ಬೆಂಗಳೂರು: ಲಾಭದ ಆಸೆ ತೋರಿಸಿ WhatsApp ಲಿಂಕ್ ಮೂಲಕ ವ್ಯಕ್ತಿಯೋರ್ವನಿಗೆ 65.51 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಬನಶಂಕರಿಯ ಮಂಜುನಾಥ್ ಎಂಬವರು ಈ ಸೈಬರ್ ವಂಚನೆಗೆ ಒಳಗಾಗಿದ್ದು, ಈಗ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಮಂಜುನಾಥ್ ಅವರ ವಾಟ್ಸಪ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕಂಪನಿಯ ಹೆಸರಿನಲ್ಲಿ ಹಣ ಹೂಡಿಕೆಗೆ ಸಂಬಂಧಿಸಿದ ಲಿಂಕ್ ಕಳುಹಿಸಿದ್ದ. ಲಿಂಕ್ ಕ್ಲಿಕ್ ಮಾಡಿದ ಮಂಜುನಾಥ್, ಪೂರೈಕೆ ಲಿಂಕ್ ಮೂಲಕ ನೋಂದಣಿ ಮಾಡಿಕೊಂಡರು ಮತ್ತು ಆ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ.
ಅನಂತರ, ಆ ಅಪ್ಲಿಕೇಶನ್‌ನಲ್ಲಿ ಆಯಪ್ ಮೂಲಕ ಷೇರುಗಳ ಮೇಲೆ ಹಣ ಹೂಡಿಕೆಗೆ ಸಲಹೆ ನೀಡಲಾಗಿತ್ತು. “ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ” ಎಂಬ ಆಮಿಷದಲ್ಲಿ ನಂಬಿದ್ದ ಮಂಜುನಾಥ್, ಹಲವು ಬ್ಯಾಂಕ್ ಖಾತೆಗಳಿಗೆ ಒಟ್ಟು ₹65 ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾಯಿಸಿದ್ದಾರೆ.
ಕೂಡಲೇ ಅಪ್ಲಿಕೇಶನ್‌ನಲ್ಲಿ ₹1 ಕೋಟಿಗೂ ಹೆಚ್ಚು ಲಾಭ ತೋರಿಸಲಾಗಿತ್ತು. ಆದರೆ ಮಂಜುನಾಥ್ ಲಾಭದ ಹಣ ಕೇಳುತ್ತಿದ್ದಂತೆ, ವಂಚಕರು ಸಂಪರ್ಕ ಕಡಿದುಕೊಂಡು ಮರೆಯಾಗಿದ್ದಾರೆ.