By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಕಾಂತರಾಜು ವರದಿ ತಿರಸ್ಕಾರಕ್ಕೆ ಮೈ-ಚಾನಗರ ಒಕ್ಕಲಿಗರ ಸಂಘ ಆಗ್ರಹ   
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಕಾಂತರಾಜು ವರದಿ ತಿರಸ್ಕಾರಕ್ಕೆ ಮೈ-ಚಾನಗರ ಒಕ್ಕಲಿಗರ ಸಂಘ ಆಗ್ರಹ   
BlogKarnatakaMysoreTrending

ಕಾಂತರಾಜು ವರದಿ ತಿರಸ್ಕಾರಕ್ಕೆ ಮೈ-ಚಾನಗರ ಒಕ್ಕಲಿಗರ ಸಂಘ ಆಗ್ರಹ   

Team Varthaman
Last updated: April 16, 2025 1:11 PM
Team Varthaman
Published: April 16, 2025
Share
SHARE

ಮೈಸೂರು: ಕಾಂತರಾಜ ಸಲ್ಲಿಸಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾಗಿರುವ ಕಾರಣ ಸರ್ಕಾರ ವರದಿ ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಒಕ್ಕಲಿಗರು ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಎಚ್ಚರಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್ ಮಾತನಾಡಿ, ೧೯೯೧ ರಲ್ಲಿ ರಾಜ್ಯದ ಜನಸಂಖ್ಯೆ ೪.೪೯ ಕೋಟಿಗೂ ಅಧಿಕವಿದೆ. ಇದರಲ್ಲಿ ಒಕ್ಕಲಿಗರ ಸಂಖ್ಯೆ ೫೫ ಲಕ್ಷಕ್ಕೂ ಹೆಚ್ಚು ಇತ್ತೆಂದು ತಿಳಿಸಲಾಗಿದೆ. ಆದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಇದ್ದಾರೆ. ಈ ನಡುವೆ ಕಾಂತರಾಜು ಆಯೋಗ ಕೇವಲ ೬೧ ಲಕ್ಷ ಎಂದು ತಿಳಿಸಿದೆ. ಇದು ಒಕ್ಕಲಿಗ ಸಮುದಾಯವನ್ನು ಒಡೆಯುವ ಹಾಗೂ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

Join WhatsApp Group


ಸಮೀಕ್ಷೆ ವೇಳೆ ಮನೆ ಮನೆಗೆ ಭೇಟಿ ನೀಡದೇ ಗಣತಿ ಮಾಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್‌ಕಾರ್ಡ್‌ಗಳಲ್ಲಿ ಜಾತಿ ನಮೂನೆ ಅಥವಾ ಜಾತಿ ಸೂಚಕ ಇಲ್ಲ. ಕೇವಲ ಶಾಲಾ ವರ್ಗಾವಣೆ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳಲ್ಲಿ ಮಾತ್ರ ಇದೆ. ಹೀಗಿರುವಾಗ ರಾಜ್ಯದಲ್ಲಿರುವ ಎಲ್ಲಾ ಒಕ್ಕಲಿಗ ಒಳಪಂಡಗಳ ಪೈಕಿ ಎಷ್ಟು. ಜನರಿಗೆ ಟಿಸಿ ಇದೆ, ಎಷ್ಟು ಜನ ವರ್ಗಾವಣೆ ಪ್ರಮಾಣ ಪತ್ರ ಹೊಂದಿದ್ದಾರೆ ಎನ್ನುವುದನ್ನು ಯಾವ ಮಾನದಂಡದ ಆಧಾರದ ಮೇಲೆ ಖಾತರಿ ಮಾಡಿಕೊಂಡರು ಎಂಬುದು ತಿಳಿಯದಾಗಿದೆ ಎಂದು ಲೇವಡಿ ಮಾಡಿದರು.
ಈ ವರದಿಯ ಉದ್ದೇಶ ಕೇವಲ ಒಕ್ಕಲಿಗ ಸಮುದಾಯವನ್ನು ಒಡೆಯುವ ಯತ್ನವಾಗಿದೆ. ಪ್ರಾತಿನಿಧ್ಯವನ್ನು ಎಲ್ಲ ಮೂಲಗಳಿಂದ ತೆಗೆದು ಹಾಕುವ ಸಂಚು ನಡೆಸಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳು ಇದನ್ನು ವಿರೋಧಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇನ್ನೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ ಮಾತನಾಡಿ, ಸರ್ಕಾರ ವರದಿ ಜಾರಿಗೆ ಮುಂದಾಗಬಾರದು. ಯಾವುದೇ ಕಾರಣಕ್ಕೂ ಈ ವರದಿ ಜಾರಿಗೆ ಬಿಡುವುದಿಲ್ಲ. ಸರ್ಕಾರ ಸಮುದಾಯಕ್ಕೆ ವಿರುದ್ಧವಾಗಿರುವ ವರದಿ ಜಾರಿಗೊಳಿಸಿದರೆ ಸಂಘಟನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು. 

