- -ಆರ್‌ಎಂಸಿ ಯಾರ್ಡ್ ಪೊಲೀಸರಿಂದ FIR ದಾಖಲು
ಬೆಂಗಳೂರು: ಬೆಂಗಳೂರು ನಗರದಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣದ ಎಫ್‌ಐಆರ್ ದಾಖಲಾಗಿದೆ. ಈ ದೂರನ್ನು ಬಿಜೆಪಿ ಕಾರ್ಯಕರ್ತೆ ಓರ್ವರು ನೀಡಿದ್ದು, ಶರಣಾಗಿ ತನಿಖೆ ಪ್ರಾರಂಭವಾಗಿದೆ.
ದೂರಿನಲ್ಲಿ, ಮಹಿಳೆ ಮುನಿರತ್ನ ಜೊತೆಗೆ ಅವರ ಬೆಂಬಲಿಗರಾದ ವಸಂತ್ ಮತ್ತು ಚನ್ನಕೇಶವ ಎಂಬವರನ್ನು ಸಹ ಆರೋಪಿಗಳೆಂದು ಉಲ್ಲೇಖಿಸಿದ್ದಾರೆ. ದೂರುದಾರೆಯ ಪ್ರಕಾರ, ಈ ಘಟನೆ 2013 ರಲ್ಲಿ ನಡೆದಿದ್ದು, ಜೆಪಿ ಪಾರ್ಕ್‌ನಲ್ಲಿರುವ ಶಾಸಕರ ಕಚೇರಿಯಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆಕೆ ಆರೋಪಿಸಿದ್ದಾರೆ.
ಅಲ್ಲದೆ, ಅಪರಿಚಿತ ವ್ಯಕ್ತಿಯ ಮೂಲಕ ಆಕೆಗೆ ಬಲವಂತವಾಗಿ ಇಂಜೆಕ್ಷನ್ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಇಂಜೆಕ್ಷನ್‌ನಿಂದ ತಾನು ಇಡಿಆರ್ (End-Stage Renal Disease) ಕಾಯಿಲೆಗೆ ಒಳಗಾದೆನೆಂದು ಮಹಿಳೆ ಹೇಳಿದ್ದಾರೆ. ಈ ಆಘಾತ ಹಾಗೂ ಆರೋಗ್ಯ ಸಮಸ್ಯೆಯಿಂದ ಮನೋವೈಕಲ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ದೂರಿನಲ್ಲಿ ಉಲ್ಲೇಖವಿದೆ.ಇದನ್ನು ಓದಿ –ಲಷ್ಕರ್-ಎ-ತೊಯ್ಬಾ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಗಾಯಗೊಂಡು ಆಸ್ಪತ್ರೆಗೆ ದಾಖಲು
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.