ಮಡಿಕೇರಿ, ಏ. 24 – ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಮತ್ತೊಮ್ಮೆ ಕಾಡಾನೆ ದಾಳಿ ಸಂಭವಿಸಿ, ಹಿರಿಯ ವ್ಯಕ್ತಿಯೊಬ್ಬರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮಾಲ್ದಾರೆ ಅರಣ್ಯ ವ್ಯಾಪ್ತಿಯ ಬಸವನಹಳ್ಳಿ ಹಾಡಿ ಸಮೀಪ ವಾಸಿಸುತ್ತಿದ್ದ ಚಿಣ್ಣಪ್ಪ (76) ಎಂಬವರು ಶುಕ್ರವಾರ ನಸುಕಿನಲ್ಲಿ ತಮ್ಮ ಮನೆಯಿಂದ ಹೊರಬಂದ ಸಂದರ್ಭ ದಾರಿಗೆ ಬಂದ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಎಫ್ ಭಾಸ್ಕರ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದನ್ನು ಓದಿ –ಐಷಾರಾಮಿ ವಸ್ತುಗಳ ಮಾರಾಟಕ್ಕೆ TCS ಅನಿವಾರ್ಯ
ಇದಕ್ಕೂ ಮುನ್ನ, ಗುರುವಾರದಂದು ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ಎಸ್ಟೇಟ್ ಬಳಿ ಮತ್ತೊಬ್ಬ ವ್ಯಕ್ತಿ ಕಾಡಾನೆ ದಾಳಿಗೆ ಬಲಿಯಾದ ಘಟನೆ ವರದಿಯಾಗಿತ್ತು.