ಮೈಸೂರು/ಕೊಡಗು: ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಸರಣಿ ಮುಂದುವರೆದಿದ್ದು, ಮೈಸೂರಿನಲ್ಲಿ 28 ವರ್ಷದ ಯುವಕ, ಕೊಡಗಿನಲ್ಲಿ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ದುರ್ಘಟನೆಗಳಿಂದ ಕುಟುಂಬಗಳು ದುಃಖದಲ್ಲಿದ್ದರೆ, ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದೆ.
ಮೈಸೂರು:
ಚಾಮರಾಜಮೊಹಲ್ಲಾ ನಿವಾಸಿಯಾಗಿದ್ದ ದರ್ಶನ್ ಚೌದ್ರಿ (28) ಎಂಬ ಯುವಕ ದಿಢೀರ್ ಎದೆನೋವಿನಿಂದ ಬಳಲಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ. ದೇವರಾಜಮೊಹಲ್ಲಾದಲ್ಲಿ ಬಣ್ಣದ ಅಂಗಡಿಗೆ ಮಾಲೀಕರಾಗಿದ್ದ ದರ್ಶನ್‌ಗೆ ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಪೋಷಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಆರಂಭಿಸುವ ಮೊದಲು ಜೀವ ಕಳೆದುಕೊಂಡಿದ್ದಾರೆ.
ಕೊಡಗು:
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿ 58 ವರ್ಷದ ಸುಮಾ ಎಂಬ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಅವರು ಪತಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಸತತ ಹೃದಯಾಘಾತಗಳಿಂದ ಯುವವಯಸ್ಕರು ಸಹ ಮೃತರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯತೆ ಇನ್ನಷ್ಟು ಸ್ಪಷ್ಟವಾಗಿದೆ.