- – ರಾಜ್ಯ ಸರ್ಕಾರದಿಂದ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಗಡಿ ಹಾಗೂ ನದಿ ವಿವಾದಗಳ ಉಸ್ತುವಾರಿ ಸಚಿವರಾಗಿ ಹೆಚ್.ಕೆ. ಪಾಟೀಲ್ ಅವರನ್ನು ನೇಮಿಸಿದೆ.
ಗಡಿ ಹಾಗೂ ನದಿಗಳಿಗೆ ಸಂಬಂಧಿಸಿದ ವಿವಾದಗಳ ಬಗ್ಗೆ ನಿರಂತರ ನಿಗಾ ವಹಿಸಿ, ಕಾನೂನಾತ್ಮಕ ಹಾಗೂ ರಾಜಕೀಯ ಹಂತದಲ್ಲಿ ಪರಿಶೀಲನೆ ನಡೆಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿದೆ.
ಈ ಸಂಬಂಧಿತ ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನಲೆ ಮೆರೆದಂತೆ, ಮಾನ್ಯ ಕಾನೂನು, ನ್ಯಾಯ, ಶಾಸನ ರಚನೆ ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವರಾಗಿರುವ ಶ್ರೀ ಹೆಚ್.ಕೆ. ಪಾಟೀಲರಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಗಡಿ ವಿವಾದ ಉಸ್ತುವಾರಿ ಹೊಣೆ ವಹಿಸಲಾಗಿದೆ.ಇದನ್ನು ಓದಿ –ಹೊಸೂರು ರಸ್ತೆಯ ಟೋಲ್ ದರ ಏರಿಕೆ
ಈ ಹೊಸ ಜವಾಬ್ದಾರಿಯೊಂದಿಗೆ ಅವರು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳೊಂದಿಗೆ ಗಡಿ ಹಾಗೂ ನದಿಗಳ ಸಂಬಂಧಿತ ವಿವಾದಗಳ ನಿರ್ವಹಣೆಯಲ್ಲಿ ನಿರಂತರ ಸಮೀಕ್ಷೆ, ವರದಿ, ಹಾಗೂ ತೀರ್ಮಾನಾತ್ಮಕ ಕ್ರಮಗಳಲ್ಲಿ ಮುಂಚೂಣಿಯಲ್ಲಿರಬೇಕಾಗುತ್ತದೆ.