By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ರಾಮಾನುಜಾಚಾರ್ಯರು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ರಾಮಾನುಜಾಚಾರ್ಯರು
ArticlesTrending

ರಾಮಾನುಜಾಚಾರ್ಯರು

Team Varthaman
Last updated: May 1, 2025 1:02 PM
Team Varthaman
Published: May 1, 2025
Share
SHARE

ಭಾರತೀಯ ದರ್ಶನ ಶಾಸ್ತ್ರದಲ್ಲಿ ಸನಾತನ ಧರ್ಮದ ಪ್ರತೀಕವಾದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತಗಳು ಬಹಳ ಪ್ರಮುಖ ಮತಗಳಾಗಿವೆ. ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದರು ಮತ್ತು ಭಾರತದಾದ್ಯಂತ ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುವದಲ್ಲದೇ ಬಹಳಷ್ಟು ಕಡೆಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿ ಸನಾತನ ವೈದಿಕ ಧರ್ಮದ ಪ್ರಚಾರ ಮಾಡಿದವರು.

ಕಲಿಯುಗದ ಆರಂಭದಿಂದ ವೈದಿಕ ಧರ್ಮವನ್ನು ಅಲ್ಲಗಳೆಯುವ ಅನೇಕ ಅವೈದಿಕ ಮತಗಳು ಹುಟ್ಟಿಕೊಂಡು ಎಲ್ಲವೂ ನಶ್ವರ ದೇವರು ಇಲ್ಲ ಎಂದು ಪ್ರಚಾರ ಮಾಡುತ್ತಾ ಇದ್ದ ಎಲ್ಲ ಮತಗಳನ್ನು ಖಂಡಿಸಿ ಪುನಃ ವೈದಿಕ ಧರ್ಮ ಹಿಂದು ಧರ್ಮದ ಅಸ್ತಿತ್ವ ಉಳಿಯಲು ಕಾರಣರಾದವರು. ಅದರಲ್ಲಿ ಬೌದ್ಧ ಧರ್ಮದ ನೈರಾತ್ಮ ವಾದ ಎಂದರೆ ದೇಹ ಆತ್ಮ ಬೇರೆ ಅಲ್ಲ. ನಾವು ಬದುಕಿರುವವರೆಗೆ ಮಾತ್ರ ಆತ್ಮ ನಂತರ ಯಾವುದೂ ಇಲ್ಲ ಎಂದು ಪ್ರತಿಪಾದಿಸಿ ಜನರಲ್ಲಿ ನಾಸ್ತಿಕತೆ ಅರಾಜಕತೆಯ ಅಲೆ ಎಬ್ಬಿಸಿದ್ದರು. ಚಾರ್ವಾಕರೂ ಕೂಡ ಅವರದ್ದು ಹೆಚ್ಚು ಕಡಿಮೆ ಇದೇ ವಾದ ದೇಹವೇ ಆತ್ಮ ದೇಹವಿದ್ದಾಗ ಮಾತ್ರ ಜೀವನ ಅದರ ನಂತರ ಜೀವನ ಇರುವುದಿಲ್ಲ.

ಪಾಪ ಪುಣ್ಯಗಳು ಇಲ್ಲ. ಇರುವವರೆಗೂ ಸುಖದಿಂದ ಬಾಳ ಬೇಕು. ಸಾಲ ಮಾಡಿ ಆದರೂ ತುಪ್ಪ ತಿನ್ನಬೇಕು ಎಂಬ ಸಿದ್ಧಾಂತದವರು. ಇದೇ ರೀತಿ ಭಗವಂತನ ಅಸ್ತಿತ್ವವನ್ನು ನಿರಾಕರಿಸಿದ ಒಟ್ಟು 72 ಮತಗಳನ್ನು ಸನಾತನ ಧರ್ಮವನ್ನು ಉಳಿಸಲು ಮೂರು ಮತಗಳ ಪ್ರವರ್ತಕರಾದ ದ್ವೈತಾದ್ವೈತ ಮತ್ತು ವಿಶಿಷ್ಟಾದ್ವೈತದ ಮೂರು ಆಚಾರ್ಯರು ಖಂಡಿಸಿದ್ದಾರೆ. ದೇವಸ್ಥಾನಗಳ ಸ್ಥಾಪನೆ ತಮ್ಮ ಸಿದ್ಧಾಂತದ ಪ್ರಚಾರ ಪ್ರಸಾರ ಮಾಡುವ ಶಿಷ್ಯರನ್ನು ಭಾರತದಾದ್ಯಂತ ನೆಲೆಸುವಂತೆ ಮಾಡಿದರು.

