ನವದೆಹಲಿ, ಜುಲೈ 13: ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಶೀಘ್ರದಲ್ಲೇ ನೆಮ್ಮದಿ ಸಿಗುವ ಸಾಧ್ಯತೆ ಹೆಚ್ಚಿದೆ. ಜಿಎಸ್‌ಟಿ ಕೌನ್ಸಿಲ್ ಮುಂದಿನ ಸಭೆಯಲ್ಲಿ ಹಲವಾರು ಅಗತ್ಯ ದಿನಬಳಕೆಯ ವಸ್ತುಗಳ ತೆರಿಗೆ ದರಗಳನ್ನು ಪರಿಶೀಲಿಸಿ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದು, ಈ ನಿರ್ಧಾರದಿಂದ ಗ್ರಾಹಕರಿಗೆ ನೇರ ಲಾಭವಾಗಲಿದೆ.
12% ತೆರಿಗೆ ಸ್ಲ್ಯಾಬ್ ಮೇಲಿನ ಮರುಪರಿಶೀಲನೆ:
ಪ್ರಸ್ತುತ 12% ಜಿಎಸ್‌ಟಿ ವಿಧಿಸಲಾಗುತ್ತಿರುವ ಬೆಣ್ಣೆ, ತುಪ್ಪ, ಸಂಸ್ಕರಿತ ಆಹಾರ, ಮೊಬೈಲ್ ಫೋನ್, ಹಣ್ಣಿನ ರಸ, ಉಪ್ಪಿನಕಾಯಿ, ಜಾಮ್, ಚಟ್ನಿ, ತೆಂಗಿನ ನೀರು, ಛತ್ರಿ, ಸೈಕಲ್, ಟೂತ್ ಪೇಸ್ಟ್, ಶೂ, ಬಟ್ಟೆ ಇತ್ಯಾದಿ ಜನಪ್ರಿಯ ಗೃಹೋಪಯೋಗಿ ವಸ್ತುಗಳ ತೆರಿಗೆ ದರ ಇಳಿಸುವ ಸಾಧ್ಯತೆ ಇದೆ.
ಹೈ-ಎಂಡ್ ಉತ್ಪನ್ನಗಳ ಮೇಲೂ ಲಾಭ: ಹವಾನಿಯಂತ್ರಣ ಯಂತ್ರಗಳಂತಹ ಕೆಲವೊಂದು ದುಬಾರಿ ವಸ್ತುಗಳ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ.
ವಿಮಾನ ವಿಮೆಗಳ ಮೇಲಿನ ಜಿಎಸ್‌ಟಿ ಕಡಿತ: 18% ಜಿಎಸ್‌ಟಿ ವಿಧಿಸಲಾಗುತ್ತಿರುವ ಶುದ್ಧ ಅವಧಿಯ ವಿಮಾ ಯೋಜನೆಗಳ ತೆರಿಗೆ ದರವನ್ನು 12% ಅಥವಾ ಕಡಿಮೆ ಮಾಡಬಹುದೆಂಬ ಸೂಚನೆ ಇದೆ. ಆರೋಗ್ಯ ವಿಮೆಯ ಮೇಲಿನ ತೆರಿಗೆ ಕಡಿತದ ಪ್ರಸ್ತಾಪವೂ ಕೇಳಿಬರುತ್ತಿದೆ.
12% ತೆರಿಗೆ ಸ್ಲ್ಯಾಬ್ ಸಂಪೂರ್ಣವಾಗಿ ತೆಗೆದುಹಾಕುವ ಯೋಚನೆ: ಸರ್ಕಾರ 12% ಜಿಎಸ್‌ಟಿ ಸ್ಲ್ಯಾಬ್‌ನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಇದರಿಂದ ಉಪಯೋಗದ ವಸ್ತುಗಳ ಮೇಲೆ ಕಡಿಮೆ ತೆರಿಗೆ ಆಗಲಿದೆ. ಆದರೆ, ವ್ಯಾಪಾರಿಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಲು ಸಾಧ್ಯತೆ ಇದೆ.
‘ಪಾಪ ಸರಕುಗಳ ಮೇಲೆ ಹೊಸ ಸೆಸ್: ರಾಜ್ಯಗಳ ಆದಾಯ ನಷ್ಟ ಸರಿದೂಗಿಸಲು ತಂಬಾಕು ಮುಂತಾದ ಸರಕುಗಳ ಮೇಲೆ ಹೊಸ ಪರಿಹಾರ ಸೆಸ್ ವಿಧಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ, ಏಕೆಂದರೆ ಜಿಎಸ್‌ಟಿ ಪರಿಹಾರ ಸೆಸ್ ಮಾರ್ಚ್ 2026ರಲ್ಲಿ ಮುಗಿಯಲಿದೆ.ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ
ಆರ್ಥಿಕ ಬೆಳವಣಿಗೆಗೆ ಬಲ: ತೆರಿಗೆ ಕಡಿತದಿಂದ ಉತ್ಪನ್ನಗಳ ಮೇಲೆ ಬೇಡಿಕೆ ಹೆಚ್ಚಾಗಿ, ಆ ಮೂಲಕ ಸರ್ಕಾರಕ್ಕೆ ಆದಾಯ ಸಿಗಬಹುದು ಎಂಬ ನಂಬಿಕೆ ಇದೆ. ಸರಳ ಮತ್ತು ಶಾಶ್ವತ ತೆರಿಗೆ ವ್ಯವಸ್ಥೆಯು ವ್ಯಾಪಾರಿ ಮತ್ತು ಗ್ರಾಹಕರಿಗೆ ಸ್ಪಷ್ಟತೆ ನೀಡುವುದು ಈ ಸುಧಾರಣೆಯ ಉದ್ದೇಶವಾಗಿದೆ.