By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಪಾಕಿಸ್ತಾನ ಸೇನೆಯ ಆಪ್ತನು ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್‌ಮೈಂಡ್: ಸೈಫುಲ್ಲಾ ಖಾಲಿದ್ ಎಂಬುದು ದೃಢ!
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Crime > ಪಾಕಿಸ್ತಾನ ಸೇನೆಯ ಆಪ್ತನು ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್‌ಮೈಂಡ್: ಸೈಫುಲ್ಲಾ ಖಾಲಿದ್ ಎಂಬುದು ದೃಢ!
CrimeLatest NewsTrending

ಪಾಕಿಸ್ತಾನ ಸೇನೆಯ ಆಪ್ತನು ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್‌ಮೈಂಡ್: ಸೈಫುಲ್ಲಾ ಖಾಲಿದ್ ಎಂಬುದು ದೃಢ!

Team Varthaman
Last updated: April 23, 2025 5:29 AM
Team Varthaman
Published: April 23, 2025
Share
SHARE

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಹತ್ಯಾಕಾಂಡದ ಪ್ರಮುಖ ಮಾಸ್ಟರ್‌ಮೈಂಡ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಹಾಗೂ ಟಾಪ್ ಕಮಾಂಡರ್‌ ಸೈಫುಲ್ಲಾ ಖಾಲಿದ್ ಎಂಬುದು ಖಚಿತವಾಗಿದೆ.

ಈ ಹಲ್ಲೆಗೆ ‘ದಿ ರೆಸಿಸ್ಟೆನ್ಸ್ ಫ್ರಂಟ್ (TRF)’ ಎಂಬ ಭಯೋತ್ಪಾದಕ ಸಂಘಟನೆ ಹೊಣೆ ಹೊತ್ತಿದ್ದು, ಇದು ಲಷ್ಕರ್-ಎ-ತೊಯ್ಬಾ (LeT) ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬಂದಿದ್ದ ಇಬ್ಬರು ಉಗ್ರರು ಕೂಡಈ ದಾಳಿಗೆ ಕಾರಣರಾಗಿದ್ದು, ಅವರ ಹೆಸರನ್ನು ಈಗಾಗಲೇ ಭದ್ರತಾ ಮೂಲಗಳು ಗುರುತಿಸಿವೆ.

ಸೈಫುಲ್ಲಾ ಖಾಲಿದ್, ಲಷ್ಕರ್‌ ಉಪ ಮುಖ್ಯಸ್ಥನಾಗಿದ್ದು, ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಆಪ್ತ ಸಹಾಯಕನೆಂದು ಹೇಳಲಾಗುತ್ತಿದೆ. ಈತ ಐಷಾರಾಮಿ ಜೀವನ ಶೈಲಿಯಲ್ಲಿ ತಿರುಗಾಡುತ್ತಾ, ಅತ್ಯಾಧುನಿಕ ಶಸ್ತ್ರಾಸ್ತ್ರಧಾರಿ ಉಗ್ರರ ಭದ್ರತೆಯಲ್ಲಿ ಇರುತ್ತಿದ್ದ. ಭಾರತದ ವಿರುದ್ಧ ದ್ವೇಷಪೂರ್ವಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿದ್ದ ಈತನಿಗೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧವಿದೆ.

Join WhatsApp Group

ಸೈಫುಲ್ಲಾ ಕೆಲ ತಿಂಗಳುಗಳ ಹಿಂದೆ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದ. ಅಲ್ಲಿನ ಪಾಕಿಸ್ತಾನ ಸೇನೆಯ ಬೃಹತ್ ಬೆಟಾಲಿಯನ್‌ ಆವರಣದಲ್ಲಿ ಕರ್ನಲ್ ಜಾಹಿದ್ ಜರೀನ್ ನಡೆಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈತ, ಭಾರತ ವಿರೋಧಿ ಜಿಹಾದಿ ಭಾಷಣ ಮಾಡಿದ. “ಫೆಬ್ರವರಿ 2, 2025. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. 2026ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ” ಎಂಬ ಭರವಸೆ ಈ ವೇಳೆ ಈತ ನೀಡಿದ್ದ.

ಈ ಸಭೆಯನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆ ಜಂಟಿಯಾಗಿ ಆಯೋಜಿಸಿದ್ದವು. ಸಭೆಯಲ್ಲಿ ಪಾಕಿಸ್ತಾನಿ ಶಸ್ತ್ರಾಸ್ತ್ರಧಾರಿ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗುಪ್ತಚರ ವರದಿಗಳ ಪ್ರಕಾರ, ಕಳೆದ ವರ್ಷ ಅಬೋಟಾಬಾದ್ ಕಾಡಿನಲ್ಲಿ ನಡೆದ ಭಯೋತ್ಪಾದಕ ಶಿಬಿರದಲ್ಲಿ ನೂರಾರು ಪಾಕಿಸ್ತಾನಿ ಯುವಕರು ಭಾಗವಹಿಸಿದ್ದರು. ಲಷ್ಕರ್‌ ಸಂಘಟನೆಯ ರಾಜಕೀಯ ವಿಭಾಗ ಪಿಎಂಎಂಎಲ್ ಮತ್ತು ಎಸ್‌ಎಂಎಲ್ ಈ ಶಿಬಿರವನ್ನು ಆಯೋಜಿಸಿತ್ತು. ಶಿಬಿರದಲ್ಲಿ ಸೈಫುಲ್ಲಾ ಯುವಕರಲ್ಲಿ ಭಾರತ ವಿರೋಧಿ ಭಾವನೆ ಬೆಳೆಸುವಂತೆ ಪ್ರಚೋದಕ ಭಾಷಣ ನೀಡಿದ್ದನು.

