ಚಿಕ್ಕಬಳ್ಳಾಪುರ: ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಐದು ವರ್ಷ ಸಿಎಂ ಆಗಿರುತ್ತೇನೆ. ನಿಮಗ್ಯಾಕೆ ಈ ಬಗ್ಗೆ ಅನುಮಾನ? ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ಎಷ್ಟೋ ಮುಂದಿದ್ದಾರೆ. ಸತ್ಯ ಅನ್ನೋದು ಅವರಿಗೆ ಗೊತ್ತೇ ಇಲ್ಲ. ನಮ್ಮ ಪಕ್ಷದವರು ಕೂಡ ಒಗ್ಗಟ್ಟಾಗಿ ಇದ್ದಾರೆ. ನಾವು ನಡೆಸುತ್ತಿರುವ ಸರ್ಕಾರ ಬಂಡೆ ತರ ಸದೃಢವಾಗಿದೆ,” ಎಂದರು.
“ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನಪರ ಯೋಜನೆಗಳನ್ನೇನು ಮಾಡಿದ್ದಾರೆ? . ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಕೂಡ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾತ್ರ ಮಾಡಿದ್ದಾರೆ,” ಎಂದು ಆರೋಪಿಸಿದರು.ಇದನ್ನು ಓದಿ –ಏಷ್ಯಾ ಕಪ್ 2025: ಸೆ.7ರಂದು ಭಾರತ vs ಪಾಕಿಸ್ತಾನ
“ಆರ್. ಅಶೋಕ್, ಬಿವೈ ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ — ಇವರು ಯಾರೂ ನಮ್ಮ ಹೈಕಮಾಂಡ್ ಅಲ್ಲ. ಅವರು ಬಿಜೆಪಿ ನಾಯಕರು. ನಮ್ಮ ಸರ್ಕಾರದ ಬಗ್ಗೆಯೆನು ಹೇಳುವ ಅಧಿಕಾರ ಅವರಿಗೆ ಇಲ್ಲ,” ಎಂದು ಹೇಳಿದ್ದಾರೆ.