ಕಾರವಾರ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರವಾರದ ಜಿಲ್ಲಾ ವೈದ್ಯಕೀಯ ಅಧೀಕ್ಷಕ ಶಿವಾನಂದ ಕುಡ್ತಾಲಕರ್ ಲೋಕಾಯುಕ್ತದ ಬಲೆಗೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಯಲ್ಲಿ ನಡೆದಿದೆ.
ಅಂಕೋಲದ ವಿಶಾಲ್ ಫರ್ನಿಚರ್‌ನ ಮಾಲೀಕರಾದ ಮೌಸೀನ್ ಅಹ್ಮದ್ ಶೇಕ್, ಮೂರು ಲಕ್ಷದ ಐವತ್ತು ಸಾವಿರ ರೂ. ಮೌಲ್ಯದ ಹಾಸಿಗೆ ಮತ್ತು ಬೆಡ್‌ಗಳನ್ನು ಎಂಟು ತಿಂಗಳ ಹಿಂದೆ ಆಸ್ಪತ್ರೆಗೆ ಪೂರೈಕೆ ಮಾಡಿದ್ದರು. ಈ ಪೂರೈಕೆಗೆ ಸಂಬಂಧಿಸಿದ ಬಿಲ್ ಬಿಡುಗಡೆಗಾಗಿ ಶಿವಾನಂದ ಕುಡ್ತಾಲಕರ್ ಅವರು 50,000 ರೂ. ಲಂಚ ಕೇಳಿದ್ದರೆಂದು ತಿಳಿದು ಬಂದಿದೆ.
ಈಗಾಗಲೇ 2014 ರಲ್ಲಿ 16 ಲಕ್ಷದ ಟೆಂಡರ್‌ಗೆ ಐದೂವರೆ ಲಕ್ಷ ಲಂಚ ನೀಡಲಾಗಿತ್ತು ಎನ್ನಲಾಗಿದ್ದು, ಈ ಬಾರಿ ಚಿಕ್ಕ ಮೊತ್ತದ ಟೆಂಡರ್‌ಗೆ ಸಹ ಲಂಚ ಬೇಡಿಕೆಯಾಗಿದೆ. ಕಳೆದ ರಾತ್ರಿ ಮೌಸೀನ್ ಶೇಖ್ 20,000 ರೂ. ನೀಡಿದ್ದು, ಗುರುವಾರ ಮತ್ತೆ 30,000 ರೂ. ನೀಡುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತದ ಮಂಗಳೂರು ವಿಭಾಗದ ಎಸ್‌ಪಿ ಕುಮಾರ್ ಚಂದ್ರ ನೇತೃತ್ವದ ತಂಡ ಧಡಾಕನೆ ದಾಳಿ ನಡೆಸಿ, ಹಣದ ಸಮೇತ ಅಧಿಕೃತರನ್ನ ವಶಕ್ಕೆ ಪಡೆದಿದೆ.ಇದನ್ನು ಓದಿ –MUDA ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
ಹಾಸಿಗೆ, ಬೆಡ್‌ಗಳಿಗೆ ಬಿಲ್ ನೀಡದೇ, ತಾವು ನೀಡಬೇಕಾದ ಕಮಿಷನ್‌ಗಾಗಿ ಮೌಸೀನ್ ಶೇಖ್‌ಗೆ ಜಿಲ್ಲಾಸರ್ಜನ್ ನಿರಂತರವಾಗಿ ಒತ್ತಡ ತರಿಸುತ್ತಿದ್ದರು. ಹಣ ಸಿಗದ ಕಾರಣ ಪತ್ನಿಯ ತಾಳಿ ಸರವನ್ನು ಅಡವಿಟ್ಟು ಮೊದಲ ಹಂತದಲ್ಲಿ 20,000 ರೂ. ನೀಡಿದ್ದಾರೆ. ಬಳಿಕ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದು, ಇದೇ ಆಧಾರದ ಮೇಲೆ ದಾಳಿ ನಡೆದಿದೆ.