ಆನೇಕಲ್: ಬೆಂಗಳೂರಿನ ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ಅಪರಿಚಿತ ಬಾಲಕಿ ಶವ ಪತ್ತೆಯಾದ ದಾರುಣ ಘಟನೆ ನಡೆದಿದೆ.
ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಹತ್ತಿರ, ಸುಮಾರು 10 ವರ್ಷದ ಬಾಲಕಿಯ ಶವವಿರುವ ಒಂದು ಸೂಟ್‌ಕೇಸ್ ಪತ್ತೆಯಾಗಿದೆ. ಈ ಸೂಟ್‌ಕೇಸ್ ಚಲಿಸುತ್ತಿದ್ದ ರೈಲಿನಿಂದ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತಕ್ಷಣವೇ ಸೂರ್ಯನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸೂಟ್‌ಕೇಸ್ ಹಾಗೂ ಶವದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –ಗೃಹ ಸಚಿವ ಪರಮೇಶ್ವರ್ ಸಂಸ್ಥೆಗಳಿಗೆ ಇಡಿ ದಾಳಿ
ಈ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದ್ದು, ಬಾಲಕಿಯ ಗುರುತು ಪತ್ತೆ ಹಚ್ಚುವ ಕಾರ್ಯವೂ ಪ್ರಾರಂಭವಾಗಿದೆ.