ಬೆಂಗಳೂರು: 2025ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ–3ಗಾಗಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಅಂಕ ಸುಧಾರಣೆ ಬಯಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಬಿಡುಗಡೆ ಮಾಡಿದೆ.
ಅರ್ಜಿ ಸಲ್ಲಿಸುವ ಮಾಹಿತಿಗಳು ಈಂತಿವೆ:
- ಅಂಕ ಸುಧಾರಣೆ ಬಯಸುವ ವಿದ್ಯಾರ್ಥಿಗಳು:
2025ರ ಪಿಯುಸಿ ಪರೀಕ್ಷೆ–1 ಅಥವಾ ಪರೀಕ್ಷೆ–2ರಲ್ಲಿ ಉತ್ತೀರ್ಣರಾಗಿದ್ದು, ಅಂಕ ಹೆಚ್ಚಿಸಲು ಪರೀಕ್ಷೆ–3 ಬರೆಯಲು ಬಯಸುವವರು, ತಮ್ಮ ಫಲಿತಾಂಶ ಪಟ್ಟಿಯನ್ನು ಆಧಾರವಾಗಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಇವರಿಗೆ ಮಂಡಲಿಯಿಂದ ಅನುಮತಿ ಪಡೆಯಬೇಕಾಗಿರುವುದಿಲ್ಲ. - ಅನುತ್ತೀರ್ಣರಾದ ವಿದ್ಯಾರ್ಥಿಗಳು:
2025ರ ಪರೀಕ್ಷೆ–2ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಫಲಿತಾಂಶ ಪಟ್ಟಿಯನ್ನು ಆಧಾರವನ್ನಾಗಿ ಮಾಡಿಕೊಂಡು ಪರೀಕ್ಷೆ–3ಕ್ಕೆ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇವರಿಂದ ಯಾವುದೇ ಪರೀಕ್ಷಾ ಶುಲ್ಕವನ್ನು ಪಡೆಯಬಾರದು. - ಪೂರ್ವ ನೋಂದಾಯಿತ ಆದರೆ ಪರೀಕ್ಷೆ ಬರದ ವಿದ್ಯಾರ್ಥಿಗಳು:
2025ರ ಪರೀಕ್ಷೆ–1ಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಪರೀಕ್ಷೆ–3ಗೆ ಹಾಜರಾಗಬಹುದು. - ಹಿಂದಿನ ವರ್ಷಗಳ ಅನುತ್ತೀರ್ಣ ವಿದ್ಯಾರ್ಥಿಗಳು (2025ರ ಹಿಂದೆ):
ಇಂತಹ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿ ಅಥವಾ ಹಳೆಯ M.C.A. ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ಪ್ರಾಂಶುಪಾಲರು PU EXAM–3 ಲಾಗಿನ್‌ನಲ್ಲಿ ಇಂದೀಕರಿಸಬೇಕು. - 2006 ಅಥವಾ ತದಪೂರ್ವ ಸಾಲಿನ ಅನುತ್ತೀರ್ಣರು:
ಇಂತಹ ಅಭ್ಯರ್ಥಿಗಳ ಅರ್ಜಿ ಹಾಗೂ ದಾಖಲೆಗಳನ್ನು ಪ್ರಾಂಶುಪಾಲರು ಪರಿಶೀಲಿಸಿ, ಜಿಲ್ಲೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕಾಗುತ್ತದೆ.
ಸೂಚನೆ:
ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಈ ಸೂಚನೆಯನ್ನು ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು ಮತ್ತು ತಿಳಿಸಿದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಇದನ್ನು ಓದಿ –ದ್ವಿತೀಯ ಪಿಯುಸಿ ಪರೀಕ್ಷೆ–2 ಫಲಿತಾಂಶ ಪ್ರಕಟ: ಶೇಕಡಾ 31.27 ವಿದ್ಯಾರ್ಥಿಗಳು ಉತ್ತೀರ್ಣ
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.