Join WhatsApp Group

ಅವನತಿಯ ಅಂಚಿನಲ್ಲಿದ್ದ ಸನಾತನ ವೈದಿಕ ಧರ್ಮದ ಪ್ರಚಾರಕ್ಕಾಗಿ ಉಪನಿಷತ್ತುಗಳು ಭಾಷ್ಯಗಳನ್ನು ಬರೆದರು. ವೇದವ್ಯಾಸ ದೇವರ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದು ಜನಸಾಮಾನ್ಯರಿಗೆ ದೇವರು ಧರ್ಮ ಮತ್ತು ತಮ್ಮ ಸಿದ್ಧಾಂತಗಳ ಪರಿಚಯವನ್ನು ಮಾಡಿಸಿದವರು.

ವಿಶಿಷ್ಟಾದ್ವೈತ ಪ್ರವರ್ತಕರಾದ ರಾಮಾನುಜಾಚಾರ್ಯರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೂ ಅಲ್ಲಿ ಅವರಿಗೆ ನೆಲೆ ನಿಲ್ಲಲು ಬಿಡದ ಕಾರಣ ಮೇಲುಕೋಟೆಯಲ್ಲಿ ನೆಲೆ ನಿಂತು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಕೊಂಡರು. ಕ್ರಿ.ಶ 1017ರ ವೈಶಾಖ ಶುದ್ಧ ಪಂಚಮಿಯಂದು ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಕೇಶವ ಸೋಮಯಾಜಿ ಮತ್ತು ಕಾಂತಿಮತಿ ದಂಪತಿಗಳ ಮಗನಾಗಿ ಹುಟ್ಟಿದ ರಾಮಾನುಜಾಚಾರ್ಯರು ವೈದಿಕ ಸಂಪ್ರದಾಯದ ಅನುಯಾಯಿಗಳಾಗಿದ್ದರು. ಇವರ ವಿದ್ಯಾಗುರುಗಳು ಅದ್ವೈತ ವಿದ್ವಾಂಸರಾದ ಯಾದವ ಪ್ರಕಾಶರಲ್ಲಿ ಆಯಿತು. ಅದ್ವೈತ ಅಧ್ಯಯನ ಮಾಡಿದರೂ ಮುಂದೆ ಅವರ ಜಿಜ್ಞಾಸೆ ಮತ್ತು ಪರಮಾತ್ಮನ ಹುಡುಕಾಟ ಅವರಲ್ಲಿ ಹೊಸ ವಿಚಾರವನ್ನು ಹುಟ್ಟು ಹಾಕಿತು.

ನಂತರ ಅವರು ಹೊಸ ಗುರುವಿನ ಅನ್ವೇಷಣೆಗೆ ತೊಡಗಿದಾಗ ಶ್ರೀವೈಷ್ಣವ ಸಂಪ್ರದಾಯದ ಆಗಿನ ಗುರುಗಳಾಗಿದ್ದ ಯಮುನಾಚಾರ್ಯರರಲ್ಲಿ ಮಾರ್ಗದರ್ಶನ ಪಡೆದರು. ಅವರ ಆಶೀರ್ವಾದ ಪಡೆಯುವ ಮೊದಲಿಗೆ ಅವರು ನಿಧನರಾದ ಕಾರಣ ಶ್ರೀ ವೈಷ್ಣವ ಸಂಪ್ರದಾಯದ ಪ್ರಚಾರ ಪ್ರಸಾರ ಮಾಡುವ ನಿರ್ಣಯ ತೆಗೆದುಕೊಂಡರು.

