ಕೋಲಾರ್ : ಭೂ ದಾಖಲೆ ವಿಭಾಗದ ಸರ್ವೇ ಸೂಪರ್‌ವೈಸರ್ ಸುರೇಶ್ ಬಾಬುಗೆ ಸಂಬಂಧಿಸಿದ ಕೋಲಾರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಟ್ಟೂ 6 ಕಡೆಗಳಲ್ಲಿ ಸಮನ್ವಿತ ದಾಳಿಗಳನ್ನು ನಡೆಸಿರುವ ಘಟನೆ ವರದಿಯಾಗಿದೆ.
ದಾಳಿಗಳು ಮನೆಯಲ್ಲೂ ಕಚೇರಿಗಳಲ್ಲೂ ನಡೆದಿದ್ದು, ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಕೈಗೆೊಳ್ಳಲಾಗಿದೆ.
ಸುರೇಶ್ ಬಾಬು ಅವರ ಅಣ್ಣಂದಿರು ಲಕ್ಷ್ಮೀ ನಾರಾಯಣ ಹಾಗೂ ವಿಜಯ್ ಕುಮಾರ್ ಮನೆ, ತಮ್ಮನ ಮನೆ, ನಿವೃತ್ತ ಪಿಡಿಓ ನಾಗರಾಜ್ ಮತ್ತು ಇನ್ನೊಬ್ಬ ಪಿಡಿಓ ಮನೆಗಳ ಮೇಲೆ ಕೂಡ ದಾಳಿ ನಡೆಯಿತು. ನಿಡುಘಟ್ಟ ಗ್ರಾಮದ ಮನೆ, ಕೋಲಾರದ ವೈದ್ಯ ಪ್ರಸನ್ನಕುಮಾರ್ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಈ ಹಿಂದೆಯೂ ಆರು ತಿಂಗಳ ಹಿಂದೆ ಸರ್ವೇ ಸೂಪರ್‌ವೈಸರ್‌ಗೆ ಸಂಬಂಧಪಟ್ಟವರಿಗೆ ಲೋಕಾಯುಕ್ತ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ನಗದು, ಸರ್ಕಾರಿ ಆಸ್ತಿಪತ್ರಗಳು ಸೇರಿದಂತೆ ಹಲವು ದಾಖಲೆಗಳು ಸಿಕ್ಕಿದ್ದವು. ಇದೀಗ ಮತ್ತೆ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಹೊಸದಾಗಿ ದಾಳಿಗಳನ್ನು ಕೈಗೆತ್ತಲಾಗಿದೆ.
ದಾವಣಗೆರೆ : ಬೆಳಿಗ್ಗೆ ಬೆಳಗ್ಗೆಯೇ ದಾವಣಗೆರೆ ನಗರ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ಬಿ. ರವಿ ಕಚೇರಿ ಹಾಗೂ ಅವರ ತಾಯಿಯ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಶಾಲೆ ಬಳಿ ಇರುವ ಕಚೇರಿ ಹಾಗೂ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಅವರ ತಾಯಿಯ ಮನೆ ಮೇಲೆ ದಾಳಿ ನಡೆದಿದೆ.
ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ಡಿವೈಎಸ್ಪಿ ಕಲಾವತಿಯವರ ತಂಡ ಈ ಕಾರ್ಯಾಚರಣೆಯನ್ನು ನಿರ್ವಹಿಸಿದೆ.ಇದನ್ನು ಓದಿ –ಸೈಕ್ಲೋನ್ ಪರಿಣಾಮ: ರಾಜ್ಯದಲ್ಲಿ ಮೇ 13ರವರೆಗೆ ಧಾರಾಕಾರ ಮಳೆ ನಿರೀಕ್ಷೆ
ಚಿತ್ರದುರ್ಗ: ಅಲ್ಲದೆ, ಚಿತ್ರದುರ್ಗದ ಹಳೆಯ ಬೆಂಗಳೂರು ರಸ್ತೆಯಲ್ಲಿರುವ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲೂ ದಾಖಲೆ ಪರಿಶೀಲನೆ ನಡೆಯುತ್ತಿದೆ.