ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 4 ರಂದು CUET UG 2025 ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧವಾಗಿದೆ ಎಂದು ಮಂಗಳವಾರ ಅಧಿಕೃತವಾಗಿ ಘೋಷಿಸಿದೆ.
ಪದವಿಪೂರ್ವ ಕೋರ್ಸ್‌ಗಳಿಗೆ ಭಾರತದ ವಿವಿಧ ಕೇಂದ್ರ, ರಾಜ್ಯ, ಡೀಮ್ಡ್ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test – Undergraduate) ದೇಶದ ಅತ್ಯಂತ ಪ್ರಮುಖ ಪರೀಕ್ಷೆಗಳಲ್ಲಿ ಒಂದಾಗಿದ್ದು, ಈ ಬಾರಿ 13.4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿದ್ದರು.
ಫಲಿತಾಂಶ ಪರಿಶೀಲನೆ ಹೇಗೆ?
ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಅಧಿಕೃತ ವೆಬ್‌ಸೈಟ್ exams.nta.ac.in/CUET-UG ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ಪರೀಕ್ಷೆ ವಿವರಗಳು:
- ಪರೀಕ್ಷೆ ಮೇ 15ರಿಂದ ಮೇ 24, 2025ರ ವರೆಗೆ ನಡೆಸಲಾಯಿತು.
- ಕೆಲವೊಂದು ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಇತರವುಗಳಿಗೆ ಪೆನ್-ಅಂಡ್-ಪೇಪರ್ ಮೋಡ್ ಬಳಸದಾಯಿತು.
- ದೇಶವ್ಯಾಪಿ ಹಾಗೂ ವಿದೇಶಗಳಲ್ಲಿಯೂ ಪರೀಕ್ಷಾ ಕೇಂದ್ರಗಳು ಇರಲಿದ್ದವು.
- ಈ ಪರೀಕ್ಷೆ 13 ಭಾರತೀಯ ಭಾಷೆಗಳಲ್ಲಿ ನಡೆಯಿತು: ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಗುಜರಾತಿ, ಮರಾಠಿ, ಪಂಜಾಬಿ, ಒಡಿಯಾ, ಉರ್ದು, ಅಸ್ಸಾಮಿ.
ಅಂತಿಮ ಉತ್ತರ ಕೀ ಹಾಗೂ ಪ್ರಶ್ನೆಗಳನ್ನು ಕೈಬಿಟ್ಟುದು:
ಜುಲೈ 1 ರಂದು ಅಂತಿಮ ಉತ್ತರ ಕೀ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ, 27 ಪ್ರಶ್ನೆಗಳನ್ನು ಅಂತಿಮ ಆವೃತ್ತಿಯಿಂದ ತೆಗೆದುಹಾಕಲಾಗಿದೆ.
ಅಂಕಗಳ ಸಾಮಾನ್ಯೀಕರಣ ಹಾಗೂ ಮರುಮೌಲ್ಯಮಾಪನ ಇಲ್ಲ:
ವಿಷಯಗಳ ವಿಭಿನ್ನ ಅವಧಿಗಳಿಗೆ ನ್ಯಾಯಯುತ ಹೋಲಿಕೆಗಾಗಿ ಅಂಕಗಳ ಸಾಮಾನ್ಯೀಕರಣ ಮಾಡಲಾಗಿದೆ. ಫಲಿತಾಂಶ ಪ್ರಕಟವಾದ ಬಳಿಕ ಮರು-ಪರಿಶೀಲನೆ ಅಥವಾ ಮರುಮೌಲ್ಯಮಾಪನ ಅವಕಾಶ ನೀಡಲಾಗದು ಎಂದು NTA ಸ್ಪಷ್ಟಪಡಿಸಿದೆ.ಇದನ್ನು ಓದಿ –ಘಾನಾದಿಂದ ಪ್ರಧಾನಿ ಮೋದಿಗೆ ರಾಷ್ಟ್ರೀಯ ಗೌರವ
ಅಂಕಪಟ್ಟಿ ಆಧಾರವಾಗಿ ವಿಶ್ವವಿದ್ಯಾಲಯ ಪ್ರವೇಶ:
ಫಲಿತಾಂಶ ಪ್ರಕಟವಾದ ಬಳಿಕ, ದೆಹಲಿ ವಿಶ್ವವಿದ್ಯಾಲಯ (DU), ಬಿಎಚ್‌ಯು (BHU), ಜೆಎನ್‌ಯು (JNU), ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಹಾಗೂ ಇತರ 250 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಅಂಕಪಟ್ಟಿಯನ್ನು ಆಧಾರವಾಗಿ ತೆಗೆದುಕೊಂಡು ಕಟ್-ಆಫ್ ಪ್ರಕಟಣೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುತ್ತವೆ. ಈ ವೇಳಾಪಟ್ಟಿ ಪ್ರತಿಯೊಂದು ಸಂಸ್ಥೆಗೆ ವಿಭಿನ್ನವಾಗಿರುತ್ತದೆ.