ರಾಮಾನುಜಾಚಾರ್ಯರೂ ಕೂಡ ಶಂಕರರಂತೆ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತದ ತತ್ವದ ಭಾಷ್ಯಗಳನ್ನು ಬರೆದಿದ್ದಾರೆ. ಶರಣಾಗತಿ ಗದ್ಯಮ್, ಶ್ರೀರಂಗ ಗದ್ಯಮ್ ಮತ್ತು ವೈಕುಂಠ ಗದ್ಯಮ್ ಇವುಗಳನ್ನು ಗದ್ಯ ತ್ರಯಮ್ ಎನ್ನಲಾಗುತ್ತದೆ. ಇದಲ್ಲದೇ ವೇದಾಂತ ದೀಪಮ್ ಮತ್ತು ವೇದಾಂತ ಸಾರ ಗದ್ಯಮ್, ವೇದಾರ್ಥ ಸಂಗ್ರಹ, ಹೀಗೆ ಅನೇಕ ಕೃತಿಗಳನ್ನು ಬರೆದಿದ್ದಾರೆ. ಕಾಶ್ಮೀರದ ಸರಸ್ವತೀ ದೇವಿಗೆ ಅರ್ಪಿಸಿದಾಗ ಸರಸ್ವತಿ ದೇವಿಯು ಸ್ವೀಕರಿಸಿ ಹಯಗ್ರೀವ ದೇವರನ್ನು ನೀಡಿ ಅವರ ಭಾಷ್ಯಕ್ಕೆ ಶ್ರೀ ಭಾಷ್ಯ ಎಂದಿದ್ದಾರೆ. ಇದಲ್ಲದೇ ಗೀತಾ ಭಾಷ್ಯಗಳನ್ನು ಕೂಡ ಬರೆದರು. ಈ ಹಯಗ್ರೀವ ದೇವರ ಮೂರ್ತಿಯೂ ಇಂದಿಗೂ ಶ್ರೀ ಪರಕಾಲಸ್ವಾಮಿಗಳ ಮಠದಲ್ಲಿ ನೋಡಬಹುದು. ಶ್ರೀರಾಮಾನುಜಾಚಾರ್ಯರು ದಕ್ಷಿಣ ಭಾರತದಲ್ಲಂತೂ ಅನೇಕ ದೇವಸ್ಥಾನಗಳನ್ನು ಸ್ಥಾಪಿಸಿ ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ.

ನೀವು ಗಮನಿಸಿದರೆ ದಕ್ಷಿಣ ಭಾರತದಲ್ಲಿ ಶ್ರೀ ವೈಷ್ಣವರ ಅಂದರೆ ವಿಶಿಷ್ಟಾದ್ವೈತ ಅನುಯಾಯಿಗಳು ಪೂಜೆ ಮಾಡುವ ದೇವಸ್ಥಾನಗಳನ್ನು ಹೇರಳವಾಗಿ ಕಾಣಬಹುದು. ಶ್ರೀ ರಾಮಾನುಜಾಚಾರ್ಯರು ಶ್ರೀರಂಗ, ತಿರುಮಲ-ತಿರುಪತಿ, ಕಾಂಚೀಪುರಂ, ಮಧುರಾಂತಕಂಗಳಲ್ಲಿ ಜೀರ್ಣೋದ್ಧಾರ ಮಾಡಿ ಪೂಜೆಗೆ ವ್ಯವಸ್ಥೆ ಮಾಡಿದರೆ. ಶ್ರೀ ಕೂರ್ಮಂ, ಸಿಂಹಾಚಲ, ಪುರಿ ಜಗನ್ನಾಥ, ಬದರಿಕಾಶ್ರಮ, ನೈಮಿಷಾರಣ್ಯದಲ್ಲಿ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿ ಅಲ್ಲಿ ಪೂಜೆಯ ಏರ್ಪಾಡು ಮಾಡಿದರು. ಯದುಗಿರಿಯ ಯತಿರಾಜ ಮಠದಂತಹ ಮಠಗಳನ್ನು ಸ್ಥಾಪಿಸಿ ವೇದಾಂತ ಪ್ರಸಾರಕ್ಕೆ ಅನುಕೂಲ ಮಾಡಿದರು.

