ಮೈಸೂರು: ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಉಂಡಭತ್ತಿ ಕೆರೆಗೆ ಟೆಂಪೋ ಉರುಳಿ ೩೧ ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ೩ ವರ್ಷ ೬ ತಿಂಗಳು ಜೈಲು ವಾಸದ ಬಗ್ಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
೨೦೧೦ರ ಡಿ.೧೪ರಂದು ಉಂಡಭತ್ತಿ ಕೆರೆ ಏರಿಯ ಮೇಲೆ ಆರೋಪಿಯು ಕೆಎ-09-4622 ನಂಬರಿನ ಪ್ಯಾಸೆಂಜರ್ ಟೆಂಪೋದಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಅಂದರೆ 40 ಜನರನ್ನು ಕೊರಿಸಿಕೊಂಡು ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯ ಕೆರೆಗೆ ಟೆಂಪೋವನ್ನು ಮೊಗಚಿಸಿದ್ದರು.
ಈ ಪರಿಣಾಮ ಟೆಂಪೋ ಕೆರೆಯ ನೀರಿನಲ್ಲಿ ಮುಳುಗಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಪೈಕಿ 31 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಹಾಗೂ ಸ್ವಲ್ಪ ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ನಂತರ ಅಪಾದಿತ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೆ ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದರು.
ಆರೋಪಿಯು ಸದರಿ ವಾಹನದ ಪರ್ಮಿಟ್‌ನ ಷರತ್ತನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದನು.
ಜತೆಗೆ ಆಪಾದಿತ 2 ವಾಹನದ ಮಾಲೀಕನಾಗಿದ್ದನು. ವಾಹನದ ಪರ್ಮಿಟ್‌ನ ಷರತ್ತುಗಳನ್ನು ಉಲ್ಲಂಘನೆ ಮಾಡಿ ತಮ್ಮ ವಾಹನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕಳುಹಿಸಿಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆಪಾದಿತ-1(ಚಾಲಕ ಚೇತನ್)ನ ಮೇಲೆ ಕಲಂ: 279, 337, 304(2) 2 ಎಂ 2/2, 187, 177 ಹಾಗೂ ಅಪಾದಿತ 2(ವಾಹನದ ಮಾಲೀಕ ಸಂಜೀವ್ ಮೂರ್ತಿ) ಮೇಲೆ ಕಲಂ 192(ಎ), ಐಎಂ.ವಿ ಆಕ್ಟ್ ರೀತ್ಯಾ ತನಿಖೆ ಕೈಗೊಳ್ಳಲಾಗಿತ್ತು.
ಡಿ.ವೈ.ಎಸ್.ಪಿ ಸಿ.ಡಿ.ಜಗದೀಶ್ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜತೆಗೆ ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಹದೇವಸ್ವಾಮಿ ಈ ಪ್ರಕರಣದಲ್ಲಿ ಸಾಕ್ಷಿದಾರರನ್ನು ಕರೆತರುವಲ್ಲಿ ಸಹಕರಿಸಿದ್ದರು.
ಆಪಾದಿತರ ವಿರುದ್ಧದ ಆಪಾದನೆ ರುಜುವಾತುಪಡಿಸುವ ಸಲುವಾಗಿ ಅಭಿಯೋಜನೆಯು 27 ಜನ ಸಾಕ್ಷಿಗಳನ್ನು ಹಾಗೂ 83 ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
ಜತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹೆಸರಿಸಿ ವಾದ ಮಂಡಿಸಿದ್ದರಿಂದ ಮೈಸೂರು ನಗರದ 11ನೇ ಅಧಿಕ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶ ಸಂಜಯ್ ಎಂ.ಮಲ್ಲಿಕಾರ್ಜುನಯ್ಯ ವಿಚಾರಣೆ ನಡೆಸಿ ಆಪಾದಿತರ ವಿರುದ್ಧ ಆಪಾದಿಸಲಾದ ಆಪಾದನೆಯು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದರು.ಇದನ್ನು ಓದಿ –ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್‌ಗಳನ್ನು ಮಟ್ಟ ಹಾಕಬೇಕು – ಅಶೋಕ್
ಐಎಂವಿ ಆಕ್ಟ್ ರಡಿಯಲ್ಲಿ ಮೊದಲ ಆರೋಪಿಗೆ ಒಟ್ಟಾರೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ಒಟ್ಟಾರೆ 12,600 ದಂಡ ಮತ್ತು ಎರಡನೇ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ಎನ್.ಸೌಮ್ಯ ಸದರಿ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಿಚಾರಣೆ ನಡೆಸಿ ಸಮರ್ಥವಾಗಿ ವಾದ ಮಂಡಸಿದ್ದರು.