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಸಿದ್ದರಾಮಯ್ಯನವರ ಮೇಲೆ ನಮಗೆ ಗೌರವವಿದೆ. ಆದರೆ, ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುವ ವರದಿಯ ಬಗ್ಗೆ ಕೂಲಂಕುಶವಾಗಿ ಪರಿಗಣಿಸಬೇಕು. ವರದಿಯನ್ನು ವಿರೋಧಿಸಿ ಸಮುದಾಯದ ಪ್ರತಿಯೊಬ್ಬ ಶಾಸಕರು ವಿರೋಧ ವ್ಯಕ್ತಪಡಿಸಬೇಕು. ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಸಹ ಸಮುದಾಯದ ಹೆಸರಿನಲ್ಲೇ ಗೆದ್ದಿದ್ದಾರೆ. ಹೀಗಾಗಿ ಸಮುದಾಯದ ವಿಚಾರದಲ್ಲಿ ಸಾಮೂಹಿಕ ವಿರೋಧ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ಇದನ್ನು ಓದಿ –ಏ.೧೮ಕ್ಕೆ ಮೌನ ಪ್ರತಿಭಟನೆಗೆ ಪರಿಸರ ಬಳಗ ನಿರ್ಧಾರ

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಎನ್.ಪ್ರಕಾಶ್, ಜಿ.ಕುಮಾರ್‌ಗೌಡ,  ಸುಶೀಲಾ ನಂಜಪ್ಪ, ಕೆ.ಪಿ.ನಾಗಣ್ಣ, ಒಂಟಿಕೊಪ್ಪಲು ಗುರುರಾಜ್‌, ಮುಖಂಡರಾದ ಪ್ರಸನ್ನ ಎನ್. ಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಕೆ.ಮಿರ್ಲೆ ಶ್ರೀನಿವಾಸ್‌ಗೌಡ  ಮತ್ತಿತರರು ಉಪಸ್ಥಿತರಿದ್ದರು.

  • ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ
    by Team Varthaman
    June 15, 2026
  • ಗೃಹಲಕ್ಷ್ಮಿ ಯೋಜನೆ:ಅನರ್ಹರ ವಿರುದ್ಧ ಕಟ್ಟುನಿಟ್ಟಿನ ಕ್ರಮ
    by Team Varthaman
    June 15, 2026
  • ಶಾಸಕ ಇಕ್ಬಾಲ್‌ ಹುಸೇನ್‌ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು
    by Team Varthaman
    June 15, 2026
  • ಕರ್ನಾಟಕದಿಂದ ರಾಜ್ಯಸಭೆಗೆ 4 ಮಂದಿ ಆಯ್ಕೆ
    by Team Varthaman
    June 11, 2026
  • ಕೆಐಎ: 1.37 ಕೋಟಿ ಚಿನ್ನ ,ಗಾಂಜಾ ಜಪ್ತಿ
    by Team Varthaman
    June 11, 2026
ವಿಮಾನ ಪತನ : ಮಹಾರಾಷ್ಟ್ರ DCM ಅಜಿತ್‌ ಪವಾರ್‌ ಸೇರಿ ಐವರ ದುರ್ಮರಣ
ತನಿಖಾಧಿಕಾರಿ ಬದಲಾವಣೆಗೆ ಸ್ನೇಹಮಯಿ ಕೃಷ್ಣ ಅರ್ಜಿ
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ; ಮಾನಸಿಕ ಖಿನ್ನತೆ ಕಾರಣ ಎಂದು SIT ನಿರ್ಣಯ
ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ
ಲೇಹ್- ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ
TAGGED:kannadanewsMysore NewsVokkaliga Sanghaಒಕ್ಕಲಿಗರ ಸಂಘಕಾಂತರಾಜು
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysore

ಶ್ರೀಕಂಠೇಶ್ವರ ಪಂಚಮಹಾರಥೋತ್ಸವ

Team Varthaman
Team Varthaman
March 30, 2026
ಏಕದಿನ ಕ್ರಿಕೆಟ್‌ಗೆ ಗ್ಲೇನ್ ಮ್ಯಾಕ್ಸ್‌ವೆಲ್ ವಿದಾಯ
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯ
ಮುಡಾ ಹಗರಣ: ಇಡಿಯಿಂದ 440 ಕೋಟಿ ರೂ. ಆಸ್ತಿ ಮುಟ್ಟುಗೋಲು
ಯಮುನಾ ನದಿಯಲ್ಲಿ ಬೋಟ್ ದುರಂತ; 10 ಸಾವು, 5 ನಾಪತ್ತೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?