ಕರ್ನಾಟಕದಲ್ಲಿ ತೊಂಡನೂರಿನ ನಂಬಿನಾರಾಯಣ, ಮೇಲುಕೋಟೆಯ ಚಲುವ ನಾರಾಯಣ, ಬೇಲೂರಿನ ವಿಜಯ ನಾರಾಯಣ, ಗದುಗಿನ ವೀರನಾರಾಐಣ , ತಲಕಾಡಿನ ಕೀರ್ತಿ ನಾರಾಯಣ ಪಂಚ ನಾರಾಯಣ ಕ್ಷೇತ್ರಗಳನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಮೂಲಕ ಮಾಡಿಸಿದರು. ರಾಮಾನುಜರ ಪ್ರಮುಖ ಶಿಷ್ಯರಲ್ಲಿ ಜೈನ ಸಂಪ್ರದಾಯದ ಅನುಯಾಯಿಯಾಗಿದ್ದ ಬಿಟ್ಟಿದೇವ ಅವರಿಗೆ ಕರ್ನಾಟಕದಲ್ಲಿ ನೆಲೆಸಲು ಅವಕಾಶ ನೀಡಿದವನು ಜೈನ ಮತದ ಅನುಯಾಯಿಯಾಗಿದ್ದವನನ್ನು ಶ್ರೀವೈಷ್ಣವ ಸಂಪ್ರದಾಯದ ಅನುಯಾಯಿಯನ್ನಾಗಿ ಮಾಡಿ ಅವನಿಂದ ಅನೇಕ ದೇವಾಲಯಗಳ ನಿರ್ಮಾಣ ಮಾಡಿಸಿ ಸನಾತನ ಧರ್ಮದ ಉಳಿವಿಗಾಗಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ಸಾಮಾಜಿಕವಾಗಿ ಶ್ರೀರಾಮಾನುಚಾರ್ಯರ ಕೊಡುಗೆ ಅಪಾರ ಜಾತಿ ಪದ್ಧತಿ ಮತ್ತು ಅಸ್ಪ್ರಶ್ಯತೆಯನ್ನು ವಿರೋಧ ಮಾಡಿದ ರಾಮಾನುಜಾರ್ಯರು. ಸಾಮಾಜಿಕ ಕುಪ್ರಥೆಗಳ ವಿರೋಧ ಮಾಡಿದರು. ಪರಮಾತ್ಮನ ದೃಷ್ಠಿಯಲ್ಲಿ ಎಲ್ಲ ಜೀವಗಳೂ ಒಂದೇ ಎಂದು ದೇವಾಲಯಗಳ್ಲಲಿ ಕೀಳು ಜಾತಿಯ ಜನರ ಪ್ರವೇಶ ನಿಷೇಧವನ್ನು ವಿರೋಧಿಸಿದರು. ಎಲ್ಲ ಜಾತಿಯ ಶಿಷ್ಯರನ್ನು ಶಿಷ್ಯರನ್ನಾಗಿ ಮಾಢಿಕೊಂಡು ಹೃದಯ ವೈಶಾಲ್ಯವನ್ನು ಮತ್ತು ಸಾಮಾಜಿಕ ಬದ್ಧತೆ ಕಾಳಜಿಯನ್ನು ತೋರಿದರು.

ಇವರ ಕೊಡುಗೆ ಸನಾತನ ಧರ್ಮದಲ್ಲಿ ನಂಬಿಕೆ ಶ್ರದ್ಧೆಯನ್ನು ಉಳಿಸಿಕೊಳ್ಳಲು ಅಂದಿನ ಕಾಲದಲ್ಲಿ ಬಹಳ ದೊಡ್ಡ ಪ್ರೇರಣೆ ಹಾಗೂ ಶಕ್ತಿಯನ್ನು ನೀಡಿದವು.

ಮಾಧುರಿ ದೇಶಪಾಂಡೆ, ಬೆಂಗಳೂರು

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಅಕ್ರಮ ಹಣ ವರ್ಗಾವಣೆಯ ಪ್ರಕರಣ :FIIT JEE ಕೋಚಿಂಗ್ ಕೇಂದ್ರದ ಮೇಲೆ ಇಡಿ ದಾಳಿ
ಅಂಪೈರ್ ಮೇಡಂ
ಲೋಕಾಯುಕ್ತ ದಾಳಿ: ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ತನಿಖೆ
ಲಷ್ಕರ್-ಎ-ತೊಯ್ಬಾ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಗಾಯಗೊಂಡು ಆಸ್ಪತ್ರೆಗೆ ದಾಖಲು
ಹೊಸ ವರ್ಷಾಚರಣೆ: ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ
TAGGED:ArticleKannada ArticleRamanujacharyaರಾಮಾನುಜಾಚಾರ್ಯ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BellaryKarnatakaLatest News

ಗಣಿ ಉದ್ಯಮಿಗಳಿಗೆ ED ಶಾಕ್

Team Varthaman
Team Varthaman
August 13, 2025
ಅಭಿಮಾನದ ಪೊರೆ ಕಣ್ಣಿಗೆ ಕಟ್ಟಿದಾಗ……‌‌!
ಅರಣ್ಯದಲ್ಲಿ ದನಕರು ಮೇಯಿಸುವುದು ನಿಷೇಧ :ಈಶ್ವರ ಖಂಡ್ರೆ
ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ: ಮಕ್ಕಳಿಗೆ ಜ್ವರ, ಕೆಮ್ಮು ಇದ್ದರೆ ರಜೆ ಕಡ್ಡಾಯ
ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?