ಕಾರವಾರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿಯ ಪ್ರಾಣ ಹರಣವಾದ ನಂತರ, ಭಾರತೀಯ ಸೇನೆ “ಆಪರೇಶನ್ ಸಿಂಧೂರ” ಮೂಲಕ ಪಾಕಿಸ್ತಾನ ಮೂಲದ ಉಗ್ರರ ತಾಣಗಳನ್ನು ನಾಶಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಈ ಕ್ರಮಗಳ ಭಾಗವಾಗಿ, ಭಾರತ ತನ್ನ ಇ-ಕಾಮರ್ಸ್ ಕಂಪನಿಗಳಿಗೆ ಪಾಕಿಸ್ತಾನದ ಧ್ವಜ ಮತ್ತು ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಪಾಕಿಸ್ತಾನಕ್ಕೆ ಯಾವುದೇ ರೀತಿಯ ವಸ್ತು ರಫ್ತಿಗೂ ನಿರ್ಬಂಧ ಹೇರಲಾಗಿದೆ.
ಈ ಬೆಳವಣಿಗೆಯ ನಡುವೆ, ಉತ್ತರ ಕನ್ನಡ ಜಿಲ್ಲೆಯ ರೈತರು ದೇಶದ ಪರವಾಗಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಹೊನ್ನಾವರದಿಂದ ಪಾಕಿಸ್ತಾನಕ್ಕೆ ಇತರ ಮಾರ್ಗಗಳಲ್ಲಿ ರಫ್ತಾಗುತ್ತಿದ್ದ ವೀಳ್ಯದೆಲೆ (ಅಡಿಕೆ) ರವಾನೆಯನ್ನು ನಿಲ್ಲಿಸಲು ಅವರು ನಿರ್ಧರಿಸಿದ್ದಾರೆ.
ಹೊನ್ನಾವರದ ಶರಾವತಿ ನದಿಪಾತ್ರದ ರೈತರಿಂದ ದೆಹಲಿಯ ವ್ಯಾಪಾರಿಗಳು ವೀಳ್ಯದೆಲೆ ಖರೀದಿ ಮಾಡುತ್ತಿದ್ದು, ಅದು ಅಂತಿಮವಾಗಿ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು. ಆದರೆ ಈಗ, “ನಾವು ಆರ್ಥಿಕ ನಷ್ಟ ಅನುಭವಿಸಿದರೂ ಪಾಕಿಸ್ತಾನಕ್ಕೆ ವೀಳ್ಯದೆಲೆ ಕಳಿಸುವುದಿಲ್ಲ” ಎಂಬ ದೃಢ ನಿಲುವು ರೈತರು ತೆಗೆದುಕೊಂಡಿದ್ದಾರೆ.ಇದನ್ನು ಓದಿ –ಮುಂದಿನ 3-4 ದಿನ ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ
ಈ ನಿರ್ಧಾರವು ರಾಷ್ಟ್ರಭಕ್ತಿಯ ದೃಷ್ಟಿಯಿಂದ ಶ್ಲಾಘನೀಯವಾಗಿದ್ದು, ಇತರರಿಗೆ ದಿಟ್ಟ ಮಾದರಿಯಾಗಿದೆ.