ನವದೆಹಲಿ: ಮುಂಜಾನೆ ಸೂರ್ಯೋದಯಕ್ಕೂ ಮುನ್ನ, ಭಾರತೀಯ ಸೇನೆಯು ಪಾಕಿಸ್ತಾನವನ್ನು ಗುರಿಯಾಗಿ ನಡೆದ ‘ಆಪರೇಶನ್ ಸಿಂಧೂರ’ ಎಂಬ ಹೆಸರಿನ ಭಾರೀ ವಾಯುದಾಳಿ( AirStrike ) ನಡೆಸಿದ್ದು, ಕೇವಲ 23 ನಿಮಿಷಗಳ ಈ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.
ಜಮ್ಮು-ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಹಿಂದೂ ಯಾತ್ರಿಕರ ಮೇಲೆ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ, ಭಾರತೀಯ ವಾಯುಪಡೆಯು ಮಂಗಳವಾರ ರಾತ್ರಿ 1:44ಕ್ಕೆ ಪಾಕಿಸ್ತಾನದ ಒಳಭಾಗದ ಉಗ್ರರ ತಾಣಗಳ ಮೇಲೆ ದಾಳಿ ಆರಂಭಿಸಿ, 2:07ಕ್ಕೆ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.
ಈ ದಾಳಿಯಲ್ಲಿ ರಫೇಲ್ ಸೇರಿದಂತೆ ವಿವಿಧ ಫೈಟರ್ ಜೆಟ್‌ಗಳು ಪಾಲ್ಗೊಂಡಿದ್ದು, ಲಷ್ಕರ್ ಉಗ್ರರ ತರಬೇತಿ ಕೇಂದ್ರವಾಗಿ ಬಳಕೆಯಾಗುತ್ತಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಒಟ್ಟು 9 ಉಗ್ರರ ನೆಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ಪಾಕ್ ಗಡಿಯಲ್ಲಿ ತೀವ್ರ ಬಿಗುವು ಉಂಟಾಗಿ ಸೇನಾ ಚಟುವಟಿಕೆಗಳು ಹೆಚ್ಚಾಗಿದ್ದು, ಎರಡು ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಭಾರತ ಹಾಗೂ ಪಾಕಿಸ್ತಾನ ಸೇನೆಗಳು ಸಮರಾಭ್ಯಾಸ ನಡೆಸುತ್ತಿದ್ದ ಕಾರಣ, ಸೇನಾ ಗಡಿಭಾಗದಲ್ಲಿ ಗಂಭೀರ ಚಟುವಟಿಕೆಗಳು ಕಾಣಿಸಿಕೊಂಡುಬಂದಿವೆ.ಇದನ್ನು ಓದಿ –ಪಹಲ್ಗಾಮ್ ದಾಳಿಗೆ ಪ್ರತೀಕಾರ: ಪಾಕಿಸ್ತಾನ 9 ಭಯೋತ್ಪಾದಕ ಶಿಬಿರಗಳ ಮೇಲೆ ಮಿಶಲ್ ದಾಳಿ
ಅತೀ ಹೆಚ್ಚು ಉಗ್ರರು ಒಟ್ಟಾರೆ ಮಟ್ಯಾಶ್ ಆಗಿರುವ ಈ ದಾಳಿ, ಶತ್ರು ರಾಷ್ಟ್ರಗಳಿಗೆ ಭಾರತದ ತೀವ್ರ ಎಚ್ಚರಿಕೆಯ ಸಂದೇಶವನ್ನೇ ನೀಡಿದೆ. ಜೊತೆಗೆ ದೇಶೀಯ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ನಾಗರಿಕರಿಗೆ ತುರ್ತು ಪರಿಸ್ಥಿತಿಯ ತಾಲೀಮು ನಡೆಸಲು ಕೇಂದ್ರ ಗೃಹಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದ್ದು, ಈ ಕ್ರಮಗಳು ಭದ್ರತಾ ದೃಷ್ಟಿಯಿಂದ ಮಹತ್ವಪೂರ್ಣವೆನಿಸಿಕೊಂಡಿವೆ.