ಅಮೃತಸರ್ (ಪಂಜಾಬ್): ಪಂಜಾಬ್‌ನ ಅಮೃತಸರ ಜಿಲ್ಲೆಯ ಮಜಿತಾ ಪ್ರದೇಶದಲ್ಲಿ ನಕಲಿ ಮದ್ಯ ಸೇವನೆಯ ಪರಿಣಾಮ 12 ಮಂದಿ ದುರ್ಮರಣಕ್ಕೊಳಗಾಗಿದ್ದು, ಇತರ ಐದು ಮಂದಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೃತಸರ ಗ್ರಾಮೀಣ ಎಸ್‌ಎಸ್ಪಿ ಮಣಿಂದರ್ ಸಿಂಗ್ ಅವರು ಈ ಕುರಿತಾಗಿ ಅಧಿಕೃತ ಮಾಹಿತಿ ನೀಡಿದ್ದು, “ಇಲ್ಲಿವರೆಗೆ 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಐದು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಈ ದುರ್ಘಟನೆ ಮತ್ತೆ ನಕಲಿ ಮದ್ಯದ ತಾತ್ಸಾರ ಮತ್ತು ಅದರ ವಿರುದ್ಧದ ನಿಯಂತ್ರಣದ ಅಗತ್ಯತೆಯನ್ನು ತೋರಿಸುತ್ತಿದೆ. ಇದನ್ನು ಓದಿ –ಲಂಚ ಪ್ರಕರಣ: ತಾಂತ್ರಿಕ ಸಹಾಯಕಿ ಲೋಕಾಯುಕ್ತ ಬಲೆಗೆ
ಇದೇ ರೀತಿಯ ಘಟನೆಯೊಂದು ಫೆಬ್ರವರಿಯಲ್ಲಿ ಗುಜರಾತ್‌ನ ನಾಡಿಯಾಡ್‌ನಲ್ಲಿ ಸಂಭವಿಸಿತ್ತು, ಅಲ್ಲಿ ಶಂಕಾಸ್ಪದ ದ್ರವ ಮಿಶ್ರಿತ ದೇಶಿ ಮದ್ಯ ಸೇವನೆಯಿಂದ ಮೂವರು ಕಾರ್ಮಿಕರು ಜೀವ ಕಳೆದುಕೊಂಡಿದ್ದರು.