- ಪತಿಯನ್ನು ಕಳೆದುಕೊಂಡ ಪತ್ನಿಯ ಭಾವುಕ ಕೂಗು
ಶ್ರೀನಗರ: “ಕಾಶ್ಮೀರಕ್ಕೆ ಹೋಗುವುದು ನನ್ನ ಗಂಡನ ಬಹುದಿನಗಳ ಕನಸು. ಅದಕ್ಕೆ ಇವತ್ತು ಬಂದಿದ್ದೇವೆ. ಆದರೆ ಈ ಕರ್ಮಕ್ಕಾಗಿ ಬಂದೆನೋ ಏನೋ… ನನ್ನ ಗಂಡನನ್ನು ಸಾಯಿಸಿದ್ದೀರಾ, ನನನ್ನೂ ಸಾಯಿಸಿ!” ಎಂದು ಉಗ್ರರ ದಾಳಿಯಲ್ಲಿ ಪತಿ ಮೃತಪಟ್ಟ ಪಲ್ಲವಿ ಅವರ ಕಣ್ಣೀರನು ಬಿತ್ತಿದ್ದಾರೆ.
ಈ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದು, ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಈ ದಾಳಿಯಲ್ಲಿ ಬಲಿಯಾಗಿದ್ದಾರೆ.
“ನಾವು ಸುಮಾರು 500 ಜನರ ತಂಡವಾಗಿ ಪಹಲ್ಗಾಮ್‌ನ ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂಬ ಪಾಯಿಂಟ್‌ಗೆ ಹೋಗಿದ್ದೇವೆ. ಆಗಷ್ಟೇ ಕುದುರೆಯಿಂದ ಇಳಿದಿದ್ದೆವು. ನನ್ನ ಮಗ ಬೆಳಗ್ಗೆ ಏನೂ ತಿನ್ನದೆ ಇದ್ದ, ಆದ್ದರಿಂದ ಅವರಿಗೇನಾದರೂ ತರುವ ಆಸೆಯೊಂದಿಗೆ ಅಂಗಡಿಗೆ ಹೋಗಿದ್ದರು. ನಾನು ನನ್ನ ಮಗನನ್ನು ಕರೆದುಕೊಂಡು ಬರಲು ಹೋದಾಗ ಚಾನಕವಾಗಿ ಗುಂಡಿನ ಸದ್ದು ಕೇಳಿಸಿತು,” ಎಂದು ಪಲ್ಲವಿ ಭಾವುಕವಾಗಿ ವಿವರಿಸಿದರು.
“ಮೊದಲು ನಮಗೆ ಆರ್ಮಿಯವರ ತರಹನಾಗಿ ಅನಿಸಿತು. ಆದರೆ ನಾನು ತಿರುಗಿ ನೋಡಿದಾಗ ಇತರರು ಓಡುತ್ತಿರುವ ದೃಶ್ಯ ಕಣ್ಣಿಗೆ ಬಂತು. ನನ್ನ ಮಗನನ್ನು ನೋಡುತ್ತಾ ಇದ್ದೆ. ಈ ನಡುವೆ ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂದಿತು. ಅವರ ತಲೆಗೆ ಗಂಭೀರವಾಗಿ ಹೊಡೆದಿದ್ದರು,” ಎಂದು ಅವರು ತಿಳಿಸಿದರು.
“ಮೂವರು ಮುಸ್ಲಿಮರು ‘ಬಿಸ್ಮಿಲ್ಲಾ, ಬಿಸ್ಮಿಲ್ಲಾ’ ಎಂದು ಹೇಳುತ್ತಿದ್ದರು. ನಾನು ಅವರಲ್ಲಿ ಒಬ್ಬನಿಗೆ ಕೇಳಿದೆ – ‘ನೀವು ನನ್ನ ಪತಿಯನ್ನು ಸಾಯಿಸಿದ್ದೀರಾ, ನನನ್ನೂ ಸಾಯಿಸಿ.’ ನನ್ನ ಮಗ ಕೂಡ ಕೂಗಿದ – ‘ನೀ ನಾಯಿ! ನನ್ನ ಅಪ್ಪನನ್ನು ಕೊಂದಿದ್ದೀಯಲ್ಲ, ನನನ್ನೂ ಕೊನೆ ಮಾಡು!’ ಆಗ ಅವರು ಹೇಳಿದರು – ‘ನೀವು ಹೆಂಗಸರಾಗಿದ್ದೀರಾ, ನಿಮಗೆ ಏನೂ ಆಗಲ್ಲ. ಮೋದಿ ಬಳಿ ಹೋಗಿ ಈ ಘಟನೆಯ ಬಗ್ಗೆ ಹೇಳಿ.’”
ಪಲ್ಲವಿ ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸಿದ್ದಾರೆ: “ಅವರು ನಮ್ಮ ಮುಂದೆಯೇ ಓಡಾಡುತ್ತಿದ್ದರು, ಆದರೆ ಸೈನಿಕರು ಎಲ್ಲೂ ಕಾಣಿಸಲಿಲ್ಲ. ಅವರು ಸಾಮಾನ್ಯ ಬಟ್ಟೆ ತೊಳೆದಿದ್ದರು. ಜೋಡಿ ನವದಂಪತಿ ಕೂಡ ಇದ್ದರು. ಆದರೆ ಗಂಡಸರಿಗಷ್ಟೆ ಹೊಡೆದರು, ಹೆಂಗಸರು ಮತ್ತು ಮಕ್ಕಳಿಗೆ ಏನೂ ಆಗಿಲ್ಲ.”
ಅವರು ಸರ್ಕಾರವನ್ನು ವಿನಂತಿಸಿ ತಿಳಿಸಿದ್ದಾರೆ – “ನಮ್ಮ ಪತಿಯ ಮೃತದೇಹವನ್ನು ಶೀಘ್ರದಲ್ಲಿ ನಮಗೆ ಒದಗಿಸಿ. ಫ್ಲೈಟ್ ವ್ಯವಸ್ಥೆ ಮಾಡಿ ಕಳಿಸಿ.”ಇದನ್ನು ಓದಿ –ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ: 27ಕ್ಕೂ ಹೆಚ್ಚು ಪ್ರವಾಸಿಗರ ಹತ್ಯೆ, ದೇಶಾದ್ಯಂತ ಆಕ್ರೋಶ
ಈ ಭೀಕರ ಘಟನೆಯಿಂದ ಕುಟುಂಬದ ಮೇಲೆ ಆಘಾತದ ತೊಳಲಾಟ ಮುಂದುವರಿದಿದೆ.