By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಮೈಸೂರಿನ ಮೂವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಮೈಸೂರಿನ ಮೂವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ
KarnatakaMysoreTrending

ಮೈಸೂರಿನ ಮೂವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ

Team Varthaman
Last updated: April 23, 2025 1:20 PM
Team Varthaman
Published: April 23, 2025
Share
SHARE

ಮೈಸೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರಿ ಮೂವರು ಸಾಧನೆ ಮಾಡಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಎ.ಸಿ.ಪ್ರೀತಿ 263, ಮೈಸೂರು ತಾಲ್ಲೂಕಿನ ಬೆಳವಾಡಿಯ ಜೆ.ಭಾನು ಪ್ರಕಾಶ್ 523 ಮತ್ತು ನಗರದ ದಟ್ಟಗಳ್ಳಿಯ ನಿವಾಸಿ ಜಿ.ರಶ್ಮಿ 976ನೇ ರಾಂಕ್‌ ಪಡೆದು, ಸಾಧನೆ ಮಾಡುವ ಮೂಲಕ, ಈ ಮೂವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮೂರನೇ ಪ್ರಯತ್ನದಲ್ಲಿ ಯಶಸ್ಸು: ಎ.ಸಿ.ಪ್ರೀತಿ ಅವರು 3ನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಗುರಿ ತಲುಪಿದ್ದಾರೆ. ಇವರ ತಂದೆ ಚನ್ನಬಸಪ್ಪ ರೈತ, ತಾಯಿ ನೇತ್ರಾವತಿ. 1ರಿಂದ 10ನೇ ತರಗತಿವರೆಗೂ ಅಂಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ.

Join WhatsApp Group

ನಂತರ ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಕೃಷಿಯಲ್ಲಿ ಬಿಎಸ್‌ಸಿ ಪದವಿ, ಸ್ನಾತಕ ಪದವಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಸಿದ್ಧತೆ ನಡೆಸಿದೆ. ಹೈದರಾಬಾದ್‌ನಲ್ಲಿ ಪಿಜಿ ರೂಮ್‌ನಲ್ಲಿ ವಾಸ್ತವ್ಯ ಹೂಡಿ, ಅಲ್ಲಿಯ ಗ್ರಂಥಾಲಯದಲ್ಲೇ ಓದಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ.

ಯಾವುದೇ ಕೋಚಿಂಗ್ ತರಗತಿ ಸೇರಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದವರ ಸಲಹೆ ಪಡೆದು ಅಭ್ಯಾಸ ಯೋಜನೆ ರೂಪಿಸಿಕೊಂಡಿದ್ದ ಎಂದು ತಮ್ಮ ಅಭ್ಯಾಸ ವಿವರವನ್ನು ಪ್ರೀತಿ ಹಂಚಿಕೊಂಡರು.

ಕೃಷಿಕನ ಮಗನ ಸಾಧನೆ : ಜಿ.ಭಾನುಪ್ರಕಾಶ್ 523ನೇ ಬ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಇವರು ಮೂಲತಃ ವೈದ್ಯರು ಎಂಬುದು ವಿಶೇಷ ರೈತ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿಯ ಪುತ್ರರಾಗಿದ್ದಾರೆ. ಈಗಾಗಲೇ ಇವರು ಕರ್ನಾಟಕ ಕೇಡರ್ ಐಪಿಎಸ್‌ಗೆ ನಿಯೋಜನೆಗೊಂಡಿದ್ದಾರೆ.

2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 448ನೇ ರಾಂಕ್ ಪಡೆದುಕೊಂಡಿದ್ದರು. 2023ರಲ್ಲಿ 600ನೇ ರ್ಯಾಂಕ್ ಗಳಿಸಿದ್ದರು. ಈ ಸಲ 523ನೇ ರ್ಯಾಂಕ್ ದೊರೆತಿದೆ. ಹಿಂದಿನ ಬ್ಯಾಂಕ್ ಆಧಾರದ ಮೇಲೆ ಹೈದರಾಬಾದ್‌ನಲ್ಲಿ ಭಾರತೀಯ ಪೊಲೀಸ್ ಸೇವೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಐಎಎಸ್ ಅಧಿಕಾರಿ ಆಗುವ ಛಲ ಬಿಟ್ಟಿಲ್ಲ. ಹೀಗಾಗಿ, ಮುಂದಿನ ಸಲ ಮತ್ತೆ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾರೆ.

ಇವರು ಬೆಳವಾಡಿ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಬಳಿಕ ಚಾಮರಾಜನಗರದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 6ರಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದರು. ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಬಳಿಕ ಹುಬ್ಬಳ್ಳಿಯ ಕಿಮ್ಸ್ ಸಂಸ್ಥೆಯಲ್ಲಿ ಎಂಡಿ ಪಿಡಿಯಾಟ್ರಿಕ್ಸ್ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಐಎಫ್ ಎಸ್ ಅಧಿಕಾರಿ ರಶ್ಮಿ: ಮೈಸೂರು ನಗರದ ದಟ್ಟಗಳ್ಳಿಯ ನಿವಾಸಿ, ಹಾಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಜಿ.ರಶ್ಮಿ ಅವರು 976ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. 2022 ಪರೀಕ್ಷೆ ತೇರ್ಗಡೆಯಾಗಿದ್ದಾರೆ.

ಪ್ರಸ್ತುತ ಒಡಿಶಾದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಯುಪಿಎಸಿ ಪರಿಕ್ಷೆಯಲ್ಲಿ 976ನೇ ರಾಂಕ್ ಪಡೆದಿದ್ದಾರೆ. ಐಎಫ್‌ಎಸ್ ಅಧಿಕಾರಿಯಾಗಿಯೇ ಮುಂದುವರಿಯುವ ಅಭಿಲಾಷೆ ಹೊಂದಿದ್ದಾರೆ.ಇದನ್ನು ಓದಿ –ಮೈಸೂರಿನ 10 ಮಂದಿ ಕಾಶ್ಮೀರದಲ್ಲಿ…!

ದಟ್ಟಗಳ್ಳಿಯ ಗಂಗರಾಮ್ ಹಾಗೂ ರತ್ನಮ ದಂಪತಿಯ ಪುತ್ರಿ, ಕುವೆಂಪುನಗರದ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಹಾಗೂ ಜಯಚಾಮರಾಜೇಂದ್ರ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಬಿ.ಇ(ಸಿವಿಲ್) ಸ್ನಾತಕ ಪದವಿ ಪಡೆದಿದ್ದಾರೆ.

  • ಬಿಡದಿ ಟೌನ್‌ಶಿಪ್‌: ಭೂಮಿ ನೀಡುವ ರೈತರ ಜಮೀನು ಪಡೆಯುತ್ತೇವೆ – ಡಿಕೆಶಿ
    by Team Varthaman
    August 11, 2026
  • ರಾಜ್ಯಕ್ಕೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು?
    by Team Varthaman
    August 11, 2026
  • ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ
    by Team Varthaman
    August 11, 2026
  • ‘ಸಂವಿಧಾನ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳ ಸಂಚು’: ಡಿಕೆಶಿ ಆರೋಪ
    by Team Varthaman
    August 10, 2026
  • ‘ಆಪರೇಷನ್ ಮುಕ್ತ’; 4 ಶಂಕಿತ ಬಾಂಗ್ಲಾದೇಶಿ ವಶಕ್ಕೆ
    by Team Varthaman
    August 8, 2026
ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಮಗು ಸಾವು
ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರ ಜಾಮೀನು ರದ್ದು
9 ವರ್ಷಗಳ ನಂತರ ಫೈನಲ್ ತಲುಪಿದ RCB
ಕೇಂದ್ರ ಸರ್ಕಾರಿ ನೌಕರರಿಗೆ 4% ಡಿಎ ಹೆಚ್ಚಳದ ಸಾಧ್ಯತೆ
ವಿಮಾನ ಪತನ : ಮಹಾರಾಷ್ಟ್ರ DCM ಅಜಿತ್‌ ಪವಾರ್‌ ಸೇರಿ ಐವರ ದುರ್ಮರಣ
TAGGED:breakingnewslatestnewsMysore NewsUPSC Exam
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsMandya

KRS ಡ್ಯಾಂನಿಂದ ನೀರು ಬಿಡುಗಡೆ – ತಗ್ಗು ಪ್ರದೇಶದ ಜನರಿಗೆ ಪ್ರವಾಹ ಎಚ್ಚರಿಕೆ

Team Varthaman
Team Varthaman
August 19, 2025
ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
‘ಕಪ್ಪು ನೋಟು’ ವಂಚನೆ ಜಾಲ ಪತ್ತೆ : 8 ಮಂದಿ ಬಂಧನ
ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಭಾರತ
ಗೃಹಲಕ್ಷ್ಮಿ ಯೋಜನೆ:ಅನರ್ಹರ ವಿರುದ್ಧ ಕಟ್ಟುನಿಟ್ಟಿನ ಕ್ರಮ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?