ಜಮ್ಮು-ಕಾಶ್ಮೀರ : ಕಳೆದ 48 ಗಂಟೆಗಳಲ್ಲಿ ಭಾರತೀಯ ಸೇನೆ ಭದ್ರತಾ ಪಡೆಗಳ ಸಹಕಾರದಿಂದ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರು ಉಗ್ರರನ್ನು ಎನ್‌ಕೌಂಟರ್ ಮೂಲಕ ಹೊಡೆದುರುಳಿಸಿದೆ.
ಮೇ 13ರಂದು ಶೋಫಿಯನ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸೇನೆ ಬಲೆ ಬೀಸಿ ಹತ್ಯೆ ಮಾಡಿತ್ತು. ಈ ಘಟನೆಗೆ ಮುಂದುವರಿದಂತೆ, ಇಂದು ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದಿರ್ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೂ ಮೂರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಮರಣಹೊಂದಿದ್ದಾರೆ.
ಇದೇ ಮೂಲಕ ಕೇವಲ 48 ಗಂಟೆಗಳ ಅವಧಿಯಲ್ಲಿ ಭಾರತೀಯ ಸೇನೆ ಜಮ್ಮು-ಕಾಶ್ಮೀರದಲ್ಲಿ ಎರಡು ಯಶಸ್ವಿ ಎನ್‌ಕೌಂಟರ್‌ಗಳನ್ನು ನಡೆಸಿದ್ದು, ಒಟ್ಟು ಆರು ಉಗ್ರರನ್ನು ನಿಗ್ರಹಿಸಿದೆ.ಇದನ್ನು ಓದಿ –ಸಿಎಂ ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್ ನೀಡಲು ದೇವರಾಜು ಅರಸು ವಿಶ್ವವಿದ್ಯಾನಿಲಯದಿಂದ ನಿರ್ಧಾರ
ಭದ್ರತಾ ಪಡೆಗಳು ಪ್ರದೇಶದಲ್ಲಿ ಹೆಚ್ಚಿನ ತಪಾಸಣೆಗೆ ಮುಂದಾಗಿದ್ದು, ಇನ್ನು ಕೆಲವು ಉಗ್ರರು ಅಡಗಿಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ತೀವ್ರ ಗಸ್ತು ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ.