ನವದೆಹಲಿ: ಶೀಘ್ರದಲ್ಲೇ ಭಾರತದಲ್ಲಿ ಹೊಸ ರೀತಿಯ ಟೋಲ್ ಸಂಗ್ರಹಣಾ ವ್ಯವಸ್ಥೆ ಜಾರಿಗೆ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೆತ್ತಿಕೊಂಡಿರುವ ಯೋಜನೆಯಡಿಯಲ್ಲಿ, ಕಿಲೋಮೀಟರ್ ಆಧಾರಿತ ಟೋಲ್ ತೆರಿಗೆ ನೀತಿ ಜಾರಿಗೆ ಬರಲಿದೆ.
ಈ ಹೊಸ ವ್ಯವಸ್ಥೆಯಲ್ಲಿ ಜನರು ಎಷ್ಟು ದೂರ ಪ್ರಯಾಣಿಸುತ್ತಾರೋ, ಆಷ್ಟು ಹಣವನ್ನು ಟೋಲ್ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ಹೊಸ ನೀತಿಯ ಪ್ರಮುಖ ಅಂಶಗಳು:
ಪ್ರಯಾಣಿಸಿದ ದೂರದ ಮೇಲೆ ಟೋಲ್: ಈಗಿನಂತೆ ಸ್ಥಿರ ಟೋಲ್ ಶುಲ್ಕವಲ್ಲ. ವಾಹನ ಚಾಲಕರು ಹೆದ್ದಾರಿಯಲ್ಲಿ ಎಷ್ಟು ಕಿಲೋಮೀಟರ್ ಪ್ರಯಾಣಿಸುತ್ತಾರೋ ಅದಕ್ಕನುಸಾರವಾಗಿ ಟೋಲ್ ಪಾವತಿಸಬೇಕು.
ಜಿಪಿಎಸ್ ಆಧಾರಿತ ಸಂಗ್ರಹಣೆ: ಈ ವ್ಯವಸ್ಥೆ ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸಲಿದ್ದು, ವಾಹನದ ಚಲನೆಯನ್ನು ಜಿಯೋ-ಫೆನ್ಸಿಂಗ್ ಹಾಗೂ ಉಪಗ್ರಹಗಳ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ. ಇದರಿಂದ ಟೋಲ್ ಬೂತ್‌ಗಳ ಅವಶ್ಯಕತೆ ಕಡಿಮೆಯಾಗಲಿದ್ದು, ವಾಹನ ಸಂಚಾರದಲ್ಲಿನ ಅಡಚಣೆಗಳನ್ನು ಕೂಡ ಕಡಿಮೆ ಮಾಡಲಿದೆ.
ಪ್ರಾಯೋಗಿಕ ಪ್ರಯೋಗ: ಹೊಸ ನೀತಿಯನ್ನು ಕೆಲ ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯೋಗಾತ್ಮಕವಾಗಿ ಆರಂಭಿಸಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ಹಂತವಾಗಿ ದೇಶದಾದ್ಯಂತ ಈ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ.ಇದನ್ನು ಓದಿ –ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: 24K ಚಿನ್ನಕ್ಕೆ ₹8,200 ಹೆಚ್ಚಳ
ಈ ಹೊಸ ನೀತಿ ಪ್ರಯಾಣಿಕರಿಗೆ ಹೆಚ್ಚು ಪಾರದರ್ಶಕತೆ, ನ್ಯಾಯಸಮ್ಮತ ಪಾವತಿ ಮತ್ತು ಸುಗಮ ಸಂಚಾರ ಅನುಭವವನ್ನು ಒದಗಿಸಲಿದೆ.