ಸೀಬೆ ಹಣ್ಣು, ಪೇರಳೆ ಹಣ್ಣು, ಚೇಪೇ ಹಣ್ಣು ಬಡವರ ಸೇಬು, ಹಣ್ಣುಗಳ ರಾಣಿ ಹೀಗೆ ಹಲವಾರು ನಾಮಧೇಯಗಳಿಂದ ಕರೆಯಲ್ಪಡುವ ಪೇರಳೆ ಹಣ್ಣು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತೀ ಹೆಚ್ಚು ವೈದ್ಯಕೀಯ ಗುಣ ಮತ್ತು ಪೋಷಕಾಂಶ ನೀಡುವ ಹಣ್ಣು ಎಂದು ಅಂದಾಜಿಸಲಾಗಿದೆ.ಭಾರತೀಯ ಬಡವರ ಸೇಬು ಎಂದೇ ಕರೆಯಲಾಗುವ ಪೇರಲೆ ಹಣ್ಣು ಔಷಧಗಳ ಆಗರ. ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು.
ಸಾಮಾನ್ಯವಾಗಿ 12 ರಿಂದ 20 ಅಡಿಗಳವರೆಗೆ ಬೆಳೆಯುವ ಈ ಗಿಡಗಳು ವರ್ಷದಲ್ಲಿ 2 ಬಾರಿ ಹಣ್ಣು ನೀಡುತ್ತದೆ. 2 ವರ್ಷದ ಗಿಡಗಳಿಂದ 8 ವರ್ಷದ ಗಿಡಗಳ ವರೆಗೆ ಹೇರಳವಾಗಿ ಪೇರಳೆ ಹಣ್ಣು ನೀಡುತ್ತದೆ. ಅತೀ ಕಡಿಮೆ ದರಕ್ಕೆ ಎಲ್ಲೆಂದರಲ್ಲಿ ಸಿಗುವ ಕಾರಣ ಬಡವರ ಸೇಬು ಎಂದೂ ಪ್ರಖ್ಯಾತಿಗೊಳಿಸಿದೆ. ಇನ್ನು ಕೆಲವರು ಪೇರಳೆಯನ್ನು ‘ಸೂಪರ್ ಹಣ್ಣು’ ಎಂದೂ ಸಂಭೋದಿಸುತ್ತಾರೆ.
ಒಂದು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಯ ನಾಲ್ಕು ಪಟ್ಟು ಮತ್ತು ಅನಾನಸು ಹಣ್ಣಿನಲ್ಲಿರುವ ನಾರು ಹಾಗೂ ಪ್ರೊಟೀನ್‍ನ ಮೂರು ಪಟ್ಟು ಹೆಚ್ಚು ಅಂಶ ಪೇರಳೆಯಲ್ಲಿ ಇರುತ್ತದೆ ಹಾಗೂ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ ಎರಡು ಪಟ್ಟು ಹೆಚ್ಚು ಪೇರಳೆಯಲ್ಲಿ ಇರುತ್ತದೆ. ಈ ಕಾರಣದಿಂದಲೇ ಪೇರಳೆಯನ್ನು ’ಸೂಪರ್ ಫ್ರುಟ್’ ಎಂದೂ ಕರೆಯುತ್ತಾರೆ.
ಪೇರಳೆ ಹಣ್ಣು ಅತ್ಯಂತ ಜನಪ್ರಿಯ ಆಗಿರುವ ಹಣ್ಣು ಆಗಿದ್ದು, ಬಹಳಷ್ಟು ವೈದ್ಯಕೀಯ ಗುಣವನ್ನು ಹೊಂದಿರುತ್ತದೆ. ಈ ಹಣ್ಣನ್ನು ‘ಬಡ ಜನರ ಸೇಬು’ ಎಂದೂ ಕರೆಯಲಾಗುತ್ತದೆ. ಸಾಕಷ್ಟು ಔಷಧಿ ಗುಣ ಹೊಂದಿರುವ ಈ ಹಣ್ಣನ್ನು ಅತಿಸಾರ, ಬೇಧಿ, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ರೋಗಿಗಳಲ್ಲಿ ಹೆಚ್ಚು ಬಳಸಬಹುದಾಗಿದೆ. ಉಷ್ಣವಲಯದಲ್ಲಿ ಹೆಚ್ಚು ಬೆಳೆಯುವ ಈ ಹಣ್ಣು ಮೆಕ್ಸಿಕೋ ವೆನಿಜುವೆಲಾ, ಕೊಲಂಬಿಯಾ ಮುಂತಾದ ದೇಶಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ.
ಹೆಚ್ಚಿನ ಜನರು ಪೇರಳೆ ಹಣ್ಣು ತಿಂದಲ್ಲಿ ಶೀತ ಆಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಅತೀ ಹೆಚ್ಚು ವಿಟಮಿನ್, ನಾರು ಅಂಶ ಹೊಂದಿರುವ ಈ ಹಣ್ಣನ್ನು ಪರಿಪೂರ್ಣ ಹಣ್ಣು ಎಂದೂ ಪರಿಗಣಿಸಲಾಗಿದೆ. ಅನಾನಸು ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಿದ್ದು, ಪೇರಳೆ ಹಣ್ಣನ್ನು ಹಣ್ಣುಗಳ ರಾಣಿ ಎಂದೂ ಸಂಭೋಧಿಸಲಾಗುತ್ತದೆ. ಪೇರಳೆ ಹಣ್ಣಿನಲ್ಲಿರುವ ಹೇರಳ ವಿಟಮಿನ್ ‘ಸಿ’ ಮತ್ತು ನಾರುಗಳು ಅತೀ ಹೆಚ್ಚು ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಕಾರಣದಿಂದ ಕ್ಯಾನ್ಸರ್ ಮುಂತಾದ ರೋಗಗಳಿಂದಲೂ ರಕ್ಷಿಸುತ್ತದೆ ಎಂದೂ ಅಂದಾಜಿಸಲಾಗಿದೆ.
ದೇಹದ ರಕ್ಷಣಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ 12 ರಿಂದ 20 ಅಡಿಗಳವರೆಗೆ ಬೆಳೆಯುವ ಈ ಗಿಡಗಳು ವರ್ಷದಲ್ಲಿ 2 ಬಾರಿ ಹಣ್ಣು ನೀಡುತ್ತದೆ. 2 ವರ್ಷದ ಗಿಡಗಳಿಂದ 8 ವರ್ಷದ ಗಿಡಗಳ ವರೆಗೆ ಹೇರಳವಾಗಿ ಪೇರಳೆ ಹಣ್ಣು ನೀಡುತ್ತದೆ. ಅತೀ ಕಡಿಮೆ ದರಕ್ಕೆ ಎಲ್ಲೆಂದರಲ್ಲಿ ಸಿಗುವ ಕಾರಣ ಬಡವರ ಸೇಬು ಎಂದೂ ಪ್ರಖ್ಯಾತಿಗೊಳಿಸಿದೆ. ಇನ್ನು ಕೆಲವರು ಪೇರಳೆಯನ್ನು ‘ಸೂಪರ್ ಹಣ್ಣು’ ಎಂದೂ ಸಂಭೋದಿಸುತ್ತಾರೆ.
ಪೇರಳೆಯಲ್ಲಿ ಏನೇನು ಇದೆ?
ಒಂದು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಯ ನಾಲ್ಕು ಪಟ್ಟು ಮತ್ತು ಅನಾನಸು ಹಣ್ಣಿನಲ್ಲಿರುವ ನಾರು ಹಾಗೂ ಪ್ರೊಟೀನ್‍ನ ಮೂರು ಪಟ್ಟು ಹೆಚ್ಚು ಅಂಶ ಪೇರಳೆಯಲ್ಲಿ ಇರುತ್ತದೆ ಹಾಗೂ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ ಎರಡು ಪಟ್ಟು ಹೆಚ್ಚು ಪೇರಳೆಯಲ್ಲಿ ಇರುತ್ತದೆ. ಈ ಕಾರಣದಿಂದಲೇ ಪೇರಳೆಯನ್ನು ’ಸೂಪರ್ ಫ್ರುಟ್’ ಎಂದೂ ಕರೆಯುತ್ತಾರೆ. ಪೇರಳೆಯಲ್ಲಿ ಶರ್ಕರಪಿಷ್ಟ ಪ್ರಕ್ಟೋಸ್ ರೂಪದಲ್ಲಿ ಇರುವ ಕಾರಣದಿಂದ ಅತೀ ಹೆಚ್ಚು ಪೇರಳೆ ಸೇವನೆಯಿಂದ ತೊಂದರೆ ಉಂಟಾಗುವ ಸಾಧ್ಯತೆಯೂ ಇದೆ.
1) ಪೇರಳೆಯಲ್ಲಿ ಅತೀ ಹೆಚ್ಚು ವಿಟಮಿನ್ ’ಸಿ’ ಇರುತ್ತದೆ. ಇದು ದೇಹದ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
2) ಪೇರಳೆಯಲ್ಲಿ 21 ಶೇಕಡಾ ವಿಟಮಿನ್ ‘ಎ’ ಇರುತ್ತದೆ. ಇದು ನಮ್ಮ ದೇಹದ ಚರ್ಮದ ಕಾಂತಿ ಹಾಗೂ ಒಳಪದರಗಳ ರಕ್ಷಣೆಯನ್ನು ಮಾಡುತ್ತದೆ. ಇದಲ್ಲದೆ ವಿಟಮಿನ್ ‘ಇ’ ಕೂಡಾ ಇರುತ್ತದೆ.
3) ಪೇರಳೆಯಲ್ಲಿ ಅತೀ ಹೆಚ್ಚು ಪೋಟಾಸಿಯಂ ಇರುವ ಕಾರಣ ರಕ್ತದೊತ್ತಡ ನಿಯಂತ್ರಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.
4) ಪೇರಳೆಯಲ್ಲಿ 20 ಶೇಕಡಾ ಪೋಲೇಟ್ ಎಂಬ ಪೋಷಕಾಂಶ ಇದ್ದು, ಗರ್ಭಿಣಿಯರಲ್ಲಿ ಗರ್ಭದಲ್ಲಿನ ಶಿಶುವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
5) ಪಿಂಕ್ ಪೇರಳೆಯಲ್ಲಿರುವ ಲೈಕೋಪೀವ್ ಎಂಬ ರಾಸಾಯನಿಕ ನಮ್ಮ ದೇಹದ ಚರ್ಮವನ್ನು ಅಲ್ಟ್ರಾ ವಯೋಲೆಟ್ ಕಿರಣಗಳಿಂದ ರಕ್ಷಿಸಿ ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
6) ಅಜೀರ್ಣ, ಹೊಟ್ಟೆಯಲ್ಲಿ ವಾಯು, ಕಫ, ಕೆಮ್ಮು ಇವುಗಳಿಗೆ ಈ ಪೇರಲೆಹಣ್ಣಿನಿಂದ ಮಾಡಿದ ಪದಾರ್ಥವನ್ನು ಉಪಯೋಗಿಸಬಹುದು.ಅದೇ ರೀತಿ ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ ಒಳ್ಳೆಯದು.
7) ಪೇರಲೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ತೂಕ ಇಳಿಸಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ, ಇದು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಇದರಿಂದ ನೀವು ಮತ್ತೆ ಮತ್ತೆ ತಿನ್ನುವುದನ್ನು ತಡೆಯುತ್ತದೆ.
8) ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
9) ಮಗುವಿನ ನರ ಹಾಗೂ ಮೆದುಳಿನ ಬೆಳವಣಿಗೆಗೆ ಸೀಬೆ ಹಣ್ಣಿನಲ್ಲಿರುವ ಫೋಲೆಟ್ ಅಂಶ ಸಹಕಾರಿಯಾಗಿದೆ, ಮಗುವಿನ ಮೂಳೆಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
10) ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕಿತ್ತಳೆಯಲ್ಲಿ ಇರುವುದಕ್ಕಿಂತ ನಾಲ್ಕು ಅಧಿಕ ವಿಟಮಿನ್ ಸಿ ಸೀಬೆ ಹಣ್ಣಿನಲ್ಲಿದೆ.
11) ರಕ್ತದೊತ್ತಡ ನಿಯಂತ್ರಿಸಿ, ಹೃದಯ ವೈಫಲ್ಯವನ್ನು ತಡೆಯುತ್ತದೆ. ಪೇರಳೆಯಲ್ಲಿರುವ ಸೋಡಿಯಂ ಮತ್ತು ಪೋಟ್ಯಾಸಿಯಂ ರಕ್ತದೊತ್ತಡ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಹೃದಯ ರೋಗ ಬರದಂತೆ ತಡೆಯುತ್ತದೆ. ಒಳ್ಳೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
12) ಒಂದು ಪೇರಲೆಯಲ್ಲಿ ಶೇಕಡಾ 12ರಷ್ಟು ನಾರು ಇರುವ ಕಾರಣದಿಂದ ಕರುಳಿನ ಚಲನೆಯನ್ನು ಉತ್ತಮಗೊಳಿಸಿ ಮಲಬದ್ಧತೆಯನ್ನು ತಡೆಯುತ್ತದೆ.
13) ಪೇರಲೆಯಲ್ಲಿರುವ ಮ್ಯಾಗ್ನಿಷಿಯಂ ನಮ್ಮ ದೇಹದ ಸ್ನಾಯುಗಳನ್ನು ಮತ್ತು ನರಗಳನ್ನು ನಿಯಂತ್ರಿಸಿ ದೇಹದ ದಣಿವನ್ನು ಇಂಗಿಸುತ್ತದೆ. ಪೇರಲೆ ಒಂದು ರೀತಿಯ ‘ ಎನರ್ಜಿ ಬೂಸ್ಟರ್ ಎಂದೂ ಸಂಭೋದಿಸಲಾಗಿದೆ.
14) ಶೀತ ಮತ್ತು ಕೆಮ್ಮು ನಿಯಂತ್ರಣದಲ್ಲಿಯೂ ಪೇರಳೆ ಉಪಕಾರಿ ಎಂದೂ ತಿಳಿದು ಬಂದಿದೆ. ಅತೀಹೆಚ್ಚು ವಿಟಮಿನ್ ‘ಸಿ’, ಕಬ್ಬಿಣದ ಅಂಶ ಮತ್ತು ಪ್ರೊಟೀನ್ ಅಂಶದಿಂದ ಶ್ವಾಸಕೋಶ ಸೋಂಕು ಬರದಂತೆ ಪೇರಳೆ ನಿಯಂತ್ರಿಸುತ್ತದೆ ಎಂದು ಅಂದಾಜಿಸಲಾಗಿದೆ.
ಅರ್ಧ ಚಮಚ ಪೇರಲೆಹಣ್ಣಿನಿಂದ ಮಾಡಿದ ಪೇಸ್ಟ್ಗೆ ಚಿಟಿಕೆ ಒಣಶುಂಠಿ ಪೌಡರ್, ಸ್ವಲ್ಪ ಜೀರಿಗೆ ಪೌಡರ್, ಅತ್ಯಲ್ಪ ಕಾಳು ಮೆಣಸು, ಓಂ ಕಾಳಿನ ಪುಡಿ ಇವುಗಳನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬೇಕು. ಇದು ಹೊಟ್ಟೆಯ ಸಮಸ್ಯೆಗೆ ಪರಿಹಾರವಾಗಬಲ್ಲದು. ಅದರಲ್ಲೂ ಕಫವನ್ನು ಹೊರಗೆ ಹಾಕುವ ವಿಶಿಷ್ಟ ಗುಣವನ್ನು ಇದು ಹೊಂದಿದೆ.
ಯಾರು ಈ ಸೀಬೆ ಹಣ್ಣು ಸೇವಿಸಬಾರದು?
ರಾಜ್ಯದ ಎಲ್ಲೆಡೆ ಹೇರಳವಾಗಿ ಸಿಗುವಂತಹ ಸೀಬೆ (ಪೇರಲ) ಹಣ್ಣಿನ ಸೇವನೆಯಿಂದ ದೇಹಕ್ಕೆ ಅತಿಹೆಚ್ಚು ಪೋಷಕಾಂಶ ಸಿಗುತ್ತದೆ. ಹೀಗಾಗಿ, 10 ಸೇಬು ಹಣ್ಣಿಗೆ 1 ಲೋಕಲ್ ಸೀಬೆ ಹಣ್ಣು ಸಮ ಎಂದು ಹೇಳುತ್ತಾರೆ. ಆದರೆ, ಈ ಪೇರಲ ಹಣ್ಣು ತಿನ್ನುವುದರಿಂದ ದೇಹಕ್ಕೆ ಲಾಭವಾಗುವ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಯೂ ಬರಬಹುದು. ಈ ಹಣ್ಣಿನಲ್ಲಿ ಫೈಬರ್ ಜಾಸ್ತಿ ಇರುವುದರಿಂದ ಇದನ್ನು ಜಾಸ್ತಿ ತಿಂದರೆ ಹೊಟ್ಟೆಯಲ್ಲಿ ಅಜೀರ್ಣತೆ ಉಂಟಾಗಿ ಗ್ಯಾಸ್ ಟ್ರಬಲ್ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬರ ಆಗಬಹುದು. ಈ ಹಣ್ಣಿನಲ್ಲಿ ಗಟ್ಟಿಯಾದ ಬೀಜಗಳು ಇರುವುದರಿಂದ ಕಿಡ್ನಿ ಸ್ಟೋನ್ ಇರುವವರು ಇದನ್ನು ಜಾಸ್ತಿ ತಿನ್ನಬಾರದು.
ಇನ್ನು ಶೀತ ಹೆಚ್ಚಾಗಿ ಇರುವವರು ಕೂಡ ಅಥವಾ ದೇಹಕ್ಕೆ ತಂಪಾಗುವ ಆಹಾರ ಸೇವಿಸಿದರೆ ಶೀತ ಬರುತ್ತದೆ ಎನ್ನುವವರು ಕೂಡ ಈ ಹಣ್ಣು ಹಣ್ಣು ಜಾಸ್ತಿ ಸೇವನೆ ಮಾಡದೇ ಮಿತವಾಗಿ ಒಂದೆರಡು ಹಣ್ಣು ತಿನ್ನುವುದಕ್ಕೆ ಸಮಸ್ಯೆ ಇಲ್ಲ. ಯಾವುದೇ ಹಣ್ಣನ್ನು ಹಿತ-ಮಿತವಾಗಿ ಸೇವನೆ ಮಾಡಿದರೆ ಸಮಸ್ಯೆಗಳು ಬರುವುದಿಲ್ಲ. ಆದರೆ, ಬಿಟ್ಟಿಯಾಗಿ ಸಿಕ್ಕಿದ್ದೇ ಚಾನ್ಸ್ ಎಂದು ಮರದ ಬಳಿಯೇ ಕುಳಿತು ಬೇಕಾಬಿಟ್ಟಿಯಾಗಿ ತಿಂದರೆ ಹೊಟ್ಟೆಯ ಜೀರ್ಣ ಶಕ್ತಿ ಹಾಳಾಗುತ್ತದೆ.

ಸೌಮ್ಯ ಸನತ್.