore-yaduveer-demands-cbi-investigation/): ಮೈಸೂರು: ಶಿಕ್ಷಣ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಮೈಸೂರು ನಗರವು ಇತ್ತೀಚೆಗೆ ಮಾದಕ ದ್ರವ್ಯ ಉತ್ಪಾದನೆಯ ಅಡಗಿತ ಸ್ಥಳವಾಗಿ ಪರಿಣಮಿಸಿರುವುದು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಕುರಿತು ಲೋಕಸಭೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ ವ್ಯಕ್ತಪಡಿಸಿ, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, “ಮೈಸೂರಿನಲ್ಲಿ ₹390 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್‌ ಪತ್ತೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯ. ಆಶ್ಚರ್ಯದ ಸಂಗತಿಯೆಂದರೆ, ಈ ಡ್ರಗ್ಸ್ ಕೇಂದ್ರವು ರಾಜ್ಯ ಸರ್ಕಾರದ ಜಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಕರ್ನಾಟಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮಹಾರಾಷ್ಟ್ರದ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಅಕ್ರಮ ಜಾಲವನ್ನು ಪತ್ತೆಹಚ್ಚಿದ್ದಾರೆ,” ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ಲೋಪವಿದೆ ಎಂದು ಆರೋಪ ಮಾಡಿದ ಯದುವೀರ್, “ಗೃಹ ಸಚಿವರು ನಮ್ಮ ವೈಫಲ್ಯವಿದೆ ಎಂದು ಹೇಳಿ ನಿರ್ಲಿಪ್ತವಾಗಿದೆ. ಇದು ಬೇಜವಾಬ್ದಾರಿಯ ಪರಮಾವಧಿ. ಇದರಿಂದ ಕಾನೂನು ಸುವ್ಯವಸ್ಥೆಗೆ ಭಾರಿ ಧಕ್ಕೆ ಉಂಟಾಗಿದೆ. ಉದಯಗಿರಿಯಲ್ಲಿ ನಡೆದ ಪೊಲೀಸ್ ಠಾಣೆಯ ಮೇಲಿನ […] - [ಭಾರತಕ್ಕೆ ಶೇ 25ರಷ್ಟು ಸುಂಕ ವಿಧಿಸಿದ ಅಮೆರಿಕ](https://varthaman.in/america-imposes-25-percent-tariff-on-india/): ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಹೊಸ ತಿರುವು ಪಡೆದುಕೊಂಡಿದೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲಿನ ವಾಣಿಜ್ಯ ಸುಂಕವನ್ನು ಶೇ 25ರಷ್ಟು ಎಂದು ಘೋಷಣೆ ಮಾಡಿದರು. ಈ ಸುಂಕ ಆಗಸ್ಟ್ 1ರಿಂದಲೇ ಭಾರತಕ್ಕೆ ಅನ್ವಯವಾಗಲಿದೆ ಎಂದು ಟ್ರಂಪ್ ಟ್ವಿಟರ್ ಸಮಾನ ಮಾಧ್ಯಮವಾದ “ಟ್ರುಥ್ ಸೋಶಿಯಲ್” ಮೂಲಕ ತಿಳಿಸಿದ್ದಾರೆ. ಈ ಸುಂಕ ಆಗಸ್ಟ್ 1ರಿಂದಲೇ ಭಾರತಕ್ಕೆ ಅನ್ವಯವಾಗಲಿದೆ ಎಂದು ಟ್ರಂಪ್ ಟ್ವಿಟರ್ ಸಮಾನ ಮಾಧ್ಯಮವಾದ “ಟ್ರುಥ್ ಸೋಶಿಯಲ್” ಮೂಲಕ ತಿಳಿಸಿದ್ದಾರೆ. ವ್ಯಾಪಾರ ಒಪ್ಪಂದದ ಕುರಿತು ಭಾರತ–ಅಮೆರಿಕ ನಡುವೆ ಕಳೆದ ಹಲವು ತಿಂಗಳಿನಿಂದ ಮಾತುಕತೆ ನಡೆಯುತ್ತಿದ್ದು, ಈ ನಡುವೆ ಟ್ರಂಪ್ ಘೋಷಣೆ ಮಹತ್ವ ಪಡೆದಿದೆ. ಭಾರತದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದರ ಜೊತೆಗೆ ಪೆನಾಲ್ಟಿಯನ್ನೂ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವ್ಯಾಪಾರದ ನಿಖರ ಚಿತ್ರಣ: ಈ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ ಅಮೆರಿಕಕ್ಕೆ \$25.51 ಬಿಲಿಯನ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದು, ಇದು ಶೇ. 22.8ರಷ್ಟು […] - [ಕಾಶ್ಮೀರದ ದೇಗ್ವಾರ್ ಸೆಕ್ಟರ್‌ನಲ್ಲಿ ಗುಂಡಿನ ಚಕಮಕಿ](https://varthaman.in/gunfight-breaks-out-in-kashmirs-degwar-sector/): ಶ್ರೀನಗರ: ಪಹಲ್ಗಾಮ್ ದಾಳಿಯ ಪ್ರಮುಖ ಪಾತಕಿ ಹಾಶಿಮ್ ಮೂಸಾ ಎನ್‌ಕೌಂಟರ್‌ನಲ್ಲಿ ಹೊತ್ತಿ ಉರುಳಿದ ಬೆನ್ನಲ್ಲೇ ಕಾಶ್ಮೀರದಲ್ಲಿ ಮತ್ತೆ ಭದ್ರತಾ ಪಡೆಗಳು ಎರಡು ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ. ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಪಾಕಿಸ್ತಾನ ಓಕ್ಯೂಪೈಡ್ ಕಾಶ್ಮೀರ (POK) ಭಾಗದಿಂದ ಮೂವರು ಉಗ್ರರು ನಿಯಂತ್ರಣ ರೇಖೆ (LoC) ದಾಟಿ ಭಾರತಕ್ಕೆ ಒಳನುಸುಳಲು ಯತ್ನಿಸಿದ್ದರು. ಭಾರೀ ಮಳೆಯ ನಡುವೆಯೂ ನಿಯಂತ್ರಣ ರೇಖೆಯ ಬಳಿ ಅನುಮಾನಾಸ್ಪದ ಚಲನವಲನವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ ನಂತರ ಎಚ್ಚರಿಕೆಯು ಹೆಚ್ಚಳವಾಗಿತ್ತು. ನಂತರ ಉಗ್ರರು ಗುಂಡಿನ ದಾಳಿ ನಡೆಸಿದಾಗ ಭದ್ರತಾ ಪಡೆಗಳು ತಕ್ಷಣ ಪ್ರತಿದಾಳಿ ನಡೆಸಿ ಇಬ್ಬರನ್ನು ಹೊಡೆದುರುಳಿಸಿದವು. ಮೂರನೇ ಉಗ್ರನಿಗಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಈ ಎನ್‌ಕೌಂಟರ್‌ಗಾಗಿ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಘಟನೆ ‘ಆಪರೇಷನ್ ಮಹಾದೇವ್’ ಎಂಬ […] - [ಲಾರಿಗೆ ಬಸ್ ಡಿಕ್ಕಿ – ಇಬ್ಬರ ದುರ್ಮರಣ, 15ಕ್ಕೂ ಹೆಚ್ಚು ಮಂದಿಗೆ ಗಾಯ](https://varthaman.in/bus-collides-with-lorry-two-dead-more-than-15-injured/): ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ಅಗ್ರಹಾರ ಬಳಿ ಬುಧವಾರ ಮುಂಜಾನೆ ಖಾಸಗಿ ಬಸ್ , ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಮೃತರನ್ನು ಬಸ್ ಕಂಡಕ್ಟರ್ ಅಣ್ಣಪ್ಪ (40) ಮತ್ತು ಚಳ್ಳಕೆರೆಯ ಹರ್ಷಿತ್ (35) ಎಂದು ಗುರುತಿಸಲಾಗಿದೆ. ದುರ್ಗಾಂಬಾ ಕಂಪನಿಯ ಖಾಸಗಿ ಬಸ್ ಮಂಗಳೂರುದಿಂದ ಚಳ್ಳಕೆರೆಗೆ ತೆರಳುತ್ತಿದ್ದು, ಗಾಜನೂರಿನ ಅಗ್ರಹಾರ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಯಿಂದಾಗಿ ಬಸ್‌ನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. - [ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಗುರುತಿಸಿದ 13 ಸ್ಥಳಗಳಲ್ಲಿ ಅಗೆಯುವ ಕೆಲಸ ಪ್ರಾರಂಭ](https://varthaman.in/dharmasthala-burial-case-excavation-work-begins-at-13-identified-locations/): ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾರೆ ಎಂಬ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನು ಗುರುತಿಸಿದ ಸ್ಥಳಗಳಲ್ಲಿ ಇಂದು ಅಧಿಕೃತವಾಗಿ ಅಗೆಯುವ ಪ್ರಕ್ರಿಯೆ ಆರಂಭವಾಗಿದೆ. ಸೋಮವಾರ, ದೂರುದಾರನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ 13 ಸ್ಥಳಗಳನ್ನು ಗುರುತಿಸಿ, ಈ ಸ್ಥಳಗಳಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ಸದ್ಯಕ್ಕೆ ಅಲ್ಲಿಗೆ ಕಾರ್ಮಿಕರನ್ನು ಕರೆಯಿಸಿ, ಅಗೆಯುವ ಕಾರ್ಯಕ್ಕೆ ಚಾಲನೆ ನೀಡಿದೆ. ಕಾರ್ಮಿಕರು ಈಗಾಗಲೇ ಹಾರೆ ಮತ್ತು ಪಿಕಾಸಿ ಉಪಕರಣಗಳೊಂದಿಗೆ ನೆಲ ತೆಗೆಯುವ ಕೆಲಸದಲ್ಲಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ನಡೆದಿದ್ದ ಏನು ?ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ದೂರುದಾರನು ಆರೋಪಿಸಿದ್ದ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ SIT ಅಧಿಕಾರಿಗಳು ಮಹಜರು ನಡೆಸಿದ್ದರು. ಮುಖಕ್ಕೆ ಮುಸುಕು ಹಾಕಿಕೊಂಡಿದ್ದ ದೂರುದಾರನು ತೋರಿಸಿದ ಪ್ರತಿ ಸ್ಥಳದ ಜಿಪಿಎಸ್ ಗುರುತುಗಳನ್ನು ಅಧಿಕಾರಿಗಳು ದಾಖಲಿಸಿಕೊಂಡು, ಕೆಂಪು ರಿಬ್ಬನ್ ಹಾಕಿ ಗುರುತಿಸಿದ್ದಾರೆ. ಪ್ರತಿ […] - [ನಾಲ್ಕು ದಿನಗಳ ಸಿಎಂ ಸಭೆ: ಶಾಸಕರಿಗೆ 50 ಕೋಟಿ ಅನುದಾನ](https://varthaman.in/four-day-cm-meeting-50-crore-grant-for-mlas/): ಬೆಂಗಳೂರು: ರಾಜ್ಯದ ಅಭಿವೃದ್ಧಿ ಕಾರ್ಯಗಳ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ)ರಿಂದ ನಾಲ್ಕು ದಿನಗಳ ಕಾಲ ಸಚಿವರು ಮತ್ತು ಶಾಸಕರೊಂದಿಗೆ ಜಿಲ್ಲಾವಾರು ಸಭೆ ನಡೆಸಲಿದ್ದಾರೆ. ಈ ಸಭೆಗಳ ಪ್ರಾರಂಭವನ್ನು ಅವರು ತಮ್ಮ ತವರು ಜಿಲ್ಲೆ ಮೈಸೂರಿನಿಂದಲೇ ಇಂದು ಸಂಜೆ ಆರಂಭಿಸಲಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರೊಂದಿಗೆ ಸಭೆ ನಡೆಸಿದ ಬಳಿಕ, ಈಗ ಸಿಎಂ ಮುನ್ನಡೆಯಲ್ಲಿ ಈ ಮಹತ್ವದ ಸಮಾಲೋಚನೆ ನಡೆಯಲಿದೆ. ಮುಖ್ಯಮಂತ್ರಿಗಳು ಈಗಾಗಲೇ ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಈ ಅನುದಾನದ ಬಳಕೆ, ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿ ಶಾಸಕರೊಂದಿಗೆ ಸುಮಾರು 10 ನಿಮಿಷಗಳ ಕಾಲ ಸಿಎಂ ವೈಯಕ್ತಿಕವಾಗಿ ಚರ್ಚೆ ನಡೆಸಲಿದ್ದು, ಕ್ಷೇತ್ರದ ಪ್ರಗತಿಯ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.ಇದನ್ನು ಓದಿ –ಮೈಸೂರು: ಕುಟುಂಬ ಕಲಹಕ್ಕೆ ಬೇಸತ್ತ ಪೊಲೀಸ್ ಪೇದೆ ಆತ್ಮಹತ್ಯೆ ಈ ಕುರಿತಂತೆ ಸಿಎಂ ಆರ್ಥಿಕ ಸಲಹೆಗಾರ […] - [ಮೈಸೂರು: ಕುಟುಂಬ ಕಲಹಕ್ಕೆ ಬೇಸತ್ತ ಪೊಲೀಸ್ ಪೇದೆ ಆತ್ಮಹತ್ಯೆ](https://varthaman.in/mysore-a-police-constable-committed-suicide-because-of-family-feud/): ಮೈಸೂರು: ಕುಟುಂಬ ಕಲಹದಿಂದ ಬೇಸತ್ತ ಪೊಲೀಸ್ ಪೇದೆ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬೀರೇಶ್ (37) ಎಂದು ಗುರುತಿಸಲಾಗಿದೆ. ಅವರು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ನಿವಾಸಿಯಾಗಿದ್ದು, ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆದಲ್ಲಿ ಪೊಲೀಸ್ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಬೀರೇಶ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ನಂಜನಗೂಡಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿದ್ದರು. ತೀವ್ರ ಮನಸ್ತಾಪಕ್ಕೆ ಒಳಪಟ್ಟ ಬೀರೇಶ್ ತಮ್ಮ ಮನೆಯಲ್ಲಿ ಕೊಠಡಿಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ತಿಳಿದು ಬಂದ ತಕ್ಷಣ ನಂಜನಗೂಡು ತಾಲೂಕಿನ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಪಿಎಸ್‌ಐ ಕೃಷ್ಣಕಾಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನು ಓದಿ –ಆಪರೇಷನ್ ಮಹಾದೇವ್ – ಪಹಲ್ಗಾಮ್ ದಾಳಿಯ ಮೂವರು ಉಗ್ರರ ಎನ್‌ಕೌಂಟರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ […] - [ಆಪರೇಷನ್ ಮಹಾದೇವ್ – ಪಹಲ್ಗಾಮ್ ದಾಳಿಯ ಮೂವರು ಉಗ್ರರ ಎನ್‌ಕೌಂಟರ್](https://varthaman.in/operation-mahadev-encounter-of-three-terrorists-of-pahalgam-attack/): ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮಾಸ್ಟರ್‌ಮೈಂಡ್ ಆಗಿದ್ದ ಉಗ್ರ ಸುಲೆಮಾನ್ ಶಾ ನನ್ನು ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ‘ಆಪರೇಷನ್ ಮಹಾದೇವ್’ ಎಂದು ಕರೆಯಲ್ಪಟ್ಟ ಈ ಕಾರ್ಯಾಚರಣೆ ಸೋಮವಾರದಂದು ಶ್ರೀನಗರದ ಡಚ್ಚಿಗಾಂ ರಾಷ್ಟ್ರೀಯ ಉದ್ಯಾನವನದ ಸಮೀಪದ ದಾರದ ಲಿಡ್‌ವಾಸ್ ಪ್ರದೇಶದ ಕೊಂಬುಕುಡಲ ಗುಡ್ಡ ಪ್ರದೇಶದಲ್ಲಿ ಜರುಗಿತು. ಮಧ್ಯಾಹ್ನ 11 ಗಂಟೆಗೆ ಆರಂಭವಾದ ಈ ಎನ್‌ಕೌಂಟರ್‌ಗಿಗೆ ವಿದೇಶಿ ಉಗ್ರರ ಹಾಜರಾತಿಯ ಖಚಿತ ಮಾಹಿತಿಯ ನಂತರ ಚಾಲನೆ ನೀಡಲಾಯಿತು. ಕಾರ್ಯಾಚರಣೆ ಜರುಗಿದ ಪ್ರದೇಶವು ಝಬರ್ವಾನ್ ಮತ್ತು ಮಹಾದೇವ್ ಪರ್ವತ ಶ್ರೇಣಿಗಳ ಮಧ್ಯದ ದಟ್ಟ ಅರಣ್ಯವಾಗಿದ್ದು, ಅದರಿಂದಲೇ ಕಾರ್ಯಾಚರಣೆಗೆ “ಮಹಾದೇವ್” ಎಂಬ ಹೆಸರನ್ನು ಇಡಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ಅಧಿಕೃತವಾಗಿ, “ಮೂರು ಉಗ್ರರು ತೀವ್ರ ಗುಂಡಿನ ಚಕಮಕಿಯಲ್ಲಿ ಹತ್ಯೆಗೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ” ಎಂದು ಸ್ಪಷ್ಟಪಡಿಸಿದೆ. ಭೂಸೇನೆಗೆ ಬೆಂಬಲ ನೀಡಲು ಹೆಚ್ಚುವರಿ ಪಡೆಗಳು ಹಾಗೂ ಆಕಾಶ ನಿಗಾವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಆಪರೇಷನ್ ಇನ್ನೂ ಮುಕ್ತಾಯವಾಗದ ಹಿನ್ನೆಲೆ, ಪೊಲೀಸರು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವುದಿಲ್ಲ […] - [ರಮ್ಯಾ ವಿರುದ್ಧ ವಿಜಯಲಕ್ಷ್ಮಿಯಿಂದ ದೂರು](https://varthaman.in/vijayalakshmi-files-complaint-against-ramya/): ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಟಿ ರಮ್ಯಾ (Ramya) ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂಬ ಆಸೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು (Darshan Fans) ಅವರ ವಿರುದ್ಧ ಅಶ್ಲೀಲ ಕಮೆಂಟ್‌ಗಳು ಮತ್ತು ಸಂದೇಶಗಳನ್ನು ಮಾಡಿದ್ದು, ಇದರಿಂದ ಕೋಪಗೊಂಡ ರಮ್ಯಾ, ದೂರು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಕೂಡ ಕಾನೂನು ಹೋರಾಟಕ್ಕೆ ಇಳಿದು, ರಮ್ಯಾ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ವಿಜಯಲಕ್ಷ್ಮಿಯ ಹೇಳಿಕೆಗೆ ಅನುಸಾರ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ರಮ್ಯಾ ಕಾಮೆಂಟ್ ಮಾಡಿರುವುದು ಸರಿಯಲ್ಲ ಮತ್ತು ಇದು ಕಾನೂನು ಬಾಹಿರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ರಮ್ಯಾ ಇನ್ಸ್ಟಾಗ್ರಾಂ ಮೂಲಕ, ತಮ್ಮ ಖಾತೆಗೆ ಬಂದಿದ್ದ ಅಶ್ಲೀಲ ಸಂದೇಶಗಳನ್ನು ಬಹಿರಂಗಪಡಿಸಿ, ಈ ಕಮೆಂಟ್‌ಗಳು ದರ್ಶನ್ ಅಭಿಮಾನಿಗಳಿಂದ ಬಂದಿರುವುದಾಗಿ ಹೇಳಿದ್ದಾರೆ. ರಮ್ಯಾ ಹೇಳುವಂತೆ, ಈ ಸಂದೇಶಗಳು ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳಿಗೆ ಸಮಾನವಾಗಿದೆ. ಈ ರೀತಿಯ […] - [ನಾಗರ ಚೌತಿ ಮತ್ತು ಪಂಚಮಿ](https://varthaman.in/nagar-chauthi-and-panchami/): ಶ್ರಾವಣ ಮಾಸ ಎಂದರೆ ಹಬ್ಬಗಳ ಸಾಲು ಸಾಲು. ಇದರಲ್ಲಿ ಮೊದಲು ಬರುವುದು ಪಂಚಮಿ. ನಾಗರ ಅಮಾವಾಸ್ಯೆಯ ನಂತರ ಬರುವ ನಾಲ್ಕನೇ ದಿನವನ್ನು ನಾಗರ ಚೌತಿ ಎಂದೂ, ಐದನೆಯ ದಿನವನ್ನು ನಾಗರ ಪಂಚಮಿ ಎಂದು ಕರೆಸಿಕೊಳ್ಳುವ ಈ ಹಬ್ಬವನ್ನು ಜನಪದರು ಜೋಕಾಲಿ ಹಬ್ಬ ಎಂದು ಕೂಡ ಕರೆಯುತ್ತಾರೆ. ನಮ್ಮ ಜನಪದರ ಬದುಕಿನಲ್ಲಿ ಹೊಲ ಗದ್ದೆ ಪೈರುಗಳು ಪಶು ಪಕ್ಷಿ ಪ್ರಾಣಿಗಳು ಎಲ್ಲವೂ ಪ್ರಕೃತಿಯ ಕೊಡುಗೆಯೇ. ಹೊಲ ಗದ್ದೆಯಲ್ಲಿ ತಾನು ಸಾಕಿದ ಪಶು ಪಕ್ಷಿಗಳೊಂದಿಗೆ ದುಡಿಯುತ್ತಾ ಅವುಗಳಿಗೆ ಮತ್ತು ತನಗೆ ಬೇಕಾದ ಆಹಾರವನ್ನು ಸಂಪಾದಿಸುವ ರೈತನ ಒಡನಾಡಿಗಳೇ ಎತ್ತುಗಳು. ತನ್ನ ರೈತಾಪಿ ಬದುಕಿನ ಎಲ್ಲಾ ಹೊಲದ ಕೆಲಸಗಳಿಗೆ ಆತನಿಗೆ ಎತ್ತುಗಳು ಬೇಕೇ ಬೇಕು. ,ಹಸುಗಳು, ಕೋಳಿ ಕುರಿ ನಾಯಿ ಮತ್ತು ಬೆಕ್ಕುಗಳನ್ನು ಕೂಡ ಆತ ಸಾಕುತ್ತಾನೆ. ತನ್ನ ಮನೆಯ ಹಾಲು ಮೊಸರಿಗಾಗಿ ಆತ ಹಸುಗಳನ್ನು ಅವಲಂಬಿಸಿದರೆ, ನಾಯಿ ಆತನ ಜೊತೆ ಹೊಲ ಮತ್ತು ಮನೆಯನ್ನು ಕಾಯಲು ಬೇಕೇ ಬೇಕು. ಕೋಳಿ ಕುರಿಗಳು ಕೂಡ ಆತನ […] - [ತಾಯ್ತಂದೆಯರ ಪ್ರೀತಿಗೆ ಸಮವುಂಟೇ?](https://varthaman.in/is-it-equal-to-the-love-of-parents/): ಅದೊಂದು ದಿನ ರವಿಯ (ಹೆಸರು ಬದಲಿಸಲಾಗಿದೆ) ತಾಯಿ ತೀರಿಕೊಂಡರು ಎಂಬ ಸುದ್ದಿ ಕಿವಿಗೆ ಬಿತ್ತು. ರವಿ ನಮ್ಮ ಸಹೋದ್ಯೋಗಿ. ನನ್ನ ಜೊತೆ ಕ್ನಮ್ಮ ಶಾಖೆಯಲ್ಲಿ ಕೆಲಸ ಮಾಡುತ್ತಿಲ್ಲ. ಹತ್ತಿರದ ಶಾಖೆ ಒಂದರಲ್ಲಿ ಅವನ ಕೆಲಸ. ಆ ಹುಡುಗನ ಸ್ನೇಹಿತ ನನ್ನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆಗಾಗ ಬರುತ್ತಲೇ ಇದ್ದ. ಹಾಗಾಗಿ ನನಗೂ ಪರಿಚಿತನೇ. ಹಾಗೆಂದು ಅವನ ವೈಯಕ್ತಿಕ ವಿಚಾರಗಳೆಲ್ಲ ನನಗೆ ಗೊತ್ತಿಲ್ಲ. ನಾನು ಬಹುತೇಕ ಆ ಮೂರೂ ಹುಡುಗರ ತಾಯಿಯ ವಯಸ್ಸು. ಪುಟ್ಟ ಹುಡುಗರಲ್ಲವಾ? ಹಾಗಾಗಿ ರವಿ ತುಂಬಾ ತಮಾಷೆಯಾಗಿ ಕಂಡಾಗಲೆಲ್ಲ ಇಡೀ ಮೈಬಗ್ಗಿಸಿ ಕೈಕಟ್ಟಿ ನಮಸ್ಕಾರ ಎಂದು ಹೇಳುವುದುಂಟು. ನಾನು ಮುಂಬೈಗೆ ಹೋಗುವಾಗ ಆ ಹುಡುಗ ’ಅಲ್ಲಿಗೆ ಹೋದರೆ ನನಗೆ ಒಂದು ಶೂ ಬೇಕು. ತಂದು ಕೊಡಿ ಇಲ್ಲೆಲ್ಲೂ ಸಿಗುವುದಿಲ್ಲ. ದುಡ್ಡು ನಾನು ಕೊಡುತ್ತೇನೆ’ ಎಂದು ಹೇಳಿದ. ಇಲ್ಲಿ ಸಿಗದ್ದು ಅಲ್ಲೇನು ಸಿಗುತ್ತದೆ ಎಂಬ ಅಚ್ಚರಿಯಲ್ಲಿ ಅದನ್ನೇ ಕೇಳಿದ್ದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ ಆಗಲಿ, ಬ್ರಾಂಡೆಡ್ ಐಟಂಗಳ ಬಗೆಗೆಲ್ಲಾ ನಾ ಹೆಚ್ಚು […] - [ಯಾವ ಮೋಹನ‌ ಮುರಳಿ ಕರೆಯಿತೋ…..!](https://varthaman.in/a-story-to-self/): ಈ ನಮ್ಮ‌ ಮನಸ್ಸು ಎಂಥಾ ವಿಚಿತ್ರ ಅಂದ್ರೆ ಸದಾ‌ ನಮ್ಮ‌ಜೊತೆಯಲ್ಲೇ ನಮ್ಮೆದುರೇ ಇರುವವರಿಗಿಂತ ದೂರದಲ್ಲೆಲ್ಲೋ ಇರುವವರನ್ನು ನೆನೆದು ಒಮ್ಮೊಮ್ಮೆ ತುಂಬಾ ಭಾವುಕವಾಗಿ ಬಿಡುತ್ತೆ. ಹಾಂ…ದೂರದಲ್ಲಿರುವವರೆಂದರೆ ಅವರು ನಮಗೆ ಚೆನ್ನಾಗಿ ಗೊತ್ತಿರಲೇಬೇಕೆಂದೇನೂ‌ ಅಲ್ಲ ಅಥವಾ ಅವರು ನಮ್ಮ ಬಂಧುಗಳು ಸ್ನೇಹಿತರೂ ಆಗಬೇಕೆಂದೇನೂ ಇಲ್ಲ. ಎಲ್ಲೋ ನೋಡಿದ, ಕೇಳಿದ ಅಥವಾ ಇದುವರೆಗೂ ನೋಡಿಯೇ‌ ಇಲ್ಲದ ವ್ಯಕ್ತಿಗಳೂ, ಅವರ ವ್ಯಕ್ತಿತ್ವಗಳ ಒಂದು ಸಣ್ಣ‌ ನೆನಪಿನ‌ ಫ಼್ಲಾಷ್ ಸಹಾ ನಮ್ಮೊಳಗೆ ಒಂಥರಾ ಪಾಸಿಟೀವ್ ವೈಬ್ಸ್ ಹುಟ್ಟುಹಾಕಬಲ್ಲದು ! ಅದೆಂತಹಾ ಪಾಸಿಟೀವ್ ವೈಬ್ಸ್ ಗಳೆಂದರೆ ಜೀವನದಲ್ಲಿ ನಿರಾಶೆಯ ಕ್ಷಣಗಳೇ ಕಣ್ಣೆದುರಿಗಿದ್ದಾಗ, ನೋವುಗಳೇ ಸುತ್ತುವರೆದಾಗ, ಬದುಕಿನ ನಿತ್ಯ ಜಂಜಾಟಗಳೇ ಜಡಿದು ಕೂರಿಸಿರುವಾಗ, ನಮ್ಮವರೇ ನಮಗೆ‌ ಹಿತಶತ್ರುಗಳೆಂದೆನಿಸಿದಾಗ , ಬದುಕಲ್ಲಿ ಅಂದುಕೊಂಡ ಯಾವುದೂ ಕೈ‌ಹಿಡಿಯದೇ ಹೋದಾಗ, ಹತ್ತಿರದವರಿಗೇ ನೀವೇನೆಂದು ಅರ್ಥವಾಗದಾಗ, ನಂಬಿದವರೇ ಬೆನ್ನ‌ಹಿಂದೆ ತಿವಿದಾಗ ಅಥವಾ ಇದಾವುದಲ್ಲದಿದ್ದರೂ ತಥಾಕಥಿತ ಬದುಕಿನ ಏಕತಾನತೆಯಿಂದ ಕಿಂಚಿತ್‌ ವಿಮುಖನಾಗಿ ನೋಡಿದಾಗ, ಆಕಸ್ಮಾತ್ ಮನದೊಳಗೆ ಮೂಡುವ ಇಂತಹ ವ್ಯಕ್ತಿಗಳ ನೆನಪುಗಳು, ಯೋಚನೆಗಳು, ಅಥವಾ ಅಂದುಕೊಳ್ಳದೇ ಮೂಡಬಹುದಾದ ಸ್ಮರಣೆಯೇ […] - [ಮಡಿಕೇರಿ ಬಳಿ ಕಾರು-ಲಾರಿ ಡಿಕ್ಕಿ: ನಾಲ್ವರು ಯುವಕರು ದುರ್ಮರಣ](https://varthaman.in/car-lorry-collision-near-madikeri-four-youths-die/): ಸುಳ್ಯ (ದಕ್ಷಿಣ ಕನ್ನಡ): ಮಡಿಕೇರಿ ತಾಲೂಕಿನ ದೇವರಕೊಲ್ಲಿ ಹೆದ್ದಾರಿಯ ಕೊಯನಾಡು ಎಂಬಲ್ಲಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ ದುರ್ಘಟನೆ ಶುಕ್ರವಾರ ನಡೆದಿದೆ. ಮೃತಪಟ್ಟವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ನಿಹಾದ್, ರಿಸ್ವಾನ್, ರಾಶಿಬ್ ಹಾಗೂ ರಿಶು ಎಂದು ಗುರುತಿಸಲಾಗಿದೆ. ಈ ಯುವಕರು ಉಳ್ಳಾಲದಿಂದ ಕಾರಿನಲ್ಲಿ ಕೊಡಗು ಕಡೆಗೆ ತೆರಳುತ್ತಿದ್ದರು. ಈ ವೇಳೆ ಕೊಯನಾಡು ಬಳಿ ಕಾರು ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ, ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತದೇಹಗಳನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಕೋಡಗು ಜಿಲ್ಲೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಈ ಅಪಘಾತದ ಹಿನ್ನೆಲೆಯಲ್ಲಿ ದಟ್ಟಣೆಯು ನಿರ್ಮಾಣವಾಗಿದ್ದು, ಕೆಲಕಾಲ ಟ್ರಾಫಿಕ್ ಅಸ್ತವ್ಯಸ್ತವಾಯಿತು. - [ಶ್ರಾವಣ ಮಾಸ ಬಂದಾಗ](https://varthaman.in/when-the-month-of-shravan-arrives/): ಶ್ರಾವಣ ಬಂತು ಕಾಡಿಗೆ..ಬಂತು ನಾಡಿಗೆ ಎಂದು ವರಕವಿ ಬೇಂದ್ರೆಯವರು ಬರೆದು ಹಾಡಿದ್ದಾರೆ. ಆಷಾಢದ ಮಳೆ ಬಿರುಸಾದ ಹನಿಗಳನ್ನು ಹೊತ್ತು ತಂದು ರೈತನಿಗೆ ಉಳುಮೆ ಕಾರ್ಯಗಳನ್ನು ನೆರವೇರಿಸಲು ಸಹಾಯ ಮಾಡಿದರೆ ಉತ್ತು ಬಿತ್ತ ರೈತನಿಗೆ ಶ್ರಾವಣ ಮಾಸದಲ್ಲಿ ತುಸು ವಿರಾಮ. ನಿಧಾನವಾಗಿ ಬೀಜ ಮೊಳಕೆಯೊಡೆದು ಸಸಿಯಾಗಿ ಪೈರೊಡೆಯುವ ಕಾಲ. ನೀರಾವರಿ ಹೊಲಗಳೇ ಇರಲಿ ಹೊರವೊಲಗಳೇ ಇರಲಿ ಆಗಾಗ ಮಳೆ ಬರುವುದರಿಂದ ಮೊಳಕೆಯೊಡೆದ ಸಸಿಗೆ ಪ್ರಕೃತಿಯೇ ನೀರುಣಿಸುವ ಕಾಲ. ಬೆಳೆಗೆ ನೀರು ಕಟ್ಟುವ,ನೀರನ್ನು ಹಾಯಿಸುವ ಕೆಲಸ ಕೂಡ ಅಷ್ಟಾಗಿ ಇರುವುದಿಲ್ಲ. ಶ್ರಾವಣ ಮಾಸದಲ್ಲಿ ಇಡೀ ಪ್ರಕೃತಿಯು ಹಸಿರಿನ ಉಡುಗೆ ತೊಟ್ಟು ನಳನಳಿಸುತ್ತದೆ. ಭೂರಮೆಗೆ ವರುಣ ಸಿಂಚನದಿಂದಾಗಿ ನವ ಮದುಮಗಳ ಕಳೆ ಆವರಿಸಿರುತ್ತದೆ. ಹಸಿರಿನ ಎಲೆಗಳಲ್ಲೂ ಕೂಡ ಒಂದು ಬಗೆಯ ಆಕರ್ಷಣೆ. ವನ ದೇವತೆ ಹಸಿರಿನಿಂದ ಕಂಗೊಳಿಸಿದರೆ ಆ ಲಕ್ಷಣವೇ ಬೇರೆ. ಇನ್ನು ಎಲ್ಲಾ ಗಿಡ ಮರಗಳಲ್ಲೂ ನಾನಾ ವಿಧದ ಹೂ, ಪುಷ್ಪಗಳು ಪಲ್ಲವಿಸಿ ಘಮವನ್ನು ಸೂಸುತ್ತವೆ. ಹಣ್ಣುಗಳ. ಭಾರದಿಂದ ಗಿಡಗಳು ತಲೆದೂಗುತ್ತವೆ. ಇದು ಪ್ರಕೃತಿಯ […] - [ಓಟ್ಸ್ ಹೇಗೆ ತಿಂದರೆ ಒಳ್ಳೆಯದು?](https://varthaman.in/best-way-to-eat-oats/): ಹೆಚ್ಚುತ್ತಿರುವ ದೇಹದ ತೂಕವನ್ನು ಕಡಿಮೆ ಮಾಡಲು ಜನ ನಿತ್ಯ ಒಂದಿಲ್ಲೊಂದು ಹರಸಾಹಸ ಪಡುತ್ತಲೇ ಇರುತ್ತಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರುವುದರ ಜೊತೆಗೆ ದೀರ್ಘ ನಡಿಗೆ ಮತ್ತು ಡಯಟ್‌ಗಳನ್ನು ಅನುಸರಿಸುತ್ತಾರೆ. ನೀವೂ ಕೂಡ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ಎಲ್ಲಾ ಕೆಲಸಗಳನ್ನು ಮಾಡಿ ಸುಸ್ತಾಗಿದ್ದರೆ ಮತ್ತು ಯಾವುದೇ ಪ್ರಯೋಜನವನ್ನು ಪಡೆಯದಿದ್ದರೆ, ಇಂದಿನಿಂದಲೇ ನಿಮ್ಮ ಉಪಹಾರದಲ್ಲಿ ಓಟ್ಸ್ ಬಳಕೆ ಶುರು ಮಾಡಿ. ಕೇವಲ ತೂಕ ಇಳಿಕೆ ಮಾತ್ರವಲ್ಲ, ಮುಖದ ಸೌಂದರ್ಯಕ್ಕೂ ಈ ಆಹಾರ ತುಂಬ ಒಳ್ಳೆಯದು. ಏನಿದು ಒಟ್ಸ್ ? ಓಟ್ಸ್ ಎಂಬುದು ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ರಚಲಿತವಾಗುತ್ತಿರುವ ಆಹಾರವಾಗಿದ್ದು ಬಹುತೇಕ ನೋಡಲಿಕ್ಕೆ ಗೋಧಿಯ ಕಾಳನ್ನು ಬಲವಂತವಾಗಿ ಕಿರಿದಾಗಿಸಿ ಅಕ್ಕಿಕಾಳಿನ ರೂಪಕ್ಕೆ ತಂದಂತೆ ಇರುತ್ತದೆ. ಗೋಧಿ ಕಾಳಿಗಿಂತಲೂ ಕೊಂಚ ಹೆಚ್ಚೇ ದೃಢವಾಗಿರುವ ಕಾರಣ ಇದನ್ನು ರವೆಯಾಗಿಸಿ ಅಥವಾ ಚಪ್ಪಟೆ ಅವಲಕ್ಕಿ ಯಾಗಿಸಿಯೇ ಸೇವನೆಗೆ ಬಳಸಲಾಗುತ್ತಿದೆ ಓಟ್ಸ್ ನಲ್ಲಿ ಇರುವಂತಹ ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಗಳು ಹೃದಯಕ್ಕೆ ಲಾಭಕಾರಿ ಮತ್ತು ಇದರಲ್ಲಿನ ಆಹಾರದ ನಾರಿನಾಂಶವು ಕೆಟ್ಟ […] - [ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3.5 ಕೆಜಿ ಚಿನ್ನ ಪತ್ತೆ](https://varthaman.in/3-5-kg-gold-found-at-bangalore-airport/): ಬೆಂಗಳೂರು: ದುಬೈನಿಂದ ಬಂದ ಪ್ಯಾಸೆಂಜರ್‌ನೊಬ್ಬರ ಬ್ಯಾಗ್‌ಗೆ 3.5 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ಅಂಟಿಸಿ, ಸ್ಮಗ್ಲರ್ ಪರಾರಿಯಾಗಿರುವ ಘಟನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ನಡೆದಿದೆ. ಪ್ಯಾಸೆಂಜರ್ ತನ್ನ ಟ್ರ್ಯಾಲಿ ಬ್ಯಾಗ್ ಎಳೆದುಕೊಂಡು ಹೋಗುತ್ತಿರುವಾಗ, ಚಿನ್ನದಿಂದ ತುಂಬಿದ ಒಂದು ಬ್ಯಾಗ್ ಕೆಳಗೆ ಬಿದ್ದಿದ್ದು, ಅದನ್ನು ನೋಡಿ ಆ ವ್ಯಕ್ತಿ ಶಂಕೆತೋರಿ ಡಿಆರ್‌ಐ (DRI) ಅಧಿಕಾರಿಗಳ ಬಳಿ ಕರೆದೊಯ್ದಿದ್ದಾನೆ. ಬ್ಯಾಗ್‌ ಪರಿಶೀಲನೆ ನಡೆಸಿದ ಅಧಿಕಾರಿಗಳು ಅದರಲ್ಲಿ 3.5 ಕೆಜಿ ಚಿನ್ನದ ಬಿಸ್ಕೆಟ್‌ಗಳು ಇರುವುದನ್ನು ಪತ್ತೆಹಚ್ಚಿದ್ದಾರೆ. ನಂತರ ಆ ಪ್ಯಾಸೆಂಜರ್‌ನ್ನು ವಿಚಾರಣೆ ನಡೆಸಿದಾಗ, ಚಿನ್ನಕ್ಕೂ ತಾನು ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಅದರ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದ್ದು, ಸ್ಮಗ್ಲರ್ ಯಾರೋ ಪ್ಯಾಸೆಂಜರ್‌ನ ಬ್ಯಾಗ್‌ಗೆ ಚಿನ್ನ ಅಂಟಿಸಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ, ಡಿಆರ್‌ಐ ಅಧಿಕಾರಿಗಳು ಸ್ಮಗ್ಲರ್ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ವ್ಯವಸ್ಥೆಯ ಕುರಿತು ಹೊಸ ಚರ್ಚೆಗೆ ಕಾರಣವಾಗಿದ್ದು, ಅಧಿಕಾರಿಗಳು ಇನ್ನಷ್ಟು ಕಡುಗಟ್ಟಿದ ತಪಾಸಣಾ […] - [ಗರ್ಭಿಣಿಯ ಅನುಮಾನಾಸ್ಪದ ಸಾವು – ಪತಿ ನಾಪತ್ತೆ](https://varthaman.in/pregnant-womans-suspicious-death-husband-missing/): ಬೆಂಗಳೂರು, ಜು. 24: ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗರ್ಭಿಣಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆ ಸುಮನಾ (22) ಅವರು ಉತ್ತರ ಪ್ರದೇಶ ಮೂಲದವರಾಗಿದ್ದು, ತಮ್ಮ ಪತಿ ಶಿವಂ ಜೊತೆಗೆ ಥಳಿಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೂರು ದಿನಗಳ ಹಿಂದೆ ಸೊಮನಾ ಮೃತಪಟ್ಟಿದ್ದು, ಶವದ ಬಳಿ ಪತಿ ಇಬ್ಬರು ದಿನ ಕಾಲ ಕಳೆದಿದ್ದಾನೆ ಎಂಬ ಅಘಾತಕಾರಿ ಮಾಹಿತಿ ಲಭ್ಯವಾಗಿದೆ. ಮೊದಲ ದಿನ ಪತಿ ಕೆಲಸಕ್ಕೆ ಹೋಗಿ ಬಂದು ಶವದ ಜೊತೆಗೆ ರಾತ್ರಿ ಕಳೆದಿದ್ದಾನೆ. ಎರಡನೇ ದಿನ ರಾತ್ರಿ ಮದ್ಯಪಾನ ಮಾಡಿ, ಪತ್ನಿಯ ಮೃತದೇಹದ ಮುಂದೆ ಮೊಟ್ಟೆ ಪಲ್ಯ ತಿಂದು ಊಟ ಮಾಡಿದಿದ್ದಾನೆ. ನಿನ್ನೆ ಮಧ್ಯಾಹ್ನದಿಂದ ಮೃತದೇಹದಿಂದ ದುರ್ವಾಸನೆ ಬರುತ್ತಿದ್ದುದರಿಂದ ನೆರೆಹೊರೆಯವರು ಅನುಮಾನಿಸಿ ಮನೆಯ ಒಳಗೆ ಹೋಗಿ ನೋಡಿದಾಗ ಸೊಮನಾ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಸಮಯದಲ್ಲಿ ಪತಿ ಶಿವಂ ನಾಪತ್ತೆಯಾಗಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. […] - [ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ](https://varthaman.in/water-levels-of-major-reservoirs-in-the-state/): ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ತೀವ್ರವಾಗಿ ಮುಂದುವರೆದಿರುವ ಪರಿಣಾಮ ಹಲವೆಡೆ ನದಿಗಳು, ಕೆರೆ-ಕಟ್ಟೆಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂದು (ಜುಲೈ 24) ನವೀಕರಿಸಲಾಗಿದೆ. ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳ ಜನಜೀವನಕ್ಕೆ ಮಹತ್ವಪೂರ್ಣವಾದ ಕೆಆರ್‌ಎಸ್ ಜಲಾಶಯ ಈಗಾಗಲೇ ಭರ್ತಿಯಾಗುತ್ತಿದೆ. ಜತೆಗೆ ಕಬಿನಿ, ತುಂಗಭದ್ರಾ, ಆಲಮಟ್ಟಿ, ಲಿಂಗನಮಕ್ಕಿ ಸೇರಿದಂತೆ ಹಲವು ಪ್ರಮುಖ ಜಲಾಶಯಗಳು ತುಂಬುತ್ತಾ ಹೋಗುತ್ತಿವೆ. ಮುಂಗಾರಿನಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದ್ದು, ನದಿಗಳ ಹಟ್ಟುಮಟ್ಟಕ್ಕೂ ಬಹಳದೂರ ಮೀರಿ ಹರಿವು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆ ಎಚ್ಚರಿಕೆಯಿಂದ ಇರಬೇಕಾಗಿದೆ. ಇದನ್ನು ಓದಿ –ಲೋಕಾಯುಕ್ತ ದಾಳಿ: ಮಾಜಿ ಪಿಎಸ್ ಮನೆ ಮೇಲೆ ಧಾಳಿ ಇಲ್ಲಿವೆ ಪ್ರಮುಖ 10 ಜಲಾಶಯಗಳ ಜುಲೈ 24ರ ನೀರಿನ ಮಟ್ಟದ ವಿವರಗಳು: - [ಲೋಕಾಯುಕ್ತ ದಾಳಿ: ಮಾಜಿ ಪಿಎಸ್ ಮನೆ ಮೇಲೆ ಧಾಳಿ](https://varthaman.in/lokayukta-attack-former-pss-house-attacked/): ಬೆಂಗಳೂರು:ಸಚಿವ ಬೈರತಿ ಸುರೇಶ್ ಅವರ ಮಾಜಿ ವೈಯಕ್ತಿಕ ಕಾರ್ಯದರ್ಶಿ ಮಾರುತಿ ಬಗಲಿ ನಿವಾಸದ ಮೇಲೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳು ಅಚಾನಕ್ ದಾಳಿ ನಡೆಸಿ, ಭಾರಿ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಸುಮಾರು 8 ನಿವೇಶನಗಳು, 5 ಮನೆಗಳು ಹಾಗೂ 19 ಎಕರೆ ಜಮೀನಿನ ದಾಖಲೆ ಪತ್ರಗಳು ದೊರಕಿದ್ದು, ಇದಲ್ಲದೆ ಕೋಟ್ಯಂತರ ಮೌಲ್ಯದ ಆಸ್ತಿ ಮಾಹಿತಿ ಲಭ್ಯವಾಗಿದೆ. ಮಾರುತಿ ಬಗಲಿ ಇತ್ತೀಚೆಗೆ, 3 ತಿಂಗಳ ಹಿಂದೆ, ಬೈರತಿ ಸುರೇಶ್ ಅವರ ಪಿಎಸ್ ಸ್ಥಾನದಿಂದ ರಾಜೀನಾಮೆ ನೀಡಿದ್ದರು. ಅವರು ಸುಮಾರು 2 ವರ್ಷಗಳ ಕಾಲ ಸಚಿವರ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಮಧ್ಯೆ, ರಾಜ್ಯದ ಹಲವು ಭಾಗಗಳಲ್ಲಿ ಭ್ರಷ್ಟಾಚಾರದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ಕೂಡ ವಶಪಡಿಸಿಕೊಳ್ಳುತ್ತಿದ್ದಾರೆ. - [ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆ](https://varthaman.in/explosive-material-found-at-kalasipalya-bus-stand/): ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಬೃಹತ್ ಬಸ್ ನಿಲ್ದಾಣಗಳಲ್ಲಿ ಒಂದಾದ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿಸುವ ರೀತಿಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಈ ಕುರಿತಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬಸ್ ನಿಲ್ದಾಣದ ಶೌಚಾಲಯದ ಹೊರಭಾಗದಲ್ಲಿ ಬಿಟ್ಟುಕೊಡಲಾಗಿದ್ದ ಬ್ಯಾಗ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್‌ಗಳು ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಾಂಬ್ ಪತ್ತೆ ದಳ, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ಸಂಪೂರ್ಣ ಪ್ರದೇಶವನ್ನು ಸುತ್ತುವರಿದು ತಪಾಸಣೆ ನಡೆಸಲಾಯಿತು. ಸ್ಫೋಟಕ ವಸ್ತುಗಳನ್ನು ಸ್ಥಳಕ್ಕೆ ಯಾರಿಂದ ತಂದಲಾಗಿದೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆಯು ಶೋಧ ಕಾರ್ಯ ನಡೆಸುತ್ತಿದೆ. ಶಂಕಿತರನ್ನು ಪತ್ತೆಹಚ್ಚಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಪ್ರಾರಂಭವಾಗಿದೆ.ಇದನ್ನು ಓದಿ –ಜುಲೈ 25 ರಿಂದ 27ರವರೆಗೆ ಸೆಸ್ಕ್ ಆನ್‌ಲೈನ್‌ ಸೇವೆಗಳು ಅಲಭ್ಯ ಈ ಕುರಿತು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಗಂಭೀರ ತನಿಖೆ ಮುಂದುವರಿದಿದೆ. ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ವಸ್ತುಗಳ ಬಗ್ಗೆ ತಕ್ಷಣ […] - [ಜುಲೈ 25 ರಿಂದ 27ರವರೆಗೆ ಸೆಸ್ಕ್ ಆನ್‌ಲೈನ್‌ ಸೇವೆಗಳು ಅಲಭ್ಯ](https://varthaman.in/cesc-online-services-unavailable-from-july-25-to-27/): ಮೈಸೂರು, ಜುಲೈ 23, 2025: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆ ಆನ್‌ಲೈನ್‌ ಸೇವೆಗಳು ಜುಲೈ 25 ರಿಂದ 27ರವರೆಗೆ ಲಭ್ಯ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ. ನಿಗದಿತ ದಿನಾಂಕಗಳಂದು ಸರ್ವರ್‌ ನಿರ್ವಹಣೆ ಇರುವುದರಿಂದ ಜುಲೈ 25ರಂದು ರಾತ್ರಿ 8:30 ರಿಂದ ಜುಲೈ 27ರಂದು ರಾತ್ರಿ 10 ಗಂಟೆಯವರೆಗೆ ಸೆಸ್ಕ್‌ನ ಆನ್‌ಲೈನ್‌ ಸೇವೆಗಳಾದ ಆನ್ ಲೈನ್ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ನಗದು ಕೌಂಟರ್ ಹಾಗೂ ಇನ್ನಿತರೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಇದನ್ನು ಓದಿ –ರಾಜ್ಯದ 12 ಜಿಲ್ಲೆಗಳಲ್ಲಿ ಜು. 29ರವರೆಗೂ ಭಾರಿ ಮಳೆಯ ಮುನ್ಸೂಚನೆ ಸೆಸ್ಕ್ ವ್ಯಾಪ್ತಿಯ ವಿ.ವಿ. ಮೊಹಲ್ಲಾ, ಹೂಟಗಳ್ಳಿ, ಕುವೆಂಪುನಗರ, ರಾಮಕೃಷ್ಣನಗರ, ಕೇಂದ್ರೀಯ ಉಪವಿಭಾಗ, ಚಾಮುಂಡಿಪುರಂ, ಎನ್.ಆರ್. ಮೊಹಲ್ಲಾ, ಜ್ಯೋತಿನಗರ, ನಂಜನಗೂಡು, ಕೆ.ಆರ್. ನಗರ, ಹುಣಸೂರು, ಚಾಮರಾಜನಗರ, ಕೊಳ್ಳೇಗಾಲ, ಮಡಿಕೇರಿ, ಮಂಡ್ಯ, ಮಳವಳ್ಳಿ, ಹಾಸನ, ಚನ್ನರಾಯಪಟ್ಟಣ ಮತ್ತು ಅರಸಿಕೆರೆ […] - [ರಾಜ್ಯದ 12 ಜಿಲ್ಲೆಗಳಲ್ಲಿ ಜು. 29ರವರೆಗೂ ಭಾರಿ ಮಳೆಯ ಮುನ್ಸೂಚನೆ](https://varthaman.in/heavy-rains-forecast-in-12-districts-of-the-state-till-july-29/): ಬೆಂಗಳೂರು: ಕರ್ನಾಟಕದ ಹಲವೆಡೆ ಮುಂಗಾರು ಚುರುಕಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 29ರವರೆಗೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಕೆಲವು ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಆರೆಂಜ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳು: ಯೆಲ್ಲೋ ಅಲರ್ಟ್ ನೀಡಲಾಗಿರುವ ಜಿಲ್ಲೆಗಳು: ಸಾಧಾರಣ ಮಳೆಯಾಗುವ ಜಿಲ್ಲೆಗಳು: ಈ ಪ್ರದೇಶಗಳಲ್ಲಿ ಈಗಾಗಲೇ ಮಳೆ:ಸೇಡಂ, ಶಾಹಪುರ, ಕಾರವಾರ, ಅಂಕೋಲಾ, ಉಡುಪಿ, ಜಗಳೂರು, ಬೀದರ್, ಔರಾದ್, ಮುದ್ದೇಬಿಹಾಳ, ಚಿಂಚೋಳಿ, ಬಂಟ್ವಾಳ, ಯಲಬುರ್ಗಾ, ಶಕ್ತಿನಗರ, ಪುತ್ತೂರು, ಮಂಕಿ, ಮಾಣಿ, ಮಂಗಳೂರು, ಕದ್ರಾ, ಹುನಗುಂದ, ಶಿರಗುಪ್ಪಾ, ಸಿದ್ದಾಪುರ, ಕುಂದಾಪುರ, ಕಾರ್ಕಳ, ಜೇವರ್ಗಿ, ಮುದಗಲ್, ಬೆಳ್ತಂಗಡಿ, ಬಾದಾಮಿ, ಆಲಮಟ್ಟಿ, ಆಗುಂಬೆ, ಸುಳ್ಯ, ಶೃಂಗೇರಿ, ಸಿಂಧನೂರು, ಶಿರಹಟ್ಟಿ, ಪೊನ್ನಂಪೇಟೆ, ನಾಪೋಕ್ಲು, ಮುಂಡಗೋಡು, ಮಂಠಾಳ, ಕುಷ್ಟಗಿ, ಕೂಡಲಸಂಗಮ, ಕೆಂಭಾವಿ, ಹೊನ್ನಾಳಿ, ಇಂಡಿ, ಇಳಕಲ್, ಧರ್ಮಸ್ಥಳ, ಭಾಲ್ಕಿ, ಬಂಡೀಪುರ. ಬೆಂಗಳೂರಿನಲ್ಲಿ ಸ್ಥಿತಿ:ಮಂಗಳವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಇಂದು ಕೂಡ ಮೋಡಮೂಡಿದ ವಾತಾವರಣದ ನಡುವೆ ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಓದಿ […] - [ಗ್ರಾಮೀಣ ಯೋಜನಾ ಇಲಾಖೆ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ](https://varthaman.in/lokayukta-attacks-rural-planning-department-officer/): ಬಳ್ಳಾರಿ, ಜುಲೈ 23 : ಬುಧವಾರದಂದು ಬೆಂಗಳೂರಿನ ಲೋಕಾಯುಕ್ತ ತನಿಖಾ ತಂಡ ಬಳ್ಳಾರಿಯಲ್ಲಿ ಭರ್ಜರಿ ದಾಳಿ ನಡೆಸಿದ್ದು, ಹಲವು ಆಸ್ತಿಗಳ ಕುರಿತಾಗಿ ಪರಿಶೀಲನೆ ನಡೆಸಿದೆ. ಬೆಂಗಳೂರು ನಗರ ಹಾಗೂ ಗ್ರಾಮೀಣ ಯೋಜನಾ ಇಲಾಖೆಯ ಅಧಿಕಾರಿ ಮಾರುತಿ ಬಗಲಿ ವಿರುದ್ಧ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಮಾರುತಿ ಬಗಲಿ ಬೆಂಗಳೂರು ನಿವಾಸಿಯಾಗಿದ್ದರೂ, ಬಳ್ಳಾರಿಯಲ್ಲಿ ಮೂರು ಕಡೆಗಳಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿಯ ಮೇರೆಗೆ ಅವರ ನಿವಾಸ ಹಾಗೂ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಬಳ್ಳಾರಿಯಲ್ಲಿನ ಆಸ್ತಿಗಳ ಜತೆಗೆ ರಾಜ್ಯದ ಇತರೆ ಕಡೆಗಳಲ್ಲಿ ಸಹ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಲೋಕಾಯುಕ್ತ ತನಿಖಾ ತಂಡ ಸಕ್ರಿಯ ತನಿಖೆ ಮುಂದುವರಿಸಿದೆ. ಶಂಕಿತ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದೆ ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆಯಿದೆ. - [ಅರಣ್ಯದಲ್ಲಿ ದನಕರು ಮೇಯಿಸುವುದು ನಿಷೇಧ :ಈಶ್ವರ ಖಂಡ್ರೆ](https://varthaman.in/cattle-grazing-in-forests-is-prohibited-eshwar-khandre/): ಬೆಂಗಳೂರು:ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ, ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ, ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ. ದೊಡ್ಡ ಸಂಖ್ಯೆಯ ಸಾಕು ಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ. ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. […] - [CCB ಭರ್ಜರಿ ಕಾರ್ಯಾಚರಣೆ – ಅಕ್ರಮವಾಗಿ ನೆಲೆಸಿದ್ದ 9 ವಿದೇಶಿಗರ ಬಂಧನ](https://varthaman.in/ccb-conducts-massive-operation-9-foreigners-arrested-for-illegally-residing-in-the-city/): ಬೆಂಗಳೂರು: ನಗರದಲ್ಲಿ ಸಿಸಿಬಿ (ಸೆಂಟ್ರಲ್ ಕ್ರೈಮ್ ಬ್ರಾಂಚ್) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ವೀಸಾ ಅವಧಿ ಮೀರಿದಂತೆ ಅಕ್ರಮವಾಗಿ ವಾಸವಿದ್ದ ಒಟ್ಟು 9 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನೈಜೀರಿಯಾದ ನಾಲ್ವರು, ಘಾನಾದ ಇಬ್ಬರು ಮತ್ತು ಸುಡಾನ್ನ ಒಬ್ಬರನ್ನು ಒಳಗೊಂಡಿದ್ದಾರೆ. ಈ ವಿದೇಶಿಗರು ಬೆಂಗಳೂರಿನಲ್ಲಿ ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಾಸವಿದ್ದು, ಅವರನ್ನು ಸಿಸಿಬಿ ಪೊಲೀಸರು ಗುರುತಿಸಿ ಅರೆಸ್ಟ್ ಮಾಡಿದ್ದಾರೆ. ಅವರನ್ನು ತಕ್ಷಣವೇ ಡಿಟೆನ್ಷನ್ ಸೆಂಟರ್‌ಗೆ ಕಳುಹಿಸಲಾಗಿದ್ದು, ಹಿಮ್ಮೆಟ್ಟಿಸುವ (ಡಿಪೋರ್ಟ್) ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ – 1.25 ಲಕ್ಷ ಲಂಚ ಪಡೆಯುತ್ತಿದ್ದ ಮಹಿಳಾ PSI ಲೋಕಾಯುಕ್ತ ಬಲೆಗೆ ಈ ಕಾರ್ಯಾಚರಣೆ ವಿದೇಶಿಗರ ಅಕ್ರಮ ವಾಸವಾಸದ ವಿರುದ್ಧ ಸಿಸಿಬಿಯ ಕಟ್ಟುನಿಟ್ಟಾದ ನಿಗಾ ಮತ್ತು ಕ್ರಮಕ್ಕೆ ಉದಾಹರಣೆಯಾಗಿದೆ. - [1.25 ಲಕ್ಷ ಲಂಚ ಪಡೆಯುತ್ತಿದ್ದ ಮಹಿಳಾ PSI ಲೋಕಾಯುಕ್ತ ಬಲೆಗೆ](https://varthaman.in/female-psi-caught-by-lokayukta-for-accepting-bribe-of-rs-1-25-lakh/): ಬೆಂಗಳೂರು: ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉಪನಿರೀಕ್ಷಕಿ (PSI) ಸಾವಿತ್ರಿ ಬಾಯಿ, ಲಂಚದ ಹಣವಾಗಿ ₹1.25 ಲಕ್ಷ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೇಸ್ ನಂಬರ್ 144/25 ಸಂಬಂಧಿಸಿದಂತೆ ‘ಬಿ ರಿಪೋರ್ಟ್’ ಸಲ್ಲಿಸಲು ಸಾವಿತ್ರಿ ಬಾಯಿ ಲಂಚದ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮೊಹಮ್ಮದ್ ಯೂನಸ್ ಎಂಬುವವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಿಎಸ್‌ಐ ಸಾವಿತ್ರಿ ಬಾಯಿಯನ್ನು ರೂಚಿಯಾದ ರೀತಿಯಲ್ಲಿ ಟ್ರ್ಯಾಪ್ ಮಾಡಿದ್ದಾರೆ.ಇದನ್ನು ಓದಿ –ದೆಹಲಿ-ಹರಿಯಾಣದಲ್ಲಿ ಭೂಕಂಪ: 3.2 ತೀವ್ರತೆಯ ಭೂಕಂಪ ನೊಂದಣಿ ಘಟನೆ ವೇಳೆ ಸಾವಿತ್ರಿ ಬಾಯಿ ₹1.25 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ. - [ದೆಹಲಿ-ಹರಿಯಾಣದಲ್ಲಿ ಭೂಕಂಪ: 3.2 ತೀವ್ರತೆಯ ಭೂಕಂಪ ನೊಂದಣಿ](https://varthaman.in/earthquake-in-delhi-haryana-3-2-magnitude-earthquake-recorded/): ನವದೆಹಲಿ: ಇಂದು (ಜುಲೈ 22, 2025) ಬೆಳಗಿನ ಜಾವ ದೆಹಲಿ ಮತ್ತು ಹರಿಯಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪವಾಗಿದ್ದು, ಇದರ ಕೇಂದ್ರಬಿಂದುವಾಗಿ ಹರಿಯಾಣದ ಫರಿದಾಬಾದ್ ಗುರುತಿಸಲಾಗಿದೆ. ಭೂಕಂಪ ಸಂಬಂಧಿ ಮಾಹಿತಿ ನೀಡಿದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) X (ಹಳೆಯ ಟ್ವಿಟರ್) ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, “ಭೂಕಂಪದ ತೀವ್ರತೆ: 3.2, ದಿನಾಂಕ: 22/07/2025, ಸಮಯ: ಬೆಳಿಗ್ಗೆ 06:00:28 IST, ಅಕ್ಷಾಂಶ: 28.29°N, ರೇಖಾಂಶ: 77.21°E, ಆಳ: 5 ಕಿ.