- ಅರ್ಜಿ ಸಲ್ಲಿಸಲು ಮೇ 11 ಕೊನೆಯ ದಿನ
ಬೆಂಗಳೂರು: ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ನೋಂದಣಿ ಪ್ರಾರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ಆಯ್ಕೆ ವಿಧಾನ ಮತ್ತು ಇತರೆ ಪ್ರಮುಖ ವಿವರಗಳ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ (ವಲಯವಾರು):
- ಕೇಂದ್ರ ರೈಲ್ವೆ – 376
- ಪೂರ್ವ ರೈಲ್ವೆ – 868
- ದಕ್ಷಿಣ ರೈಲ್ವೆ – 510
- ಪಶ್ಚಿಮ ರೈಲ್ವೆ – 885
- ಆಗ್ನೇಯ ರೈಲ್ವೆ – 921
- ಉತ್ತರ ರೈಲ್ವೆ – 521
- ಈಶಾನ್ಯ ಗಡಿ – 125
- ಪೂರ್ವ ಮಧ್ಯ ರೈಲ್ವೆ – 700
- ಉತ್ತರ ಮಧ್ಯ ರೈಲ್ವೆ – 508
- ಪಶ್ಚಿಮ ಮಧ್ಯ ರೈಲ್ವೆ – 759
- ಆಗ್ನೇಯ ಮಧ್ಯ ರೈಲ್ವೆ – 568
- ದಕ್ಷಿಣ ಮಧ್ಯ ರೈಲ್ವೆ – 989
- ಈಶಾನ್ಯ ರೈಲ್ವೆ – 100
- ವಾಯುವ್ಯ ರೈಲ್ವೆ – 679
- ಮೆಟ್ರೋ ರೈಲ್ವೆ ಕೋಲ್ಕತ್ತಾ – 225
ಒಟ್ಟು ಹುದ್ದೆಗಳು: 9,970
ಅರ್ಹತೆ:
- ಕನಿಷ್ಠ 10ನೇ ತರಗತಿ ಉತ್ತೀರ್ಣತೆ
- ಐಟಿಐ (3 ವರ್ಷ) ಅಥವಾ ಸಂಬಂಧಿತ ವಿಭಾಗದ ಎಂಜಿನಿಯರಿಂಗ್ ಪದವಿ
(ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಆಟೋಮೊಬೈಲ್ ಇತ್ಯಾದಿ)
ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 30 ವರ್ಷ (ಜುಲೈ 1, 2025ಕ್ಕೆ ಅನುಗುಣವಾಗಿ)
ಅರ್ಜಿಗೆ ಬೇಕಾಗುವ ದಾಖಲೆಗಳು:
- ಪಾಸ್‌ಪೋರ್ಟ್ ಫೋಟೋ
- ಸಹಿ ಸ್ಕ್ಯಾನ್ ನಕಲು
- ಎಸ್‌ಸಿ/ಎಸ್‌ಟಿ ಪ್ರಮಾಣಪತ್ರ (ಪಿಡಿಎಫ್‌ನಲ್ಲಿ)
- ಅಂಗವಿಕಲ ಪ್ರಮಾಣಪತ್ರ
- ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ
ಪರೀಕ್ಷಾ ಶುಲ್ಕ:
- ಸಾಮಾನ್ಯ / ಓಬಿಸಿ: ₹500 (ಪರೀಕ್ಷೆ ಬರೆದರೆ ₹400 ಮರುಪಾವತಿ)
- ಎಸ್‌ಸಿ/ಎಸ್‌ಟಿ / ಅಂಗವಿಕಲ: ₹250 (ಪೂರ್ಣ ಮರುಪಾವತಿ)
ಆಯ್ಕೆ ವಿಧಾನ:
- ಹಂತ 1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) – 75 ಪ್ರಶ್ನೆಗಳು
- ಹಂತ 2:
- ಭಾಗ A: 100 ಪ್ರಶ್ನೆಗಳು
- ಭಾಗ B: ತಾಂತ್ರಿಕ ವಿಭಾಗ – 75 ಪ್ರಶ್ನೆಗಳು
- ಪ್ರಮಾಣಪತ್ರ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 11, 2025
ಅರ್ಜಿ ಸಲ್ಲಿಸಲು RRB ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.
ಇದನ್ನು ಓದಿ –ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪ್ರಸ್ತಾವನೆಗೆ ಅವಧಿಯೊಳಗಿನ ಸಲ್ಲಿಕೆ ಕಡ್ಡಾಯ: ಸರ್ಕಾರದ ಜ್ಞಾಪನೆ
ಇದು ಕೇಂದ್ರ ಸರ್ಕಾರದ ಮಹತ್ವದ ಉದ್ಯೋಗ ಅವಕಾಶವಾಗಿದ್ದು, ಆಸಕ್ತರು ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಬೇಕು.