- ಮುಷ್ಕರ ಬೆಂಬಲಿಸಿ ನಿಂತಲ್ಲೇ ನಿಂತ 9 ಸಾವಿರ ಲಾರಿಗಳು
ಮೈಸೂರು: ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಲಾರಿ ಮಾಲೀಕರು ರಾಜ್ಯವ್ಯಾಪಿ ಮುಷ್ಕರವನ್ನು ಬೆಂಬಲಿಸಿ ಮೈಸೂರಿನಲ್ಲೂ ಲಾರಿಗಳ ಸಂಚಾರ ಬಂದ್ ಆಗಿದ್ದು, 9 ಸಾವಿರ ಲಾರಿಗಳು ನಿಂತಲ್ಲೇ ನಿಂತಿವೆ.
ರಾಜ್ಯವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ಲಾರಿ ಮಾಲೀಕರ ಸಂಘದ ಕಚೇರಿ ಸಮೀಪ ಲಾರಿ ಮಾಲೀಕರು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು. ಈ ಕುರಿತು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮ ಮಾತನಾಡಿ, ಮೈಸೂರಿನಲ್ಲಿ 6 ಸಾವಿರ 10 ಚಕ್ರದ ಬೃಹತ್ ಲಾರಿಗಳಿದ್ದು, ನಾಲ್ಕು ಸಾವಿರ ಲಘು ಲಾರಿಗಳಿವೆ. ಇದರಲ್ಲಿ ಅನ್ನ ಭಾಗ್ಯ ಅಕ್ಕಿ, ರಸಗೊಬ್ಬರ ಹಾಗೂ ಮದ್ಯ ಸರಬರಾಜು ಪ್ರಮುಖವಾಗಿ ನಡೆಯುತ್ತಿತ್ತು. ಎಲ್ಲವೂ ಸ್ಥಗಿತಗೊಳಿಸಲಾಗಿದೆ ಎಂದರು.
ಒಟ್ಟಾರೆ ಹಾಲು, ನೀರು, ಔಷಧಿ ಹಾಗೂ ತರಕಾರಿ ಹೊರತು ಪಡಿಸಿ ಉಳಿದೆಲ್ಲವನ್ನು ಸ್ಥಗಿತ ಮಾಡಲಾಗಿದೆ. ಮಾತ್ರವಲ್ಲದೆ ಲಾರಿಗಳ ನಿಲುಗಡೆಯಿಂದ ಶೇ.10 ರಷ್ಟು ಡಿಸೇಲ್ ಖರೀದಿ ಇಳಿಮುಖದ ಹೊರೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಲಾರಿ ಚಾಲಕರು ನಮ್ಮನ್ನು ಬೆಂಬಲಿಸಲಿದ್ದಾರೆಂದು ಹೇಳಿದರು.ಇದನ್ನು ಓದಿ –ಹುಬ್ಬಳ್ಳಿ ಬಾಲಕಿ ಹತ್ಯೆ: ಆರೋಪಿ ರಿತೇಶ್ ಎನ್‌ಕೌಂಟರ್ ಬಗ್ಗೆ CID ತನಿಖೆ
ಉಪಾಧ್ಯಕ್ಷ
ಪ್ರಕಾಶ್ ಪೆರಿಯರ, ಲೋಡ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಯಿದ್, ಪ್ರಧಾನ ಕಾರ್ಯದರ್ಶಿ ಎಂ.ಸ್ವಾಮಿ, ನಿರ್ದೇಶಕ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.