ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಅಮೀರ್ ಹಮ್ಜಾ ಲಾಹೋರ್ನಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿ ದಾಳಿ ನಡೆಸಿದ್ದು, ಹಮ್ಜಾ ಅವರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ. ಸದ್ಯದಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು, ಹಮ್ಜಾ ಎಲ್‌ಇಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ದಾಳಿ ಅವರು ಮನೆಗೆ ಇರುವ ವೇಳೆ ನಡೆದಿದೆ ಎಂದು ದೃಢಪಡಿಸಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿದ ಹಲವಾರು ಊಹಾಪೋಹಗಳು ಈ ದಾಳಿಯ ಬಗ್ಗೆ ತೀವ್ರ ಚರ್ಚೆ ಹುಟ್ಟಿಸಿದರೂ, ತನಿಖಾ ಸಂಸ್ಥೆಗಳು ಹಲವಾರು ಅಪಾಧಾನಗಳನ್ನು ಸುಳ್ಳೆಂದು ತಿರಸ್ಕರಿಸಿವೆ.
ಅಮೀರ್ ಹಮ್ಜಾ, ಅಫ್ಘಾನ್ ಮುಜಾಹಿದ್ದೀನ್‌ನ ಅನುಭವಿ ಯೋಧ ಮತ್ತು ಲಷ್ಕರ್-ಎ-ತೊಯ್ಬಾದ ಪ್ರಮುಖ ತತ್ವವ್ಯಾಖ್ಯಾನಕರಾಗಿ ಗುರುತಿಸಲ್ಪಟ್ಟಿದ್ದಾರೆ. 2002ರಲ್ಲಿ ಅವರು ‘ಖಾಫಿಲಾ ದ’ವತ್ ಔರ್ ಶಹಾದತ್’ (ಮತಾಂತರ ಮತ್ತು ಹುತಾತ್ಮತೆಯ ಪಯಣ) ಎಂಬ ಪುಸ್ತಕ ಸೇರಿದಂತೆ ಹಲವು ಲೇಖನಗಳನ್ನು ರಚಿಸಿದ್ದಾರೆ.ಬಾನು ಮುಷ್ತಾಕ್ ‘ಹಸೀನಾ’ ಕೃತಿಗೆ ಬೂಕರ್ ಪ್ರಶಸ್ತಿಯ ಗರಿ
ಈ ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ದಾಳಿಯ ಹಿಂದಿರುವ ಕಾರಣ ಮತ್ತು ಅಪರಿಚಿತ ಶಸ್ತ್ರಧಾರಿಯ ಗುರುತು ತಿಳಿಯಬೇಕಾಗಿದೆ.