ಬೆಂಗಳೂರು: “ನನ್ನನ್ನು ಕ್ಷಮಿಸಿ” ಎಂಬ ಡೆತ್ ನೋಟ್ ಒಂದನ್ನು ಬರೆದ , ಕೇವಲ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಗಂಧಾರ್ (13) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬಾಲಕ ರಾತ್ರಿ ಸಹಜವಾಗಿ ಊಟ ಮಾಡುತ್ತಿದ್ದಾನೆ ಮತ್ತು ಮಲಗಲು ತನ್ನ ಕೋಣೆಗೆ ಹೋಗಿದ್ದ. ಆದರೆ ಬೆಳಗ್ಗೆ ತಂದೆ ರೂಮ್ ಬಾಗಿಲು ತೆರೆದಾಗ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಾಣಿಸಿಕೊಂಡಿದೆ.
ಘಟನೆ ಸ್ಥಳದಲ್ಲಿ “Forgive Me” (ನನ್ನನ್ನು ಕ್ಷಮಿಸಿ) ಎಂಬ ವಾಕ್ಯವಿರುವ ಡೆತ್ ನೋಟು ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕನ ತಂದೆ ಗಣೇಶ್ ಪ್ರಸಾದ್ ಅವರು ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದನ್ನು ಓದಿ –ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.