: ಕೆಆರ್‌ಎಸ್ ಸೇರಿ ಪ್ರಮುಖ ಜಲಾಶಯಗಳ ಇಂದಿನ ಸ್ಥಿತಿ
Contents
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಅನೇಕ ಜಿಲ್ಲೆಗಳ ಕೆರೆ-ಕಟ್ಟೆಗಳು ಹಾಗೂ ನದಿಗಳು ಅಪಾಯದ ಮಟ್ಟದತ್ತ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳಿಗೆ ನೀರು ಪೂರೈಸುವ ಪ್ರಮುಖ ಜಲಾಶಯವಾದ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಈಗಾಗಲೇ ಭರ್ತಿಯಾಗಿದ್ದು, ಇನ್ನು ಹಲವಾರು ಡ್ಯಾಂಗಳು ತುಂಬುವ ಹಂತದಲ್ಲಿವೆ.1. ಕೆಆರ್‌ಎಸ್ ಜಲಾಶಯ (ಮಂಡ್ಯ)2. ಕಬಿನಿ ಜಲಾಶಯ (ಮೈಸೂರು)3. ಆಲಮಟ್ಟಿ ಜಲಾಶಯ (ಬಾಗಲಕೋಟೆ)4. ತುಂಗಭದ್ರಾ ಜಲಾಶಯ (ಬಳ್ಳಾರಿ)5. ಮಲಪ್ರಭಾ ಜಲಾಶಯ (ಬೆಳಗಾವಿ)6. ಲಿಂಗನಮಕ್ಕಿ ಜಲಾಶಯ (ಶಿವಮೊಗ್ಗ)7. ಭದ್ರಾ ಜಲಾಶಯ (ಚಿಕ್ಕಮಗಳೂರು)8. ಘಟಪ್ರಭಾ ಜಲಾಶಯ (ಬೆಳಗಾವಿ)9. ಹೇಮಾವತಿ ಜಲಾಶಯ (ಹಾಸನ)10. ಹಾರಂಗಿ ಜಲಾಶಯ (ಕೊಡಗು)
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಅನೇಕ ಜಿಲ್ಲೆಗಳ ಕೆರೆ-ಕಟ್ಟೆಗಳು ಹಾಗೂ ನದಿಗಳು ಅಪಾಯದ ಮಟ್ಟದತ್ತ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳಿಗೆ ನೀರು ಪೂರೈಸುವ ಪ್ರಮುಖ ಜಲಾಶಯವಾದ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಈಗಾಗಲೇ ಭರ್ತಿಯಾಗಿದ್ದು, ಇನ್ನು ಹಲವಾರು ಡ್ಯಾಂಗಳು ತುಂಬುವ ಹಂತದಲ್ಲಿವೆ.
ಮುಂಗಾರು ಮಳೆಯ ಪರಿಣಾಮ ಜುಲೈ 3, 2025 ರಂದು ರಾಜ್ಯದ ಪ್ರಮುಖ 10 ಜಲಾಶಯಗಳ ನೀರಿನ ಮಟ್ಟ ಹಾಗೂ ಒಳಹರಿವು-ಹೊರಹರಿವಿನ ವಿವರ ಈ ಕೆಳಗಿನಂತಿದೆ:
1. ಕೆಆರ್‌ಎಸ್ ಜಲಾಶಯ (ಮಂಡ್ಯ)
- ಗರಿಷ್ಠ ನೀರಿನ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 124.74 ಅಡಿ
- ಒಟ್ಟು ಸಾಮರ್ಥ್ಯ: 49.45 ಟಿಎಂಸಿ
- ಒಳಹರಿವು: 15,180 ಕ್ಯೂಸೆಕ್
- ಹೊರಹರಿವು: 15,941 ಕ್ಯೂಸೆಕ್
2. ಕಬಿನಿ ಜಲಾಶಯ (ಮೈಸೂರು)
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,277.46 ಅಡಿ
- ಒಳಹರಿವು: 7,496 ಕ್ಯೂಸೆಕ್
- ಹೊರಹರಿವು: 5,729 ಕ್ಯೂಸೆಕ್
3. ಆಲಮಟ್ಟಿ ಜಲಾಶಯ (ಬಾಗಲಕೋಟೆ)
- ಗರಿಷ್ಠ ಮಟ್ಟ: 519.6 ಮೀಟರ್
- ಇಂದಿನ ಮಟ್ಟ: 517.26 ಮೀಟರ್
- ಒಟ್ಟು ಸಾಮರ್ಥ್ಯ: 123.8 ಟಿಎಂಸಿ
- ಒಳಹರಿವು: 85,537 ಕ್ಯೂಸೆಕ್
- ಹೊರಹರಿವು: 80,000 ಕ್ಯೂಸೆಕ್
4. ತುಂಗಭದ್ರಾ ಜಲಾಶಯ (ಬಳ್ಳಾರಿ)
- ಗರಿಷ್ಠ ಮಟ್ಟ: 1,633 ಅಡಿ
- ಇಂದಿನ ಮಟ್ಟ: 1,625.20 ಅಡಿ
- ಒಟ್ಟು ಸಾಮರ್ಥ್ಯ: 105.79 ಟಿಎಂಸಿ
- ಒಳಹರಿವು: 32,767 ಕ್ಯೂಸೆಕ್
- ಹೊರಹರಿವು: 10,400 ಕ್ಯೂಸೆಕ್
5. ಮಲಪ್ರಭಾ ಜಲಾಶಯ (ಬೆಳಗಾವಿ)
- ಗರಿಷ್ಠ ಮಟ್ಟ: 2,079.5 ಅಡಿ
- ಇಂದಿನ ಮಟ್ಟ: 2,062.65 ಅಡಿ
- ಒಟ್ಟು ಸಾಮರ್ಥ್ಯ: 49.45 ಟಿಎಂಸಿ
- ಒಳಹರಿವು: 5,704 ಕ್ಯೂಸೆಕ್
- ಹೊರಹರಿವು: 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ (ಶಿವಮೊಗ್ಗ)
- ಗರಿಷ್ಠ ಮಟ್ಟ: 1,819 ಅಡಿ
- ಇಂದಿನ ಮಟ್ಟ: 1,786.5 ಅಡಿ
- ಒಟ್ಟು ಸಾಮರ್ಥ್ಯ: 151.75 ಟಿಎಂಸಿ
- ಒಳಹರಿವು: 20,620 ಕ್ಯೂಸೆಕ್
- ಹೊರಹರಿವು: 5,645 ಕ್ಯೂಸೆಕ್
7. ಭದ್ರಾ ಜಲಾಶಯ (ಚಿಕ್ಕಮಗಳೂರು)
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 164 ಅಡಿ
- ಒಟ್ಟು ಸಾಮರ್ಥ್ಯ: 71.54 ಟಿಎಂಸಿ
- ಒಳಹರಿವು: 11,875 ಕ್ಯೂಸೆಕ್
- ಹೊರಹರಿವು: 3,391 ಕ್ಯೂಸೆಕ್
8. ಘಟಪ್ರಭಾ ಜಲಾಶಯ (ಬೆಳಗಾವಿ)
- ಗರಿಷ್ಠ ಮಟ್ಟ: 2,175 ಅಡಿ
- ಇಂದಿನ ಮಟ್ಟ: 2,148.55 ಅಡಿ
- ಒಟ್ಟು ಸಾಮರ್ಥ್ಯ: 51 ಟಿಎಂಸಿ
- ಒಳಹರಿವು: 12,458 ಕ್ಯೂಸೆಕ್
- ಹೊರಹರಿವು: 1,453 ಕ್ಯೂಸೆಕ್
9. ಹೇಮಾವತಿ ಜಲಾಶಯ (ಹಾಸನ)
- ಗರಿಷ್ಠ ಮಟ್ಟ: 2,922 ಅಡಿ
- ಇಂದಿನ ಮಟ್ಟ: 2,917.47 ಅಡಿ
- ಒಟ್ಟು ಸಾಮರ್ಥ್ಯ: 37.10 ಟಿಎಂಸಿ
- ಒಳಹರಿವು: 13,521 ಕ್ಯೂಸೆಕ್
- ಹೊರಹರಿವು: 11,910 ಕ್ಯೂಸೆಕ್
10. ಹಾರಂಗಿ ಜಲಾಶಯ (ಕೊಡಗು)
- ಗರಿಷ್ಠ ಮಟ್ಟ: 2,859 ಅಡಿ
- ಇಂದಿನ ಮಟ್ಟ: 2,852.61 ಅಡಿ
- ಒಟ್ಟು ಸಾಮರ್ಥ್ಯ: 8.5 ಟಿಎಂಸಿ
- ಒಳಹರಿವು: 3,688 ಕ್ಯೂಸೆಕ್
- ಹೊರಹರಿವು: 1,500 ಕ್ಯೂಸೆಕ್
ಮುಂಗಾರು ಚುರುಕಾಗಿರುವುದರಿಂದ ಇನ್ನೂ ಮುಂಬರುವ ದಿನಗಳಲ್ಲಿ ಈ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ.ಇದನ್ನು ಓದಿ – ಹೃದಯಾಘಾತದಿಂದ ಗ್ರಾಪಂ ಸದಸ್ಯ ಸಾವು
ಕೃಷಿ ಚಟುವಟಿಕೆಗಳಿಗೆ ಇದು ನೆರವಾಗಬಹುದು ಎನ್ನುವ ನಿರೀಕ್ಷೆಯಿದೆ. ಆದರೆ ನಿರಂತರ ಮಳೆಗೆ ನೆರೆ ಪರಿಸ್ಥಿತಿಯ ಭೀತಿಯೂ ನಿರ್ಮಾಣವಾಗಿದೆ. ಜನರು ಮುಂಜಾಗ್ರತೆ ವಹಿಸಬೇಕು.