ಮೀ, ಸ್ಥಳ: ಫರಿದಾಬಾದ್, ಹರಿಯಾಣ” ಎಂದು ದಾಖಲಿಸಲಾಗಿದೆ. ಭೂಕಂಪನದ ಅನುಭವ ದೆಹಲಿ-NCR ಭಾಗದಲ್ಲೂಗೊಂಡಿದ್ದು, ಈಗಾಗಲೇ ಸ್ಥಳೀಯ ಜನರಲ್ಲಿ ಕೆಲವು ಕಾಲ ಆತಂಕ ಸೃಷ್ಟಿಯಾಗಿದೆ. ಆದಾಗ್ಯೂ, ಈ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ನಷ್ಟವಾಗಿದೆ ಎಂಬ ವರದಿಗಳು ಇನ್ನಷ್ಟೆ ಬಂದಿಲ್ಲ. ಇದನ್ನು ಓದಿ –ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ನಟ ಪ್ರಕಾಶ್ ರಾಜ್ ಸೇರಿ 4 ಜನ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್ ಭೂಕಂಪವು ಭೂಮಿಯ ಮೇಲ್ಮೈಯಿಂದ ಕೇವಲ […] - [ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ನಟ ಪ್ರಕಾಶ್ ರಾಜ್ ಸೇರಿ 4 ಜನ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್](https://varthaman.in/illegal-betting-app-case-ed-summons-4-celebrities-including-actor-prakash-raj/): ಅನಧಿಕೃತ ಬೆಟ್ಟಿಂಗ್ ಆ್ಯಪ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಪ್ರಸಿದ್ಧ ನಟ ಪ್ರಕಾಶ್ ರಾಜ್ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ. ಈ ಪ್ರಕರಣದಲ್ಲಿ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಮತ್ತು ಪ್ರಕಾಶ್ ರಾಜ್‌ ಅವರನ್ನು ವಿಚಾರಣೆಗಾಗಿ ಬಗ್ಗಲಾಗಿದ್ದು, ಇಡೀ ಚಿಕ್ಕುತಿದಂತೆ ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಜುಲೈ 23ರಂದು ರಾಣಾ ದಗ್ಗುಬಾಟಿಯನ್ನು, ಜುಲೈ 30ರಂದು ಪ್ರಕಾಶ್ ರಾಜ್ ಅವರನ್ನು, ಆಗಸ್ಟ್ 6ರಂದು ವಿಜಯ್ ದೇವರಕೊಂಡ ಅವರನ್ನು ಹಾಗೂ ಆಗಸ್ಟ್ 13ರಂದು ಮಂಚು ಲಕ್ಷ್ಮಿ ಅವರನ್ನು ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ದಾಖಲಿಸಿದ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳು ಕೋಟ್ಯಂತರ ರೂ. ಅಕ್ರಮ ಆದಾಯ ಗಳಿಸಿರುವ ಆರೋಪದಲ್ಲಿವೆ.ಇದನ್ನು ಓದಿ –ಉಪರಾಷ್ಟ್ರಪತಿ […] - [ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ](https://varthaman.in/vice-president-jagdeep-dhankar-resigns/): ನವದೆಹಲಿ:ಅನಾರೋಗ್ಯದ ಕಾರಣದಿಂದಾಗಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷ ಜಗದೀಪ್ ಧನ್ಕರ್ ಸೋಮವಾರ ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿದ ರಾಜೀನಾಮೆಯಲ್ಲಿ ವಿವರಿಸಿದ್ದಾರೆ. “ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ.” ಈ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಘಾತೀಯ ಅಭಿವೃದ್ಧಿಯನ್ನು ವೀಕ್ಷಿಸುವುದು ಮತ್ತು ಅದರಲ್ಲಿ ಭಾಗವಹಿಸುವುದು ಒಂದು ಸವಲತ್ತು ಮತ್ತು ತೃಪ್ತಿಯಾಗಿದೆ ಎಂದು ಧಂಖರ್ ಹೇಳಿದರು.ಇದನ್ನು ಓದಿ –ಗುಪ್ತಚರ ಇಲಾಖೆ: 3717 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ನಮ್ಮ ರಾಷ್ಟ್ರದ ಇತಿಹಾಸದ ಈ ಪರಿವರ್ತನಾ ಯುಗದಲ್ಲಿ ಸೇವೆ ಸಲ್ಲಿಸುವುದು ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು. - [ಗುಪ್ತಚರ ಇಲಾಖೆ: 3717 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ](https://varthaman.in/intelligence-department-applications-invited-for-recruitment-of-3717-posts/): ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದ ಗುಪ್ತಚರ ಇಲಾಖೆ (Intelligence Bureau – IB) ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್-II / ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿ ಪ್ರಕ್ರಿಯೆ ಜುಲೈ 19, 2025ರಿಂದ ಆರಂಭಿಸಿದೆ. ಒಟ್ಟು 3717 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2025ರೊಳಗೆ ಅಧಿಕೃತ ವೆಬ್‌ಸೈಟ್ www.mha.gov.in ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ: ಶೈಕ್ಷಣಿಕ ಅರ್ಹತೆ: ವಯೋಮಿತಿ: ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ – ಮೂರು ಹಂತಗಳು: ವೇತನ ವಿವರ: ಅರ್ಜಿ ಸಲ್ಲಿಸುವ ವಿಧಾನ: ಇದನ್ನು ಓದಿ –ಮಂಡ್ಯ: ವೈದ್ಯಕೀಯ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು - [ಮಂಡ್ಯ: ವೈದ್ಯಕೀಯ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು](https://varthaman.in/mandya-medical-student-hangs-himself-in-hostel/): ಮಂಡ್ಯ: ಜಿಲ್ಲೆಯ ವೈದ್ಯಕೀಯ ಕಾಲೇಜಿನ ಓದುತ್ತಿದ್ದ ವಿದ್ಯಾರ್ಥಿಯೊಬ್ಬ , ಹಾಸ್ಟೆಲ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳ ಮೂಲದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಭರತ್, ಓದಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದನು. ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್‌ನ ಸಹವಾಸಿಗಳೊಂದಿಗೆ ಮಾತನಾಡಿದ ಬಳಿಕ ತನ್ನ ಕೊಠಡಿಗೆ ಹಿಂತಿರುಗಿದ ಭರತ್, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈದಿನ ಬೆಳಗ್ಗೆ ಸಹಪಾಠಿಗಳು ಅವನ ಕೊಠಡಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.