ಬೆಂಗಳೂರು: 2023ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರಗತಿಪರ ಹಾಗೂ ಉತ್ತಮ ಸೇವೆ ನೀಡಿದ 30 ಮಂದಿ ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರನ್ನು ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಸರ್ಕಾರಿ ಆದೇಶವೊಂದನ್ನು ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ, ರಾಜ್ಯದಲ್ಲಿ ವಿಶೇಷ ಸಾಧನೆಗೈದ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸಲು ಸರ್ವೋತ್ತಮ ಸೇವಾ ಪ್ರಶಸ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ ಇದ್ದಂತೆ ಈ ವರ್ಷವೂ ರಾಜ್ಯಮಟ್ಟದ ಪ್ರಶಸ್ತಿಗಳ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸಲಾಗಿದ್ದು, 2022ರ ಏಪ್ರಿಲ್ 19ರ ಆದೇಶದನಂತರ ಜಿಲ್ಲೆಯ ಪ್ರಶಸ್ತಿ ಮೊತ್ತವನ್ನು ₹10,000ರಿಂದ ₹25,000ಕ್ಕೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿಯ ಮೊತ್ತವನ್ನು ₹25,000ರಿಂದ ₹50,000ಕ್ಕೆ ಹೆಚ್ಚಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸ್ವತಃ ಆನ್‌ಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಲು ಅವಕಾಶವಿತ್ತು. ಅರ್ಜಿಗಳನ್ನು ಪರಿಗಣಿಸಿದ ಅಪರ ಮುಖ್ಯ ಕಾರ್ಯದರ್ಶಿಗಳ ಆಯ್ಕೆ ಸಮಿತಿ, ಸಲ್ಲಿಸಲಾದ ಎಲ್ಲ ಅರ್ಹ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಂತಿಮವಾಗಿ 30 ಮಂದಿ ಅಧಿಕಾರಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಆಯ್ಕೆಗೊಂಡ ಪ್ರತಿಯೊಬ್ಬ ಅಧಿಕಾರಿಗೆ ₹50,000 ನಗದು ಬಹುಮಾನ, ಪ್ರಶಸ್ತಿ ಫಲಕ, ಶಾಲು ಹಾಗೂ ಹಾರ ನೀಡಿ ಸನ್ಮಾನಿಸಲಾಗುವುದು.ಇದನ್ನು ಓದಿ –ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ
2023ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:



ಇದು ಸರ್ಕಾರದಿಂದ ನಿಷ್ಠುರ ಸೇವೆಗೆ ನೀಡುವ ಮಹತ್ವದ ಗೌರವವಾಗಿದ್ದು, ಉಳಿದ ಎಲ್ಲಾ ನೌಕರರಿಗೂ ಪ್ರೇರಣೆಯಾಗಲಿದೆ.