ಮೈಸೂರು: ಅಂತಹ ಯಾವುದೇ ಹೇಳಿಕೆ ಕೊಡಬಾರದು. ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಮಂದಿ ಖಂಡಿಸಿದ್ದು, ಇಂತಹ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಯಿಸಿ, ಯಾವುದೇ ನಟನಾಗಲಿ ಭಾಷೆಯ ಬಗ್ಗೆ ಕೀಳಾಗಿ ಮಾತನಾಡಬಾರದು. ಇದನ್ನು ಯಾರು ಸಹ ಸಹಿಸುವುದಿಲ್ಲ. ಇನ್ನೂ ಬೆಳ್ಳಗ್ಗೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದರ್ಶನ ಮಾಡಬೇಕೆಂದೆನಿಸಿತು. ಅದಕ್ಕಾಗಿ ಕುಟುಂಬ ಸಮೇತರಾಗಿ ಬಂದಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮೊಮ್ಮಗನ ಮದುವೆ ಆಹ್ವಾನ ಪತ್ರಿಕೆಗೂ ವಿಶೇಷಪೂಜೆ ಮಾಡಿಸಿದ್ದು, ಧಾರ್ಮಿಕ ಕ್ಷೇತ್ರ ಆಗಿರುವುದರಿಂದ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಪ್ರತಿಕ್ರಯಿಸುವುದಿಲ್ಲ ಎಂದು ತಿಳಿಸಿದರು.ಇದನ್ನು ಓದಿ –3 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯನ್ ವ್ಯಕ್ತಿ ಬಂಧನ
ಈ ಸಂದರ್ಭದಲ್ಲಿ ಹಿರಿಯ ಪುತ್ರಿ ಪದ್ಮಾವತಿ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ, ಸ್ನೇಹಿತರಾದ ಶಂಕರ್ ರಾವ್,ಎಸ್.ಸಿ.ಅಶೋಕ್, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪ, ಬಿಜೆಪಿ ವಕ್ತಾರ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.