- 1.32 ಲಕ್ಷ ಅಭ್ಯರ್ಥಿಗಳು ನೋಂದಣಿ, 248 ಕೇಂದ್ರಗಳಲ್ಲಿ ಪರೀಕ್ಷೆ
ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮ್ಯಾನೇಜ್ಮೆಂಟ್ ಸೀಟುಗಳಿಗೆ ಪ್ರವೇಶ ನೀಡಲು ನಡೆಯುವ ಕಾಮೆಡ್-ಕೆ (COMED-K) ಪರೀಕ್ಷೆ ಮೇ 10ರಂದು ದೇಶದಾದ್ಯಂತ ನಡೆಯಲಿದೆ. ಈ ವರ್ಷ ಒಟ್ಟು 1,31,937 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಇದು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, 28 ರಾಜ್ಯಗಳ 179 ನಗರಗಳಲ್ಲಿನ 248 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರತಿ ಹಂತಕ್ಕೂ 3 ಗಂಟೆಗಳ ಕಾಲಾವಧಿಯಿದೆ:
- ಬೆಳಗ್ಗೆ 8:30 ರಿಂದ 11:30
- ಮಧ್ಯಾಹ್ನ 1:00 ರಿಂದ 4:00
- ಸಂಜೆ 5:30 ರಿಂದ ರಾತ್ರಿ 8:30
ಪರೀಕ್ಷಾರ್ಥಿಗಳು ತಮ್ಮ ಹಾಲ್ ಟಿಕೆಟ್ (ಪ್ರವೇಶ ಪತ್ರ), ಗುರುತಿನ ಚೀಟಿ, ಎರಡು ಭಾವಚಿತ್ರಗಳು, ಪಾರದರ್ಶಕ ನೀರಿನ ಬಾಟಲ್ ಹಾಗೂ ಪೆನ್ಸಿಲ್ ಅನ್ನು ತಮ್ಮೊಂದಿಗೆ ತರಬೇಕು. ಸರ್ಕಾರ ನಿಗದಿಪಡಿಸಿರುವ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಾಮೆಡ್-ಕೆ ಸಂಘಟಕರು ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ಕೇಂದ್ರಗಳಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗುವಂತೆ ಮತ್ತು ಎಲ್ಲಾ ದಾಖಲೆಗಳನ್ನು ತಾಳ್ಮೆಯಿಂದ ಪರಿಶೀಲಿಸಿಕೊಂಡು ಬರಲು ಸಲಹೆ ನೀಡಲಾಗಿದೆ.ಇದನ್ನು ಓದಿ –ಐಪಿಎಲ್ ಪಂದ್ಯ ಮುಂದೂಡಿಕೆ..?
ಇದು ಇಂಜಿನಿಯರಿಂಗ್ ಪ್ರವೇಶದ ದಿಕ್ಕಿನಲ್ಲಿ ನಿರ್ಧಾರಕವಾದ ಹಂತವಾಗಿರುವುದರಿಂದ, ಎಲ್ಲ ವಿದ್ಯಾರ್ಥಿಗಳಿಗೆ ಯಶಸ್ಸು ಕೋರಿ ಪರೀಕ್ಷಾ ಮಂಡಳಿ ಶುಭಾಶಯಗಳನ್ನು ವ್ಯಕ್ತಪಡಿಸಿದೆ.