ಹಾಸನ: ಹೊಳೆನರಸೀಪುರ ಪಟ್ಟಣದಲ್ಲಿ 19 ವರ್ಷದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತ ಯುವತಿಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಮಡಿವಾಳ ಬಡಾವಣೆಯ ನಿವಾಸಿಯಾದ ವೆಂಕಟೇಶ್ ಮತ್ತು ಪೂರ್ಣಿಮ ದಂಪತಿಯ ಪುತ್ರಿಯಾಗಿದ್ದ ಸಂಧ್ಯಾ, ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾಭ್ಯಾಸವನ್ನು ಮುಗಿಸಿತ್ತಿದ್ದರು.
ಗುರುವಾರ ಬೆಳಿಗ್ಗೆ ಬಾತ್‌ರೂಂಗೆ ಹೋಗಿದ್ದ ಸಂಧ್ಯಾ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ದೀರ್ಘ ಕಾಲದವರೆಗೆ ಹೊರಬಂದಿಲ್ಲದ ಕಾರಣ, ಪೋಷಕರು ಬಾತ್‌ರೂಂ ಬಾಗಿಲು ಒಡೆದು ಒಳಗೆ ನುಗ್ಗಿದಾಗ, ಆಕೆಯನ್ನು ಅವಚೇತನ ಸ್ಥಿತಿಯಲ್ಲಿ ಪತ್ತೆ ಹಚ್ಚಿದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ಆಕೆಯನ್ನು ಈಗಾಗಲೇ ಮೃತಪಟ್ಟಿದ್ಧಾಳೆ ಎಂದು ಘೋಷಿಸಿದರು.
ಸಂಧ್ಯಾ ಬಿಪಿ ಹಾಗೂ ಶುಗರ್ ಸಮಸ್ಯೆಗಳಿಂದ ಬಳಲುತ್ತಿದ್ದು, ಅದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿದ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.