ಮಂಡ್ಯ: ಮದ್ದೂರು ತಾಲೂಕು ಮುಟ್ಟನಹಳ್ಳಿಯಲ್ಲಿ ಹಣಕಾಸು ವಿವಾದಕ್ಕೆ ಸಂಬಂಧಿಸಿದ ಗಲಾಟೆಯ ನಂತರ ಹಲ್ಲೆಗೊಳಗಾಗಿದ್ದ ಯುವಕನು 13 ದಿನಗಳ ಹೋರಾಟದ ಬಳಿಕ ಮೃತಪಟ್ಟಿದ್ದಾನೆ.
ಮೃತ ಯುವಕನು ಮುಟ್ಟನಹಳ್ಳಿಯ ಸುಮಂತ್ ಎಂಬವನು. ಗ್ರಾಮದ ಅಂಬರೀಶ್ ಅವರ ಪತ್ನಿಯೊಂದಿಗೆ ಹಣಕಾಸು ವಿಚಾರವಾಗಿ ಸುಮಂತ್ ಮಾತಿನ ಚಕಮಕಿ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅಂಬರೀಶ್ ಬೆಂಬಲಿಗರು ಸುಮಂತ್ ಅನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಣಕಾಸು ಸಂಬಂಧಿತ ವಿಚಾರವಾಗಿ ಅಂಬರೀಶ್, ರಜನಿಕಾಂತ್ ಮತ್ತು ಲೋಕೇಶ್ ನಡುವೆ ಜಗಳ ನಡೆದಿದೆ. ಈ ವೇಳೆ ಇಟ್ಟಿಗೆಯಿಂದ ಹೊಡೆದು ಸುಮಂತ್ ಮೇಲೆ ಹಲ್ಲೆ ನಡೆದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡು, ಕೋಮಾ ಸ್ಥಿತಿಗೆ ತಲುಪಿದ್ದ ಸುಮಂತ್‌ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದನ್ನು ಓದಿ –ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ನಾಲ್ವರ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಕೆ
ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.