ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿ ಮೇ ೨೮, ೨೯ರಂದು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ೭೦ನೇ ಜನ್ಮದಿನಾಚರಣೆ ಹಾಗೂ ಮಾಲೆಕ್ಯೂಲರ್ ಮೆಡಿಸಿನ್ ಹೊಸ ಸವಾಲುಗಳು ಹಾಗೂ ನಾವಿನ್ಯತೆಗಳು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಆಯೋಜಕ ಸಮಿತಿ ಅಧ್ಯಕ್ಷ ಪ್ರೊ.ಎಸ್.ಎನ್. ಹೆಗ್ಡೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ವಿಜ್ಞಾನ ಭವನದಲ್ಲಿ ಮೇ ೨೮ರಂದು ಬೆಳಿಗ್ಗೆ ೧೦ಕ್ಕೆ ಐಎಎಸ್‌ಸಿ-ಬೆಂಗಳೂರು ಮಾಜಿ ನಿರ್ದೇಶಕ ಪ್ರೊ.ಗೋವರ್ಧನ್ ಮೆಹ್ತ ವಿಚಾರ ಸಂಕಿರಣ ಉದ್ಘಾಟಿಸುವರು. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆ ವಹಿಸುವರು. ದೇಶ, ವಿದೇಶದ ಪ್ರಮುಖ ವಿಜ್ಞಾನಿಗಳು ವಿಚಾರ ಮಂಡನೆ ಮಾಡಲಿದ್ದು, ೨೯ರಂದು ಮಧ್ಯಾಹ್ನ ೩.೩೦ಕ್ಕೆ ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸೆನೆಟ್ ಭವನದಲ್ಲಿ ಮೇ ೨೮ರಂದು ಸಂಜೆ ೫ಕ್ಕೆ ಕೆ.ಎಸ್.ರಂಗಪ್ಪ ಅವರ ಜನ್ಮದಿನಾಚರಣೆ, ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸದರಾದ ಸಿ.ಎನ್.ಮಂಜುನಾಥ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮುಖರಾದ ಪ್ರೊ.ಟಿ.ಪಿ.ಸಿಂಗ್, ಪ್ರೊ.ವಿನೋದ್ ಕುಮಾರ್ ಸಿಂಗ್, ಟಿ. ರಾಜಮನ್ನಾರ್ ಭಾಗವಹಿಸುವರು ಎಂದು ತಿಳಿಸಿದರು.ಇದನ್ನು ಓದಿ –ಮಹಾರಾಣಿ ಕಾಲೇಜಿನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ MLA ಹರೀಶ್ ಗೌಡ
ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರೊ.ಕೆ. ಮಂಟೇಲಿಂಗು, ಖಜಾಂಚಿ ಪ್ರೊ.ಎಂ.ಪಿ.ಸದಾಶಿವ, ಸದಸ್ಯರಾದ ಕೆ.ಎನ್.ಮೋಹನ್, ಬಸಪ್ಪ ಇದ್ದರು.