ಶಿಬಿರದ ಬಳಿಕ ಈ ಯುವಕರಿಗೆ ಭಯೋತ್ಪಾದಕ ತರಬೇತಿ ನೀಡಲಾಗಿದ್ದು, ನಂತರ ಪಾಕಿಸ್ತಾನ ಸೇನೆಯ ಸಹಾಯದಿಂದ ಅವರನ್ನು ಭಾರತದೊಳಗೆ ಕಳಿಸಲಾಗಿತ್ತು ಎಂದು ವರದಿಯಾಗಿದೆ.ಇದನ್ನು ಓದಿ –ಪಹಲ್ಗಾಮ್‌ ದಾಳಿ ; ಸೌದಿ ಅರೇಬಿಯಾ ಪ್ರವಾಸ ತೊರೆದು ಇಂದು ರಾತ್ರಿಯೇ ಪ್ರಧಾನಿ ಭಾರತಕ್ಕೆ ವಾಪಸ್‌

ಆಗಸ್ಟ್ 5, 2019 ರಂದು ಸಂವಿಧಾನ ತಿದ್ದುಪಡಿ ಮೂಲಕ ಜಮ್ಮು ಮತ್ತು ಕಾಶ್ಮೀರದಿಂದ ವಿಧಿ 370 ಮತ್ತು 35A ತೆಗೆದು ಹಾಕಿದ ನಂತರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹೆಚ್ಚು ಸಕ್ರಿಯವಾಗಿದ್ದು, ಐಎಸ್ಐ ಯು ಟಿಆರ್ಎಫ್ ಅನ್ನು ರಚಿಸಿ ದಾಳಿಗಳಿಗೆ ಮುಂದಾಗಿವೆ.

  • ಒಂದೇ ಕುಟುಂಬದ ಮೂವರ ಅನುಮಾನಾಸ್ಪದ ಸಾವು
    by Team Varthaman
    June 9, 2026
  • H-1B ಫಾಸ್ಟ್-ಟ್ರ್ಯಾಕ್ ಶುಲ್ಕ ಅಮಾನ್ಯ
    by Team Varthaman
    June 9, 2026
  • ಗೃಹಲಕ್ಷ್ಮಿ ಯೋಜನೆ: ಬಯೋಮೆಟ್ರಿಕ್ ಕಡ್ಡಾಯ
    by Team Varthaman
    June 9, 2026
  • ಉಜ್ವಲ ಯೋಜನೆ :ಸಬ್ಸಿಡಿ ಸಿಲಿಂಡರ್ ಸಂಖ್ಯೆ 4ಕ್ಕೆ ಇಳಿಕೆ
    by Team Varthaman
    June 9, 2026
  • ಮಾಜಿ ಪುರಸಭೆ ಅಧ್ಯಕ್ಷೆಯ ಪುತ್ರಿ ಅನುಮಾನಾಸ್ಪದ ಸಾವು
    by Team Varthaman
    June 8, 2026
ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣದ ಬಗ್ಗೆ ಯೋಚನೆ: ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ
ಆಪರೇಷನ್ ಅರಹಮಾ: ಗಂಡೇಬಲ್‌ನಲ್ಲಿ ಉಗ್ರ ಹತ್ಯೆ
ಪೆಟ್ರೋಲ್‌, ಡೀಸೆಲ್ ದರ ಮತ್ತೆ ಏರಿಕೆ
ಚಾಮುಂಡಿ ಬೆಟ್ಟ ಸುತ್ತಮುತ್ತ ಚಿರತೆ ಸಂಚರಣೆ
ಮೇ 20ರಂದು ಒಂದು ಲಕ್ಷ ಜನರಿಗೆ ಪಟ್ಟಾ ಖಾತೆ ವಿತರಣೆ
TAGGED:breakingnewsJammu & KashmirlatestnewsPahalgam massacrePahalgam Terrorist attackSaifullah Khalid
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಭಕ್ತಿಯ ಮೌಲ್ಯವನ್ನು ಸಾರಿದ ಶಬರಿ

Team Varthaman
Team Varthaman
February 7, 2026
ದ್ವಿತೀಯಾ ಬ್ರಹ್ಮಚಾರಿಣಿಯ ಪೂಜೆ
ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ
ಒಬ್ಬರಿಗೆ ” ಟೇಕನ್ ಫ಼ಾರ್ ಗ್ರಾಂಟೆಡ್ ” ಆಗುವ ಮುನ್ನ
ನಟ, ನಿರ್ದೇಶಕ ರಾಜು ತಾಳೀಕೋಟೆ ನಿಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?