ಮಂಡ್ಯ: 39 ವರ್ಷಗಳ ಬಳಿಕ ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ನಡೆಯುತ್ತಿರುವ 14 ಕೂಟದ ಬೀರ ದೇವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭಾಗವಹಿಸಲಿದ್ದಾರೆ.
ಈ ಮಹತ್ವದ ಜಾತ್ರಾ ಹಬ್ಬ ಸೋಮವಾರದಿಂದ ಪ್ರಾರಂಭಗೊಂಡಿದ್ದು , ಭಾಗವಹಿಸುವ ದೇವತೆಗಳ ಸಂಖ್ಯೆಯಿಂದಲೂ ಇದು ವಿಶಿಷ್ಟವಾಗಿದೆ. ಸುಮಾರು ನಾಲ್ಕು ದಶಕಗಳ ನಂತರ ಈ ಜಾತ್ರೆ ಪುನಃ ನಡೆಯುತ್ತಿರುವುದರಿಂದ, ಗ್ರಾಮಸ್ಥರಲ್ಲಿ ಹಾಗೂ ಸಮೀಪದ ಹಳ್ಳಿಗಳಲ್ಲಿ ಹರ್ಷದ ಕಲೆ ಸೃಷ್ಟಿಯಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 11 ಗಂಟೆಗೆ ನಾಗಮಂಗಲದ ಹದ್ದಿಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿ, ಅಲ್ಲಿ ಸ್ವಾಗತ ಸ್ವೀಕರಿಸಿದ ಬಳಿಕ ನೇರವಾಗಿ ದೊಡ್ಡಬಾಲ ಗ್ರಾಮಕ್ಕೆ ತೆರಳಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ಜಾತ್ರಾ ಸಮಾರಂಭದಲ್ಲಿ ಸಚಿವರಾದ ಚಲುವರಾಯಸ್ವಾಮಿ ಹಾಗೂ ಭೈರತಿ ಸುರೇಶ್ ಕೂಡ ಮುಖ್ಯಮಂತ್ರಿ ಅವರಿಗೆ ಸಾಥ್ ನೀಡಲಿದ್ದಾರೆ.
ಗ್ರಾಮದ ಜನತೆ ಮತ್ತು ಭಕ್ತರು ಈ ದಿವಸವನ್ನು ಉತ್ಸವದಂತೆಯೇ ಆಚರಿಸುತ್ತಿದ್ದು, ನೂರಾರು ಮಂದಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲು ನಿರೀಕ್ಷಿಸಲಾಗಿದೆ. 39 ವರ್ಷಗಳ ಬಳಿಕ ದೇವರ ದರ್ಶನ ಮತ್ತು ಹಬ್ಬದಲ್ಲಿ ಸಿಎಂ ಪಾಲ್ಗೊಳ್ಳುತ್ತಿರುವುದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವನ್ನೂ ನೀಡುತ್ತಿದೆ.