ಶೋಷಣೆಯ ಮತ್ತೊಂದು ಮುಖ
ಆಕೆ ಸಮಾಜದ ಅತ್ಯಂತ ಕೆಳ ವರ್ಗದಲ್ಲಿ ಜನಿಸಿದ ಹೆಣ್ಣುಮಗಳು. ಮೂರು ಜನ ತಂಗಿಯರು,ಇಬ್ಬರು ತಮ್ಮಂದಿರನ್ನು ಹೊಂದಿದ…
(ಬ್ಯಾಂಕರ್ಸ್ ಡೈರಿ)
ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ? ಅಂದು ಸರಿ ಸುಮಾರು ಮಧ್ಯಾಹ್ನ 12:00 ಆಗಿತ್ತು. ಮಟಮಟ ಮಧ್ಯಾಹ್ನ ಉರಿಬಿಸಿಲು ಬೇರೆ. ರಮೇಶ್ (ಹೆಸರು ಬದಲಿಸಲಾಗಿದೆ) ಬಂದವರೇ “ಮೇಡಂ ಏನೋ ಹೇಳಬೇಕಿತ್ತು” ಎಂದರು. ಆದರೆ ಅವರ ಧ್ವನಿ ಮಾಮೂಲಿನಂತೆ ಇರಲಿಲ್ಲ. ”ಏನಾಯ್ತು ಸರ್ ಯಾಕೆ ಡಲ್ಲಾಗಿದ್ದೀರಾ?” ಎಂದು ಕೇಳಿದೆ . ಒಂದು ಕ್ಷಣ ಆತ ಸುತ್ತ ಮುತ್ತ ನೋಡಿದರು. ಪರಿಚಯದವರು ಯಾರಾದರೂ ಇದ್ದಾರೆಯೇ ಎನ್ನುವಂತೆ. “ಪರವಾಗಿಲ್ಲ ಮೇಡಂ ಇನ್ನು ಸ್ವಲ್ಪ ಹೊತ್ತು ಆಗಲಿ, ನಿಮ್ಮ ಕೆಲಸ ಮಾಡಿಕೊಳ್ಳಿ, ಆಮೇಲೆ ಹೇಳುತ್ತೇನೆ” ಎಂದರು . ನನಗೆ ಸೂಕ್ಷ್ಮತೆ ತಿಳಿಯಿತು. ಬಹುಶಃ ಬೇರೆ ಯಾರಿಗೂ ತಿಳಿಯದಂತಹ ಯಾವುದೋ ವಿಚಾರ ಹೇಳಲು ಇರಬಹುದು ಎಂದು. ಸರಿ ನಾಲ್ಕಾರು ಜನ ಹೋದ ಮೇಲೆ ಹತ್ತಿರ ಬಂದು “ಮೇಡಂ ನನ್ನ ಅಕೌಂಟಿನಿಂದ ದಿನ 200, 300, 400 ಹೋಗುತ್ತಿದೆ” ಎಂದರು . “ಹೌದಾ ಯಾರು ಅಕೌಂಟಿಗೆ ಹೋಗುತ್ತಿದೆ ನೋಡೋಣ. ನಿಮ್ಮ ಅಕೌಂಟ್ ನಂಬರ್ ಕೊಡಿ” ಎಂದು ಕೇಳಿ ಅವರ ಅಕೌಂಟ್ ಡೀಟೇಲ್ಸ್ ನೋಡಿದಾಗ ಹಣ ಅವರ ಮಗನ ಖಾತೆಗೆ ಹೋಗುತ್ತಿತ್ತು . “ನಿಮ್ಮ ಮಗನ ಖಾತೆಗೆ ಹೋಗುತ್ತಿದೆಯಲ್ಲಾ” ಎಂದೆ. “ನನಗೂ ಅದೇ ಹೆಸರು ಬಂದಿದೆ ಆದರೆ ಮಗ ಹೇಳುತ್ತಿದ್ದಾನೆ ನನ್ನ ಖಾತೆಗೆ ಬಂದಿಲ್ಲಪ್ಪ ಎಂದು. ಅವನ ಫೋನ್ ಪೇ ಹಿಸ್ಟರಿ ಕೂಡ ತೋರಿಸಿದ. ಅದರಲ್ಲೂ ಕೂಡ ಅವನಿಗೆ ಯಾವುದೇ ಜಮೆ ಆಗಿಲ್ಲ” ಎಂದರು. ಈ ಹಿಂದೆ ನನ್ನ ಗೆಳತಿಯ ಮಗನೇ ಅಪ್ಪನ ಫೋನ್ ಪೇ ಇಂದ ಆಗಾಗ ಹಣ ವರ್ಗಾಯಿಸಿಕೊಂಡು ಹಿಸ್ಟರಿ ಡಿಲೀಟ್ ಮಾಡಿ ನೋಡೀಪ್ಪಾ ನನ್ನ ಖಾತೆಗೆ ಹಣ ಬಂದೇ ಇಲ್ಲ ಎಂದಿದ್ದು, ಅವನ ಖಾತೆ ಬೇರೆ ಬ್ಯಾಂಕಿನಲ್ಲಿದ್ದು ಅಲ್ಲಿ ಚೆಕ್ ಮಾಡಿದಾಗ ಹಣ ಅವನಿಗೇ ಹೋಗಿದ್ದು, ನನ್ನ ಗೆಳತಿಯ ಗಂಡ ನಮ್ಮಲ್ಲೇ ತಮ್ಮ ಫೋನ್ ಪೇ ಲಾಕ್ ಮಾಡಿಸಿ ಮೇಡಂ ಈ ವಿಷಯ ನಿಮ್ಮಲ್ಲೇ ಇರಲಿ. ಇರುವುದೊಬ್ಬನೇ ಮಗ ನಾವು ಏನಾದರು ಹೆಚ್ಚು ಕೇಳಿ, ಆತ ಹೆದರಿ ಅಥವಾ ನಾಚಿ ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುವುದು ಮೆಲ್ಲನೆ ಬ್ಲಾಕ್ ಮಾಡಿಸಿ ಏನೂ ಗೊತ್ತಾಗದ ಹಾಗೆ ಇದ್ದುಬಿಡುತ್ತೇನೆ ಎಂದದ್ದು ನನ್ನ ನೆನಪಿಗೆ ಬಂದಿತು. “ಸರ್ ಒಮ್ಮೆ ಮನೆಯಲ್ಲಿ ವಿಚಾರಿಸಿ ನೋಡಿ: ಎಂದೆ. ಇದಾಗಿ ಒಂದು ವಾರಕ್ಕೆ ಮತ್ತೆ ಆತ ಬಂದರು. “ಮೇಡಂ ಈಗಲೂ ದಿನ ನನ್ನ ಖಾತೆಯಿಂದ ನನ್ನ ಮಗನ ಹೆಸರಿಗೆ ಹೋಗುತ್ತಿದೆ. ಏನು ಮಾಡಲಿ ಮನೆಯಲ್ಲಿ ಜೋರಾಗಿ ಕೇಳಿದರೆ ಎಲ್ಲಿ ಅವನು ನೊಂದುಕೊಳ್ಳುತ್ತಾನೋ ಎನ್ನುವ ಭಯ” ಎಂದರು. “ ಸರಿ ಯುಪಿಐ ಬ್ಲಾಕ್ ಮಾಡಿಬಿಡಿ ಸರ್” ಎಂದೆ. ಆತ ಅರ್ಜಿ ಕೊಟ್ಟರು. ನಾವು ಯುಪಿಐ ಬ್ಲಾಕ್ ಮಾಡಿದ್ದೆವು. “ಇನ್ನು ಮೇಲಿನ ಭಯ ಇಲ್ಲ. ನಿಮ್ಮ ಖಾತೆಯಿಂದ ಫೋನ್ ಪೇ ಗೂಗಲ್ ಪೇ ಯಾವುದು ಆಗುವುದಿಲ್ಲ ಆರಾಮವಾಗಿರಿ” ಎಂದೆ.…
ಮೇ 1ರಿಂದ ರೈಲು ಪ್ರಯಾಣ ದುಬಾರಿ
ನವದೆಹಲಿ: ಮೇ 1, 2025ರಿಂದ ಭಾರತೀಯ ರೈಲ್ವೆ ಕೆಲ ಹೊಸ ನಿಯಮಗಳು ಮತ್ತು ಶುಲ್ಕಗಳನ್ನು ಜಾರಿಗೆ…
ಕರ್ನಾಟಕದಿಂದ ನಾಲ್ವರು ಪಾಕಿಸ್ತಾನ ಪ್ರಜೆಗಳು ಗಡಿಪಾರು
ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ, ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕಿಸ್ತಾನ ಪ್ರಜೆಗಳನ್ನು ಕರ್ನಾಟಕದಿಂದ ಗಡಿಪಾರು…
ಯುದ್ಧ ಬೇಡ, ಶಾಂತಿಯೇ ಮುಖ್ಯ – ಪಾಕಿಸ್ತಾನ ವಿಚಾರದಲ್ಲಿ ಕೇಂದ್ರದ ನಿರ್ಧಾರಕ್ಕೆ ಕೈ ಜೋಡಿಸುತ್ತೇವೆ
ಮೈಸೂರು : ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದ ಮಾಡಬೇಕಾದ ಅಗತ್ಯ ಇಲ್ಲ. ಮತ್ತಷ್ಟು ಭದ್ರತಾ…
ಒಂದು ವಾರದಲ್ಲಿ ಕಾವೇರಿ ಆರತಿಯ ನೀಲನಕ್ಷೆ ಸಿದ್ಧವಾಗಲಿದೆ – ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕಾವೇರಿ ನದಿಯಲ್ಲಿ ಆಯೋಜಿಸಲಾಗುತ್ತಿರುವ ಆರತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ನೀಲನಕ್ಷೆ ಒಂದು ವಾರದೊಳಗೆ ಸಿದ್ಧವಾಗಲಿದ್ದು, ಈ…
ಈಜಲು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು
ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆಯಿದ್ದು, ಈಜಲು ಕೆರೆಯಲ್ಲಿ ಹೋದ…
ರೈತರಿಗೆ ಸಂತಸದ ಸುದ್ದಿ: ಮನೆಬಾಗಿಲಿಗೇ ಪೋಡಿ ದುರಸ್ತಿ ಸೇವೆ
ಬೆಂಗಳೂರು: ರೈತರಿಗೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಪೋಡಿ ದುರಸ್ತಿ ಕಾರ್ಯಗಳನ್ನು…
ಮೇ ತಿಂಗಳಿಂದ BPL ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ರಾಗಿ, ಜೋಳ ಉಚಿತ ವಿತರಣೆ
ಬೆಂಗಳೂರು: BPL ಸೇರಿದಂತೆ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಶುಭವಾರ್ತೆಯನ್ನ ನೀಡಿದ್ದಾರೆ.…
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ
ಬೆಂಗಳೂರು: ರಾಜ್ಯದ ಆಟೋ ಮತ್ತು ಕ್ಯಾಬ್ ಚಾಲಕರಿಗಾಗಿ ಸಂತಸದ ಸುದ್ದಿಯೊಂದು ಬಂದಿದೆ. ಹೈಕೋರ್ಟ್ನ ನಿರ್ದೇಶನೆಯಂತೆ ಕರ್ನಾಟಕ…