- – ನಿಯಮ ಉಲ್ಲಂಘಿಸಿದರೆ ₹2,000 ದಂಡ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುವ ದ್ವಿಚಕ್ರ ವಾಹನ ಸವಾರರಿಗೆ ಭಾರೀ ಆಘಾತವೊಂದನ್ನು ನೀಡುವಂತೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಲಿದೆ. ಇನ್ನುಮುಂದೆ ಬೈಕ್ ಮತ್ತು ಸ್ಕೂಟರ್‌ಗಳಿಗೆ ಸಹ ಟೋಲ್ ತೆರಿಗೆ ಪಾವತಿ ಕಡ್ಡಾಯವಾಗಲಿದೆ.
ಜುಲೈ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ, ದ್ವಿಚಕ್ರ ವಾಹನಗಳಿಗೂ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಪಾವತಿಸಬೇಕಾಗುತ್ತದೆ. ಈ ಮೂಲಕ ಅವರು ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸಿದರೆ, ನಿಗದಿತ ತೆರಿಗೆಯನ್ನು ಪಾವತಿಸಲೇಬೇಕು.
ಹೊಸ ನಿಯಮವನ್ನು ಉಲ್ಲಂಘಿಸಿದರೆ ₹2,000 ರೂ. ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ತಂತ್ರಜ್ಞಾನಾತ್ಮಕ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ.ಇದನ್ನು ಓದಿ –ಭೀಕರ ಅಪಘಾತ: ಅಲಕಾನಂದ ನದಿಗೆ ಬಿದ್ದ ಬಸ್ – 2 ಸಾವು, 10 ಮಂದಿ ನಾಪತ್ತೆ
ಈ ಕ್ರಮದ ಮೂಲಕ ರಸ್ತೆ ಮೂಲಸೌಕರ್ಯದ ನಿರ್ವಹಣೆಗೆ ಹೆಚ್ಚಿನ ಹಣ ಸಂಗ್ರಹಿಸುವ ಉದ್ದೇಶವಿದ್ದು, ಎಲ್ಲ ವಾಹನ ಸವಾರರಿಗೆ ಸಮಾನ ಭಾರಹಂಚಿಕೆ ಅನಿವಾರ್ಯವಿದೆ ಎಂಬುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.