ಮೈಸೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರಿ ಮೂವರು ಸಾಧನೆ ಮಾಡಿದ್ದಾರೆ.
ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಎ.ಸಿ.ಪ್ರೀತಿ 263, ಮೈಸೂರು ತಾಲ್ಲೂಕಿನ ಬೆಳವಾಡಿಯ ಜೆ.ಭಾನು ಪ್ರಕಾಶ್ 523 ಮತ್ತು ನಗರದ ದಟ್ಟಗಳ್ಳಿಯ ನಿವಾಸಿ ಜಿ.ರಶ್ಮಿ 976ನೇ ರಾಂಕ್ ಪಡೆದು, ಸಾಧನೆ ಮಾಡುವ ಮೂಲಕ, ಈ ಮೂವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೂರನೇ ಪ್ರಯತ್ನದಲ್ಲಿ ಯಶಸ್ಸು: ಎ.ಸಿ.ಪ್ರೀತಿ ಅವರು 3ನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಗುರಿ ತಲುಪಿದ್ದಾರೆ. ಇವರ ತಂದೆ ಚನ್ನಬಸಪ್ಪ ರೈತ, ತಾಯಿ ನೇತ್ರಾವತಿ. 1ರಿಂದ 10ನೇ ತರಗತಿವರೆಗೂ ಅಂಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ.
ನಂತರ ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಕೃಷಿಯಲ್ಲಿ ಬಿಎಸ್‌ಸಿ ಪದವಿ, ಸ್ನಾತಕ ಪದವಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಸಿದ್ಧತೆ ನಡೆಸಿದೆ. ಹೈದರಾಬಾದ್‌ನಲ್ಲಿ ಪಿಜಿ ರೂಮ್‌ನಲ್ಲಿ ವಾಸ್ತವ್ಯ ಹೂಡಿ, ಅಲ್ಲಿಯ ಗ್ರಂಥಾಲಯದಲ್ಲೇ ಓದಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ.
ಯಾವುದೇ ಕೋಚಿಂಗ್ ತರಗತಿ ಸೇರಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದವರ ಸಲಹೆ ಪಡೆದು ಅಭ್ಯಾಸ ಯೋಜನೆ ರೂಪಿಸಿಕೊಂಡಿದ್ದ ಎಂದು ತಮ್ಮ ಅಭ್ಯಾಸ ವಿವರವನ್ನು ಪ್ರೀತಿ ಹಂಚಿಕೊಂಡರು.
ಕೃಷಿಕನ ಮಗನ ಸಾಧನೆ : ಜಿ.ಭಾನುಪ್ರಕಾಶ್ 523ನೇ ಬ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಇವರು ಮೂಲತಃ ವೈದ್ಯರು ಎಂಬುದು ವಿಶೇಷ ರೈತ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿಯ ಪುತ್ರರಾಗಿದ್ದಾರೆ. ಈಗಾಗಲೇ ಇವರು ಕರ್ನಾಟಕ ಕೇಡರ್ ಐಪಿಎಸ್‌ಗೆ ನಿಯೋಜನೆಗೊಂಡಿದ್ದಾರೆ.
2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 448ನೇ ರಾಂಕ್ ಪಡೆದುಕೊಂಡಿದ್ದರು. 2023ರಲ್ಲಿ 600ನೇ ರ್ಯಾಂಕ್ ಗಳಿಸಿದ್ದರು. ಈ ಸಲ 523ನೇ ರ್ಯಾಂಕ್ ದೊರೆತಿದೆ. ಹಿಂದಿನ ಬ್ಯಾಂಕ್ ಆಧಾರದ ಮೇಲೆ ಹೈದರಾಬಾದ್‌ನಲ್ಲಿ ಭಾರತೀಯ ಪೊಲೀಸ್ ಸೇವೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಐಎಎಸ್ ಅಧಿಕಾರಿ ಆಗುವ ಛಲ ಬಿಟ್ಟಿಲ್ಲ. ಹೀಗಾಗಿ, ಮುಂದಿನ ಸಲ ಮತ್ತೆ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾರೆ.
ಇವರು ಬೆಳವಾಡಿ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಬಳಿಕ ಚಾಮರಾಜನಗರದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 6ರಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದರು. ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಬಳಿಕ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯಲ್ಲಿ ಎಂಡಿ ಪಿಡಿಯಾಟ್ರಿಕ್ಸ್ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಐಎಫ್ ಎಸ್ ಅಧಿಕಾರಿ ರಶ್ಮಿ: ಮೈಸೂರು ನಗರದ ದಟ್ಟಗಳ್ಳಿಯ ನಿವಾಸಿ, ಹಾಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಜಿ.ರಶ್ಮಿ ಅವರು 976ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. 2022 ಪರೀಕ್ಷೆ ತೇರ್ಗಡೆಯಾಗಿದ್ದಾರೆ.
ಪ್ರಸ್ತುತ ಒಡಿಶಾದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಯುಪಿಎಸಿ ಪರಿಕ್ಷೆಯಲ್ಲಿ 976ನೇ ರಾಂಕ್ ಪಡೆದಿದ್ದಾರೆ. ಐಎಫ್‌ಎಸ್ ಅಧಿಕಾರಿಯಾಗಿಯೇ ಮುಂದುವರಿಯುವ ಅಭಿಲಾಷೆ ಹೊಂದಿದ್ದಾರೆ.ಇದನ್ನು ಓದಿ –ಮೈಸೂರಿನ 10 ಮಂದಿ ಕಾಶ್ಮೀರದಲ್ಲಿ…!
ದಟ್ಟಗಳ್ಳಿಯ ಗಂಗರಾಮ್ ಹಾಗೂ ರತ್ನಮ ದಂಪತಿಯ ಪುತ್ರಿ, ಕುವೆಂಪುನಗರದ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಹಾಗೂ ಜಯಚಾಮರಾಜೇಂದ್ರ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಬಿ.ಇ(ಸಿವಿಲ್) ಸ್ನಾತಕ ಪದವಿ ಪಡೆದಿದ್ದಾರೆ.