ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ದಿನನಿತ್ಯದ ಊಟದ ಭತ್ಯೆಯನ್ನು ₹200ರಿಂದ ₹300ಕ್ಕೆ ಹೆಚ್ಚಿಸಿ, ಪೊಲೀಸ್ ಇಲಾಖೆ ಶುಕ್ರವಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಇದಕ್ಕೂ ಮೊದಲು, ರಾಜ್ಯದ ವಿವಿಧ ಭಾಗಗಳಿಂದ ಬಂದೋಬಸ್ತ್ ಕರ್ತವ್ಯದ ಸಂದರ್ಭದಲ್ಲಿ ನೀಡಲಾಗುವ ಊಟದ ಗುಣಮಟ್ಟ ತುಂಬಾ ಕಳಪೆಯಾಗಿರುವ ಬಗ್ಗೆ ಹಾಗೂ ಸರ್ಕಾರ ನೀಡುವ ₹200 ಭತ್ಯೆ ಸಾಲುವುದಿಲ್ಲ ಎಂಬ ಆಕ್ಷೇಪಗಳು ಹೆಚ್ಚಾಗಿ ಕೇಳಿಬಂದಿದ್ದವು. ಈ ವಿಷಯವು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ಬಳಿಕ, ಹಬ್ಬಗಳು, ಚುನಾವಣೆಗಳು ಮತ್ತು ಇತರ ವಿಶೇಷ ಬಂದೋಬಸ್ತ್ ಕರ್ತವ್ಯಗಳಲ್ಲಿ ನಿಯೋಜಿಸಲಾಗುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ಒಂದು ದಿನಕ್ಕೆ ₹300ರಷ್ಟು ಊಟದ ಭತ್ಯೆ ನೀಡುವಂತೆ ಆದೇಶ ಹೊರಡಿಸಿದೆ.ಇದನ್ನು ಓದಿ –TDR ಹಗರಣ : 9 ಕಡೆಗಳಲ್ಲಿ ED ದಾಳಿ, ದಾಖಲೆಗಳ ಪರಿಶೀಲನೆ
ಈ ನಿರ್ಧಾರದಿಂದ ಪೊಲೀಸರು ಉತ್ತಮ ಗುಣಮಟ್ಟದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಿದೆ. ಹೀಗಾಗಿ, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಇನ್ನಷ್ಟು ಶ್ರಮ ಮತ್ತು ಸಮರ್ಪಣೆಯಿಂದ ಭಾಗವಹಿಸಲು ಸಹಾಯವಾಗಲಿದೆ.