ಇದನ್ನು ಓದಿ – ಸ್ಲೀಪರ್ ಬಸ್ ಹಳ್ಳಕ್ಕೆ ಉರುಳಿ ಭೀಕರ ಅಪಘಾತ – ಓರ್ವ ಸಾವು, 18 ಮಂದಿ ಗಾಯ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದಾರೆ. - [ಸ್ಲೀಪರ್ ಬಸ್ ಹಳ್ಳಕ್ಕೆ ಉರುಳಿ ಭೀಕರ ಅಪಘಾತ – ಓರ್ವ ಸಾವು, 18 ಮಂದಿ ಗಾಯ](https://varthaman.in/sleeper-bus-falls-into-a-ditch-causing-a-terrible-accident-one-dead-18-injured/): ಅಂಕೋಲಾ: ತಾಲೂಕು ಪ್ರದೇಶದ ಅಗಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಸ್ಲೀಪರ್ ಬಸ್ ಹಳ್ಳಕ್ಕೆ ಉರುಳಿ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ಅಗಸೂರು ಗ್ರಾಮದ ಜಗದೀಶ ಡಾಬಾ ಎದುರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಅಪಘಾತದ ವೇಳೆಯು ನಿದ್ರಿಸುತ್ತಿದ್ದ ಪ್ರಯಾಣಿಕರು ಬಸ್ ಉರುಳಿದ ಶಬ್ದದಿಂದ ಬೆಚ್ಚಿಬಿದ್ದು ಹಲವರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಮತ್ತು ಅಂಕೋಲಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಬಸ್ ಮೇಲಕ್ಕೆತ್ತುವಾಗ ಅದರ ಒಳಗೆ ಸಿಲುಕಿದ್ದ ವ್ಯಕ್ತಿಯ ಮೃತದೇಹವನ್ನು ಹೊರತೆಗೆಯಲಾಯಿತು. ಗಾಯಾಳುಗಳನ್ನು ತಕ್ಷಣ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಈ […] ## Pages - [News Home 4](https://varthaman.in/news-home-4/): edit Insider 8 Reasons Your Best Friend Makes The Best Shopping Partner You may have seen or come across boys who have female best friends and this may make you wonder at times. To keep all your… e_manager August 26, 2021 edit Health People in the Northeast Could Prevent a Covid-19 by Following These Measures We are just an advanced breed of monkeys on a minor planet of a very average star. But we can understand the Universe. That makes… e_manager August 2, 2021 edit Insider The Best Street Style From Paris Fashion Week Spring Paris Fashion Week’s combined digital […] - [News Home 3](https://varthaman.in/news-home-3/): edit Health Benefits of Yoga: 10 Ways Your Practice Can Improve Your Life e_manager 4 Min Read edit Health Benefits of Yoga: 10 Ways Your Practice Can Improve Your Life We are just an advanced breed of monkeys on a minor planet of a very average star. But we can… e_manager August 18, 2021 edit EntertainmentThe Escapist 8 Mistakes That Will RUIN Your Weekend Trips Plan e_manager 4 Min Read – Sponsored – EDITOR’S PICK FEATURED Fashionable Summer Accessories to Dress Up Your Travel Look Insider People in the Northeast Could Prevent a Covid-19 by Following These Measures Health Hidden […] - [News Home 2](https://varthaman.in/news-home-2/): edit Technology Master MG300 Wireless Gaming Headset Review 4 Min Read edit EntertainmentThe Escapist Best beaches in the UK for the Perfect Sandy Getaway 4 Min Read edit ES MoneyTechnology Apple VS Samsung– Can a Good Smartwatch Save Your Life? 4 Min Read edit Insider Fashionable Summer Accessories to Dress Up Your Travel Look 4 Min Read edit Health What You Need to Know about Covid Delta Variant 4 Min Read edit Health Gout Drug Could Show Promise in Fighting COVID-19 4 Min Read Sportlight News edit Insider Fashionable Summer Accessories to Dress Up Your Travel Look e_manager 4 Min […] - [Karnataka Latest Breaking news](https://varthaman.in/): LATEST NEWS edit ಆನ್‌ಲೈನ್ ಗೇಮಿಂಗ್ ಮಸೂದೆ: ನಿಯಮ ಉಲ್ಲಂಘನೆಗೆ 3 ವರ್ಷ ಜೈಲು, 1 ಕೋಟಿ ರೂ. ದಂಡ August 20, 2025 edit ಭಾರತ-ಚೀನಾ ಸಂಬಂಧಗಳಲ್ಲಿ ಸ್ಥಿರ ಪ್ರಗತಿ August 20, 2025 edit ಲೋ ಬಿಪಿಯಿಂದ 6 ವರ್ಷದ ಬಾಲಕ ದುರ್ಮರಣ August 20, 2025 edit KRS ಡ್ಯಾಂನಿಂದ ನೀರು ಬಿಡುಗಡೆ – ತಗ್ಗು ಪ್ರದೇಶದ ಜನರಿಗೆ ಪ್ರವಾಹ ಎಚ್ಚರಿಕೆ August 19, 2025 edit ಮಹೇಶ್ ತಿಮರೋಡಿ ವಿರುದ್ಧ FIR – ಸಂಜೆಯೊಳಗೆ ಬಂಧನೆಗೆ ಗೃಹ ಸಚಿವರ ಸೂಚನೆ August 18, 2025 TRENDING ಶೀಘ್ರದಲ್ಲೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ – ಪ್ರಿಯಾಂಕ್ ಖರ್ಗೆ Bengaluru Karnataka Trending August 14, 2025 ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರ ಜಾಮೀನು ರದ್ದು Main News Trending August 14, 2025 SIT ತನಿಖೆ […] - [Contact](https://varthaman.in/contact/): Get In Touch Contact US /*! elementor – v3.6.2 – 04-04-2022 */ .elementor-widget-image{text-align:center}.elementor-widget-image a{display:inline-block}.elementor-widget-image a img[src$=”.svg”]{width:48px}.elementor-widget-image img{vertical-align:middle;display:inline-block} General Customer Care & Technical Support As we address the needs of our customers, email wait times may be longer than usual. In an effort to give you the best customer experience possible, we encourage you to take advantage of our phones. In most cases this is the fastest and easiest option. Find Us on Social - [Karnataka - Latest Breaking News](https://varthaman.in/latest-news-karnataka/): karnataka latest news with varthaman, Breaking News, Latest News by Varthaman Kannada Daily News, crisp of perfection in journalism. [comment]: # (Generated by Hostinger Tools Plugin)